spot_img
spot_img

“ಟಂಕಾ”ಗಳು

Must Read

spot_img
- Advertisement -

ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ.

ನಿಯಮಗಳು:-

  • ಇದು ಐದು ಸಾಲುಗಳ ಒಂದು ಸಾಹಿತ್ಯದ ಪ್ರಕಾರ.
  • 1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು ಹೊಂದಿರಬೇಕು.
  • 2,4,5  ನೇ ಸಾಲುಗಳಲ್ಲಿ ಏಳೇಳು ಅಕ್ಷರಗಳನ್ನು ಹೊಂದಿರಬೇಕು.
  • ಇದು ಒಟ್ಟು 31 ಅಕ್ಷರ ಜೋಡಣೆಯ ಛಂದಸ್ಸಿನ ಗುಚ್ಛ
  • ಇಲ್ಲಿ ಅಕ್ಷರಗಳ ಲೆಕ್ಕ ಗಣನೆಗೆ ಬರುತ್ತದೆ

ಕೆಲವು ಉದಯೋನ್ಮುಖ ಕವಿ ಹಾಗೂ ಕವಯಿತ್ರಿಯರ
” ಟಂಕಾ ” ಗಳು

*ಟಂಕಾ-01*

- Advertisement -

ನಿನ್ನ ಹೃದಯ
ನನ್ನರಮನೆಯಾಗಿ
ಅಧಿಪತ್ಯವ
ಕೈಸೆರೆ ಹಿಡಿದಿದೆ
ಕೈಜಾರಿ ಬೀಳದಂತೆ!!

*ಟಂಕಾ-02*

ಹಸಿರಾಗಿದೆ
ತ್ರಾಣ ಹೃದಯದಲ್ಲಿ
ನಿನ್ನೊಲುಮೆಯ
ಧಾರೆಯಲ್ಲಿ ಮಿಂದಿದೆ
ಹಸಿರಿನ ಉಸಿರು !

- Advertisement -

*ತೇಜಾವತಿ ಹೆಚ್. ಡಿ. (ಖುಷಿ)*
———————————————————————————-

ಟಂಕಾ 1

ಮಾತೃ ಸ್ವರೂಪಿ
ಶಾಂತಾದೇವಿಯವರು
ಕನ್ನಡಾಂಬೆಯ
ಶ್ರೇಷ್ಠ ವರಪುತ್ರಿಯು
ಅಮರರು ಎಂದಿಗೂ.

ಟಂಕಾ 2

ಅಷ್ಟಐಶ್ವರ್ಯ
ಸಾಟಿಯೇನುತಾಯಿಗೆ?
ಅವಳ ಪ್ರೀತಿ
ಆರಲಾರದ ಜ್ಯೋತಿ
ಸತ್ಯವಿದು ಬಾಳಿಗೆ.

ಮೀನಾಕ್ಷಿ ಸೂಡಿ
———————————————————————————-

9742192615:

