spot_img
spot_img

ನದಿ ತೀರದ ಗ್ರಾಮಗಳ ಜನರಲ್ಲಿ ಸವಿನಯ ಪ್ರಾರ್ಥನೆ

Must Read

- Advertisement -

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೊಯ್ನಾ ಡ್ಯಾಮ್ ನಿಂದ 32100 ಕ್ಯೂಸೆಕ್ ರಾಜಾಪುರ್ ಬ್ಯಾರೇಜ್ ನಿಂದ ಎರಡು ಲಕ್ಷ 6375, ದೂಧಗಂಗಾ ನದಿಯಿಂದ 44,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಒಟ್ಟು ಚಿಕ್ಕೋಡಿಯ ಕಲ್ಲೋಳ ಬ್ಯಾರೇಜ್ ಹತ್ತಿರ ಎರಡು ಲಕ್ಷ 50 ಸಾವಿರ 375 ಕ್ಯೂಸೆಕ್ ಹರಿವಿನ ಪ್ರಮಾಣ ದಾಖಲಾಗಿದೆ.

ಹಿಪ್ಪರಗಿ ಬ್ಯಾರೇಜ್ ನಿಂದ ಎರಡು ಲಕ್ಷ 28 ಸಾವಿರದ 56 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಕೃಷ್ಣಾ ನದಿ ತೀರದಲ್ಲಿ ಇರುವ ತಾಲೂಕುಗಳಾದ ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಭಾಗ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿಯ ಆತಂಕ ಎದುರಾಗಿದೆ.

ಈಗಾಗಲೇ ನಿಪ್ಪಾಣಿ ತಾಲೂಕಿನ ಬಾರವಾಡ ಗ್ರಾಮದ 10 ಕುಟುಂಬಗಳು ಸಿದ್ನಾಳ ಗ್ರಾಮದ 13 ಕುಟುಂಬಗಳು ಹುನ್ನರಗಿ ಗ್ರಾಮದ 51 ಕುಟುಂಬಗಳು, ಕುನ್ನೂರು ಗ್ರಾಮದ 27 ಕುಟುಂಬಗಳು ಮಮದಾಪುರ ಗ್ರಾಮದ 06 ಕುಟುಂಬಗಳು ಹಾಗೂ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ್ ವಸತಿಯ 58 ಕುಟುಂಬಗಳು ಸಪ್ತಸಾಗರ ಗ್ರಾಮದ ತೋಟದ ವಸತಿಯ 40 ಕುಟುಂಬಗಳು ನಾಗನೂರು ಪಿಕೆ ಗ್ರಾಮದ 5 ಕುಟುಂಬಗಳು ಮತ್ತು ಕಾಗವಾಡ ತಾಲೂಕಿನ ಶಹಾಪುರ ಕಮತೇ ತೋಟದ 22 ಕುಟುಂಬಗಳು, ಬನಜವಾಡ ತೋಟದ 26 ಕುಟುಂಬಗಳು, ಮತ್ತು ಚಿಕ್ಕೋಡಿ ತಾಲೂಕಿನ ಕಲ್ಲೋಳ ತೋಟದ ವಸತಿಯ 50 ಕುಟುಂಬಗಳು ಇಂಗಳಿ-ದಾನವಾಡಿ ಭಾಗದ 30 ಕುಟುಂಬಗಳು ಸ್ಥಳಾಂತರಗೊಂಡಿವೆ.

- Advertisement -

ನಿಪ್ಪಾಣಿ ತಾಲೂಕಿನ ಬಾರವಾಡದ ಮರಾಠಿ ಶಾಲೆ, ಸಿದ್ನಾಳ ಗ್ರಾಮದ ಮರಾಠಿ ಶಾಲೆ ಹುನ್ನರಗಿಯ ಸರ್ಕಾರಿ ಕನ್ನಡ ಶಾಲೆ, ಕುನ್ನೂರು ಗ್ರಾಮದ ಮರಾಠಿ ಶಾಲೆ, ಮಮದಾಪುರ ಕೆ ಎಲ್ ಗ್ರಾಮದ ಮರಾಠಿ ಶಾಲೆ, ಮತ್ತು ಅಥಣಿ ತಾಲೂಕಿನ ಹುಲಗ ಬಾಳಿಯ ಸರ್ಕಾರಿ ಪ್ರಾಥಮಿಕ ಶಾಲೆ, ರೆಡ್ಡೆರಟ್ಟಿ ಗ್ರಾಮದ ಆರ್ ಸಿ ಸೆಂಟರ್ ಸೇರಿದಂತೆ ಹಲವು ಕಡೆ ಕಾಳಜಿ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆದಿದೆ.

