Monthly Archives: December, 2021
ಸುದ್ದಿಗಳು
ಅಯ್ಯಪ್ಪನ ದರ್ಶನದಿಂದ ಜೀವನ ಸುಖಮಯ- ಆನಂದ ಮಾಮನಿ
ಮುನವಳ್ಳಿ: “ಪ್ರತಿ ವರ್ಷ ಅಯ್ಯಪ್ಪನ ವ್ರತ ಆಚರಿಸಿ ಮಹಾಪೂಜೆ ಮತ್ತು ಅಗ್ನಿಪೂಜೆ ಕಾರ್ಯಕ್ರಮದ ನಂತರ ಅಯ್ಯಪ್ಪನ ದರ್ಶನಕ್ಕಾಗಿ ಭಕ್ತರು ಶಬರಿಮಲೆಗೆ ತೆರಳಿ ದರ್ಶನ ಪಡೆದು ಪುನೀತರಾಗುತ್ತಾರೆ.ಇದರಿಂದ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಕಟ್ಟುನಿಟ್ಟಿನ ವ್ರತ ಆಚರಣೆಯ ಮೂಲಕ ಅಯ್ಯಪ್ಪನ ದರ್ಶನದಿಂದ ಜೀವನ ಸುಖಮಯವಾಗುವುದು” ಎಂದು ವಿಧಾನಸಭಾ ಉಪ ಸಭಾಪತಿ ಹಾಗೂ ಶಾಸಕ ಆನಂದ ಮಾಮನಿ ಹೇಳಿದರು.ಅವರು...
ಸುದ್ದಿಗಳು
ನರೇಗಾ ಕೂಲಿಕಾರರ ಆರೋಗ್ಯ ತಪಾಸಣೆ : ಕೂಲಿಕಾರರು ಆರೋಗ್ಯದ ರಕ್ಷಣೆಗೆ ಒತ್ತು ನೀಡಿ- ಸಂಗಮೇಶ ರೊಡ್ಡನವರ
ಮೂಡಲಗಿ: ಎಲ್ಲ ಕೂಲಿಕಾರರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಒತ್ತು ನೀಡಬೇಕು ಎಂದು ಮೂಡಲಗಿ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನವರ್ ಹೇಳಿದರು.ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಮಂಗಳವಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ಬಡವರಾಗಲಿ, ಶ್ರೀಮಂತರೇ ಆಗಲಿ ಆರೋಗ್ಯವೆಂಬುದು...
ಸುದ್ದಿಗಳು
ಸ್ಟ್ರಾಂಗ್ ರೂಮ್‍ನಲ್ಲಿ ಭದ್ರವಾಗಿದೆ 59 ಅಭ್ಯರ್ಥಿಗಳ ಭವಿಷ್ಯ
ಸಿಂದಗಿ: ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿ ಎರಡನೇ ಚುನಾವಣೆ ಎದುರಿಸುತ್ತಿರುವ ಆಲಮೇಲ ಪಟ್ಟಣ ಪಂಚಾಯತಿ ಒಟ್ಟು 19 ಜನ ಸದಸ್ಯರ ಆಯ್ಕೆಗೆ 59 ಜನರು ಸ್ಪರ್ಧಿಸಿದ್ದು ಡಿ. 27 ರಂದು 19 ಸದಸ್ಯರ ಆಯ್ಕೆಗೆ ಒಟ್ಟು 11572 ಜನ ಮತದಾರರು ಮತದಾನ ಮಾಡಿದ್ದಾರೆ. ಫಲಿತಾಂಶ ಪ್ರಕಟಗೊಳ್ಳುವವರೆಗೆ ಸಿಂದಗಿ ಆರ್ ಡಿ ಪಾಟೀಲ...
ಲೇಖನ
Idagunji Ganapati History & Information in Kannada- ಇಷ್ಟಾರ್ಥ ಸಿದ್ದಿಸುವ ಇಡಗುಂಜಿ ಗಣಪತಿ
ನಾರದ ಮುನಿಗಳೇ ಪ್ರತಿಷ್ಠಾಪಿಸಿದ ವಿನಾಯಕನಿರುವ ಪುಣ್ಯಕ್ಷೇತ್ರ ಇಡಗುಂಜಿ
ಇಡಗುಂಜಿ ಉತ್ತರ ಕರ್ನಾಟಕದ ಪವಿತ್ರ ಗಣಪತಿ ಕ್ಷೇತ್ರ. ಸಿದ್ಧಿಪ್ರದ ಅಷ್ಟಕ್ಷೇತ್ರಗಳಲ್ಲಿ ಒಂದೆಂದು ಖ್ಯಾತವಾದ ಇಲ್ಲಿ ಗೋಕರ್ಣದಲ್ಲಿರುವಂತೆಯೇ ಇರುವ ದ್ವಿಭುಜ ಗಣಪ ನೆಲೆಸಿದ್ದಾನೆ.ಗೋಕರ್ಣದಿಂದ 65 ಕಿ.ಮೀ, ಹೊನ್ನಾವರದಿಂದ ಕೇವಲ 15ಕಿಲೋ ಮೀಟರ್ ಹಾಗೂ ಮುರ್ಡೇಶ್ವರದಿಂದ 23ಕಿಲೋ ಮೀಟರ್ ದೂರದಲ್ಲಿರುವ ಈ ಪವಿತ್ರ ಪುಣ್ಯಧಾಮಕ್ಕೆ ಇಡಗುಂಜಿ ಎಂದು ಹೆಸರು ಹೇಗೆ...
