Monthly Archives: July, 2020
ಡಾ.ಭೇರ್ಯ ರಾಮಕುಮಾರ್ ಚುಟುಕ ಮತ್ತು ಕವನಗಳು
....ಇತಿಹಾಸ.....
ಸ್ಥಳ ಇತಿಹಾಸ ಬರೆಯಲು
ಆ ಹಳ್ಳಿಗೆ ಬಂದ ಯುವಕ
ಸುಂದರ ಯುವತಿಯೊಡನೆ ಪರಾರಿಯಾಗಿ,
ಜನರ ನಾಲಿಗೆ ಮೇಲೆ
ಇತಿಹಾಸ ಬರೆದೇ ಬಿಟ್ಟ !!!!....ವೈಚಿತ್ರ್ಯ.....
ಆಕೆ ಬೊಜ್ಜು ಕರಗಿಸಲು ಚಪಾತಿ ತಿಂದಳು ,
ಈತ ಹೊಟ್ಟೆ ಬೆಳೆಸಲು ಪಕ್ವಾನ್ನ ತಿಂದ
ಗಾಳಿ ತುಂಬಿದ ಬಲೂನಾಗಿ...
ರಾಧಾ ಶಾಮರಾವ ಕವನ
ವೀರ ಮರಣ
ಕಾಗಿ೯ಲ್ ಯುದ್ಧ ಸನ್ನಧ್ಧ ಸೈನಿಕ
ಗಮನಿಸಲಿಲ್ಲ
ಹೊಸ ಸಂಸಾರ
ಪುಟ್ಟ ಹಸುಳೆ
ಎಲ್ಲಕ್ಕಿಂತ ಮಿಗಿಲು
ಭಾರತಾಂಬೆಯ ಸೇವೆ
ಸದೆಬಡಿದ ಶತ್ರುಗಳ
ಹಿಂದಿನಿಂದ
ಬಡಿಯಿತು ಗುಂಡು
ತಿರುಗಿದ ಗುಂಡಿನ
ಮಳೆಗರೆದ
ಜಯ ಭಾರತ ಮಾತೆಎನುತ
ವೀರಮರಣವನಪ್ಪಿದ
ನಮನ ಒಂದೇ ಸಾಕೇ?
ಪ್ರಾಥಿ೯ಸೋಣ ;
ಅವನ ಚಿತೆಯ
ಭಸ್ಮದ ಕಣಕಣದಿ
ಹುಟ್ಟಿ ಬರಬೇಕು
ತೋರಿ ವಿರಾಟ್ ರೂಪ
ಮತ್ತೆ ಓಟ ಕಾಗಿ೯ಲ್...
ವಿಕ್ರಂ ಶ್ರೀನಿವಾಸ್ ರ ಕವನಗಳು
"ಅಂಜಿಕೆ ಏಕೆ"
ಮಲ್ಲಿಗೆ ಮುಡಿಯಲು ಅಂಜುವೆ ಏಕೆ
ಕೊರೋನ ನನಗಿಲ್ಲ ಬಿಡುನೀ ಶಂಕೆ
ಸರ್ವಸ್ವ ನೀನೆ ಎಂದೆ ಅಂದು
ಸನಿಹವೆ ಬೇಡ ಎನುತಿಹೆ ಇಂದು
ಬಿಟ್ಟಿರಲಾರೆ ಎನುತಿದ್ದೆ ಅಂದು
ಬಿಟ್ಟರೆ ಸಾಕು ಎನುತಿಹೆ ಇಂದು
ಕೇಳದೆ ಕೊಡುತ್ತಿದ್ದೆ ಎಲ್ಲವ ಅಂದು
ಕೇಳಲೆಬೇಡ ಎನುತಿಹೆ ಇಂದು
ಪಾಸಿಟೀವ್...
