spot_img
spot_img

ಹಿರಿಯ ಸಾಹಿತಿ, ಕನ್ನಡಪರ ಚಿಂತಕ ಡಾ. ಭೇರ್ಯ ರಾಮಕುಮಾರ್ ಅವರಿಗೆ ಕ. ಸಾ. ಪ. ದತ್ತಿ ಪ್ರಶಸ್ತಿ ಪ್ರದಾನ

Must Read

spot_img
- Advertisement -

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಸಭಾಂಗಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಪತ್ರಕರ್ತ ಹಾಗೂ ಕನ್ನಡಪರ ಚಿಂತಕ ಡಾ ಭೇರ್ಯ ರಾಮಕುಮಾರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಹಿತ್ಯ, ಕನ್ನಡ ನಾಡು ನುಡಿ ಸೇ ವೆ, ಪರಿಸರ ಸೇವೆಗಾಗಿ ಸತ್ಯವತಿ ವಿಜಯರಾಘವ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯ್ತು.

ವಿಶ್ರಾಂತ ನ್ಯಾಯಮೂರ್ತಿಗಳಾದ ಬಿ. ವೀರಪ್ಪ  ದತ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾದ ಡಾ. ಮಹೇಶ್ ಜೋಶಿ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಕುಲಪತಿ  ಡಾ. ನಿರಂಜನ ವಾನ್ನಳ್ಳಿ

ಕಾರ್ಯಕ್ರಮ ಉದ್ಘಾಟಿಸಿದರು. ದಾನಿಗಳಾದ ಡಾ. ಪುಷ್ಪ ಅಯಂಗಾರ್, ಎನ್. ಕೆ. ರಮೇಶ್, ಪ. ಮಹೇಶ್ ಮುಖ್ಯ ಅತಿಥಿಗಳಾಗಿದ್ದರು.

- Advertisement -

ಕಳೆದ 38 ವರ್ಷಗಳಿಂದ  343 ಕವಿಗೋಷ್ಠಿಗಳ ಸಂಘಟನೆ, ಏಳು ಸಾವಿರಕ್ಕೂ ಹೆಚ್ಚು ಜನರಿಂದ ನೇತ್ರಾಧಾನಕ್ಕೆ ಮನವೊಲಿಸುವಿಕೆ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಸಸಿಗಳ ವಿತರಣೆ, ಕನ್ನಡ ನಾಡು -ನುಡಿ  ಕುರಿತಂತೆ ನೂರಾರು ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ, ಪರಿಸರ ಜಾಗೃತಿ ಕುರಿತಂತೆ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ.. ಸೇವೆಗಳನ್ನು ಪರಿಗಣಿಸಿ ಡಾ. ಭೇರ್ಯ ರಾಮಕುಮಾರ್ ಅವರಿಗೆ ಕ. ಸಾ.ಪ. ವತಿಯಿಂದ ದತ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯ್ತು

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group