Monthly Archives: July, 2021
ಸುದ್ದಿಗಳು
ಯಶಸ್ವಿ ಅಪ್ಪ ಕವಿಗೋಷ್ಠಿ – ಸಂತೋಷ್ ಬಿದರಗಡ್ಡೆ ಅಭಿಮತ
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಹಾವೇರಿ ವತಿಯಿಂದ ಗೂಗಲ್ ಮೀಟ್ ಮೂಲಕ ರಾಜ್ಯಮಟ್ಟದ ಅಪ್ಪ ಕವಿಗೋಷ್ಠಿ ಸತತ ಎರಡು ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿತು.ರಾಜ್ಯಾದ್ಯಂತ ೮೦ಕ್ಕೂ ಹೆಚ್ಚು ಸಾಹಿತಿಗಳು ಭಾಗವಹಿಸಿದ್ದು ಕಾರ್ಯಕ್ರಮ ತುಂಬಾ ವರ್ಣರಂಜಿತವಾಗಿ ಮೂಡಿ ಬಂದಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥಾಪಕಾಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ, ಅಪ್ಪ ಎನ್ನುವ...
ಲೇಖನ
ಡಾ. ಎಫ್.ಟಿ. ಹಳ್ಳಿಕೇರಿ ಅವರ ಕಂಠಪತ್ರ-೪; ಒಂದು ಅವಲೋಕನ
ಡಾ. ಎಫ್.ಟಿ. ಹಳ್ಳಿಕೇರಿ ನಮ್ಮ ದಿನಮಾನದ ಒಬ್ಬ ಅಪರೂಪದ ಹಸ್ತಪ್ರತಿ ತಜ್ಞರು-ವಿದ್ವಾಂಸರು. ಎಪ್ಪತ್ತರ ದಶಕದಲ್ಲಿ ಡಿ.ಎಲ್.ಎನ್, ಡಾ. ಆರ್. ಸಿ. ಹಿರೇಮಠ ಅವರಂಥ ವಿದ್ವಾಂಸರು ‘ವಿದ್ವತ್ತು, ಪಾಂಡಿತ್ಯ ಇವು ನಮ್ಮೊಂದಿಗೆ ಕೊನೆಗಾಣುತ್ತವೆಂದು ಭಾವಿಸಿದ’ ಕಾಲದಲ್ಲಿ ಡಾ. ಎಂ. ಎಂ. ಕಲಬುರ್ಗಿ ಅವರು ‘ಕನ್ನಡ ಗ್ರಂಥ ಸಂಪಾದನ ಶಾಸ್ತ್ರ’ ಎಂಬ ಕೃತಿಯನ್ನು ಪ್ರಕಟಿಸಿ, ಆ ವಿದ್ವಜ್ಜನರ...
ಕವನ
ಮಿನಿಕವನ: ಬದುಕೆಂಬ ಚಲನಚಿತ್ರ…
ಬದುಕೆಂಬ ಚಲನಚಿತ್ರ..
ಬದುಕೆಂಬ ಚಲನಚಿತ್ರದಲಿ
ನೀನೊಬ್ಬ ಅಸಾಮಾನ್ಯ ನಟ,
ಯಾರಿಗೂ ನಿಲುಕದ
ದಿವ್ಯ ಶಕ್ತಿಯೊಂದು
ಈ ಚಲನಚಿತ್ರದ ನಿರ್ಮಾಪಕ,ನಿರ್ದೇಶಕ...
ತಾತ-ಅಜ್ಜಿ,ಅಪ್ಪ-ಅಮ್ಮರೆಂಬ
ಗೌರವ ಪಾತ್ರ ವರ್ಗ..
ಗೆಳೆಯ-ಗೆಳತಿಯರು
ಪ್ರೀತಿ-ವಿಶ್ವಾಸಗಳೆಂಬ ಮರದ
ರೆಂಬೆ-ಕೊಂಬೆಗಳು...
ಹೆಂಡತಿ ಎಂಬ ನಾಯಕಿ,
ಮಕ್ಕಳೆಂಬ ಬಾಲನಟ-ನಟಿಯರು..
