spot_img
spot_img

ಮಹಾಕುಂಭದಲ್ಲಿ ಭಾಗವಹಿಸಲು ಹೊರಟಿದ್ದೀರಾ ? ಈ ಏಳು ತಪ್ಪು ಮಾಡಬೇಡಿ

Must Read

spot_img
- Advertisement -

ಉತ್ತರಪ್ರದೇಶದ ಪ್ರಯಾಗ ರಾಜ್ ದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ದಿನದಿನಕ್ಕೂ ಅತ್ಯಂತ ಆಕರ್ಷಣೀಯ ಹಾಗೂ ಸನಾತನಿಯಾಗುತ್ತ ನಡೆದಿದೆ.  ೧೪೪ ವರ್ಷಗಳಿಗೊಮ್ಮೆ ನಡೆಯುವ, ಗಂಗಾ ಯಮುನಾ ಸರಸ್ವತಿ ನದಿಗಳ ಸಂಗಮವಾಗಿರುವ ಈ ಪುಣ್ಯ ಭೂಮಿಯಲ್ಲಿ ನಡೆಯುತ್ತಿರುವ ಈ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯ ದಿನ ಸುಮಾರು ೧೦ ಕೋಟಿ ಜನ ಶಾಹಿ ಸ್ನಾನ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಕುಂಭ ಮೇಳವೆಂಬ ಮೇಳ ಭಾರತೀಯರಲ್ಲದೆ ವಿದೇಶಿಯರಲ್ಲೂ ಧಾರ್ಮಿಕ ಜಾಗೃತಿಯನ್ನು ಮೂಡಿಸಿದೆಯೆಂದರೆ ತಪ್ಪಾಗಲಾರದು. ಆದ್ದರಿಂದಲೆ ಭಾರತದ ಮೂಲೆ ಮೂಲೆಯಿಂದಲೂ ಪ್ರಯಾಗರಾಜ್ ನ ಈ ಕುಂಭಮೇಳದಲ್ಲಿ ಭಾಗವಹಿಸಿ, ಶಾಹಿ ಸ್ನಾನ ಮಾಡಿ ಸಂಭ್ರಮಿಸಲು ಜನರು ಹೊರಡುತ್ತಿದ್ದಾರೆ.

ಆದರೆ ಕುಂಭಮೇಳಕ್ಕೆ ಹೊರಡುವವರು ಕೆಲವು ಧಾರ್ಮಿಕ ನಿಯಮಗಳನ್ನು ಪಾಲಿಸಬೇಕೆಂದು ಹೇಳಲಾಗುತ್ತಿದೆ. ಫೇಸ್ ಬುಕ್ ನಲ್ಲಿ ಬಂದ ಒಂದು ವಿಡಿಯೋದಲ್ಲಿ ಕುಂಭಮೇಳಕ್ಕೆ ಹೋಗುವವರು ಏಳು ತಪ್ಪುಗಳನ್ನು ಮಾಡಬಾರದು ಎಂದು ಹೇಳಲಾಗುತ್ತಿದೆ. ಅವುಗಳನ್ನು ಪಾಲಿಸಿಕೊಂಡು ಕುಂಭಮೇಳದಲ್ಲಿ ಭಾಗವಹಿಸುವುದರಿಂದ ಶಾಹಿ ಸ್ನಾನದ ಪುಣ್ಯ ಖಂಡಿತವಾಗಿಯೂ ದೊರಕುತ್ತದೆಯೆನ್ನಲಾಗುತ್ತದೆ

- Advertisement -

ಅವುಗಳೆಂದರೆ, ಒಂದು ಸಂಗಮದಿಂದ ಜಲವನ್ನು ತರಬೇಡಿರಿ.

ಎಷ್ಟೋ ಜನರು ಈ ಸಂಗಮದಿಂದ ಗಂಗಾಜಲವನ್ನು ತರುತ್ತಾರೆ ಕೆಲವರು ಆ ಭೂಮಿಯ ಮಣ್ಣನ್ನು ಕೂಡ ತರುತ್ತಾರೆ. ಆದರೆ ಈ ಸಂಗಮದ ಸುತ್ತಮುತ್ತ ಶಿವನು ಅಲ್ಲದೆ ಸಾಧು ಸಂತರು ಅಡ್ಡಾಡಿರುತ್ತಾರೆ ಎಂದು ನಂಬಲಾಗಿದ್ದು ಅಲ್ಲಿನ ನೀರು ಹಾಗೂ ಮಣ್ಣು ವಿಶೇಷ ಪರಿಣಾಮ ಬೀರುತ್ತವೆಯೆನ್ನಲಾಗಿದೆ

ಎರಡು, ಪಾಪಿ ಭೋಜನ ಮಾಡಬೇಡಿ. ಕುಂಭಮೇಳದಲ್ಲಿ ತಾಮಸಿಕ ಆಹಾರವನ್ನು ವರ್ಜಿಸಲಾಗುತ್ತದೆ. ಸಾತ್ವಿಕ ಆಹಾರದ ವ್ಯವಸ್ಥೆ ಇರುತ್ತದೆ ಇದರಿಂದ ಶರೀರ ಹಾಗು ಮನಸ್ಸು ಎರಡೂ ಶುದ್ಧವಾಗಿರುತ್ತವೆ. ಅಂಥದರಲ್ಲಿ ಸಂಗಮದಲ್ಲಿ ಭಾಗವಹಿಸಿ ಸಾರಾಯಿ, ಮಾಂಸಾಹಾರ ಸೇವನೆ ಮಾಡಿ ಅಪವಿತ್ರಗೊಂಡು ಬಂದರೆ ಅದರ ಪರಿಣಾಮ ಜೀವನವನ್ನೇ ಬರ್ಬಾದ ಮಾಡಿಬಿಡಬಹುದು ಎನ್ನಲಾಗುತ್ತಿದೆ.

