ಸಿಂದಗಿ: ತಾಲೂಕಿನ ಯಂಕಂಚಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಡಳಿತ ಮಂಡಳಿ ಚುನಾವಣೆಯಲ್ಲಿ ಸರ್ವ ಸದಸ್ಯರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವ ವಿಜಯಪುರ ಸಹಕಾರಿ ಅಭಿವೃದ್ಧಿ ಅಧಿಕಾರಿ ಎಂ.ಎಸ್.ರಾಠೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದ್ದು ಅದರಲ್ಲಿ ಸಾಮಾನ್ಯ ಸ್ಥಾನಕ್ಕೆ ನಿಂಗಪ್ಪ ತಳಗೇರಿ, ಮಹಮದ ಮುಸ್ತಾಫ್ ಕೊಕಟನೂರ, ಮಲ್ಲೀಕಾರ್ಜುನ ಬಿರಾದಾರ, ಮದಪ್ಪ ಒಡೆಯರ, ಸಿದ್ದಪ್ಪ ಹಡಗಿನಾಳ, ಹಿ.ವ.(ಬಿ)ಶಿವಶಂಕರ ಮುಳಸಾವಳಗಿ, ಹಿ.ವ (ಅ). ಯಮನೂರ ಪಡಶೆಟ್ಟಿ, ಮಹಿಳಾ ಕ್ಷೇತ್ರದಿಂದ ಸಂಗವ್ವ ಅಗಸರ, ಮಲ್ಲಮ್ಮ ಬಿಸನಾಳ, (ಪ.ಜಾ) ಅಶೋಕ ಜಿವಣಗಿ, ಪ.ಪಂ. ಮಲ್ಲಿಕಾರ್ಜೂನ ನಾಯ್ಕೋಡಿ, (ಬಿನ್ ಸಾಲಗಾರ ಕ್ಷೆತ್ರ ) ಮಲ್ಲಿಕಾರ್ಜುನ ಗಬಸಾವಳಗಿ 12 ಜನ ಮಾತ್ರ ನಾಮಪತ್ರ ಸಲ್ಲಿಸಿದ್ದರು ಯಾರು ಎದುರಾಳಿ ಸ್ಪರ್ದೇ ಮಾಡದಿರುವದರಿಂದ ಸರ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡುತ್ತೇನೆ ಎಂದರು.