spot_img
spot_img

ಮಹಿಳಾ ದಿನದ ವಿಶೇಷ ಕವನಗಳು

Must Read

spot_img

ಹೆಣ್ಣೇ ಈ ಸೃಷ್ಟಿಗೆ ನೀ ವರದಾನ! 

- Advertisement -

ತ್ರಿಮೂರ್ತಿಗಳನ್ನು ಸೃಷ್ಟಿಸಿದ

ಹೆಣ್ಣೇ ಆದಿಶಕ್ತಿ,

ಹೆಣ್ಣೇ ನೀನಿಲ್ಲದೆ ಈ ಸೃಷ್ಟಿಯಿಲ್ಲ ,

- Advertisement -

ಈ ಸೃಷ್ಟಿಗೆ ಆಧಾರವೂ ನೀನೇ

ಶಕ್ತಿಯು ನೀನೇ

ಯುಕ್ತಿಯು ನೀನೇ.

- Advertisement -

ನೀನಿಲ್ಲದೇ ಜೀವವಿಲ್ಲ

ನೀನಿಲ್ಲದೇ ಭಾವವಿಲ್ಲ

ನೀನಿಲ್ಲದೇ ಪ್ರೀತಿ, ಪ್ರೇಮವಿಲ್ಲ

ನೀನಿಲ್ಲದೇ ಕೋಪವೂ ಇಲ್ಲಾ 

ನೀನಿಲ್ಲದೇ ಮಮತೆ, ವಾತ್ಸಲ್ಯವೂ ಇಲ್ಲ

ನೀನಿಲ್ಲದೇ ಕರುಣೆ, ಕ್ಷಮೆಯು ಇಲ್ಲಾ 

ನೀನಿಲ್ಲದೇ ನವ ಜೀವದ ಉಗಮವು ಇಲ್ಲಾ

ನಿನ್ನಿಂದಲೇ ಸಂತೋಷ 

ನಿನ್ನಿಂದಲೇ ದುಃಖ 

ನಿನ್ನಿಂದಲೇ ಚೆಲುವು,

ನಿನ್ನಿಂದಲೇ ಒಲವು

ನಿನ್ನಿಂದಲೇ ಧೈರ್ಯ

 ನಿನ್ನಿಂದಲೇ ಸೌಂದರ್ಯ 

ನೀನೇ ಅಬಲೆ,ನೀನೇ ಸಬಲೆ 

ತಾಯಿಯಾಗಿ,ಮಗಳಾಗಿ 

ಸಹೋದರಿಯಾಗಿ,ಮಡದಿಯಾಗಿ 

ಅತ್ತೆಯಾಗಿ,ಸೊಸೆಯಾಗಿ

ಅಜ್ಜಿಯಾಗಿ ಪಾತ್ರ ನಿರ್ವಹಿಸುವ

ಅಧಿಕಾರಿ ಹೆಣ್ಣು ನೀನೇ

ಎಲ್ಲರ ಭಾರವ ಹೊರುವ ಕಷ್ಟ 

ಸಹಿಷ್ಣುವೂ ನೀನೇ 

ಎಲ್ಲರಿಗೂ ಸಂತೋಷವ ಹಂಚುವ 

ಪ್ರೇಮ ಮೂರ್ತಿಯು ನೀನೇ 

ಎಲ್ಲಾ ಜವಾಬ್ದಾರಿಯ ನೀಗಿಸುವ 

ಸಹನಾ ಮೂರ್ತಿಯು ನೀನೇ 

ಹೆಣ್ಣಾಗಿ ಹುಟ್ಟುವುದೇ ಪುಣ್ಯ 

ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುವೆನು

ಹೆಣ್ಣೇ ಈ ಸೃಷ್ಟಿಗೆ ನೀ ವರದಾನವೇ ಸರಿ  

ಶ್ರೀಮತಿ ಸೌಭಾಗ್ಯ ಅಶೋಕ ಕೊಪ್ಪ, ಗೋಕಾಕ


ಅವಳು ಹೆಣ್ಣು

ಮಮತೆಯ ಮಡಿಲು ತುಂಬಿದೆ 

ಮುದ್ದಿನ ಮಗಳಾಗಿ ನೀ ಬಂದೆ 

ಜಗದೆಲ್ಲಾ ಆನಂದ ಸಂಭ್ರಮ ತಂದೆ. 

