ಸಿಂದಗಿ : ಭಕ್ತರಿಗಾಗಿ ಚಿಕ್ಕಸಿಂದಗಿಯ ಸದ್ಗುರು ವಿರೇಶ್ವರ ಶಿವಯೋಗಿಗಳು ತಮ್ಮ ಭಾಗದಲ್ಲಿ ಸಂಚರಿಸಿ ಸಾಮಾಜಿಕ ಪರಿವರ್ತನೆ ಮಾಡಿದ್ದಾರೆ. ಭಕ್ತರ ಏಳ್ಗೆಯೇ ಅವರ ಮುಖ್ಯ ಧ್ಯೇಯವಾಗಿತ್ತು. ಅವರ ತತ್ವಗಳು ಸರ್ವಕಾಲಿಕ ಸತ್ಯವಾಗಿವೆ ಎಂದು ತಾಳಿಕೋಟಿ – ಹಿರೂರ ಶ್ರೀ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಜಯ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವಿರೇಶ್ವರ ಮಹಾಶಿವಯೋಗಿಗಳ ೮೪ ನೇ ಪುಣ್ಯಸ್ಮರಣೋತ್ಸವದ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಚಿಕ್ಕಸಿಂದಗಿ ಶ್ರೀ ಸದ್ಗುರು ವಿರೇಶ್ವರ ಮಹಾಶಿವಯೋಗಿಗಳ ೨೫ ನೇ ವರ್ಷದ ಪುರಾಣ – ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ಸದ್ಗುರು ವಿರೇಶ್ವರ ಮಹಾಶಿವಯೋಗಿಗಳ ಪುರಾಣ – ಪ್ರವಚನ ಗ್ರಂಥ ಹಾಗೂ ಜೀವನ ಚರಿತ್ರೆ ಲೋಕಾರ್ಪಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸತ್ವುರುಷರ ಜೀವನದ ಸಂದೇಶಗಳು ಆಲಿಸುವದರಿಂದ ಹಾಗೂ ಒಳ್ಳಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸುಂದರ ಜೀವನ ನಡೆಸಬೇಕು ಎಂದರು.
ಕೊಣ್ಣೂರು ಹೊರಗಿನ ಮಠದ ಡಾ. ವಿಶ್ವಪ್ರಭು ಶಿವಾಚಾರ್ಯರು ಮಾತನಾಡಿ ರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿಯವರ ಜೀವನ ಸಂದೇಶಗಳ ಮೌಲ್ಯಗಳು ಮೂಲಕ ಧರ್ಮದ ದಾರಿಯಲ್ಲಿ ನೆಡೆಯುವ ಸತ್ಸಂಗದಿಂದ ಆದ್ಯಾತ್ಮಿಕ ಚಿಂತನ ಮಂಥನದಲ್ಲಿ ನಿರಂತರವಾಗಿ ಭಾಗವಹಿಸಿ ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.
ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ ಸದ್ಗುರು ವಿರೇಶ್ವರ ಶಿವಯೋಗಿಗಳ ವಾಣಿ ಆಲಿಸುವದರಿಂದ ಜೀವನ ಪಾವನವಾಗುತ್ತದೆ ಎಂದರು.
ಮಲಘಾಣ ಜಡೆಶಾಂತಲಿಂಗೇಶ್ವರ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯವಹಿಸಿ ಗ್ರಾಮದ ಹಿರಿಯರಾದ ದೇವಿಂದ್ರಪ್ಪಗೌಡ ಬಿರಾದಾರ ಹಾಗೂ ಕುಮಾರ ಚಂದ್ರಕಾಂತ ಬಿರಾದಾರ ಅವರಿಂದ ರಚಿತಗೊಂಡ ಸದ್ಗುರು ವೀರೇಶ್ವರ ಶಿವಯೋಗಿಗಳ ಪುರಾಣ ಹಾಗೂ ಜೀವನ ಚರಿತ್ರೆ ಲೋಕಾರ್ಪಣೆ ಮಾಡಿದರು
ಶಂಕ್ರಯ್ಯ ಹಿರೇಮಠ.ಬಸಯ್ಯ ಮಠಪತಿ ವೇದಿಕೆ ಮೇಲೆ ಇದ್ದರು.ಶಾಂತಯ್ಯ ಮಠಪತಿ ಪುರಾಣ ಗ್ರಂಥಕ್ಕೆ ಪೂಜೆ ಮಾಡಿದರು. ಗುರುನಾಥ ಮೈಂದರಿಗಿ ಬಸವಣ್ಣ ಕೇರೂಟಗಿ ಹಿರೇಮಠದ ಸಂಗೀತ ಶಿಕ್ಷಕ ರೇಣುಕಾಚಾರ್ಯ ಗವಾಯಿಗಳು ಹಿರೇಮಠ. ಮಾಂತೇಶ ಕಾಳಗಿ ಜೇವರ್ಗಿ ಸಂಗೀತ ಸೇವೆ ನಡೆಸಿದರು.
ಎಂ.ಡಿ.ಪಾಟೀಲ ಮಾತನಾಡಿದರು .ಪ್ರಕಾಶ ತುಪ್ಪದ ನಿರೂಪಿಸಿ ವಂದಿಸಿದರು. ಸಾಹಿತಿ ಚಂದ್ರಕಾಂತ ಬಿರಾದಾರ ಸ್ವಾಗತಿಸಿದರು.