ಸುದ್ದಿಗಳು
ಫನ್ ವರ್ಲ್ಡ್ ವಸ್ತು ಪ್ರದರ್ಶನದಲ್ಲಿ ಕನ್ನಡದ ಕಡೆಗಣನೆ ವಿರೋಧಿಸಿ ಹಕ್ಕೊತ್ತಾಯ ಪತ್ರ ಸಲ್ಲಿಕೆ
ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಹೆಸರಾಗಿದ್ದು ,ರಾಜಮಹಾರಾಜರ ಆಳ್ವಿಕೆಯ ಕಾಲದಿಂದಲೂ ಕನ್ನಡ ನಾಡು-ನುಡಿಯ ಪ್ರತೀಕವಾಗಿದೆ.ಆದರೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆದಿರುವ ಫನ್ ವರ್ಲ್ಡ್ ವಸ್ತುಪ್ರದರ್ಶನದಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯಿಂದ ಕನ್ನಡ ಬಳಕೆಗೆ ಹಕ್ಕೊತ್ತಾಯ ಮಂಡಿಸಲಾಗಿದೆ.ಪ್ರವೇಶದ್ವಾರದಲ್ಲಿಯೇ ಫನ್ ವರ್ಲ್ಡ್ ಎಂಬ...
ಸುದ್ದಿಗಳು
ತಲ್ಲೂರು ರಾಯನಗೌಡರದು ಬಹುಮುಖಿ ವ್ಯಕ್ತಿತ್ವ- ವೈ ಬಿ ಕಡಕೋಳ
ಮುನವಳ್ಳಿ: "ಕಿತ್ತೂರು ಸಂಸ್ಥಾನದ ಇತಿಹಾಸ ನೆನಪಾದಾಗೆಲ್ಲ ನಮಗೆ ತಲ್ಲೂರು ರಾಯನಗೌಡ ಪಾಟೀಲರು ನೆನಪಾಗುತ್ತಾರೆ ಸ್ವಾತಂತ್ರ್ಯ ಹೋರಾಟದ ಚಳವಳಿಯಲ್ಲಿ ಭಾಗವಹಿಸಿದಾಗ ಅವರಿಗೆ ಕಿತ್ತೂರು ಇತಿಹಾಸದ ಆಸಕ್ತಿ ಉಂಟಾಗಿ ಲಂಡನ್ನಿಗೆ ಹೋಗಿ ಆ ಕುರಿತಾದ ಮಹತ್ವದ ದಾಖಲೆಗಳನ್ನು ಪಡೆದು ದೇಶಕ್ಕೆ ಮರಳಿದ ಕತೆ ತುಂಬಾ ರೋಚಕವಾದದ್ದೆಂದು" ಸಾಹಿತಿ ಮುನವಳ್ಳಿಯ ವಾಯ್ ಬಿ ಕಡಕೋಳ ಹೇಳಿದರು.ಅವರು ಬೆಳಗಾವಿಯ ರಾಷ್ಟ್ರಕೂಟ...
ಸುದ್ದಿಗಳು
ಹೊಸ ಇತಿಹಾಸ ಸೃಷ್ಟಿಸಿದ ನೈರುತ್ಯ ರೈಲ್ವೆ: ಎರಡು ಎಲೆಕ್ಟ್ರಿಕ್ ರೈಲುಗಳ ಯಶಸ್ವಿ ಸಂಚಾರ..!
ಹುಬ್ಬಳ್ಳಿ: ವಿಶ್ವದ ಅತಿ ಉದ್ದ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆ ಗಳಿಸಿರುವ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ರೈಲ್ವೆ ನಿಲ್ದಾಣ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.ಬಹುದಿನಗಳ ನಿರೀಕ್ಷೆಯಲ್ಲಿದ್ದ ಎಲೆಕ್ಟ್ರಿಕಲ್ ಸಂಚಾರವನ್ನು ಆರಂಭಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ.ಇಂದು ಮೈಸೂರು-ಶ್ರೀಸಿದ್ದಾರೂಢ ರೈಲ್ವೆ ನಿಲ್ದಾಣದ ನಡುವೆ ಸಂಚರಿಸುವ ಹಂಪಿ ಎಕ್ಸ್‌ಪ್ರೆಸ್ ಹಾಗೂ ವಿಜಯವಾಡ- ಶ್ರೀಸಿದ್ದಾರೂಢ ರೈಲು ನಿಲ್ದಾಣ...