*”ಟಂಕಾ-೧”*

*ಕವಿ ಹೃದಯ*
*ಬತ್ತಿದೊಡೆ ಸಾಹಿತ್ಯ*
*ಮಣ್ಣಾಗುವುದು*
*ಕವಿ ಕಂಡ ಕನಸು*
*ಮರಚಿಕೆಯಾದಿತು॥*

*”ಟಂಕಾ-೨”*

*ಕನ್ನಡಿಯಂತೆ*
*ಹೊಳೆಯುವಳು ನನ್ನ*
*ಮನದರಸಿ*
*ಹತ್ತಿರ ಸರಿದಂತೆ*
*ನಾಚಿ ಬೆರಗಾದಳು॥*

*”ಟಂಕಾ-೩”*

*ಉದಯಕಾಲ*
*ಪೂರ್ವದಿ ನಮಿಸುತ್ತಾ*
*ಅಂಬರಮಣಿ*
*ಕಂಡು ಹಕ್ಕಿಗಳೆಲ್ಲ*
*ರಾಗವ ಹಾಡಿದವು॥*

*”ಟಂಕಾ-೪”*

*ಮೊದಲ ಮಾತು*
*ಡವಡವದಿ ಹೇಳಿ*
*ಮೌನವಾದೇನು*
*ನಂತರದ ಮಾತನ್ನು*
*ಮುತ್ತಿನಂತೆ ಸುರಿದೆ॥*

*”ಟಂಕಾ – ೫”*

*ಮೌನ ಮಾತಾಗಿ*
*ಆಶೋತ್ತರಗಳನ್ನು*
*ಹರಡಿಹನು*
*ಅಳಿಯಲಾಗದಂತೆ*
*ಆಕಾಶದೆತ್ತರಕ್ಕೆ॥*

✒️ಎಮ್.ಎ.ಹೊಸಮನಿ ಶಿರಗಾಂವ
9742192615
———————————————————————————-
ಟಂಕಾಗಳು

೧.
ಸತ್ಯ ಎಂಬುದು
ಅಂತರಾತ್ಮದಲ್ಲಿರೆ
ಭೇದವಿರದು
ಕಠೋರ ಆತ್ಮಬಲ
ಎಂದೂ ಸೋಲಲಾರದು

೨.
ಒಂದೇ ಮನಸ್ಸು
ಒಂದೇ ಇಲ್ಲಿಹ ತೋಟ
ಒಂದೇ ಭಾರತ
ವಿಧ ವಿಧ ಹೂಗಳು
ಭಾರತೀಯ ಪುತ್ರರು

೩.
ಓಡು ಮನವೆ
ವ್ಯರ್ಥ ದುಶ್ಚಟ ಬಿಟ್ಟು
ನನ್ನಾರೋಗ್ಯದ
ರಕ್ಷಣೆ ನಾನೇ ಬದ್ದ
ಇನ್ಯಾರು ಹೊಣೆ ಹೇಳು

೪.
ಹಸಿರು ಇರೆ
ಉಸಿರು ಎಲ್ಲೆಡೆಗೆ
ಮರ ಉಳಿಸು
ಗಾಳಿ ಮಳೆ ನಿನಗೆ
ಆಸರೆ ಭವಿಷ್ಯಕ್ಕೆ

೫.
ಪ್ರೀತಿ ಹಂಚಲು
ಪ್ರೀತಿಯ ಪರಿಮಳ
ದ್ವೇಷ ಬಿತ್ತಲು
ಬೆಂಕಿಯ ಗೆಳೆತನ
ವಿನಾಶಕ್ಕೆ ಆಹ್ವಾನ

– ಈಶ್ವರ್
(ಈಶ್ವರ ಮಮದಾಪೂರ)

- Advertisement -

1 COMMENT

  1. ಟಂಕಾ
    ಪ್ರಥಮ ಪ್ರಯತ್ನ

    ಭಾರವಸೆಯು
    ಬದುಕಿಗೆ ಇರುವ
    ಬುನಾದಿಯಂತೆ
    ಮುನ್ನಡೆಯುತಿರಲು
    ಪ್ರೇರಣೆಯ ಬೆಳಕು

    ಪ್ರತಿಯೊಂದಕ್ಕೂ
    ಪ್ರಮಾಣ ಕೇಳಬೇಡಿ
    ಸರಿಯಾದದ್ದು
    ಆಚರಣೆಯಲ್ಲಿಯೂ
    ಬಳಕೆಯಾಗಬೇಕು

    ಸ್ವಾರ್ಥವಿರದ
    ಸಮರ್ಪಣಾ ಭಾವವು
    ಸರ್ವ ಶ್ರೇಷ್ಠವು
    ಇಹಪರದಲ್ಲಿಯೂ
    ಮಾನ್ಯತೆ ಪಡೆವುದು

    ಹೇಳಲಾಗದು
    ಮನದ ಮಾತುಗಳ
    ನುಡಿಗಳಲ್ಲಿ
    ನಯನ ನುಡಿವುದ
    ಅರಿವುದ ಕಲಿ ನೀ

    ಸಮಯಕ್ಕಿಲ್ಲ
    ಗಮನಿಸಿದ ವಸ್ತು
    ಮನಕ್ಕೊಪ್ಪದ
    ಹೊಳೆಯುವ ಬಂಗಾರ
    ಎಷ್ಟಿದ್ದರೇ ಏನಂತೆ

    ಬದಲಾಗುವ
    ಮನಗಳ್ಯಾವು
    ಹೇಳಲೇನು ನಾ
    ಹೃದಯದಿ ಕುಳಿತ
    ಆತ್ಮೀಯರೇ ಅಲ್ಲವೇ

    ನಿರಾಧಾರನ
    ಆಧಾರವಾದಾಗಲೇ
    ಭಗವಂತನ
    ಸನಿಹಕ್ಕೆ ಸರಿವೆ
    ಮುಕ್ತಿಧಾಮ ಸೇರುವೆ

    ಬಾಳ ಪ್ರಶ್ನೆಗೆ
    ಮುಗುಳು ನಗುತಲೆ
    ಸಾಗಿ ಬಿಡುವೆ
    ನೀನಿರದ ನೋವಿಗೆ
    ಸಾಕ್ಷಿಯಾತು ಕಣ್ಣೀರು

    ಪ್ರೀತಿ ಕಪಟಿ
    ಸಾಯುವಷ್ಟು ಪ್ರೀತಿಸಿ
    ನೆಮ್ಮದಿಯಲಿ
    ಮತ್ತೆ ಮತ್ತೆ ಪ್ರೀತಿಸೆ
    ಪ್ರತಿದಿನವೂ ಸಾವೇ

    ಬಾನು ಮರೆತ
    ಹಕ್ಕಿಯಾಗಿ ಉಳಿದೆ
    ಬಂಧನದಲಿ
    ಬಿಡುಗಡೆ ಆದರೂ
    ಹಾರಲು ಬಯಸದೆ

    🖋ಜಯಶ್ರೀ ರಾ.ಮ.
    ಧಾರವಾಡ.

Comments are closed.

- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group