ಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಫೆ.೯ ರಿಂದ ೧೧ ರವರೆಗೆ ಮೂರು ದಿನಗಳ ಕಾಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಕಾರ್ತಿಕೋತ್ಸವ ಸಮಾರಂಭ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಫೆ.೯ ರಂದು ಕಾರ್ತಿಕೋತ್ಸವ ನಿಮಿತ್ತ ಅರಳಿಮಟ್ಟಿ ಹಾಗೂ ಆರತಿ ಕಡಕಭಾಂವಿ ಅವರಿಂದ ಭಜನಾ ಕಾರ್ಯಕ್ರಮ ಜರುಗುವವು. ಸೋಮವಾರ ಫೆ.೧೦ ರಂದು ಮುಂಜಾನೆ ೮ಕ್ಕೆ ಮಹಾಅಭಿಷೇಕ, ಸಾಯಂಕಾಲ...
ಮುನವಳ್ಳಿ: ಕಥೆ ಹೇಳುವುದು, ಒಳಾಂಗಣ ಮತ್ತು ಹೊರಾಂಗಣದ ಮೋಜಿನ ಆಟಗಳು, ಸಂವಾದಾತ್ಮಕ ಅವಧಿಗಳು ಮತ್ತು ಕಲೆ ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಸಂತೋಷದಾಯಕ ಮತ್ತು ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೇರೇಪಿಸುವಂತೆ ಮಾಡುವಲ್ಲಿ ಕಲಿಕಾ ಹಬ್ಬದ ಪಾತ್ರ ಮಹತ್ವದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ ಹೇಳಿದರು.
ಅವರು ಪಟ್ಟಣದ ಗಾಂಧಿನಗರದ ಶಾಲೆಯಲ್ಲಿ ಹಮ್ಮಿಕೊಂಡಿದ್ದ...
ಸಿಂದಗಿ - ಇದೇ ದಿ. ೧೪ ರಂದು ಜಿಲ್ಲೆಯಲ್ಲಿ ಗುತ್ತಿಗೆದಾರರ ಬೃಹತ್ ಪ್ರತಿಭಟನೆ ನಡೆಯಲಿದೆ.ಒಂದು ತಿಂಗಳ ಗಡುವು ನೀಡುತ್ತೇವೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಅರುಣ ಮಠ ಹೇಳಿದರು.
ನಗರದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ದಿ. ೧೪ ರಂದು ನಡೆಯುವ ಬೃಹತ್ ಹೋರಾಟದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ...
ತನ್ನರಮನೆಗೆ ಬಂದ ಬಡಸ್ನೇಹಿತನ ಕಂಡು
ಕೃಷ್ಣನುಪಚರಿಸಿದನು ಪ್ರೀತಿಯಿಂದ
ಅವನು ತಂದವಲಕ್ಕಿ ತಿಂದು ಹರಸಿದನವಗೆ
ಸ್ನೇಹ ಹೀಗಿರಬೇಕು - ಎಮ್ಮೆತಮ್ಮ||
ಶಬ್ಧಾರ್ಥ
ಉಪಚರಿಸು = ಸತ್ಜರಿಸು.
ತಾತ್ಪರ್ಯ
ಗೊಲ್ಲನಾದ ಶ್ರೀಕೃಷ್ಣ ಮತ್ತು ಬ್ರಾಹ್ಮಣನಾದ ಸುದಾಮ ಇಬ್ಬರು ಸಂದೀಪಿನಿ ಮುನಿಯ ಆಶ್ರಮದಲ್ಲಿ ಶಾಲೆ ಕಲಿಯುತ್ತಿದ್ದರು. ಇಬ್ಬರಲ್ಲಿ ಬಹಳ ಗಾಢವಾದ ಗೆಳೆತನವಿತ್ತು. ಬೆಳೆದಂತೆ ಕೃಷ್ಣ ರಾಜನಾದ ಸುದಾಮ ಬಡವನಾದ. ಬಡತನದ ಬೇಗೆಯಿಂದ ನೊಂದು ಬೆಂದ ಸುದಾಮನ ಪತ್ನಿ ಸುಶೀಲಾ...
ಯುವವಿದ್ವಾಂಸರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅಭಿಪ್ರಾಯ
"ಜಾನಪದ ಲೋಕದಲ್ಲಿ ಧರೆಗೆ ದೊಡ್ಡವರಾಗಿ ಸರ್ವಜನಾಂಗದ ಪಾಲಿನ ಪರಂಜ್ಯೋತಿಯಾದ ಮಂಟೇಸ್ವಾಮಿಯವರಂತೆ ಬಹುಜನರಿಗೆ ಭಾರತ ಸಂವಿಧಾನವೆಂಬ ಮಹಾಬೆಳಕನ್ನಿತ್ತ ಆಧುನಿಕ ಭಾರತದ ಪರಂಜ್ಯೋತಿ ಬಾಬಾಸಾಹೇಬ್ ಅಂಬೇಡ್ಕರ್" ಎಂದು ರಾಷ್ಟ್ರಪತಿ ಪ್ರಶಸ್ತಿ-ಮಹರ್ಷಿ ವ್ಯಾಸ್ ಸಮ್ಮಾನ್ ಪುರಸ್ಕೃತ ಯುವ ವಿದ್ವಾಂಸ ಹಾಗೂ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ಅಭಿಪ್ರಾಯಪಟ್ಟರು.
ಚಾಮರಾಜನಗರ...
