ಸಿಂದಗಿ: ತಾಲೂಕಿನ ದೇವಣಗಾಂವ ಗ್ರಾಮದ ಸರತಿಮಠದ ಶಾಖಾಮಠವಾದ ವಿಜಯಪುರದ ಜಮಖಂಡಿ ರಸ್ತೆಯ ಮಿಲನ್ ಪೆಟ್ರೋಲ್ ಪಂಪ್ ಹತ್ತಿರ ಇರುವ ಲಿಂ.ಸಂಗಯ್ಯ ಮುತ್ಯಾಅವರ ಪುಣ್ಯಾಶ್ರಮದಲ್ಲಿ ಆಗಷ್ಟ 29 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಣಗಾಂವ ಹಾಗೂ ವಿಜಯಪುರ ಸರತಿಮಠದ ದೈವಜ್ಞ ವೇ.ಗಂಗಾಧರ ಸ್ವಾಮಿಗಳು ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶ್ರಾವಣ ಮಾಸದ ಅಂಗವಾಗಿ ಆ.29 ರಂದು ಬೆಳಿಗ್ಗೆ ಜ್ಯೋತಿರ್ವಿದ್ವಾನ ಲಿಂ.ಸಂಗಯ್ಯ ಮುತ್ಯಾಅವರ ಕತೃಗದ್ದುಗೆಗೆ ರುದ್ರಾಭಿಷೇಕ, ಸಹಸ್ರನಾಮಾವಳಿ, ಮಹಾಮಂಗಳಾರುತಿ ಜರುಗುವುದು.
ನಂತರ ಧರ್ಮಸಭೆ ಲಿಂ.ಗಂಗಯ್ಯ ಮಠ ಅವರ ಭಾವಚಿತ್ರ ಪೂಜೆ, ಮುತೈದೆಯರ ಉಡಿ ತುಂಬುವ ಕಾರ್ಯಕ್ರಮ, ಅನಾಥ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶ್ರಮದ ದೈವಜ್ಞ ವೇ.ಗಂಗಾಧರ ಸ್ವಾಮಿಗಳು, ಸಾನ್ನಿಧ್ಯವನ್ನು ಸದಲಗಾ ಶಿವಾನಂದ ಮಠದ ಡಾ.ಶ್ರದ್ದಾನಂದ ಸ್ವಾಮಿಗಳು ವಹಿಸುವರು, ನಿವೃತ್ತ ಉಪನ್ಯಾಸಕ ಶಿವಾನಂದ ನುಚ್ಚಿ ನಿರೂಪಣೆ ಮಾಡುವರು.