ಕಿವಿಯೋಲೆ

0
461

ಕಿವಿಯೋಲೆ

ಕಣ್ಣುಗಳ ಕಪ್ಪು

ಚಲುವೆಗೆ ನೀಡಿವೆ

ನಲ್ಲನ ಕರೆಯೋಲೆ 

ಕಣ್ಣೋಟ ಸೆಳೆಯುವ 

ಸುಂದರ ಕಿವಿಯೋಲೆ ಮನಸೆಳೆಯುವ ಸುಂದರಿಗೆ ಮುಡಿಪಾಗಿ ತೋರಿವೆ

ನನ್ನ ಮನದ ಮಾತನು

 ಪಿಸುಗುಡುತ ನೀ ಹೇಳೆ 

ಬಾ ಇನಿಯ ಬರಸೆಳೆದು

ಅಪ್ಪಿ ಮುದ್ದಾಡಲು

ದುಂಬಿ ಮಕರಂದ 

ಹೀರುವ ತೆರದಿ ನನ್ನನು

ಏನೋ ಹೇಳಬೇಕು

ಕಿವಿಯಲಿ ಎನುತ

ಹತ್ತಿರ ಬರಲು 

ಬರಸೆಳೆದ

ಕಿವಿಯೋಲೆ 

ನನ್ನ ಬಳಿಗೆ

ಹೇಳು ನೀ ಹೇಳುವ

ಮಾತುಗಳ ಎನಲು

ಕೆಣಕಿದಂತಾಗಿ ನನ್ನ ಪ್ರೀತಿ

ಎಲ್ಲಿ ಗುಟ್ಟು ನಿನ್ನ

ಮೂಲಕ ರಟ್ಟಾಗುವುದೋ

ಎನುತ ದೂರ ಸರಿಯಲು

ನಾ ನಿಮ್ಮ ನಡುವೆ

ಪ್ರೇಮ ಸೇತುವೆ

ಹೇಳಿ ಬಿಡು ನೀ ನಿನ್ನ

ಕನಸ ನನ್ನ ಬಳಿಗೆ 

ಎಂದಂತಾಗಿ ಮನ ಅರಳಿತು

ತಿಳಿಯಾದ ತೆಳು ತ್ವಚೆಯ

ಕಿವಿ ಕಾಂತಿಯ ಕಿವಿಯೋಲೆ

ಸ್ಪರ್ಶಿಸುತಲಿ ನಲ್ಲೆಯ

ಕೆನ್ನೆಯ ಸೋಕುತ

ಚುಂಬನ ನೀಡುತಲಿ

ಕಿವಿಯೋಲೆ ನೀ ಸರಿ ಆಚೆ

ಇವಳು ನನ್ನ ಸ್ವತ್ತು ಎಂದು

ನಲ್ಲೆಯ ಆಲಿಂಗನ

ನೀ ಸಂಸ್ಕೃತಿ ಯ ಪ್ರತೀಕ

ಕಿವಿಗೆ ಕಾಂತಿ

ಹೆಣ್ಣಿಗೆ ಸೌಂದರ್ಯ

ನೀ ಇರಲು ಶೃಂಗಾರ

ಹೆಣ್ತನಕ್ಕೆ ಮೆರುಗು

ಉಯ್ಯಾಲೆ ಆಡುತಿರಲು

ನಲ್ಲೆಯ ಅಂದದ ಮೆರಗು

ಇರಬೇಕು ನಮ್ಮ ನಡುವೆ

ಪ್ರೇಮ ಸೇತುವೆಯ ರೀತಿ


ವೈ. ಬಿ. ಕಡಕೋಳ