ಶಕ್ತಿನಗರದ ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಹಾಗೂ ಕನ್ಸಲ್ಟಿಂಗ್ ಸಿವಿಲ್ ಎಂಜಿನೀಯರ್ಸ ಅಸೋಸಿಯೇಷನ್ ರಾಯಚೂರ ಇವರ ಸಹಯೋಗದಲ್ಲಿ ಜರುಗಿದ ಕಾರ್ಯಾಗಾರದಲ್ಲಿ ಅಧ್ಯಕ್ಷ ರಮೇಶ ಭೋಸಲೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದ ಭಾಲಚಂದ್ರ ಜಾಬಶೆಟ್ಟಿಯವರನ್ನು ಸಿವಿಲ್ ಅಭಿಯಂತರ ಮುಕೇಶರವರು ಸಭೆಗೆ ಪರಿಚಯಿಸಿದರು.
ಕ್ಯಾಷುಟೆಕ್ ನಿರ್ಮಿತಿ ಕೇಂದ್ರದ ತರಬೇತಿ ಸಲಹೆಗಾರ ಭಾಲಚಂದ್ರ ಜಾಬಶೆಟ್ಟಿ ನೀಡಿದ ಉಪನ್ಯಾಸದಲ್ಲಿ ಸೂರ್ಯನಿಂದ ಉಚಿತವಾಗಿ ದೊರೆಯುವ ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸುವ ಕುರಿತು ಸಮಗ್ರ ಮಾಹಿತಿ ನೀಡಿದರು.
ಕೇಂದ್ರ ಸರಕಾರವು ಘೋಷಿಸಿದ “ಸೂರ್ಯ ಘರ” ಯೋಜನೆಯ ಕುರಿತು ವಿವರಿಸಿದ ಅವರು, ಫೋಟೋ- ವೋಲ್ಟಾಯಿಕ್ ಸೆಲ್ ಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಆಗುತ್ತಿರುವ ಸಂಶೋಧನೆ ಹಾಗೂ ಅದರಿಂದಾಗಿ ಮಾಳಿಗೆಯ ಮೇಲೆ ಅಳವಡಿಸುತ್ತಿರುವ ಸೋಲಾರ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನಾ ವೆಚ್ಚದಲ್ಲಿ ಗಣನೀಯ ಇಳಿಕೆಯನ್ನು ಗಮನಿಸಬಹುದು, ಜೊತೆಗೆ ಮೂರು ಕಿಲೋ ವ್ಯಾಟ್ ಉತ್ಪಾದನಾ ಘಟಕಗಳಿಗೆ ಸರಕಾರದಿಂದ ರೂ. 78000/- ಗಳ ಸಹಾಯಧನ ದೊರೆಯುವ ಕುರಿತು ವಿವರಣೆ ನೀಡಿದರು.
ಸೋಲಾರ ಪ್ಯಾನೆಲಗಳ ಗುಣಮಟ್ಟ ಸುಧಾರಣೆಗಳಿಗೆ ನಡೆಯುತ್ತಿರುವ ಸಂಶೋಧನೆ ಕುರಿತು ವಿವರಣೆ ನೀಡುವ ಸಂದರ್ಭದಲ್ಲಿ, ಪ್ರಥಮದಲ್ಲಿನ ಪಾಲಿಕ್ರಷ್ಟಲೈನ್, ಮೋನೋಕ್ರಷ್ಟಲೈನ್, ಮೋನೋಕ್ರಷ್ಟಲೈನ್ ಪರ್ಕ, ಮೋನೋಕ್ರಷ್ಟಲೈನ್ ಪರ್ಕ ಹಾಫ್ ಕಟ್, ಬೈಫೇಸಿಯಲ್, ಟಾಪ್ ಕಾನ್, ಹಾಗೂ ಎಚ್.ಜೆ.ಟಿ. ಮುಂತಾದ ಸೌರಫಲಕಗಳ ಕುರಿತು ತಾಂತ್ರಿಕ ಮಾಹಿತಿ ನೀಡಿದರು, ವಿವಿಧ ಸೌರಫಲಕಗಳನ್ನು ಅಳವಡಿಸಿ ಉತ್ಪಾದಿಸಬಹುದಾದ ಗರಿಷ್ಟ ವಿದ್ಯುಚ್ಛಕ್ತಿ ಪ್ರಮಾಣದ ಕುರಿತು ಅಂಕಿ ಸಂಖ್ಯೆ ಗಳನ್ನಾಧರಿಸಿದ ವಿಷಯ ಮಂಡಿಸಿದರು.
