Monthly Archives: April, 2025
ಸುದ್ದಿಗಳು
ಕುಲಗೋಡ – ಕೌಜಲಗಿ- ಬೆಳಗಾವಿಗೆ ನೂತನ ಬಸ್ ಸಂಚಾರ ಆರಂಭ
ಮೂಡಲಗಿ:- ತಾಲೂಕಿನ ಕುಲಗೋಡ ಹಾಗೂ ಕೌಜಲಗಿ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ವಾಕರಸಾಸಂ ಚಿಕ್ಕೋಡಿ ವಿಭಾಗೀಯ ಗೋಕಾಕ ಘಟಕದ ವತಿಯಿಂದ ನೂತನವಾಗಿ ಕುಲಗೋಡ ಕೌಜಲಗಿ- ಬೆಳಗಾವಿ ಎರಡು ಬಸ್ಸುಗಳನ್ನು ಆರಂಭಿಸಲಾಗಿದೆ.ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ
ಮತ್ತು ಗೋಕಾಕ ಡಿಪೋದ ವ್ಯವಸ್ಥಾಪಕ ಸುನೀಲ ಹೊನವಾಡ ಈ ಮಾರ್ಗದ ಸಾರಿಗೆ ವ್ಯವಸ್ಥೆ ಕುರಿತು...
ಸುದ್ದಿಗಳು
ಕಾಶ್ಮೀರ ಪೆಹಲ್ಗಾಮ್ ಉಗ್ರರ ದಾಳಿ ಹಿನ್ನೆಲೆಯಲ್ಲಿ ಮೌನ ಪ್ರತಿಭಟನೆ
ಮೂಡಲಗಿ - ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಂ ಪ್ರದೇಶದಲ್ಲಿ ನಡೆದ ಭಯಾನಕ ಉಗ್ರ ದಾಳಿಯಲ್ಲಿ ಸುಮಾರು 28 ಮಂದಿ ಬಲಿಯಾಗಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ, ಆರಭಾವಿ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಹಾಗೂ ಕರುನಾಡು ಸೈನಿಕ ತರಬೇತಿ ಕೇಂದ್ರದ ವತಿಯಿಂದ ಮೂಡಲಗಿಯ ಗಣೇಶ ನಗರದ ಭಗೀರಥ ವೃತ್ತದಲ್ಲಿ ಮೌನಚರಣೆ ಹಾಗೂ ಪ್ರತಿಭಟನೆ ನಡೆಸಲಾಯಿತು.ದೇಶದ ಅಮಾಯಕ...
ಸುದ್ದಿಗಳು
ಸದನದ ಪಾವಿತ್ರ್ಯ ಹಾಳುಗೆಡವಿದ ಸಚಿವ ರಾಜಣ್ಣ ವಿರುದ್ಧ ಭೀಮಪ್ಪ ಗಡಾದ ದೂರು
ಹನಿಟ್ರ್ಯಾಪ್ ಹೇಳಿಕೆ ನೀಡಿದ ಸಚಿವ ರಾಜಣ್ಣ ದೂರು ನೀಡಿದ್ದರೂ F.I.R ದಾಖಲಿಸದ ಪೋಲಿಸರು ಶೀಘ್ರವೇ ನ್ಯಾಯಾಲಯದಲ್ಲಿ 'ಮೊಕದ್ದಮೆ' ದಾಖಲು 'ಪ್ರಾಷಿಕ್ಯೂಶನ್'ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿಮೂಡಲಗಿ - ಪ್ರಜಾಪ್ರಭುತ್ವದ ದೇಗುಲವೆಂದೇ ಕರೆಯಲ್ಪಡುವ ಸದನದಲ್ಲಿಯೇ “ಹನಿ-ಟ್ರ್ಯಾಪ್" ವಿಷಯವನ್ನು ಪ್ರಸ್ತಾಪಿಸುವ ಮೂಲಕ ಗೋಪ್ಯತಾ ಪಾಲನಾ ಪ್ರಮಾಣ ವಚನ ಮಾಡಿದಂತೆ ನಡೆದುಕೊಳ್ಳದೇ ಸಂವಿಧಾನಕ್ಕೆ ಅಪಚಾರ ಎಸಗಿದ್ದು ಹಾಗೂ ಇಂಥ...
