- Advertisement -
ಡಾ. ಕಲಬುರ್ಗಿ ಎಂಬತ್ತಾರು
————————–
ಬರ ಬರ ಬಿಸಿಲು
ಬಿರುಕಲು ಭೂಮಿ
ಮಳೆಯಿಲ್ಲ ನೀರಿಲ್ಲ
ಮನೆ ಹೊಲ ಹಳ್ಳ
ಬಿರಿದು ಬೆಳೆದನು
ದಿಟ್ಟ ಮಲ್ಲಪ್ಪ .
ಅಧ್ಯಯನ ಸಂಶೋಧನೆ
ಕನ್ನಡ ಬಸವಣ್ಣ
ನಾಟಕ ಸಂಗೀತದ ಗೀಳು
ನೇರ ನುಡಿ ಸಂಘರ್ಷ
ಒಳಗೊಳಗೇ ಕೊರಗುವ
ಮೃದು ಮನ
ಹಾಸ್ಯ ಹರಟೆ ಸಂವಾದ
ಚಿಂತನೆ ಯೋಜನೆಗಳು.
ಅಂದು ಕುಹುಕಿಗಳು
ಗುಂಡಿಕ್ಕಿ ಕೊಂದರು
ಸತ್ತದ್ದು ವ್ಯಕ್ತಿ ಸತ್ಯವಲ್ಲ
ಡಾ. ಕಲಬುರ್ಗಿ ಒಂಟಿ ಮರ
ಕನ್ನಡದ ಕೊಲಂಬಸ್
ಎಂಟು ದಶಕದ ನೆನಪು
ಎಂಟು ಶತಕದ ನೆರಳು.
ಎಂ ಎಂ ಕಲಬುರ್ಗಿ ಅಮರ ರಹೇ
——————————-
*ಡಾ.ಶಶಿಕಾಂತ.ಪಟ್ಟಣ ಪುಣೆ*