- Advertisement -

ಮೂರು,ಗಂಗಾ ಸ್ನಾನ ಮಾಡುವಾಗ ಶಾಂಪೂ ಅಥವಾ ಸಾಬೂನಿನ ಉಪಯೋಗ ಮಾಡಬಾರದು. ಇದರಿಂದ ನೀರು ಅಶುದ್ಧವಾಗುತ್ತದೆಯಲ್ಲದೆ ಅಪವಿತ್ರವೂ ಆಗುತ್ತದೆ. ಬಟ್ಟೆಗಳನ್ನು ನದಿಯಲ್ಲಿ ತೊಳೆಯಬಾರದು, ಸಿಕ್ಕಸಿಕ್ಕಲ್ಲಿ ಮೂತ್ರ ವಿಸರ್ಜನೆ, ಮಲ ವಿಸರ್ಜನೆ ಮಾಡಬಾರದು. ಗಂಗಾ ಸ್ನಾನ ಮಾಡುವಾಗ ಪೂರ್ಣ ಶ್ರದ್ಧೆ ಹಾಗೂ ಪವಿತ್ರತೆ ಇರುವುದು ಅವಶ್ಯ.

ನಾಲ್ಕು, ಮಹಾಕುಂಭದಲ್ಲಿ ಪಾಲ್ಗೊಳ್ಳಲು ಹೋಗುವಾಗ ಮನಸು ಶುದ್ಧವಾಗಿರಬೇಕು. ನಿಮ್ಮ ಮನಸಿನಲ್ಲಿ ಯಾರೊಬ್ಬರ ಮೇಲೆ ದ್ವೇಷ ಅಥವಾ ಲಾಲಸೆ ಇರಬಾರದು. ಸುಳ್ಳು, ಕಳ್ಳತನಗಳಂಥ ನಕಾರಾತ್ಮಕ ವಿಚಾರಗಳು ಮನಸಿನಲ್ಲಿ ತುಂಬಿರಬಾರದು. ಯಾರಿಗೂ ಅಶ್ಲೀಲ ಪದ ಬಳಸಬಾರದು ನಿಮ್ಮ ವಿಚಾರಗಳನ್ಮು ಪವಿತ್ರವಾಗಿ ಇಟ್ಟುಕೊಳ್ಳಬೇಕು.

ಐದು, ಮಹಾಕುಂಭದಲ್ಲಿ ಭಾಗವಹಿಸಿ ಅಲ್ಲಿನ ಅವ್ಯವಸ್ಥೆಯ ವಿರುದ್ಧ ದೂರಬಾರದು. ಕೋಣೆ ಅಸ್ವಚ್ಛವಾಗಿತ್ತು,, ಊಟ ಚೆನ್ಮಾಗಿರಲಿಲ್ಲ ಎಂಬಂಥ ಕುವಿಚಾರಗಳು ಮನಸಿನಲ್ಲಿ ಬರಬಾರದು. ನೀವು ತಕರಾರು ಮಾಡುತ್ತ ಇದ್ದರೆ ಅಲ್ಲಿಂದ ನೀವು ಕೇವಲ ಸಮಸ್ಯೆಗಳನ್ನೇ ತರುತ್ತೀರಿ. ಆದರೆ ಪುಣ್ಯವನ್ನು ತರಲಾಗುವುದಿಲ್ಲ.

ಆರು, ಮಹಾಕುಂಭದಲ್ಲಿ ಭಾಗವಹಿಸಲು ಬರುವ ಪ್ರತಿಯೊಬ್ಬರೂ ವಿಶೇಷವಾದ ವ್ಯಕ್ತಿಯೇ ಇರುತ್ತಾರೆ ಯಾರೊಬ್ಬರನ್ನೂ ಸಾಧಾರಣ ತಿಳಿಯಬಾರದು.

ಏಳು, ಮಹಾಕುಂಭದ ಅನುಭವವು ಪೂರ್ಣ ಶ್ರದ್ಧೆ ಹಾಗೂ ಭಕ್ತಿಯಿಂದ ತುಂಬಿರುತ್ತದೆ. ಅದರಲ್ಲಿ ನಾವು ಕೂಡ ಪೂರ್ಣ ಭಕ್ತಿಯಿಂದ ಭಾಗವಹಿಸಬೇಕಾಗುತ್ತದೆ. ಇಲ್ಲಿ ಬರುವವರು ಮೋಕ್ಷದ ಉದ್ದೇಶದಿಂದ ಬಂದಿರುತ್ತಾರೆ. ಆದ್ದರಿಂದ ಭಕ್ತಿ ಶ್ರದ್ಧೆಯಿಂದ ಕುಂಭಮೆಳದಲ್ಲಿ ಭಾಗವಹಿಸಿ ಶಾಹಿ ಸ್ನಾನ ಮಾಡಿ ಪುನೀತರಾಗಿರಿ.

ಸಂಗ್ರಹ : ಉಮೇಶ ಬೆಳಕೂಡ, ಮೂಡಲಗಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group