ಮೂಡಲಗಿ – ಪ್ರಧಾನಮಂತ್ರಿ ಗ್ರಾಮಸಡಕ ಯೋಜನೆ ಅಡಿಯಲ್ಲಿ ಬೆಳಗಾವಿ ಜಿಲ್ಲೆಗೆ ೧೩೦೬ ಕಿ ಮೀ ಉದ್ದದ ರಸ್ತೆಯನ್ನು ಮಂಜೂರು ಮಾಡಲಾಗಿತ್ತು ಅದರಲ್ಲಿ ೧೨೮೨ ಕಿ ಮೀ ರಸ್ತೆ ಕಾಮಗಾರಿಯನ್ನು ಪೂರ್ಣಗಿಳಿಸಲಾಗಿದೆ ಎಂದು ಕೇಂದ್ರ ಗ್ರಾಮೀಣ ಅಭಿವೃದ್ಧಿ ರಾಜ್ಯ ಸಚಿವರು ಲಿಖಿತವಾಗಿ ತಿಳಿಸಿದ್ದಾರೆಂಬುದಾಗಿ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.
ನಾವು ನೋಡಿದಂತೆ ರಾಜ್ಯದ ಗ್ರಾಮೀಣ ರಸ್ತೆಗಳು ಬಹುತೇಕ ಹದಗೆಟ್ಟು ಹೋಗಿವೆ ಬೆಳಗಾವಿ ಜಿಲ್ಲೆಯ ಅರಭಾವಿ ಕ್ಷೇತ್ರವನ್ನೇ ತೆಗೆದುಕೊಂಡರೆ ಕ್ಷೇತ್ರದ ಸುತ್ತಮುತ್ತಲಿನ ಹಳ್ಳಿಗಳ ರಸ್ತೆಗಳು ತಗ್ಗು ದಿನ್ನೆಗಳಿಂದ ತುಂಬಿವೆ. ರಿಪೇರಿಯಾಗದೆ ಹಲವು ವರ್ಷಗಳೇ ಕಳೆದಿವೆ. ಈ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ ಕಾರ್ಯಗತವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಇನ್ನು ಇಡೀ ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಗಳ ಪರಿಸ್ಥಿತಿ ಹೇಗಿದೆಯೋ ಏನೋ..
ಆದ್ದರಿಂದ ಸಂಸದ ಈರಣ್ಣ ಕಡಾಡಿಯವರು ಕೇಂದ್ರ ರಾಜ್ಯ ಸಚಿವ ಕಮಲೇಶ ಪಾಸ್ವಾನರ ಹೇಳಿಕೆಯ ಮುಂದುವರಿದ ಭಾಗವಾಗಿ ಜಿಲ್ಲೆಯ ಯಾವ ರಸ್ತೆಗಳು ಪ್ರಧಾನಮಂತ್ರಿ ಗ್ರಾಮ ಸಡಕ ಯೋಜನೆ ಅಡಿಯಲ್ಲಿ ರಿಪೇರಿ ಕಂಡಿವೆ ಎಂಬುದರ ಮಾಹಿತಿ ನೀಡಬೇಕೆಂಬುದು ಸಾರ್ವಜನಿಕರ ಪರವಾಗಿ ಒಂದು ಮನವಿ.
ಬೆಳಗಾವಿ ಜಿಲ್ಲೆಗೆ ಮಂಜೂರಾದ ೧೩೦೬ ಕಿ ಮೀ ಉದ್ದದ ರಸ್ತೆ ಕಾಮಗಾರಿಯಲ್ಲಿ ಯಾವ ಗ್ರಾಮೀಣ ರಸ್ತೆಗಳಿವೆ ಹಾಗೂ ಕಾಮಗಾರಿ ಪೂರ್ಣಗೊಂಡ ಗ್ರಾಮೀಣ ರಸ್ತೆಗಳು ಯಾವುವು ಎಂಬ ಮಾಹಿತಿಯನ್ನೂ ಸಂಸದರು ಬಹಿರಂಗಪಡಿಸಬೇಕಾಗಿ ಈ ಮೂಲಕ ಕೋರುತ್ತೇವೆ
ಉಮೇಶ ಬೆಳಕೂಡ
ಮೂಡಲಗಿ