Yearly Archives: 2020
ಚುಟುಕಗಳು…
ಅಂದು-ಇಂದು
ಹಿಂದೆ ಗುರುವಿದ್ದ,ಮುಂದೆ ಗುರಿ ಇತ್ತು
,ಎಲ್ಲೆಲ್ಲೂ ಆದರ್ಶ ವ್ಯಕ್ತಿಗಳ ಜನನ,
ಇಂದು ಎಲ್ಲೆಲ್ಲೂ ಬಾರ್ ಗಳು,ಪಬ್ ಗಳ ಹಾವಳಿ,
ಎಲ್ಲೆಲ್ಲೂ ಕುಡುಕರದೇ ಜತನ..ಕರೋನಾ
ಐಶ್ವರ್ಯದ ಮದದಿ ಮೆರೆಯುತ್ತಿದ್ದ ಮನುಜನಿಗೆ,
ಕರೋನಾ ಹಾಕಿತು ಮಾಯಲಾರದ ಬರೆ,
ಬಡವರು,ಅಶಕ್ತರು,ವೃಧ್ಧರು,ಮಕ್ಕಳಿಗೆ
ದಯೆತೋರು, ಓ ಕರೋನಾ...
ರಾಷ್ಟ್ರದ ಇತಿಹಾಸ ನಿರ್ಮಿಸಿದವರ,
ರಾಷ್ಟ್ರದ...
ಗುರ್ಚಿ ಹಾಡು
ಇದೊಂದು ಜಾನಪದ ಹಾಡು.ಮಳೆ ಬಾರದೇ ಇದ್ದಾಗ ತಲೆ ಮೇಲೆ ಗುರ್ಚಿಯನ್ನಿಟ್ಟುಕೊಂಡು ಮನೆ ಮನೆ ಅಡ್ಡಾಡಿ ನೀರು ಹುಯ್ದುಕೊಂಡು ಮಳೆಗಾಗಿ ಬೇಡುವ ಹಾಡು. ಸಣ್ಷವರಿದ್ದಾಗ ಈ ಹಾಡು ಕೇಳಿ ಮಜಾ ಪಡೆಯದವರೇ ಇಲ್ಲ. ಈಗ...
ಕವನ: ನಾನು-ನಾನೆಂಬ ಅಹಮಿಕೆ ಬೇಕೇ?
ತಿನ್ನುವ ಹಿಡಿ ಅನ್ನಕೆ,
ಸೂರ್ಯ ನೀಡುವ ಬೆಳಕಿಗೆ,
ಹಸಿರು ವೃಕ್ಷಗಳು ಪಸರಿಸುವ ತಂಗಾಳಿಗೆ ,
ಪ್ರಕೃತಿ ನೀಡುವ ಹನಿ-ಹನಿ ಜಲಕೆ ,
ಜೀವಮಾನ ಸವೆಸುವ ಓ ಮಾನವ ,
'ನಾನು,ನಾನು! 'ಎಂಬ ಅಹಮಿಕೆ ಬೇಕೇ ???
ಇನಿದನಿಯಲಿ ಹಾಡುವ ಕೋಗಿಲೆಗೆ,
ಸುಂದರ ದನಿ...
ಗಜಲ್ ಗಳು
ಹಡೆದ ಮಕ್ಕಳಿಗೆ ಹೆರವಾದಮ್ಯಾಲ ಹೋಗಾಕೆಲ್ಲೈತಿ ಜಾಗ
ಸುಡುಗಾಡು ಬಾ ಅಂತ ಕರದಿಲ್ಲಂದಮ್ಯಾಲ ಇರಾಕೆಲ್ಲೈತಿ ಜಾಗ
ಹೊಟ್ಟ್ಯಾಗಿನ ಬೆಂಕಿ ದಿಗ್ಗಂತ ಉರುದು ಭರೋಸಾ ಸುಟ್ಟು ಹೋಗ್ಯಾವು
ಕಣ್ಣೀರು ಕೋಡಿ ಹರದ್ರೂ ಕನಿಕರಿಲ್ಲಂದಮ್ಯಾಲ ಪ್ರೀತಿಗೆಲ್ಲೈತಿ ಜಾಗ
ಬದುಕು ಅತಂತ್ರಾಗಿ ಎದ್ದು ಬಿದ್ದು...
