Monthly Archives: August, 2024
ಸುದ್ದಿಗಳು
ಸಂಬಳದ ಶೇ.೫೦ ರಷ್ಟು ಪಿಂಚಣಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು
ಹೊಸದಿಲ್ಲಿ - ರಾಷ್ಟ್ರೀಯ ಪಿಂಚಣಿ ಪದ್ಧತಿ ಅಡಿಯಲ್ಲಿ ಸೇವೆಗೆ ಸೇರಿರುವ ೨೩ ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಅವರ ಸಂಬಳದ ಶೇಕಡಾ ೫೦ ರಷ್ಟು ಪಿಂಚಣಿ ನೀಡಲು ಕೇಂದ್ರ ಸಂಪುಟ ಶನಿವಾರದಂದು ಒಪ್ಪಿಗೆ ನೀಡಿದೆ.ಈ ಯೋಜನೆಯು ಬರುವ ವರ್ಷ ೨೦೨೫ ರ ಏಪ್ರಿಲ್ ೧ ರಿಂದ ಜಾರಿಗೆ ಬರಲಿದ್ದು, ೨೦೦೪ ರ ಏಪ್ರಿಲ್ ೧...
ಸುದ್ದಿಗಳು
ಇಂದು ಸಂಗೊಳ್ಳಿ ರಾಯಣ್ಣನವರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ
ಸಿಂದಗಿ- ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ದಿ. ೨೫ ರಂದು ಬೆಳಿಗ್ಗೆ ೧೦ ಗಂಟೆಗೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜಯಂತಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಕಾರಣ ಹಾಲುಮತ, ಕುರುಬ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಾಲೂಕಾ ಸಂಗೋಳ್ಳಿ ರಾಯಣ್ಣ ನೌಕರರ ಸಂಘದ ಅಧ್ಯಕ್ಷ ರಾಯಣ್ಣ ಇವಣಗಿ...
ಲೇಖನ
ರಂಗ ಪ್ರಯೋಗ ;ಹಾಡುಗಳೇ ಮೇಲುಗೈ ರಂಜಿಸಿದ ಶ್ರೀದೇವಿ ಮಹಾತ್ಮೆ ಪೌರಾಣಿಕ
ಹಾಸನದಲ್ಲಿ ನಡೆಯುತ್ತಿರುವ ಪೌರಾಣಿಕ ನಾಟಕೋತ್ಸವ ಅಂಗವಾಗಿ ಶುಕ್ರವಾರ ಹಾಸನದ ಶ್ರೀ ಚಾಮುಂಡೇಶ್ವರಿ ಜಾನಪದ ಮತ್ತು ರಂಗಭೂಮಿ ಕಲಾಸಂಘ ಇವರು ಎ.ಸಿ.ರಾಜು ನಿರ್ದೇಶನ ದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ ಶ್ರೀದೇವಿ ಮಹಾತ್ಮೆ ನಾಟಕ ಪ್ರೇಕ್ಷಕರ ಮನ ಸೆಳೆಯಿತು.ಇಂದಿನ ವೈಜ್ಞಾನಿಕ ಯುಗದಲ್ಲೂ ಭೂಮಿಯ ಉಗಮದ ಬಗ್ಗೆ ನಾನಾ ವಿಶ್ಲೇಷಣೆ ತರ್ಕ ನಡೆಯುತ್ತಿರುವಂತೆಯೇ ಪೌರಾಣಿಕ ಪರಿಕಲ್ಪನೆಯಲ್ಲಿ ರಮ್ಯ ಕಥೆಗಳೂ...
ಲೇಖನ
ಶ್ರೀ ಕೃಷ್ಣ ಜನ್ಮಾಷ್ಟಮಿ
ಜಗತ್ತಿನ ಮೊದಲ ಪ್ರೇಮಿ ಶ್ರೀಕೃಷ್ಣ, ಆರಾಧನೆಗೆ ಇನ್ನೊಂದು ಹೆಸರೇ ರಾಧಾಪ್ರೇಮಿಗಳು ಎಂದಾಗ ಹೊಳೆಯುವ ಅಪ್ಪಟ ಜೋಡಿ ಅಂದರೆ "ರಾಧಾಕೃಷ್ಣ" ರುಕ್ಮಿಣಿ ಕೃಷ್ಣ ಪರಮಾತ್ಮನ ಹೆಂಡತಿಯಾದರೂ ಕೂಡ, ರಾಧೆ ಕೃಷ್ಣನನ್ನು ನಾವು ಆರಾಧಿಸುತ್ತೇವೆ. ಯುಗ ಯುಗಗಳಿಂದಲೂ ಕೇಳಿಬರುವ ಪ್ರೇಮಿಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನ ರಾಧಾ ಕೃಷ್ಣನದು.ಕೃಷ್ಣ ಜಗದೊದ್ಧಾರಕ, ಜಗದ್ರಕ್ಷಕ,ರಾಧೆ ಯುಗ ಯುಗಗಳವರೆಗೂ ಕೃಷ್ಣನ ಬರುವಿಕೆಗಾಗಿ ಕಾಯುತ್ತಾಳೆ,...