ನಿಪ್ಪಾಣಿ ತಾಲೂಕಿನಲ್ಲಿ ಒಟ್ಟು 45 ಕಾಳಜಿ ಕೇಂದ್ರಗಳು ಅಥಣಿ ತಾಲೂಕಿನಲ್ಲಿ 22 ಕಾಳಜಿ ಕೇಂದ್ರಗಳು ಕಾಗವಾಡ ತಾಲೂಕಿನಲ್ಲಿ 16 ಕಾಳಜಿ ಕೇಂದ್ರಗಳು ಚಿಕ್ಕೋಡಿ ತಾಲೂಕಿನಲ್ಲಿ 14 ಕಾಳಜಿ ಕೇಂದ್ರಗಳು, ರಾಯಬಾಗ್ ತಾಲೂಕಿನಲ್ಲಿ 40 ಕಾಳಜಿ ಕೇಂದ್ರಗಳನ್ನು ಜಿಲ್ಲಾಡಳಿತ ಸನ್ನದ್ಧವಾಗಿ ಇರಿಸಿದೆ.

ನಿಪ್ಪಾಣಿ ತಾಲೂಕಿನ ಕುನ್ನೂರ್ -ಮಾಂಗನೂರ್,
ಜತ್ರಾಟ-ಭಿವಸಿ, ಬೋರ್ಗಾಂವ್- ಸದಲಗಾ ಅಥಣಿ ತಾಲೂಕಿನ ಕವಟಕೊಪ್ಪ-ಶೇಗುಣಸಿ ಕವಟಕೊಪ್ಪ-ದರೂರ ಚಿಕ್ಕೋಡಿ ತಾಲೂಕಿನ ಮಲಿಕವಾಡ-ದತ್ತವಾಡ, ಯಕ್ಸಂಬಾ-ದತ್ತವಾಡ ಸದಲಗಾ-ಬೋರ್ಗಾಂವ್….ರಾಯಬಾಗ ತಾಲೂಕಿನ ಮಾಂಜರಿ-ಸವದತ್ತಿ ಹಾಲಳ್ಳಿ-ಚಿಂಚಲಿ ಗ್ರಾಮಗಳ ಜನರು ಪರ್ಯಾಯ ಮಾರ್ಗಗಳಿಂದ ಸಂಚರಿಸುತ್ತಿದ್ದಾರೆ.

- Advertisement -

ಸಾರ್ವಜನಿಕರು ದಯವಿಟ್ಟು ಅಧಿಕಾರಿಗಳ ಆದೇಶವನ್ನು ಪಾಲಿಸಿ. ಸುರಕ್ಷಿತ ಸ್ಥಳಗಳಿಗೆ ತೆರಳುವದಕ್ಕೆ ಹಿಂದೇಟು ಹಾಕಬೇಡಿ. ಪ್ರತಿಯೊಬ್ಬರ ಜೀವಗಳು ಅತ್ಯಮೂಲ್ಯ.
ಜನ ಜಾನುವಾರುಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿತೀರದತ್ತ ತೆರಳದಂತೆ ಗಮನಹರಿಸಿ.

ದೀಪಕ ಶಿಂಧೇ
9482766018

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಉರಿಲಿಂಗ ಪೆದ್ದಿ ಇವನ ಹೆಸರಿನಲ್ಲಿ ೩೬೬ ವಚನಗಳು‌ ದೊರೆತಿವೆ. ಇವನ ತಂದೆ- ತಾಯಿ ಇವನಿಗೆ ಇಟ್ಟ ಹೆಸರು ಪೆದ್ದಣ್ಣ. ಇವನು ಗೋದಾವರಿ ತೀರದ ಹಳ್ಳಿಯೊಂದರಲ್ಲಿ ವಾಸವಾಗಿದ್ದನು.ಉರಿಲಿಂಗಪೆದ್ದಿ ಮೂಲತಃ...
- Advertisement -

More Articles Like This

- Advertisement -
close
error: Content is protected !!
Join WhatsApp Group