ಕಿದ್ವಾಯಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲುಗಳ ವಿತರಣೆ
ಹಂಸ ಜ್ಯೋತಿ ಸಂಸ್ಥೆಯ ವತಿಯಿಂದ ಪ್ರತಿವರ್ಷ ನಡೆಸುವಂತೆ ಈ ವರ್ಷವೂ ಸಹ ಕನ್ನಡ ನಾಡ ಹಬ್ಬದ ಪ್ರಯುಕ್ತ ಬೆಂಗಳೂರಿನ ಕಿದ್ವಾಯ್ ಆಸ್ಪತ್ರೆಯ ಕ್ಯಾನ್ಸರ್ ರೋಗಿಗಳಿಗೆ ಬೆಳಗಿನ ಉಪಾಹಾರ, ಹಣ್ಣು ಹಂಪಲುಗಳು ಸಿಹಿಯನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಖ್ಯಾತ ಚಲನಚಿತ್ರ ನಟ ಮತ್ತು ನೃತ್ಯಪಟು ಶ್ರೀಧರ್ ರವರು ಉದ್ಘಾಟನೆ ಮಾಡಿ ಮಾತನಾಡುತ್ತ, ಕಳೆದ 49 ವರ್ಷಗಳಿಂದ ಹಲವಾರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಹಂಸ ಜ್ಯೋತಿಯು 25 ವರ್ಷಗಳಿಂದ ಕಿಡ್ವಾಯ್ ಆಸ್ಪತ್ರೆಯ ರೋಗಿಗಳಿಗೆ ಸಿಹಿ ತಿನಿಸು ಒಂಬತ್ತು ಬಗೆಯ ಹಣ್ಣುಗಳು ಮುಂತಾದ ವಸ್ತುಗಳನ್ನು ವಿತರಿಸುತ್ತ ನಿಜ ಅರ್ಥದಲ್ಲಿ ಮಾದರಿ ಸಂಸ್ಥೆಯಾಗಿ ಬಡವರ ಪಾಲಿನ ಆಶಾಕಿರಣವಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಮಿಕ ಇಲಾಖೆ ಜಂಟಿ ಕಾರ್ಯದರ್ಶಿ ಡಾ ಸಂಗಮೇಶ್ ಉಪಾಸೆ, ಸೆಂಟ್ ಫ್ರಾನ್ಸಿಸ್ ಪದವಿ ಕಾಲೇಜಿನ ಪ್ರಾಂಶುಪಾಲ ಆರ್ ಎನ್ ಸುಬ್ಬರಾವ್, ಉದ್ಯಮಿ ಎಸ್ ಟಿ ಉದಯಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ, ವಿಶ್ವ ವೆಂಕಟೇಶ್ವರ ಇಂಟರ್ನ್ಯಾಷನಲ್ ಸ್ಕೂಲ್ ನ ಎಂಡಿ ಕೆ ಬಾಲಾಜಿಬಾಬು, ಮೈಕ್ರೋಟೆಕ್ ಟ್ರೆಂಡಿಂಗ್ ಮಷೀನ್ಸ್ ನ ಎಂ ಡಿ ಕೆ ಶ್ರೀನಿವಾಸಲು ರೆಡ್ಡಿ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್ ಜಗದೀಶ್, ಯುವ ನಾಯಕ ಮತ್ತು ನಾಯಕಿ ಚೇತನ್ ಹಾಗೂ ಪಲ್ಲವಿ ಹಿರೇಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸುಮಾರು 150 ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಮೇಲ್ಕಾಣಿಸಿದ ಹಣ್ಣು ತಿಂಡಿ ತಿನಿಸುಗಳೊಂದಿಗೆ ಒಣ ಹಣ್ಣುಗಳು ಮತ್ತು ಬಿಸ್ಕೆಟ್ ಪ್ಯಾಕ್ಗಳನ್ನು ವಿತರಿಸಲಾಯಿತು
ನಾಡಿನ ಸುಪ್ರಸಿದ್ಧ ಜಾನಪದ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಡಿನ ಗಣ್ಯಾತಿ ಗಣ್ಯರು ಭಾಗವಹಿಸಿದ್ದರು ಎಂದು ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ ಮು ಮುರಳಿಧರ ಮತ್ತು ಹಿರಿಯ ಟ್ರಸ್ಟಿ ಎಂ ಆರ್ ನಾಗರಾಜ ನಾಯ್ಡು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.