ಸುದ್ದಿಗಳು
ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ
ಗುರುವಂದನೆ ಹಾಗೂ ಸ್ನೇಹ ಸಮ್ಮೇಳಬೈಲಹೊಂಗಲ - ಇಲ್ಲಿನ ಶ್ರೀ ಬಸವೇಶ್ವರ ಸ್ವತಂತ್ರ ಪಪೂ ಮಹಾವಿದ್ಯಾಲಯದಲ್ಲಿ 2008-2009 ನೆ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಂದ ನಡೆದ ಗುರುವಂದನೆ ಹಾಗೂ ಸ್ನೇಹ ಸಮ್ಮೆಳನ ಕಾರ್ಯಕ್ರಮವನ್ನು ಪ್ರಾಚಾರ್ಯರಾದ ಸಿ.ಬಿ.ಗಣಾಚಾರಿ ಬಿ.ಬಿ.ಗಣಾಚಾರಿ. ಉದ್ಟಾಟಿಸಿದರು.ಇಂದಿನ ಯುಗದಲ್ಲಿ ಶಿಕ್ಷಣ ಅತ್ಯಮೂಲ್ಯವಾದದ್ದು. ಶಿಕ್ಷಣ ಪಡೆದು ಎಲ್ಲರೂ ಒಳ್ಳೆಯ ನಾಗರಿಕರಾಗಬೇಕು.ಎಂದು ಬಿ.ಬಿ.ಗಣಾಚಾರಿ ಮಾತನಾಡಿದರು.ಕಾಲೇಜಿನ ಪ್ರಾಚಾರ್ಯರಾದ ಡಾ.ಸಿ.ಬಿ.ಗಣಾಚಾರಿ ಅಧ್ಯಕ್ಷತೆ...
ಕವನ
ಕವನ : ಪೆಹಲ್ಗಾಮ್ ನಿಂದ ಕುದಿವ ರಕ್ತದವರೆಗೆ
ಪೆಹಲ್ಗಾಮ್ ನಿಂದ ಕುದಿವ ರಕ್ತದವರೆಗೆ
ಒಂದೊಮ್ಮೆ ನಾನು ಕಾಶ್ಮೀರಕ್ಕೆ ಹೋಗಿದ್ದರೆ
ಬಂದೂಕು ಹಿಡಿದು ಬಂದ ಸೈತಾನರು ನನ್ನ ಧರ್ಮ ಕೇಳಿದರೆ ಅವರಿಗೆ ಏನೆಂದು ಹೇಳಲಿ.?ಧರ್ಮದ ಹೆಸರಲ್ಲೇ ನಮ್ಮನ್ನು ಒಡೆದು ಆಳಲು ಹೊರಟವರು
ಬದುಕುಳಿದು ಬಂದವನ ನಿಲ್ಲಿಸಿ
ಅಲ್ಲಿನ ಅನುಭವ ಕೇಳಿದರೆ ಏನೆಂದು ಹೇಳಲಿ?ನನ್ನದೇ ಸೋದರಿಯೊಬ್ಬಳು ನೆಲಕ್ಕುರುಳಿದ
ಗಂಡನ ಉಸಿರುನಿಂತ ದೇಹದ ಎದುರು
ತನ್ನ ಹೃದಯ ಒಡೆದು ಬಿಕ್ಕಿ ರೋಧಿಸುವಾಗ
ದೇಶದ ಮುಕುಟದಲ್ಲಿ ಹಾರಿದ ಗುಂಡಿನ...