ಸುದ್ದಿಗಳು
ಅವಿರಳ ವಚನಕಾರ್ತಿಯರು
ಅವಿರಳ ವಚನಕಾರ್ತಿಯರು ಎಲೆಮರೆಯ ಕಾಯಿಯಂತಿರುವ, ವೈಚಾರಿಕ ಪ್ರಪಂಚಕ್ಕೆ ಅವರದೇ ಆದ ಕೊಡುಗೆಗಳನ್ನು, ಮೌಲಿಕ ವಿಚಾರಗಳನ್ನು ಕಟ್ಟಿಕೊಟ್ಟ ಶರಣೆಯರು ಎಂದು ಡಾ. ಬಸಮ್ಮ ಗಂಗನಳ್ಳಿ ಹೇಳುತ್ತಾ, ತಮ್ಮ ಉಪನ್ಯಾಸವನ್ನು ಪ್ರಾರಂಭ ಮಾಡಿದರುವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶಿವಾನಂದ ಕಲಕೇರಿ ಅವರ ಶ್ರಾವಣ ಮಾಸದ ವಿಶೇಷ...
ಕವನ
ಕವನ : ಸದ್ದಿಲ್ಲದೆ ಎದ್ದು ಹೋಗುವುದಿಲ್ಲ
ಸದ್ದಿಲ್ಲದೆ ಎದ್ದು ಹೋಗುವುದಿಲ್ಲ.
-----------------------------------
ಇಲ್ಲವಾಗಬಹುದು ಒಂದು ದಿನ.
ಎಲ್ಲವೂ ನಶ್ವರ ಮಾಯಾ ಮನ
ಸಂಘರ್ಷ ಹಸಿವು ಸ್ತಬ್ದವಾಗುತ್ತವೆ.
ಒಳಗಿನ ಬಡಿತ ನಿಲ್ಲಬಹುದು .
ಮಾತು ಮೌನವಾಗಬಹುದು.
ಕಣ್ಣೊಳಗಿನ ಬೆಳಕು ಆರಬಹುದು.
ಉಸಿರು ಬಯಲ ಕೂಡುವುದು
ಆದರೆ ನಾನು...........
ಸದ್ದಿಲ್ಲದೆ ಎದ್ದು ಹೋಗುವುದಿಲ್ಲ.
ಸುದ್ಧಿಯಾಗುತ್ತೇನೆ ನಿಮಗೆ.
ಮುದ್ದು ಮಾತಾಗುತ್ತೇನೆ ನಿನಗೆ .
ನನ್ನ ಭಾವ ಬುತ್ತಿ ಬಿಚ್ಚಿ
ತಿನಿಸುವೆ ಗೆಳತಿ ನಾನಿರುವವರೆಗೆ.
ನಿನ್ನ ಬಣ್ಣದ ಕನಸಿನ ಪತಂಗಗಳ
ಹಾರಿ ಬಿಡುವೆ ಪ್ರೀತಿಯ ಗಾಳಿಯಲಿ.
ಮುಗಿಲೆತ್ತರೆ ಮಿಗಿಲೆತ್ತರೆ ಹಾರಲಿ.
ಮೋಡದಾಚೆಯ ರವಿ...
ಸುದ್ದಿಗಳು
ಕರ್ನಾಟಕ ರಾಜ್ಯ ಬರಹಗಾರರ ಸಂಘದಿಂದ ಕನ್ನಡ ನುಡಿ ವೈಭವ ರಾಜ್ಯಮಟ್ಟದ ಸಾಹಿತ್ಯ ಕಾರ್ಯಕ್ರಮ
ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ ಇವರ ವತಿಯಿಂದ ಕನ್ನಡ ನುಡಿ ವೈಭವ ೨೦೨೪ ರಾಜ್ಯಮಟ್ಟದ ಸಾಹಿತ್ಯ ಕಾರ್ಯಕ್ರಮವು ದಾವಣಗೆರೆಯ ಎ.ವಿ.ಕೆ. ರೋಡ್‌ನಲ್ಲಿರುವ ಜಿಲ್ಲಾ ಗುರುಭವನದಲ್ಲಿ ದಿ. ೨೫-೮-೨೦೨೪ರ ಭಾನುವಾರ ಬೆ. ೧೦ಕ್ಕೆ ನಡೆಯಲ್ಲಿದೆ.ನಾಡಿನ ಹಿರಿಯ ಸಾಹಿತಿಗಳು ಗೊರೂರು ಅನಂತರಾಜು ಇವರ ಅಧ್ಯಕ್ಷತೆ ಯಲ್ಲಿ ನಡೆಯುವ ಕಾರ್ಯಕ್ರಮವನ್ನು ದಾವಣಗೆರೆ ಸಾರ್ವಜನಿಕ ಶಿಕ್ಷಣ ಇಲಾಖೆ...
