spot_img
spot_img

ಸೇವಾ ಪಾಕ್ಷಿಕ ಅಭಿಯಾನ ಅಂಗವಾಗಿ ಅರಳಿಮರ ನೆಡುವ ಕಾರ್ಯಕ್ರಮ

Must Read

spot_img

ಮೂಡಲಗಿ: ಅರಳಿ ಮರ ಉಳಿದ ಜಾತಿಯ ಮರಗಳಿಗಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ವಾಯುಮಾಲಿನ್ಯ ನಿಯಂತ್ರಣದಲ್ಲಿ ಬಹು ಮುಖ್ಯ ಪಾತ್ರವಹಿಸಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಹೇಳಿದರು.

ಗುರುವಾರದಂದು ಸಮೀಪದ ಅವರಾದಿಯಲ್ಲಿ, ಸೇವಾ ಪಾಕ್ಷಿಕ ಅಭಿಯಾನ ಅಂಗವಾಗಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನಿರ್ದೇಶನದಂತೆ, ಭಾರತೀಯ ಜನತಾ ಪಾರ್ಟಿ ಅರಬಾವಿ ಮಂಡಲದಿಂದ ಹಮ್ಮಿಕೊಳ್ಳಲಾಗಿದ್ದ, ಅರಳಿಮರ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಭಿಯಾನ ಅಂಗವಾಗಿ ಬಿಜೆಪಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಇವತ್ತು, ಗ್ರಾಮದಲ್ಲಿ 72 ಅರಳಿಮರದ ಸಸಿಗಳನ್ನು ನೆಡಲಾಗುತ್ತಿದೆ ಎಂದರು.

ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಸಸಿ ನೆಟ್ಟು ಮಾತನಾಡುತ್ತ, ಅರಳಿಮರವು ಒಂದು ಪವಿತ್ರ ಮರವಾಗಿದ್ದು, ಅನೇಕ ಔಷಧಿ ಗುಣಗಳನ್ನು ಹೊಂದಿದೆ, ಬೆಳೆಯುವುದು ನಿಧಾನವಾದರೂ ಶಾಶ್ವತವಾದ ಮರ. ಹಿಂದೂ  ಧರ್ಮೀಯರು ಇದನ್ನು ಪವಿತ್ರವಾದ ಮರವೆಂದು ಪೂಜೆ ಮಾಡುವರು, ಇದರ ಕಟ್ಟಿಗೆಯನ್ನು ಹೋಮ ಹವನಾದಿ ಧಾರ್ಮಿಕ ವ್ರತಾಚರಣೆಗಳಲ್ಲಿ ಉಪಯೋಗಿಸುತ್ತಾರೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹನಮಂತಗೌಡ ಪಾಟೀಲ್, ಮಲ್ಲನಗೌಡ ಪಾಟೀಲ್, ಹನಮಂತ ಪೂಜೇರಿ, ಮಲ್ಲಪ್ಪ ಕುಂಬಳ್ಳಿ,ಶ್ರೀಶೈಲ ಪೂಜೇರಿ, ಮುತ್ತಪ್ಪ ಡೊಂಬರ, ದಾನಪ್ಪ ಯಲಗನಾಳ,ಭೀಮಶಿ ಮಾಳದ, ಗುರು ಹಿರೇಮಠ, ತಮ್ಮಣ್ಣ ದೇವರ, ಬಸವರಾಜ ಗಾಡವಿ, ಮಂಗಳಾ ಕೌಜಲಗಿ, ಕಲ್ಲಪ್ಪ ಚಿಪ್ಪಲಕಟ್ಟಿ, ಕೇದಾರಿ ಭಸ್ಮೆ,ಪಾಂಡುರಂಗ ಮಹೇಂದ್ರಕರ್, ಪ್ರಭು ಹಡಪದ, ಚಂದ್ರಶೇಖರ್ ಪತ್ತಾರ್ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!