ಬದುಕೆಂಬ ಚಲನಚಿತ್ರದ
ಮೂಲಬೇರುಗಳು...
ಇಲ್ಲಿ ನಾಯಕ,ಖಳನಾಯಕ,
ನಗೆಮಿಂಚು,ಅಳುಮುಂಜಿ..
ಎಲ್ಲವೂ ವಿಧಿಲಿಖಿತ....
ಆ ದಿವ್ಯ ಶಕ್ತಿಯ ಸೂತ್ರದಲಿ
ನಿನ್ನ ಬದುಕೆಂಬ ಗಾಳಿಪಟದ ಆಟ..
ಅವನ ಕರುಣೆಯಿದ್ದರೆ
ನಿನ್ನ ಬದುಕ ಚಲನಚಿತ್ರ
ಎಂದೆಂದಿಗೂ ಸುಖಾಂತ್ಯ..
ಇಲ್ಲದಿರೆ ಬಾಳು ಸೂತ್ರವಿಲ್ಲದೆ
ಲಾಗ ಹೊಡೆಯುವ ಗಾಳಿಪಟ..
ನಿನ್ನ ಬದುಕೆಂಬ ಚಲನಚಿತ್ರಕೆ
ಕಣ್ಣೀರ ಕಡಲಿನ ..ದುಃಖಾಂತ್ಯ..
ಸೂತ್ರದಾರ ಅವನು.. ಪಾತ್ರದಾರಿ ನೀನು....!!!ಡಾ.ಭೇರ್ಯ...
ಸುದ್ದಿಗಳು
ಪಶುಸಂಗೋಪನೆ ಇಲಾಖೆಯಿಂದ ಅನ್ಯ ಕರ್ತವ್ಯದ ನಿಯೋಜನೆಗೆ ನಿರ್ಬಂಧ
ಬೀದರ - ಅನ್ಯ ಇಲಾಖೆಗೆ ನಿಯೋಜನೆಗೊಂಡ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಸೇವೆಯನ್ನು ಜುಲೈ 31ರ ಒಳಗೆ ವಾಪಸ್ ಪಡೆಯಲು ನಿರ್ಧರಿಸಲಾಗಿದ್ದು ಇನ್ನು ಮುಂದೆ ಪಶುಸಂಗೋಪನೆಯಿಂದ ಸಿಬ್ಬಂದಿಗಳನ್ನು ಅನ್ಯ ಇಲಾಖೆಗೆ ನಿಯೋಜನೆ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರೈತರ, ಪಶುಪಾಲಕರ ಅಭಿವೃದ್ಧಿಗಾಗಿ ಇಲಾಖೆಯಿಂದ ಪ್ರಾಣಿ ಕಲ್ಯಾಣ ಮಂಡಳಿ, ಪಶುಸಂಜೀವಿನಿ, ಗೋಹತ್ಯೆ...
ಸುದ್ದಿಗಳು
ತಾಳೆ ಬೆಳೆಗಾರರಿಂದ ಸಚಿವರಿಗೆ ಮನವಿ
ಸಿಂದಗಿ: ಕಲಬುರ್ಗಿ ಮಾರ್ಗವಾಗಿ ಸಿಂದಗಿ ಕಾರ್ಯಕ್ರಮದ ನಿಮಿತ್ಯ ತೆರಳಿದ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಆರ್ ಶಂಕರ್ ಅವರಿಗೆ ಮಾರ್ಗ ಮಧ್ಯದಲ್ಲಿ ಗಬಸಾವಳಗಿ ಗ್ರಾಮದಲ್ಲಿ ತಾಳೆ ಬೆಳೆ ಬೆಳೆದ ರೈತರು ಹಾಗೂ ಸಿಂದಗಿ ತಾಲೂಕ ತಾಳೆ ಬೆಳೆಗಾರರ ಸಂಘದ ಅಧ್ಯಕ್ಷ ಎ.ಬಿ.ಹಿರೇಮಠ ಅವರು ಮತ್ತು ರೈತ ಸಂಘದ ಯುವ ಘಟಕ ರಾಜ್ಯ ಉಪಾಧ್ಯಕ್ಷ ಶಿವಕುಮಾರ...
