spot_img
spot_img

ಗೂಗಲ್ ಮೀಟ್‍ನಲ್ಲಿ ಮುನವಳ್ಳಿ ವಲಯದ ಪ್ರಧಾನ ಗುರುಗಳ ಸಭೆ

Must Read

- Advertisement -

ಸವದತ್ತಿ: ತಾಲೂಕಿನ ಮುನವಳ್ಳಿ ವಲಯದ ಹೂಲಿಕಟ್ಟಿ ಹೂಲಿ ಮುನವಳ್ಳಿ ಅರ್ಟಗಲ್ ಸಿಂದೋಗಿ ಸಮೂಹ ಸಂಪನ್ಮೂಲ ಕೇಂದ್ರಗಳ ವ್ಯಾಪ್ತಿಯ ಸರಕಾರಿ ಅನುದಾನಿತ ಅನುದಾನ ರಹಿತ ಪ್ರಾಥಮಿಕ ಶಾಲೆಗಳ ಪ್ರಧಾನ ಗುರುಗಳ ವಿಶೇಷ ಸಭೆ ಗೂಗಲ್ ಮೀಟ್‍ನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ನೇತೃತ್ವದಲ್ಲಿ ಜರುಗಿತು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಮಾತನಾಡಿ “ ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ಮಾಗದರ್ಶಿಯನ್ವಯ ಹಮ್ಮಿಕೊಳ್ಳಬಹುದಾದ ಚಟುವಟಿಕೆಗಳು. ಸಿವ್ಹಿಲ್ ಕಾಮಗಾರಿಗಳ ಕುರಿತು ಹಾಗೂ ಮಳೆಗಾಲ ಪ್ರಾರಂಭವಾಗಿರುವುದರಿಂದ ಅನುಪಯುಕ್ತ ಶಾಲಾ ಕೊಠಡಿಗಳನ್ನು ತರಗತಿಗೆ ಬಳಕೆ ಮಾಡದಂತೆ ಸೂಚನೆ ನೀಡಿ ಇಲಾಖೆಯ ಗಮನಕ್ಕೆ ತರುವಂತೆ ಸೂಚಿಸಿ ಮಾಹಿತಿ ನೀಡಿದರು.

ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿಯವರು ಮಾತನಾಡುತ್ತ, ತಂತ್ರಜ್ಞಾನ ಆಧಾರಿತ ತರಬೇತಿ ಈಗ ಜರುಗಿದ್ದು ಒಳ್ಳೆಯ ರೀತಿಯಲ್ಲಿ ಶಿಕ್ಷಕ ಶಿಕ್ಷಕಿಯರು ಪಾಲ್ಗೊಳ್ಳುತ್ತಿದ್ದು ಮುಂಬರುವ ದಿನಗಳಲ್ಲಿ ಇಲಾಖೆಯ ಮಾರ್ಗಸೂಚಿಯನ್ವಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಎಲ್ಲರೂ ಸಕ್ರಿಯವಾಗಿ ತೊಡಗುವಂತೆ ತಿಳಿಸಿದರು.

- Advertisement -

ನಂತರ ಪ್ರಧಾನ ಗುರುಗಳಿಗೆ ಆಡಳಿತಾತ್ಮಕ ಬಂದಿರುವ ಸಮಸ್ಯೆಗಳನ್ನು ಕೇಳಿ ಅವುಗಳಿಗೆ ಸೂಕ್ತವಾದ ಪರಿಹಾರ ಕ್ರಮಗಳನ್ನು ಸೂಚಿಸಿದರು. ಶಿಕ್ಷಕ ಮಿತ್ರ ತಂತ್ರಾಂಶದ ಕುರಿತು ತಿಳಿಸುತ್ತ ಎಲ್ಲ ಶಿಕ್ಷಕ/ಶಿಕ್ಷಕಿಯರು ತಮ್ಮ ವೈಯುಕ್ತಿಕ ಮಾಹಿತಿಯನ್ನು ಸರಿಯಾಗಿ ನೀಡುವ ಮೂಲಕ ವರ್ಗಾವಣೆ ಕುರಿತು ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕರೆ ನೀಡಿದರು.