ಸುದ್ದಿಗಳು
ಅವ್ಯವಸ್ಥೆಯ ತಾಣವಾದ ಯಾದವಾಡ ಬಸ್ ನಿಲ್ದಾಣ
ಎಲ್ಲೆಂದರಲ್ಲಿ ಕಸ, ಗಬ್ಬು ನಾತ ಹೊಡೆಯುತ್ತಿರುವ ಶೌಚಾಲಯಗಳುಮೂಡಲಗಿ - ತಾಲೂಕಿನ ಯಾದವಾಡ ಗ್ರಾಮದ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸ ಕಡ್ಡಿಯಿಂದ ತುಂಬಿಕೊಂಡು ಅನಾರೋಗ್ಯಕರ ವಾತಾವರಣ ಉಂಟಾಗಿದ್ದು ಇಲ್ಲಿನ ಸಾರಿಗೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಯಾದವಾಡವು ಕೈಗಾರಿಕೆಗಳಿಂದ ಸುತ್ತುವರೆದಿದ್ದು ಇಲ್ಲಿಗೆ ಬರುವ ಹಾಗೂ ಹೋಗುವ ಪ್ರಯಾಣಿಕರು ಬಸ್ ನಿಲ್ದಾಣದ ಅವ್ಯವಸ್ಥೆಗೆ ಬೇಸತ್ತು ಹಿಡಿಶಾಪ ಹಾಕುತ್ತಿದ್ದಾರೆ. ಬಸ್...
ಲೇಖನ
ಅಣ್ಣಾವರನ್ನು ನೋಡಿದಾಗ ದೇವರೇ ಪ್ರತ್ಯಕ್ಷ ಆದಂತಾಯ್ತು !
ಅದು 1984 ರ ದಿನಗಳು. ನಾನು ಕನ್ನಡರತ್ನ ರಾಜಕುಮಾರ ಎಂಬ ಪುಸ್ತಕ ಹೊರತರಲು ಯತ್ನ ನಡೆಸಿದ್ದೆ. ಅಂದು ಲಕ್ಷಾಂತರ ಅಭಿಮಾನಿಗಳ ಮನ ಹಾಗೂ ಮನೆ ದೇವರೇ ಆಗಿದ್ದ ಡಾ.ರಾಜಕುಮಾರ್ಅ ವರನ್ನು ಕುರಿತಂತೆ ಬೇರೆ ಬೇರೆ ಕವಿಗಳು ಬರೆದಿದ್ದ ಕವನ ಸಂಕಲನ ಹೊರ ತರಲು ಎಲ್ಲ ಸಿದ್ಧತೆ ನಡೆಸಿದ್ದೆ. ಯಾರೋ ಲೇಖಕರು ನನ್ನ ತಲೆಗೆ ಅನುಮಾನದ...
ಕವನ
ಕವನ : ಸಾಧಿಸಿದ್ದೇನು ?
ಸಾಧಿಸಿದ್ದೇನು ?
ಮರೆತು ಬಿಟ್ಟೇವಾ ಮಾನವೀಯತೆ
ಎತ್ತ ನೋಡಿದರೂ ರಕ್ತ ಕಣಗಳು
ಬಿತ್ತಲಾರೆವಾ ಕರುಣೆ ವಾತ್ಸಲ್ಯ
ಮನುಜನೆಂಬುದಕೆ ಧಿಕ್ಕಾರದ್ವೇಷದ ಕಿಚ್ಚು ಹಚ್ಚಿ
ಮೋಹದ ಮದ ಏರಿ
ದಾಹದ ನರ್ತನಕೆ
ಕಿತ್ತು ತಿಂದಿರಪ್ರೇಮದ ಶಿಖರಕೆ
ಸೂತಕದ ಛಾಯೆ ಮೂಡಿಸಿ
ಧರ್ಮದ ಸೋಗಲಿ
ಆತ್ಮದ ಮರ್ಮ ತಿಳಿಯಲಿಲ್ಲವೇಎಲ್ಲಿಹುದು ಹಿಂಸೆಯ ಧರ್ಮ
ಗಾಂಪರರೊಡೆಯನ ನೀತಿಯಂತೆ
ಭೀತಿ ಹುಟ್ಟಿಸುವಿರೇಕೆ
ನೀತಿ ನಿಯಮ ಗಾಳಿಗೆ ತೂರಿಅದೆಷ್ಟೊ ಕನಸುಗಳು ಕಮರಿ ಹೋಗಿವೆ
ಮನಸುಗಳ ಛಿದ್ರ ಮಾಡಿವೆ
ಮುನಿಸುಗಳ ಬಿರುಕು ಬಿಟ್ಟಿದೆ
ಸಾಧಿಸಿದ್ದಾದರೂ ಏನು ?ರೇಷ್ಮಾ ಕಂದಕೂರ,...
