ಮೂಡಲಗಿ: ಸತ್ಯಸಾಯಿ ಬಾಬಾರವರ ನಡೆ, ನುಡಿ, ಆಚಾರ-ವಿಚಾರಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನ ಒಳ್ಳೆಯ ರೀತಿಯಾಗಿ ಮುಂದೆ ನಡೆಯಬೇಕಾದರೆ ನಂಬಿಕೆ ಇಡಬೇಕು ಅಂದಾಗ ಭಗವಂತ ಗುರಿ ಮುಟ್ಟಿಸುತ್ತಾನೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ಅ-29 ರಂದು ಕಲ್ಲೋಳಿ ಪಟ್ಟಣದ ಶ್ರೀ ಸತ್ಯಸಾಯಿ ಸೇವಾ ಸಮಿತಿಯ 38ನೇ ವಾರ್ಷಿಕೋತ್ಸವ ಸಮಾರಂಭ ಪ್ರಯುಕ್ತ ಸಾಯಿ ಮಂದಿರಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಂತಿ, ನೆಮ್ಮದಿ ಕಿರಾಣಿ ಅಂಗಡಿಯಲ್ಲಿ ಕೊಂಡುಕೊಳ್ಳುವ ವಸ್ತುವಲ್ಲ, ಅದನ್ನು ಧಾರ್ಮಿಕ ಸ್ಥಳಗಳಲ್ಲಿ ಹೊಗಿ ಭಗವಂತನ ಮೊರೆ ಹೊಗಬೇಕು ಎಂದರಲ್ಲದೇ ಸತ್ಯಸಾಯಿ ಸೇವಾ ಕಾರ್ಯದಲ್ಲಿ ತೊಡಗಿದ ಅನೇಕರು ಒಳ್ಳೆಯ ಬದುಕು ಕಟ್ಟಿಕೊಂಡಿದ್ದಾರೆ. ನನ್ನ ಬದುಕಿನಲ್ಲಿ ಒಳ್ಳೆಯ ಬೆಳವಣಿಗೆ ನಡೆದಿದ್ದಾವೆ ಎಂದರು. ಕಲ್ಲೋಳಿ ಪಟ್ಟಣದ ಸತ್ಯಸಾಯಿ ಬಾಬಾ ಅವರ ಸೇವಾ ಸಮಿತಿ ಜಿಲ್ಲೆಯಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಮಲಝರಿ ಮತ್ತು ಮಳ್ಳಿಗೇರಿ ಆಶ್ರಮದ ಪೂಜ್ಯರಾದ ಜ್ಞಾನಮಯಾನಂದ ಮಹಾಸ್ವಾಮಿಗಳು ಪ್ರವಚನ ನೀಡಿದರು. ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾಧ್ಯಕ್ಷ ವಸಂತ ಬಾಳಿಗಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿ.ಎಂ ಕಟಗಿ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಲ್ಲೋಳಿ ಪಟ್ಟಣದಲ್ಲಿ ಸಾಯಿ ಮಂದಿರ ವತಿಯಿಂದ ಬಡವರ ಮಕ್ಕಳ ಶಿಕ್ಷಣ ಸಲುವಾಗಿ ಶಾಲಾ ಫೀ, ಪುಸ್ತಕ, ನೋಟಬುಕ್ಕ ಕೊಟ್ಟು ಸಾಕಷ್ಟು ಅನುಕೂಲ ಕಲ್ಪಿಸುತ್ತದೆ. ಪಟ್ಟಣದಲ್ಲಿ ನಗರ ಸಂಕೀರ್ಣತನೆ, ವೇದಘೋಷ, ಭಜನೆ, ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಲ್ಲೋಳಿ ಸತ್ಯಸಾಯಿ ಸೇವಾ ಸಮಿತಿಯ ಸುರೇಶ ಕಬ್ಬೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಅಧ್ಯಕ್ಷ ಶ್ರೀಶೈಲ ತುಪ್ಪದ, ಸಂಚಾಲಕ ಲೋಹಿತ ಕಲಾಲ, ಡಾ. ಶೆಟ್ಟೆಪ್ಪ ಗೋರೋಶಿ, ಬಸಪ್ಪ ಕಡಾಡಿ, ದುಂಡಪ್ಪ ಖಾನಗೌಡ್ರ, ಪರಪ್ಪ ಗಿರೆಣ್ಣವರ, ಗೊಪಾಲ ಕಂಬಾರ, ಸಾಯಿಕಿರಣ ಪಟ್ಟಣಶೆಟ್ಟಿ, ರಮೇಶ ಕಲಾಲ, ಮೌನೇಶ ಪತ್ತಾರ, ಪ್ರಭು ಮಳವಾಡ, ಶ್ರೀಮತಿ ಮಂಜುಳಾ ಪ್ರಭು ಕಡಾಡಿ ಸೇರಿದಂತೆ ಯುವಕರು, ಮಹಿಳೆಯರು, ಸಾಯಿ ಭಕ್ತರು, ಬಾಲವಿಕಾಸ ಮಕ್ಕಳು ಉಪಸ್ಥಿತರಿದ್ದರು.