ಸುದ್ದಿಗಳು
೨೬ ರಂದು ಮೂಡಲಗಿ ತಾಲೂಕಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ
ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮಗೋಕಾಕ- ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬರುವ ಸೋಮವಾರದಂದು ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಪ್ರವಾಸ ಕೈಗೊಂಡಿದ್ದು, ನೂತನವಾಗಿ ನಿರ್ಮಾಣಗೊಂಡಿರುವ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಸೋಮವಾರದಂದು ಬೆಂಗಳೂರಿನಿಂದ ವಿಶೇಷ ವಿಮಾಣದ ಮೂಲಕ ಮ.೧೨.೧೫ ಗಂಟೆಗೆ ಬೆಳಗಾವಿಗೆ ಆಗಮಿಸಲಿರುವ ಮುಖ್ಯಮಂತ್ರಿಗಳು ರಸ್ತೆಯ ಮೂಲಕ ಗೋಕಾಕ ತಾಲ್ಲೂಕಿನ ಕಳ್ಳಿಗುದ್ದಿ, ಕೌಜಲಗಿ,...
ಸುದ್ದಿಗಳು
ಪ್ರೊ.ಶಿವಕುಮಾರರ ಕಥೆಗೆ ಬಹುಮಾನ
ಮೂಡಲಗಿ - ಹುನಗುಂದದ ಹೊನ್ನ ಕುಸುಮ ಸಾಹಿತ್ಯ ವೇದಿಕೆ ಏರ್ಪಡಿಸಿದ್ದ ಕಥಾ ಸ್ಪರ್ಧೆ ೨೦೨೪ ರಲ್ಲಿ ಮೂಡಲಗಿಯ ಪ್ರೊ. ಶಿವಕುಮಾರ ಕೋಡಿಹಾಳ ಅವರ ಕಥೆ ತೃತೀಯ ಬಹುಮಾನ ಪಡೆದಿದೆ.ಪ್ರಥಮ ರಾಜು ಹಗ್ಗದ ಅವರ 'ಸರಸೂ' ಕಥೆ, ದ್ವಿತೀಯ ಶೀಲಾ ಗೌಡರ ಅವರ 'ಗೋಲ್ಡ್ ಮೆಡಲ್' ಬಹುಮಾನ ಪಡೆದಿದ್ದರೆ ತೃತೀಯ ಬಹುಮಾನವನ್ನು ನಾಗರತ್ನ ಭಾವಿಕಟ್ಟಿಯವರ 'ಬೆಂದುಹೋದ...
ಲೇಖನ
ದಿನಕ್ಕೊಬ್ಬ ಶರಣ ಮಾಲಿಕೆ
ಕಿನ್ನರಯ್ಯನಿಂದಲೇ ಗುರು ಎನಿಸಿಕೊಂಡ ಕಲಕೇತಯ್ಯ.ಹನ್ನೆರಡನೆಯ ಶತಮಾನದ ಶರಣರ ಸಮೂಹದಲ್ಲಿ ಸಕಲ ವಿದ್ಯೆಗಳಲ್ಲಿ ಪಾರಾಂಗತರಾದವರನ್ನು ಕಾಣುತ್ತೇವೆ. ಮದ್ದಳೆ ಬಾರಿಸುವ, ನಾಟ್ಯಮಾಡುವ, ನಾಟಕದ ಕಲೆ ಮೈಗೂಡಿಸಿಕೊಂಡವರು, ಕಿನ್ನರಿ ನುಡಿಸುವ ಮತ್ತು ಜಾನಪದ ಕಲೆಯಲ್ಲಿ ಪರಿಣಿತರಾದವರು ಹೀಗೆ ಅನೇಕರು. ಅಂಥ ಕಲಾಕಾರರಾದ ಶರಣರಲ್ಲಿ ಕಲಕೇತಯ್ಯನವರು ಒಬ್ಬರು.ಕಲಕೇತ ಬೊಮ್ಮಯ್ಯ,ಕಲಕೇತ ಮಾರಯ್ಯ ಹಾಗೂ ಕಲಕೇತಯ್ಯ ಎಂಬ ಹೆಸರುಗಳಿಂದ ಇವರನ್ನು ವಿಧ್ವಾಂಸರು ಗುರುತಿಸಿದ್ದನ್ನು...
Latest News
ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ
ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...