ರವಿವಾರದ ಕವನಗಳು
ನಮ್ಮೂರು ಬದಲಾಗಿದೆ
ಟಿವಿಗಳು ಬಂದ ಮೇಲೆ
ಹಂತಿಪದ ಬೀಸುವಪದ
ಡಪ್ಪಿನಾಟ ಬಯಲಾಟ
ಕೋಲಾಟ ಡೊಳ್ಳಿನಪದ
ಪುರಾಣ ಕೀರ್ತನ ಭಜನೆ
ಕೇಳದಂತಾಗಿದೆ
ಆಗಿನಂತಿಲ್ಲ
ಈಗ ನಮ್ಮೂರು ಬದಲಾಗಿದೆ
ಟ್ರಾಕ್ಟರ್ ಬಂದಮೇಲೆ
ಜೋಡೆತ್ತುಗಳಿಗೆ
ಗೆಜ್ಜೆ ಗಗ್ಗರಿ ಕೋಡಣಸು ಜೂಲ
ಹಾಕಿ ಸವಾರಿ ಬಂಡಿಯಲಿ
ಜಾತ್ರೆಗೆ ಹೋಗುವ
ಮಜಾ ಮಾಯವಾಗಿದೆ
ಆಗಿನಂತಿಲ್ಲ
ಈಗ ನಮ್ಮೂರು ಬದಲಾಗಿದೆ
ಕಾನ್ವೆಂಟ ಶಾಲೆಗಳು ತೆರೆದ ಮೇಲೆ
ಹಿರೀಕರು...
ಮುಂದಿನ ವರ್ಷ ಜಿಯೋದಿಂದ 5 ಜಿ ನೆಟ್ ವರ್ಕ್ ಆರಂಭ
ದೇಶದಲ್ಲಿ ಡಿಜಿಟಲ್ ಕ್ರಾಂತಿಯ ದ್ಯೋತಕವಾಗಿ ಜಿಯೋ ಕಂಪನಿಯು ಮುಂದಿನ ವರ್ಷದಲ್ಲಿ 5G ನೆಟ್ ವರ್ಕ್ ಸೇವೆಯನ್ನು ಆರಂಭಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮಾಲೀಕ ಮುಖೇಶ್ ಅಂಬಾನಿ ಪ್ರಕಟಿಸಿದ್ದಾರೆ.ಕಂಪನಿಯ 43 ನೆಯ ವಾರ್ಷಿಕ...
ಚುಟುಕು ಹಾಗೂ ಕವನ
ನಮ್ಮೂರ ಸಿದ್ಧ
ನಮ್ಮೂರ ಸಿದ್ಧ
ಕುಟುಂಬ ಯೋಜನೆಗೆ ಬದ್ಧ,
ಆ-ರತಿಗೊಂದು,
ಈ-ರತಿಗೊಂದು
ಅವನಿಗೆ
ನಮ್ಮೂರಲ್ಲಿ
ಎರಡೇ ಮಕ್ಕಳು..ಸಿ(ಕ)ಹಿಸುದ್ಧಿ
ಸೀಮೆಯೆಣ್ಣೆ ಸುರಿದು,
ಸೊಸೆಯರ ಕೊಲ್ಲುವ
ಅತ್ತೆಯರಿಗೊಂದು
ಸಿ(ಕ)ಹಿ ಸುದ್ದಿ,
ಹೀಗೇ ಸಾಗಿದರೆ
ಸೊಸೆಯರೇ
ನಿಮ್ಮನ್ನು ಕೊಲ್ಲುವರು
ಗುದ್ದಿ ಗುದ್ದಿ!!ಫಲಕ
ಮಹಿಳಾ ಕಾಲೇಜೊಂದರ
ಮುಂದೆ,
ರಸ್ತೆ ಸೂಚನಾ ಫಲಕ
"ಈ ರಸ್ತೆಯಲಿ ಭಾರೀ
ಉಬ್ಬು-ತಗ್ಗುಗಳಿವೆ
ಎಚ್ಚರಿಕೆ...!!"
ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583,ಹಾರು ನೀ ಹಾರು
ಗೂಡಲಿದ್ದ ಮರಿಯೊಂದು
ಜಾರಿ ಕೆಳಗೆ...
ವಚನಗಳು
೧
ಕೆಂಡದನುಭವ ಮೈಯ ಬೇಯಿಸಿತ್ತು
ಉಂಡನುಭವ ಉದರ ಹೊರೆಯಿತ್ತು
ಗಂಡನುಭವ ರಣದಿ ಜಯವ ತಂದಿತ್ತು
ಮಂಡನುಭವ ಜೀವನ್ಮುಕ್ತಿಯ ಕೆಡಿಸಿತ್ತು
ಅತಿಗೊಳಿಸಿದನುಭವ ತೃಪ್ತಿಗೆ ಕಪ್ಪಿಟ್ಟಿತ್ತು
ಹಿತಮಿತದನುಭವ ಭವವ ಗೆಲಿಸಿತ್ತಯ್ಯ
ಸೊಗಲ ಸೋಮೇಶ್ವರ
೨
ಸತ್ಯವಂತರೇ ನುಡಿಯಲಿ
ಎಡುವುತಿಹರಯ್ಯ
ಆಚರಿಪರೇ ನಡೆಯಲಿ ದುರಾಚಾರಿಗಳಾಗಿಹರಯ್ಯ
ವಿಚಾರಿಗಳೇ ವಾದದಿ
ಕುಯುಕ್ತಿಗಿಳಿದಿಹರಯ್ಯ
ದಾರಿತೋರ್ವ ಗುರುವೇ
ಬಟ್ಟೆಗೆಟ್ಟಿಹರಯ್ಯ
ಪಾಲಿಸಬೇಕಾದವರೇ
ನೇಮ ಮುರಿಯುತಿಹರಯ್ಯ
ಪೋಷಣೆ ಮಾಡಬೇಕಾದಾವರೇ
ಆಪೋಷಿಸುತಿಹರಯ್ಯ
ದಾನಿಸಬೇಕಿದ್ದ ದಾಸೋಹಿಗಳೇ ದರವೇಸಿಗಳಾಗಿಹರಯ್ಯ
ಇಂತ...
ವೃಕ್ಷ ಬೀಜಾರೋಪನದಲ್ಲಿ ಪಾಲ್ಗೊಳ್ಳಿ
ವನಮಹೋತ್ಸವದ ಅಂಗವಾಗಿ ಇದೆ ಮಂಗಳವಾರ ೧೪.೦೭.೨೦೨೦ ಬೆಳಿಗ್ಗೆ ೭ ಘಂಟೆಗೆ ಸವದತ್ತಿ ತಾಲೂಕು ಗೊರವನಕೊಳ್ಳದ ನವಿಲು ತೀರ್ಥದ ಕೆಳಗಿನ ರಸ್ತೆಗೆ ಹೊಂದಿಕೊಂಡಿರುವ ಗುಡ್ಡದಲ್ಲಿ ಸೀಡಾ ಥಾನ್ ಬೀಜ ಹಚ್ಚುವ/ ಹಾಕುವ ಕಾರ್ಯಕ್ರಮವಿದ್ದು. ಈಗಾಗಲೇ...
ಅಮಿತಾಭ ಬಚ್ಚನ್ ಗೆ ಕೊರೋನಾ ; ಆಸ್ಪತ್ರೆಗೆ ದಾಖಲು
ಖ್ಯಾತ ಬಾಲಿವುಡ್ ನಟ ಅಮಿತಾಭ ಬಚ್ಚನ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.ಸಂಜೆಗೆ ತಮಗೆ ಕೊರೋನಾ ಇರುವುದಾಗಿ ಬಿಗ್ ಬಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವುದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚಿನ...