ಬೆಳಗಾವಿ – ಬೆಳಗಾವಿಯ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಸಹ್ಯಾದ್ರಿನಗರ ಕುವೆಂಪು ನಗರದಲ್ಲಿ ದಿನಾಂಕ 14. 7.2024.ರಂದು ವಾರದ ಸತ್ಸಂಗ ಕಾರ್ಯಕ್ರಮ ಜರುಗಿತು
ದಿವ್ಯ ಸಾನ್ನಿಧ್ಯವನ್ನು ಮೃತ್ಯುಂಜಯ ಸ್ವಾಮೀಜಿ ಹಿರೇಮಠ ವಹಿಸಿದ್ದರು. ಅಧ್ಯಕ್ಷತೆಯನ್ನು ಎಸ್. ಬಿ. ಸಿದ್ನಾಳ್ ವಹಿಸಿದ್ದರು.
ಆರಂಭದಲ್ಲಿ ಶರಣೆ ಶೋಭಾ ಶರಣೆ ಜಯಶ್ರೀ,ವಚನ ವಿಶ್ಲೇಷಣೆ ಮಾಡಿದರು ಕುಮಾರಿ ಸಾನ್ವಿ ಉದಯರಾಜ, ವೀರಭದ್ರನವರ, ಅವರ ಭರತನಾಟ್ಯ ಮಾಡಿದರು.
ಸಾನ್ನಿಧ್ಯ ವಹಿಸಿದ ಮೃತ್ಯುಂಜಯ ಸ್ವಾಮೀಜಿಯವರು ಸಾನ್ವಿ ಅವಳು ಅಮೆರಿಕಾದಲ್ಲಿದ್ದರೂ ತಂದೆ ತಾಯಿ ನೀಡಿದ ಸಂಸ್ಕಾರ ದೊಡ್ಡದು ಎಂದರು.
ವೇದ ನೋಡಿದ ಬ್ರಹ್ಮನ ಶಿರಹೋಯಿತು, ನಾದಪ್ರಿಯ ಶಿವನಲ್ಲವಯ್ಯ, ಮಾಡಿದ ರಾವಣನಂಗೆ ಅರೆ ಆಯುಷ್ಯವಾಯಿತು. ಭರತನಾಟ್ಯ ಎಲ್ಲರ ಗಮನ ಸೆಳೆಯಿತು. ಆ ವಚನದ ಅರ್ಥ ಮಾಡಿಕೊಂಡು ಜೀವನ ಆನಂದಮಯ ಹಾಗೂ ಶರೀರ ಆರೋಗ್ಯದಿಂದ ಇರಲು ಸಾಧ್ಯ ಎಂದು ತಿಳಿಸಿದರು. ಹಡಪದ್ ಅಪ್ಪಣ್ಣ ಜಯಂತಿ ಅವರ ವಚನಗಳನ್ನು ತಿಳಿಸಿ ಅವರ ದೂರ ದೃಷ್ಟಿಯ ಕುರಿತು ವಿವರಿಸಿದರು.
ಶರಣೆ ಶೋಭಾ, ಸುನೀತಾ, ಜಯಶ್ರೀ, ಲತಾ, ಪಾರವ್ವ, ಶಾಂತಕ್ಕ, ಪ್ರೇಮ, ವಿಮಲಾ ವೀರಭದ್ರನವರ, ಶರಣ ಕುಂದ್ರಾಳ, ರುದ್ರಗೌಡ.ಬಿ. ಡಿ. ಪಾಟೀಲ್, ಸಂಜು, ಶಾಲಿನಿ, ಡಾಕ್ಟರ್ ಗೀತಾ ನಾಗಲೋತಿ, ಕಿನೇಕರ್, ಉಪಸಿತರಿದ್ದರು. ಕವಿತಾ ಸಿದ್ದಾಳ್ ಮತ್ತು ವೀರಭದ್ರನವರ ದಾಸೋಹ ಸೇವೆಗೈದರು. ಮಂಗಲದೊಂದಿಗೆ ಮುಕ್ತಾಯವಾಯಿತು