ಜೀವನದ ಪಯಣ
ಸಾಗುತ್ತಿದೆ ಜೀವನದ ಪಯಣ ಬಾಳ ದೋಣಿ ಪಥದಲ್ಲಿ ಹುಟ್ಟು ಹಾಕಿ ಸಾಗಿಸುವ ಪಯಣಿಗನು
ಆ ನಾವಿಕನು
ಈ ದಡದಿಂದ ಆ ದಡಕ್ಕೆ ಸಾಗುವುದರೊಳಗೆ ಯೌವನದಿಂದ ಮುಪ್ಪು ಆವರಿಸುತ್ತದೆ ಬಾಳ ದೋಣಿಯ ಪಥದಲ್ಲಿ
ಕಷ್ಟ ಕಾರ್ಪಣ್ಯಗಳು ಬಂದರೂ ಕೂಡ ಜೀವಿಗಳು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿವೆ ಮೈಮರೆತು ಈ ಬಾಳ ದೋಣಿಯ ಜೀವದ ಪಯಣದಲ್ಲಿ ನಾನು ಒಬ್ಬ ಪಯಣಿಗ
ಪಯಣ ಮುಗಿಯುವುದರೊಳಗೆ...
( ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹತ್ಯಾಚಾರಕ್ಕೊಳಗಾದ ಮನಿಷಾ ಎಂಬ ಬಾಲಕಿಯ ಕುರಿತು ಶರಶ್ಚಂದ್ರ ತಳ್ಳಿ ಕವನ )
ಮನಿಷಾ! ಮುಂದಿನ ಜನುಮಗಳಲಿ...?
ನಿನ್ನ ದೇಹವು
ಕತ್ತಲೆಯ ಚಾಪೆಯಾಗುತ್ತದೆ
ಎಂದೆನಿಸಿದಾಗ-
ಅವರ ಕೊರಳ ಕೊಳವೆ ಕಡಿಬೇಕಿತ್ತು
ನಿನ್ನ ಚಿತೆಯ ಬೆಂಕಿ
ಕೆನ್ನಾಲಿಗೆ ಚಾಚುತಿದೆ
ಎಂದೆನಿಸಿದಾಗ-
ಕೈಗೆ ಸಿಕ್ಕ ಕಲ್ಲಿನಲಿ
ಹಲ್ಲಿಗೆ ಜಜ್ಜಬೇಕಿತ್ತು
ಮನಿಷಾ!ನಿನ್ನೆದೆಗೂಡನು
ಕುಲುಮೆಯಲಿ ಬೇಯಿಸುತ್ತಾರೆ
ಎಂದೆನಿಸಿದಾಗ-
ಪೆನ್ನನು ಆಯುಧ ಮಾಡಿ,
ಒಂದಿಬ್ಬರ ಕಣ್ಣಿಗಿರಿಯಬೇಕಿತ್ತು
ನಿನ್ನ ಜೀವದ ಕಥೆ
ಮುಗಿದೇ ಹೋಯಿತು
ಎಂದೆನಿಸಿದಾಗ-
ಅಬ್ಬಕ್ಕನಂತೆ ಅಬ್ಬರಿಸಿ
ಒಂದೆರಡು ಹೆಣವಾದರೂ ಉರುಳಿಸಬೇಕಿತ್ತು
ನಿನ್ನ ಬದುಕಿನ ವಿದಾಯ
ಹರಾಜಾಗುತಿದೆ
ಎಂದೆನಿಸಿದಾಗ-
ಹುರಿಗೊಂಡ ಅವರ
ಅಂಗಗಳನು...
ಇವರೇ ಗಾಂಧಿ ಅಜ್ಜ
ಕೈಲಿ ಕೋಲು, ಬಿರುಸು ನಡಿಗೆ
ಬಾಯಲ್ಲಿ ಸತ್ಯ, ಶಾಂತಿ ಮಂತ್ರ
ರಾಷ್ಟ್ರದ ಒಳಿತಿಗಾಗಿ ಹೋರಾಡಿಯೂ,
ಅಧಿಕಾರ ಕೈಬೀಸಿ ಕರೆದಾಗ,
ನಿರ್ಲಿಪ್ತವಾಗಿ ಕುಳಿತವರು...
ಇವರೇ ನಮ್ಮ ಗಾಂಧಿ ಅಜ್ಜ.
ರಾಷ್ಟ್ರಮಾತೆಯ ಕಣ್ಣು,ಕಿವಿ,ಬಾಯಿ ಮುಚ್ಚಿ
ಠೇಂಕರಿಸುತ್ತಿದ್ದ ಕೆಂಪು ಜನರಿಗೆ
ಸತ್ಯಾಗ್ರಹದಿಂದ ಪಾಠ ಕಲಿಸಿದವರು ,
ಸರಳ ನಡೆ-ನುಡಿ- ಜೀವನದಿಂದ
ವಿಶ್ವಕ್ಕೇ ಮಾದರಿಯಾದವರು
ಇವರೇ ನಮ್ಮ ಗಾಂಧಿ ಅಜ್ಜ....
ಪತ್ನಿ,ಪುತ್ರರ ಮರೆತು, ಹೊಣೆಯರಿತು
ಸ್ವಾತಂತ್ರ್ಯ ಹೋರಾಟ ಸಂಘಟಿಸಿ,
ಕಾಯ್ದೆ ಮುರಿದು, ಚಳವಳಿ ತೆಗೆದು
ಲಕ್ಷಾಂತರ ಜನರಿಗೆ ಕೆಚ್ಚು...
ಸತ್ಯ ಪಥದ ನಿತ್ಯ ಸಂತ ಇಂಟ್ರೋ ಅನಂತ ತಾರಾಮಂಡಲದಲ್ಲಿ ಅದೆಷ್ಟೋ ಅಗಣಿತ ತಾರಾಪುಂಜಗಳಿದ್ದರೂ ಭುವಿಗೆ ಬೆಳಕನೀಯಲು ಸೂರ್ಯ-ಚಂದ್ರರೇ ಹೇಗೆ ಅತ್ಯಂತ ಸಮೀಪ ಸಂಪನ್ಮೂಲರೋ ಹಾಗೆಯೇ ಅದೆಷ್ಟೋ ಮತ-ಧರ್ಮಶಾಸ್ತ್ರ ತಜ್ಞರು ಗತಿಸಿಹೋಗಿದ್ದರೂ ಸತ್ಯ-ಅಹಿಂಸೆ ಎಂಬ ಮನುಷ್ಯ ಜೀವಿಯ ನಿಜಾಂತರಾಳದ ಅಂತಃಸತ್ತ್ವವನ್ನು ಸರ್ವರಲ್ಲಿಯೂ ವ್ಯಕ್ತಪಡಿಸಲು ಕಾರಣೀಭೂತರಾದ ಏಕೈಕ ನವ್ಯಜಗದ ಸಂತನೇ ಈ ಮಹಾತ್ಮಗಾಂಧೀಜಿ.
ಭಾರತದ ಭಾಗ್ಯವಿಧಾತ ಮತ್ತು ರಾಷ್ಟ್ರಪಿತ...