ರವಿವಾರದ ಕವನಗಳು
ಅತಿಥಿಗಳು ನಾವು
ಜಗತ್ತಿಗೆ ಬಂದ ಅತಿಥಿಗಳು
ಮಾಲಿಕರೆಂಬ ಗತ್ತು
ಬಂದು ಹೋಗುವ ಮಧ್ಯ
ಭಿನ್ನತೆಯ ಠಾವು
ಆಮಿಷಗಳ ಬಲಿಯಾಗಿ
ಅಧಿಕಾರದ ಮದವೇರಿ
ಸಂಪತ್ತು ಗಳಿಕೆಯ ಹುನ್ನಾರದಿ
ಹೊಸಗಿ ಹಾಕುತಿರುವೆವು
ನನ್ನವರೆಂಬ ಹೂ ಬಳ್ಳಿ
ನಾನಷ್ಟೆ ಎಂಬ ಭ್ರಮೆ
ಕಳಚುವ ಪರಿ
ಬಂದೆ ಬರುವುದು
ನಶ್ವರದ ಬದುಕು
ಅರ್ಥ ಮಾಡಿಕೊಳ್ಳದ
ಮೂಢತೆ ಆವರಿಸಿ
ಕೃತಕಗಳ ಮರ್ಮ
ಸ್ವೇಚ್ಛಾಚಾರದ ನಡವಳಿಕೆ
ಕಡಿವಾಣ...
ಚುಟುಕಗಳು…
ಅಂದು-ಇಂದು
ಹಿಂದೆ ಗುರುವಿದ್ದ,ಮುಂದೆ ಗುರಿ ಇತ್ತು
,ಎಲ್ಲೆಲ್ಲೂ ಆದರ್ಶ ವ್ಯಕ್ತಿಗಳ ಜನನ,
ಇಂದು ಎಲ್ಲೆಲ್ಲೂ ಬಾರ್ ಗಳು,ಪಬ್ ಗಳ ಹಾವಳಿ,
ಎಲ್ಲೆಲ್ಲೂ ಕುಡುಕರದೇ ಜತನ..ಕರೋನಾ
ಐಶ್ವರ್ಯದ ಮದದಿ ಮೆರೆಯುತ್ತಿದ್ದ ಮನುಜನಿಗೆ,
ಕರೋನಾ ಹಾಕಿತು ಮಾಯಲಾರದ ಬರೆ,
ಬಡವರು,ಅಶಕ್ತರು,ವೃಧ್ಧರು,ಮಕ್ಕಳಿಗೆ
ದಯೆತೋರು, ಓ ಕರೋನಾ...
ರಾಷ್ಟ್ರದ ಇತಿಹಾಸ ನಿರ್ಮಿಸಿದವರ,
ರಾಷ್ಟ್ರದ...
ಗುರ್ಚಿ ಹಾಡು
ಇದೊಂದು ಜಾನಪದ ಹಾಡು.ಮಳೆ ಬಾರದೇ ಇದ್ದಾಗ ತಲೆ ಮೇಲೆ ಗುರ್ಚಿಯನ್ನಿಟ್ಟುಕೊಂಡು ಮನೆ ಮನೆ ಅಡ್ಡಾಡಿ ನೀರು ಹುಯ್ದುಕೊಂಡು ಮಳೆಗಾಗಿ ಬೇಡುವ ಹಾಡು. ಸಣ್ಷವರಿದ್ದಾಗ ಈ ಹಾಡು ಕೇಳಿ ಮಜಾ ಪಡೆಯದವರೇ ಇಲ್ಲ. ಈಗ...
ಕವನ: ನಾನು-ನಾನೆಂಬ ಅಹಮಿಕೆ ಬೇಕೇ?
ತಿನ್ನುವ ಹಿಡಿ ಅನ್ನಕೆ,
ಸೂರ್ಯ ನೀಡುವ ಬೆಳಕಿಗೆ,
ಹಸಿರು ವೃಕ್ಷಗಳು ಪಸರಿಸುವ ತಂಗಾಳಿಗೆ ,
ಪ್ರಕೃತಿ ನೀಡುವ ಹನಿ-ಹನಿ ಜಲಕೆ ,
ಜೀವಮಾನ ಸವೆಸುವ ಓ ಮಾನವ ,
'ನಾನು,ನಾನು! 'ಎಂಬ ಅಹಮಿಕೆ ಬೇಕೇ ???