ಸುದ್ದಿಗಳು
ಆಡಳಿತದಲ್ಲಿ ಅಧಿಕಾರಿಗಳ ಪಾತ್ರ ಬಹಳ ಮಹತ್ವವಿದೆ
ಧಾರವಾಡ: ಆಡಳಿತದಲ್ಲಿ ಅಧಿಕಾರಿಗಳ ಪಾತ್ರ ಬಹಳ ಮಹತ್ವವನ್ನು ಪಡೆದಿದೆ ಎಂದು ಬೆಳಗಾವಿಯ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀನಿವಾಸ ಶಾಸ್ತ್ರೀ ಅಭಿಪ್ರಾಯಪಟ್ಟರು.
ಅವರು ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ ಪುರಾತತ್ತ್ವ ಇಲಾಖೆಯ ಧಾರವಾಡ ವಲಯದ ನಿರ್ದೇಶಕರಾಗಿ ಬಡ್ತಿ ಹೊಂದಿದ ಡಾ.ವಿ.ಎಸ್.ಬಡಿಗೇರ ಮತ್ತು ಸಹಾಯಕ ಪುರಾತತ್ವ ಅಧಿಕ್ಷಕ ಡಾ.ದೇವರಾಜ್ ಸನ್ಮಾನಿಸಿ ಮಾತಾನಾಡಿದರು.
ಧಾರವಾಡ ವಲಯದ ಪುರಾತತ್ವ ಹಲವಾರು ರೀತಿಯ...
ಲೇಖನ
ವಿಶ್ವ ಮಾನವ ದಿನ
ರಾಷ್ಟ್ರ ಕವಿ ಕುವೆಂಪುರವರ ಒಂದು ಮಾತು "ಮಾನವ ಹುಟ್ಟುತ್ತ ವಿಶ್ವ ಮಾನವ ಬೆಳೆಯುತ್ತ ಅಲ್ಪ ಮಾನವ".ಈ ಮಾತು ಅಕ್ಷರಶಃ ನಿಜ.ಮಗುವಿದ್ದಾಗ ಮಾನವನಿಗೆ ಯಾವುದೇ ಬಂಧನಗಳಿರುವುದಿಲ್ಲ. ಆದರೆ ಬೆಳೆಯುತ್ತ ಹೋದಂತೆ ಬಂಧನದಲ್ಲಿ ಸಿಲುಕುತ್ತಾನೆ. ಕಾರಣ ಅವನ ಅನಿಯಮಿತ ಆಸೆಗಳು.ಮಾನವ ತನ್ನ ಆಸೆಗಳನ್ನು ಪೂರೈಸುವ ಸಲುವಾಗಿ ಏನನ್ನಾದರೂ ಮಾಡಲು ಅವಕಾಶ ಹುಡುಕಿಕೊಳ್ಳುತ್ತಿದ್ದಾನೆ.ಮಾನವ ತನ್ನ ಸ್ವಾರ್ಥ ಸಾಧನೆಗೆ ಯಾರನ್ನಾದರೂ...
ಜೋತಿಷ್ಯ
ದಿನ ಭವಿಷ್ಯ ಮಂಗಳವಾರ (28/12/2021)
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಇಂದು ನೀವು ಎಲ್ಲಾ ಸಂದರ್ಭಗಳಲ್ಲಿ ನಿಮ್ಮ ಸಹೋದರರ ಬೆಂಬಲವನ್ನು ಪಡೆಯುತ್ತೀರಿ, ಅದು ನಿಮಗೆ ಶಕ್ತಿಯನ್ನು ನೀಡುತ್ತದೆ. ಇಂದು ನೀವು ನಿಮ್ಮ ಜೀವನ ಸಂಗಾತಿಯಿಂದ ಕೆಲವು ಶುಭ ಮಾಹಿತಿಯನ್ನು ಕೇಳಬಹುದು. ಇಂದು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಮಧುರವಾಗಿರುತ್ತದೆ, ಇದರಿಂದಾಗಿ ನೀವು ಸಂತೋಷವಾಗಿರುತ್ತೀರಿ.
ವೃಷಭ ರಾಶಿ:
ಮನೆಯಲ್ಲಿ ಕುಟುಂಬ ವ್ಯವಸ್ಥೆಯನ್ನು...
Latest News
ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ
ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...