ಮುಖ್ಯೋಪಾಧ್ಯಾಯರಾದ ಆರ್.ಟಿ.ಇತಾಪೆ.ಕಲ್ಲಯ್ಯ ಪೂಜಾರ.ಗುರುನಾಥ ಪತ್ತಾರ.ಶಂಕರ ರಾಠೋಡ.ಎಚ್.ಕೆ.ಯಾಡೊಳ್ಳಿ.
ಬಿ.ಎಸ್.ಪೂಜಾರ.ಎಂ.ಬಿ.ಮಲಗೌಡರ.ಎನ್.ಎ.ಹೊನ್ನಳ್ಳಿ ವೀರಣ್ಣ ಕೊಳಕಿ. ತಮ್ಮ ಶಾಲೆಗಳ ಕೊಠಡಿ.ಶೌಚಾಲಯ ಇನ್ನಿತರ ಮಾಹಿತಿ ಕುರಿತಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳೊಡನೆ ಸಂವಾದದಲ್ಲಿ ಪಾಲ್ಗೊಂಡರು.
ಈ ಸಭೆಯಲ್ಲಿ ಎಲ್ಲ ಮುಖ್ಯೋಪಾಧ್ಯಾಯರ ಜೊತೆಗೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ವ್ಹಿ.ಸಿ.ಹಿರೇಮಠ. ಡಾ.ಬಿ.ಐ.ಚಿನಗುಡಿ.ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕರಾದ ಎಸ್.ಬಿ.ಬೆಟ್ಟದ, ವೈ.ಬಿ.ಕಡಕೋಳ, ಸಿವ್ಹಿ.ಬಾರ್ಕಿ, ಎಂ.ಎಂ.ಸಂಗಮ, ಶಿಕ್ಷಣ ಸಂಯೋಜಕರಾದ ಗುರುನಾಥ ಕರಾಳೆ.l, ಮಂಜುನಾಥ ಹುದ್ದಾರ, ಸಂಪನ್ಮೂಲ ವ್ಯಕ್ತಿಗಳಾದ ಎಸ್.ಸಿ.ಕುರಿ (ಹೂಲಿಕಟ್ಟಿ). ಎಫ್.ಜಿ.ನವಲಗುಂದ. (ಮುನವಳ್ಳಿ)ತಿಮ್ಮಯ್ಯ.ಯು (ಹೂಲಿ) ಮಹಾದೇವಿ, ಕುಂಬಾರ, (ಅರ್ಟಗಲ್) ಎಸ್.ವೈ.ನಿಪ್ಪಾಣಿ (ಸಿಂದೋಗಿ) ಸೇರಿದಂತೆ ಎಂಬತ್ತಕ್ಕೂ ಹೆಚ್ಚು ಮುಖ್ಯೋಪಾಧ್ಯಾಯರು ಗೂಗಲ್ ಮೀಟ್ ಸಭೆಯಲ್ಲಿ ಪಾಲ್ಗೊಂಡು ಇಲಾಖೆಯ ಮಾಹಿತಿಯನ್ನು ಹಂಚಿಕೊಂಡರು.

ಈ ಕಾರ್ಯಕ್ರಮವನ್ನು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವ್ಹಿ.ಸಿ.ಹಿರೇಮಠ ಸಂಯೋಜಿಸಿ ಸ್ವಾಗತ ನಿರೂಪಣೆ ಮತ್ತು ವಂದನಾರ್ಪಣೆಗೈದರು.

- Advertisement -
- Advertisement -

Latest News

ಮತ ಯಾರಿಗಾದರೂ ಹಾಕಿ ಆದರೆ NOTA ಕ್ಕೆ ಹಾಕಬೇಡಿ !

ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ನೀವು ಯಾವುದೋ ಒಂದು ಗೊಂದಲದಲ್ಲಿ ಇರುತ್ತೀರಿ. ವಿವಿಧ ಪಕ್ಷಗಳು ತಮ್ಮ ಪ್ರಚಾರದ ವೈಖರಿಯಿಂದ ನಿಮ್ಮನ್ನು ಹಿಡಿದಿಟ್ಟುಕೊಂಡಿವೆ. ಒಂದು ಪಕ್ಷದ ಪ್ರಚಾರ ಸಭೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group