ಸುದ್ದಿಗಳು
ತೋಟಗಾರಿಕೆ ಕಾಲೇಜಿಗೆ ಹಣ ಬಿಡುಗಡೆ – ಆರ್. ಶಂಕರ ಭರವಸೆ
ಸಿಂದಗಿ: ಕಳೆದ ಸಮ್ಮಿಶ್ರ ಸರಕಾರದಲ್ಲಿ ಮಂಜೂರಾದ ಆಲಮೇಲ ತೋಟಗಾರಿಕೆ ಕಾಲೇಜಿಗೆ ಹಣ ಬಿಡುಗಡೆಗೊಳಿಸಲು ಸರಕಾರ ಮಟ್ಟದಲ್ಲಿ ಚರ್ಚಿಸುವುದಾಗಿ ತೋಟಗಾರಿಕಾ ಮತ್ತು ರೇಷ್ಮೆ ಸಚಿವ ಆರ್.ಶಂಕರ ಭರವಸೆ ನೀಡಿದರು.ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಶ್ರೀ ಚನ್ನವೀರ ಶಿವಾಚಾರ್ಯರರ ರೈತ ಉತ್ಪಾದಕರ ಕಂಪನಿ ಉದ್ಘಾಟಿಸಿ ಮಾತನಾಡಿ, ಕರೋನಾದಿಂದ ಸಂಕಷ್ಟ ದಲ್ಲಿರುವ ರೈತರಿಗೆ ಅನುಕೂಲವಾಗಲೆಂದು ಹಿಂದೆ ಪ್ರತಿಶತ 35 ಇದ್ದ...
ಸುದ್ದಿಗಳು
ಆರ್. ಶಂಕರ್ ಗೆ ಸನ್ಮಾನ
ಸಿಂದಗಿ - ಸಿಂದಗಿ ಪಟ್ಟಣಕ್ಕೆ ಪ್ರಪ್ರಥಮ ಬಾರಿಗೆ ಆಗಮಿಸಿ ಕರ್ನಾಟಕ ಸರ್ಕಾರದ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಸಚಿವ ಆರ್ ಶಂಕರ ಅವರಿಗೆ ಪಟ್ಟಣದ ಪ್ರಪ್ರಥಮ ಪ್ರಜೆ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರು ಸನ್ಮಾನಿಸಿ ಗೌರವಿಸಿದರು.
ಸುದ್ದಿಗಳು
ಎಸ್ಎಸ್ಎಲ್ ಸಿ ಮಕ್ಕಳಿಗೆ ಕ್ಲಸ್ಟರ್ ಮಟ್ಟದ ಫೋನ್ ಇನ್ ಕಾರ್ಯಕ್ರಮ
ಮೂಡಲಗಿ: ಕೊರೋನ ಸಾಂಕ್ರಾಮಿಕ ರೋಗದ ಅಲೆಯ ಭೀತಿಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷಾ ತಯಾರಿ ಹಾಗೂ ಸಿದ್ದತೆ ಅತ್ಯವಶ್ಯಕವಾಗಿದೆ. ಯಾವುದೇ ಕಾರಣಕ್ಕೂ ಭಯ ಪಡದೆ ವಿದ್ಯಾರ್ಥಿಗಳು ಮತ್ತು ಪಾಲಕರು ಪರೀಕ್ಷೆಗಳಿಗೆ ಹಾಜರಾಗಬೇಕೆಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.ಅವರು ಶುಕ್ರವಾರ ಮೂಡಲಗಿಯಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ‘ಕ್ಲಸ್ಟರ ಮಟ್ಟದ’ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೋವಿಡ್-19...