ಇನಿದನಿಯಲಿ ಹಾಡುವ ಕೋಗಿಲೆಗೆ,
ಸುಂದರ ದನಿ...
ಗಜಲ್ ಗಳು
ಹಡೆದ ಮಕ್ಕಳಿಗೆ ಹೆರವಾದಮ್ಯಾಲ ಹೋಗಾಕೆಲ್ಲೈತಿ ಜಾಗ
ಸುಡುಗಾಡು ಬಾ ಅಂತ ಕರದಿಲ್ಲಂದಮ್ಯಾಲ ಇರಾಕೆಲ್ಲೈತಿ ಜಾಗ
ಹೊಟ್ಟ್ಯಾಗಿನ ಬೆಂಕಿ ದಿಗ್ಗಂತ ಉರುದು ಭರೋಸಾ ಸುಟ್ಟು ಹೋಗ್ಯಾವು
ಕಣ್ಣೀರು ಕೋಡಿ ಹರದ್ರೂ ಕನಿಕರಿಲ್ಲಂದಮ್ಯಾಲ ಪ್ರೀತಿಗೆಲ್ಲೈತಿ ಜಾಗ
ಬದುಕು ಅತಂತ್ರಾಗಿ ಎದ್ದು ಬಿದ್ದು...
ರವಿವಾರದ ಕವನಗಳು
ನಮ್ಮೂರು ಬದಲಾಗಿದೆ
ಟಿವಿಗಳು ಬಂದ ಮೇಲೆ
ಹಂತಿಪದ ಬೀಸುವಪದ
ಡಪ್ಪಿನಾಟ ಬಯಲಾಟ
ಕೋಲಾಟ ಡೊಳ್ಳಿನಪದ
ಪುರಾಣ ಕೀರ್ತನ ಭಜನೆ
ಕೇಳದಂತಾಗಿದೆ
ಆಗಿನಂತಿಲ್ಲ
ಈಗ ನಮ್ಮೂರು ಬದಲಾಗಿದೆ
ಟ್ರಾಕ್ಟರ್ ಬಂದಮೇಲೆ
ಜೋಡೆತ್ತುಗಳಿಗೆ
ಗೆಜ್ಜೆ ಗಗ್ಗರಿ ಕೋಡಣಸು ಜೂಲ
ಹಾಕಿ ಸವಾರಿ ಬಂಡಿಯಲಿ
ಜಾತ್ರೆಗೆ ಹೋಗುವ
ಮಜಾ ಮಾಯವಾಗಿದೆ
ಆಗಿನಂತಿಲ್ಲ
ಈಗ ನಮ್ಮೂರು ಬದಲಾಗಿದೆ
ಕಾನ್ವೆಂಟ ಶಾಲೆಗಳು ತೆರೆದ ಮೇಲೆ
ಹಿರೀಕರು...
ಮುಂದಿನ ವರ್ಷ ಜಿಯೋದಿಂದ 5 ಜಿ ನೆಟ್ ವರ್ಕ್ ಆರಂಭ
ದೇಶದಲ್ಲಿ ಡಿಜಿಟಲ್ ಕ್ರಾಂತಿಯ ದ್ಯೋತಕವಾಗಿ ಜಿಯೋ ಕಂಪನಿಯು ಮುಂದಿನ ವರ್ಷದಲ್ಲಿ 5G ನೆಟ್ ವರ್ಕ್ ಸೇವೆಯನ್ನು ಆರಂಭಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮಾಲೀಕ ಮುಖೇಶ್ ಅಂಬಾನಿ ಪ್ರಕಟಿಸಿದ್ದಾರೆ.ಕಂಪನಿಯ 43 ನೆಯ ವಾರ್ಷಿಕ...