ಅಕ್ಕನಾಗಿ ಅಮ್ಮನ ಸ್ಥಾನ ವಹಿಸಿ 

ತಂಗಿಯಾಗಿ ಪ್ರೀತಿಯ ಧಾರೆ ಹರಿಸಿ 

ವಾತ್ಸಲ್ಯಮೂರ್ತಿ ನೀ ಚೈತನ್ಯದರಸಿ. 

ಸ್ನೇಹದ ಕಡಲಯಾನದಿ ಸಹಚಾರಿ 

ಗುರುವಾಗಿ ಜ್ಞಾನಮಾರ್ಗಕೆ ತೋರಿ ದಾರಿ 

ಪ್ರತಿ ವಿಧದಿ ಬಾಳ ಸಾಫಲ್ಯಕೆ ನೀ ಸಹಕಾರಿ.

ಜೀವ ಒತ್ತೆ ಇಟ್ಟು ನೀನಾಗುವೆ ಅಮ್ಮ

ತಾಯಿ ಮಮತೆಗೆ ಬೇರೆ ಸಾಟಿ ಇದೇಯೇನಮ್ಮ 

ಆ ಋಣವ ಜೀವನವಿಡೀ ತೀರಿಸಲಾರೆವಮ್ಮ

ಕೈಹಿಡಿದು ಸಂಸಾರ ಬಂಡಿಗೆ ಜೊತೆಯಾಗಿ 

ನೀನಾಗುವೆ ಸುಖ ದುಃಖಗಳಿಗೆ ಸಮಭಾಗಿ 

ಮಕ್ಕಳಿಗೆ ತಾಯಾಗಿ, ಕುಟುಂಬದ ಕಣ್ಣಾಗಿ.

ಬಾಳಿನ ನಾಟಕದ ವಿವಿಧ ಹಂತದಿ ವಿವಿಧ ರೂಪ  ವಹಿಸಿ ನಿಭಾಯಿಸುವ ನಿನ್ನ ಪಾತ್ರ ಅಪರೂಪ

ಭಗವಂತನ ತುಣುಕು ನೀನವನದೇ ಪ್ರತಿರೂಪ 

ಸುಜಾತಾ ರವೀಶ


ಹೆಣ್ಣು ಬದುಕಿನ ಕಣ್ಣು

ಹೆಣ್ಣು ಹುಣ್ಣಲ್ಲ.ಬೆಣ್ಣೆಯಂತವಳು,

ತಣ್ಣಗಿದ್ದವಳು,ಬದುಕಿನ ಕಣ್ಣಿವಳು,

ಮಮತೆಯ ಮಾತೆ,ಒಲವಿನ ಸತಿ,

ಪ್ರೀತಿಯ ಸುತೆ,

ತಾಯ್ತನವೇ ತವರಾದವಳು.

ಜಗತ್ತನ್ನೆ ತೂಗಿದವಳು.

ಜರಿದವರನ್ನು ಸರಿಸಿದವಳು.

ಜಾಣರಲ್ಲಿ ಜಾಣೆಯಾದವಳು.

ನಾನಾ ಕಥೆಗೆ ನಾಯಕಿಯಾದವಳು.

ವಜ್ರಾದಪಿ ಕಠಿಣ,

ಕುಸುಮಾದಪಿ ಕೋಮಲ.

ದೃಢ ಮನದ ,ಹೂ ಕಾಯದವಳು,

ನಿರಾಕಾರಿಯ ಮದುವಣಗಿತ್ತಿ

ಇವಳು

ಬೆಂಕಿಯಲಿ ಅರಳಿದವಳು,

ಶಂಕೆಗೆ ಗುರಿಯಾದವಳು,

ಮಂಕುತನಕೆ ಬಲಿಯಾದರೂ,

ಕ್ಷಮಗೆ ಧರಿತ್ರಿಯಾದವಳು,

ತಂದೆಯಾಗಿ,ಮಗನಾಗಿ,

ಗುರುವಾಗಿ,ಬಸವನ ,

ಕನಸು ನನಸು ಮಾಡಿದವಳು.

ಹುಸಿಯಿಲ್ಲದೆ ಬೆಸಗೊಂಡು ಬದುಕ, ಜಯಿಸಿದವಳು.

ಅನ್ನಪೂರ್ಣ ಅಗಡಿ.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group