ಲೇಖನ
ಮಣ್ಣೆತ್ತಿನ ಅಮವಾಸ್ಯೆ
ಇಂದು ಮಣ್ಣೆತ್ತಿನ ಅಮವಾಸ್ಯೆ. ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕೃತಿಯ ದೇಶ.ಇಲ್ಲಿ ತನ್ನದೇ ಆದ ಧಾರ್ಮಿಕ ಆಚರಣೆಗಳು ವೃತ ನೇಮಾದಿಗಳು ಜರುಗುವ ಮೂಲಕ ದೈವೀ ಆರಾಧನೆ ಜರುಗುತ್ತಿದ್ದು ಇಲ್ಲಿನ ಧರ್ಮಕ್ಕೆ ಮೂರು ನೆಲೆಗಳುಮೂಲಭೂತ ತತ್ವಗಳ ಅಥವ ಸಿದ್ದಾಂತದ ನೆಲೆ
ಆ ತತ್ವಗಳನ್ನು ಜನಸಾಮಾನ್ಯಕ್ಕೆ ನಿರೂಪಿಸುವ ಪೌರಾಣಿಕ ನೆಲೆ.
ಆ ತತ್ವ ಸಿದ್ದಿಗಾಗಿ ಕಲ್ಪ...
ಲೇಖನ
ಆಳುವವರೂ ಒಂದು ರೀತಿಯಲ್ಲಿ ಆಳಾಗಿರುತ್ತಾರೆ ಎನ್ನೋದೆ ಜ್ಞಾನ
ಭೂಮಿಯ ಮೇಲೆ ಯಾರು ಹೆಚ್ಚು ಆಸ್ತಿ ಮಾಡಬೇಕು? ಸ್ತ್ರೀ ಯೋ ಪುರುಷರೋ? ಆಸ್ತಿ ಇಲ್ಲವೆಂದರೆ ಅಸ್ತಿ ವಿಸರ್ಜನೆಗೂ ಯಾರೂ ಇರೋದಿಲ್ಲ ಎನ್ನುವ ಕಾಲದಲ್ಲಿ ಕಲಿಗಾಲವಿದೆ. ಹೀಗಾಗಿ ಆಸ್ತಿಗಾಗಿ ಹೊಡೆದಾಟ, ಬಡಿದಾಟ, ಹೋರಾಟ, ಹಾರಾಟ ಮಾರಾಟ ಮಾಡಿಕೊಳ್ಳುವ ವ್ಯವಹಾರದಲ್ಲಿ ಜೀವನ ಮುಳುಗಿಹೋಗುತ್ತಿದೆ.ಆಸ್ತಿಯನ್ನು ಹೋಗುವಾಗ ಬರೋವಾಗ ಹೊತ್ತು ಬರೋದಾಗಿದ್ರೆ ಯಾರೂ ಬಡವರಾಗಿ ಹುಟ್ಟುತ್ತಿರಲಿಲ್ಲವೇನೋ? ಇಂದಿನ ಜೀವನ ಮುಂದೆ...
Latest News
ಕವನ : ಅನುಬಂಧ
ಅನುಬಂಧಕಾಣದ ದಾರಿಯಲ್ಲಿ
ಬೆಸೆದ ನಂಟು,
ಹೆಸರಿಲ್ಲದಿದ್ದರೂ ಹೃದಯಕ್ಕೆ
ಪರಿಚಿತವಾದ ಬಂಧ…
ಕಾಲದ ಹೊಳೆ ಹರಿದರೂ
ಕಳೆಯದ ಗುರುತು, ಗಂಟು
ಅದು ಅನುಬಂಧ.
ಮೌನದಲ್ಲೂ ಮಾತಾಡುವ
ಸಂಬಂಧ, ಬಂಧ..
ಕಣ್ಣಂಚಿನ ನೀರನ್ನೂ
ಓದುತ್ತದೆ ಒರೆಸುತ್ತದೆ.
ಹೃದಯ ಮುರಿದು
ನೊಂದ ಕ್ಷಣದಲ್ಲಿ
ಅದೃಶ್ಯವಾಗಿ ಕೈ
ಹಿಡಿದುಕೊಳ್ಳುತ್ತದೆ.
ಮಣ್ಣಿನ ವಾಸನೆಯಂತೆ
ಸಹಜ,
ಬೆಳಗಿನ ಬೆಳಕಿನಂತೆ
ಮೃದುವು.
ನಗುವಿನಲ್ಲೂ,...