ಸೌರಫಲಕಗಳಿಂದ ಗರಿಷ್ಠ ವಿದ್ಯುತ್ ಉತ್ಪಾದನೆಗಾಗಿ ಅಳವಡಿಸಬಹುದಾದ ಇತರೆ ಉಪಘಟಕಗಳಾದ ಡಿಸಿಡಿಬಿ, ಎಸಿಡಿಬಿ, ಸೂಲಾರ ಇನ್ವರ್ಟರ್, ಲೈಟನಿಂಗ್ ಅರೆಸ್ಟರ್, ರಾಸಾಯನಿಕ ವಿದ್ಯುತ್ ವಾಹಕ ಗುಂಡಿ ಅಳವಡಿಕೆ, ಸ್ಟ್ರಕ್ಚರ್ ಗಳ ನಿರ್ಮಾಣ, ನೆಟ್ ಮೀಟರಿಂಗ್, ಹಾಗೂ ಅಳವಡಿಕೆ ಮಾಡಲು ತಗಲುವ ಖರ್ಚುವೆಚ್ಚಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಸೌರಫಲಕಗಳ ಅಳವಡಿಕೆಯ ದಿಕ್ಕು, ‘ಟಿಲ್ಟ್ ಆ್ಯಂಗಲ್’, ‘ಅಝಮತ್ ಆ್ಯಂಗಲ್’ ಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಹಾಗೆ ಮಾಡುವುದರಿಂದ ದೊರೆಯುವ ಪ್ರಯೋಜನಗಳ ಕುರಿತೂ ಸಹ ವಿವರಿಸಿದರು.
ಸೌರಫಲಕಗಳ ರಚನೆ, ವಿವಿಧ ತಂತ್ರಜ್ಞಾನಗಳ ಅಳವಡಿಕೆಯಿಂದ ಉತ್ಪಾದನಾ ವಿಧಾನಗಳ ಕುರಿತು ವಿವರಿಸಿದರು.
ಕನ್ಸಲ್ಟಿಂಗ್ ಸಿವಿಲ್ ಎಂಜಿನೀಯರಿಂಗ ಅಸೋಸಿಯೇಶನ ಪರವಾಗಿ ಭಾಲಚಂದ್ರ ಜಾಬಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ವೈದ್ಯ ಡಾ ರಾಮನಗೌಡ, ಕ್ಯಾಷುಟೆಕ್ ನ ಶರಣಬಸಪ್ಪ ಪಟ್ಟೇದ, ವೆಂಕಟೇಶಸಿಂಗ ಹಜಾರೆ, ಚನ್ನಬಸವ, ಮುಕೇಶ, ಸುಭಾಸ ಕೋರಿ, ರಾಜಮೋಹನ, ದಶಕಂಠಯ್ಯ ಹಿರೇಮಠ, ಕಾರ್ಯದರ್ಶಿ ವಿಶ್ವನಾಥ ಬಿರಾದಾರ, ಪ್ರಭುಶಾಸ್ತ್ರಿ, ಬಾದಮ್ ಶ್ರೀನಿವಾಸ ಶೆಟ್ಟಿ, ವೀರಭೂಷಣ ಶೆಟ್ಟಿ, ಸೂಯನಾರಾಯಣ ಮುಂತಾದವರು ಉಪಸ್ಥಿತರಿದ್ದರು