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರು ಹೆಣೆದ ತಂತ್ರಗಾರಿಕೆಗಳೇ ದೆಹಲಿಯಲ್ಲಿ ನಮ್ಮ ಪಕ್ಷಕ್ಕೆ ಅಧಿಕಾರ ಸಿಗಲು ಕಾರಣವಾಗಿವೆ. ಜೊತೆಗೆ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳು ಈ
ಐತಿಹಾಸಿಕ ಗೆಲುವಿಗೆ ಕಾರಣವಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ದೆಹಲಿಯಲ್ಲಿ ಚುನಾವಣಾ ಫಲಿತಾಂಶ ಹೊರಬಂದು ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು...
ಮೂಡಲಗಿ: ಘಟಪ್ರಭೆ ನದಿಯ ತೀರದಲ್ಲಿ ಜನಿಸಿ ಭಕ್ತರ ಭಾಗ್ಯದಾತೆಯಾಗಿ ತನ್ನ ಕೀರ್ತಿಯನ್ನು ಜಗಕ್ಕೆ ತೋರಿದ ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿನ ಶ್ರೀ ಮಹಾಲಕ್ಷ್ಮಿ ದೇವಿ ಹಾಗೂ ಶ್ರೀ ಬಸವೇಶ್ವರ ಜಾತ್ರಾಮಹೋತ್ಸವ ಫೆ. ೧೦ ರಿಂದ೧೨ ರವರಿಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಗ್ರಾಮೀಣ ಕ್ರೀಡೆಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗಲಿದೆ ಭರಮಪ್ಪ ಗಂಗನ್ನವರ ತಿಳಿಸಿದರು.
ಶುಕ್ರವಾರದಂದು...
ಕ ಲಾವಿದನೊಬ್ಬ ತೆಗೆದ ಸುಂದರ ಭಿತ್ತಿ ಚಿತ್ರವನ್ನು ಕಣ್ಣು ನೋಡುತ್ತದೆ. ತಕ್ಷಣ ಮನಸ್ಸಿಗೆ ಆನಂದವಾಗುತ್ತದೆ. ವಾವ್! ಚಿತ್ತಾಕರ್ಷಕ ಚಿತ್ರವೆಂದು ಬಾಯಿ ಉದ್ಗರಿಸುತ್ತದೆ. ಕಣ್ಣಿಗೂ ಮನಸ್ಸಿಗೂ ಬಾಯಿಗೂ ಭಾವನೆಗೂ ಅವಿನಾಭಾವ ಸಂಬಂಧವಿದೆ.
ಕಣ್ಣು ನಾಲಿಗೆ ಮನವು ತನ್ನದೆನಬೇಡ
ಅನ್ಯರನು ಕೊಂದರೆನಬೇಡ, ಇವು ಮೂರು
ತನ್ನ ಕೊಲ್ಲುವವು ಸರ್ವಜ್ಞ
ಎಂಬ ವಚನದಲ್ಲಿ ಕಣ್ಣು ನಾಲಿಗೆ ಮನಸ್ಸು ಇವು ಮೂರನ್ನೂ ನಿನ್ನದೆಂದುಕೊಳ್ಳಬೇಡ. ಇವು ಮೂರು...
ಮೂಡಲಗಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿಯನ್ನು ಬಾರಿ ಬಹುಮತದಿಂದ ಗೆಲ್ಲಿಸುವ ಮೂಲಕ ಆಮ್ ಆದ್ಮಿ ಪಕ್ಷವನ್ನು ತಿರಸ್ಕರಿಸಿದ್ದು, ಆ ಪಕ್ಷದ ನೇತಾರ ಮಾಜಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಮತ್ತು ಉಪಮುಖ್ಯಮಂತ್ರಿ ಮನಿಷ್ ಸೀಸೋಡಿಯಾ ಸೋಲುವ ಮೂಲಕ ಬಾರಿ ಹಿನ್ನಡೆ ಉಂಟಾಗಿದೆ. ಹೀಗಾಗಿ ಬಿಜೆಪಿಗೆ ಆರ್ಶೀವದಿಸಿದ ಮತದಾರ ಬಂಧುಗಳಿಗೆ ಬಿಜೆಪಿಯನ್ನು ಗೆಲ್ಲಿಸುವಲ್ಲಿ ವಿಶೇಷ ಶ್ರಮವಹಿಸಿದ ದೆಹಲಿ...
ಹೊಸಪುಸ್ತಕ ಓದು
ಗತಾನುಶೀಲನ
ಲೇಖಕರು : ಡಾ. ಅಮರೇಶ ಯತಗಲ್
ಪ್ರಕಾಶನ : ಪಲ್ಲವಿ ಪ್ರಕಾಶನ, ಹೊಸಪೇಟೆ
ಮುದ್ರಣ : ೨೦೨೩
ಡಾ. ಅಮರೇಶ ಯತಗಲ್ ಅವರು ನಮ್ಮ ನಾಡು ಕಂಡ ಶ್ರೇಷ್ಠ ಶಾಸನ ಸಂಶೋಧಕರು. ಶಂಬಾ, ಚಿದಾನಂದಮೂರ್ತಿ, ಎಂ. ಎಂ. ಕಲಬುರ್ಗಿ ಅವರ ತರುವಾಯ ಕನ್ನಡ ಸಂಶೋಧನಾ ಕ್ಷೇತ್ರ ಅನಾಥವಾಗುವುದೇನೋ ಎಂಬ ಆತಂಕ ಕನ್ನಡಿಗರಲ್ಲಿತ್ತು. ಆದರೆ ಈ ಎಲ್ಲ ಪೂರ್ವಸೂರಿಗಳ...