ಸುದ್ದಿಗಳು
ಶ್ರೀ ಶಿವಲಿಂಗೇಶ್ವರ ಸಾಹಿತ್ಯ ರಚನೆ ; ಶಿವಲಿಂಗ ಬನಹಟ್ಟಿ ಅವರಿಗೆ ಸನ್ಮಾನ
ಹಳ್ಳೂರ - ಸಮಿಪದ ಸೈದಾಪೂರ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ ಶಿವಲಿಂಗೇಶ್ವರ ಭಕ್ತಿ ಗೀತೆ ಭಕ್ತಿಯ ತವರೂರ ಸೈದಾಪೂರ ಸುಕ್ಷೇತ್ರ ಶಿವಲಿಂಗೇಶ್ವರ ಹೊಸ ಭಕ್ತಿ ಗೀತೆ ರಚನೆ ಮಾಡಿ ಹಾಡು ಹಾಡಿದ ಸಾಹಿತಿ ಶಿವಲಿಂಗ ಬನಹಟ್ಟಿ ಅವರಿಗೆ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಪ್ರೋತ್ಸಾಹಕರಿಂದ ಸನ್ಮಾನ ಮಾಡಿ ಗೌರವಿಸಲಾಯಿತು.ಈ ಸಮಯದಲ್ಲಿ ಅರ್ಚಕರಾದ ಮಹಾಂತಯ್ಯ...
ಕವನ
ಕವನ : ಸೈತಾನನ ಸಂತತಿ !!
ಸೈತಾನನ ಸಂತತಿ!!
ಬಟ್ಟೆಯ ಬಿಚ್ಚಿಸಿ ನೋಡಿದರೆ
ಧರ್ಮವು ಕಾಣುವುದೇ...!ನಡೆ ನುಡಿ ಸಹೃದಯಗಳಲಿ
ಅಡಗಿದೆ ಮಾನವ ಧರ್ಮ...ಧರ್ಮದ ಅಮಲು ನೆತ್ತಿಗೇರಿಸಿ
ನರ್ತನ ಮಾಡುವ ಅಧಮರೇಕ್ರೂರ ಮನದ ಕೊಲೆಗಡುಕ
ಸೈತಾನನ ಸಂತತಿಯವರೇ...ಅರ್ಥವಾಗದು ದುರುಳ ಜನಕೆ
ಕರುಳ ಸಂಬಂಧಗಳ ನೋವುಕಲಿಸುವುದು ಕಾಲವೇ ನಿಮಗೆ
ಕೊಳಕು ಮನದ ಕ್ರಿಮಿಗಳೇ...ಪಹಲ್ಗಮ್ ನಲ್ಲಿ ನೆತ್ತರು ಸುರಿಸಿ
ಬಲಿದಾನವಾದ ಸಹೋದರರೇಭಗವಂತ ಚಿರಶಾಂತಿ ನೀಡಲಿ
ನಿಮಗಿದೋ ಸಾವಿರ ನಮನ...ಎ.ಎಸ್.ಗಡದವರ(ಅಡವೀಶ)
ಹಿ.ಪ್ರಾ.ಕ.ಹೆ.ಮ.ಆಶ್ರಮ ಶಾಲೆ
ದೇಶನೂರ - 591147
ತಾ:ಬೈಲಹೊಂಗಲ ಜಿ:ಬೆಳಗಾವಿ.
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...