ಬೀದರ: ಕೇಂದ್ರದ ಅಮೃತ ಭಾರತ್ ಸ್ಟೇಷನ್ ಯೋಜನೆ ಶಂಕು ಸ್ಥಾಪನೆಗೆ ಮಾಜಿ ಸಚಿವ ಪ್ರಭು ಚೌಹಾಣ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗರ ಗೈರು ಹಾಜರಾಗುವ ಮೂಲಕ ಜಿಲ್ಲಾ ಬಿಜೆಪಿಯಲ್ಲಿ ಇನ್ನೂ ಅಸಮಾಧಾನ ಹೊಗೆಯಾಡುತ್ತಿದೆ ಎಂಬ ಗುಮಾನಿಗಳಿವೆ.
ನಗರದ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಶಂಕು ಸ್ಥಾಪನೆ ಕಾರ್ಯಕ್ರಮ ಇದೆ. ವರ್ಚ್ಯೂಯಲ್ ವೇದಿಕೆ ಮೂಲಕ ಪ್ರಧಾನಿ ಮೋದಿಯವರು ಶಂಕು ಸ್ಥಾಪನೆ ಮಾಡಲಿದ್ದರು ಇಂಥ ಬಿಜೆಪಿಯ ಮಹತ್ವಾಕಾಂಕ್ಷೆ ಕಾರ್ಯಕ್ರಮಕ್ಕೆ ಇಬ್ಬರೂ ಶಾಸಕರು ಗೈರಾಗಿದ್ದು ಬಿಜೆಪಿಯಲ್ಲಿನ ಅಸಮಾಧಾನ ಮುಂದುವರೆದಿದೆಯಾ ಎಂಬ ಪ್ರಶ್ನೆ ನಿಲ್ಲಿಸಿದೆ.
2023 ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿಗಳನ್ನ ಸೋಲಿಸಲು ಭಗವಂತ ಖುಬಾ ಕೆಲಸ ಮಾಡಿದ್ದಾರೆ ಎಂದು ಆರೋಪ ಮಾಡಿದ್ದ ಪ್ರಭು ಚೌಹಾಣ್ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆ ಒಗ್ಗಟ್ಟು ಮೂಡಿಸಲು ಬಿಜೆಪಿ ಹರಸಾಹಸ ಪಡುತ್ತಿದ್ದಾರೆ.
ಆದರೆ ನಾಯಕರಲ್ಲೆ ಹೊಂದಾಣಿಕೆ ಕೊರತೆ ಇರುವಾಗ ಕಾರ್ಯಕರ್ತರ ನಡುವೆ ಹೊಂದಾಣಿಕೆ ಆಗುತ್ತದೆಯಾ ? ಬಿಜೆಪಿ ನಾಯಕರ ಹೊಂದಾಣಿಕೆ ಕೊರತೆಯಿಂದ ಕೈ ತಪ್ಪುತ್ತಾ ಬೀದರ್ ಸಂಸದರ ಸ್ಥಾನ ? ಲೋಕ ಕದನದಲ್ಲಿ ಭಗವಂತ ಖೂಬಾಗೆ ಕಾಡ್ತಿದೆಯಾ ಸೋಲಿನ ಭೀತಿ ಎಂಬ ಪ್ರಶ್ನೆಗಳು ಜನರ ಮನದಲ್ಲಿ ಮೂಡುತ್ತಿವೆ.
ವರದಿ: ನಂದಕುಮಾರ ಕರಂಜೆ, ಬೀದರ