spot_img
spot_img

ಭ್ರಷ್ಟರನ್ನು ಪೋಷಿಸುತ್ತಿರುವ ಭೀಮಪ್ಪ ಗಡಾದ

Must Read

ಈಗಲೇ ಹೀಗೆ ನಾಳೆ ಶಾಸಕರಾದರೆ ಹೇಗೆ?

- Advertisement -

ಮೂಡಲಗಿ: ಅರಭಾವಿ ಮತಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮೂಲತಃ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡವರು. ಅದರಿಂದಲೇ ಮುಂದೆ ಮಾಹಿತಿ ಹಕ್ಕು ಕಾರ್ಯಕರ್ತನೆಂದು ಗುರುತಿಸಿಕೊಂಡು ರಾಜ್ಯದಾದ್ಯಂತ ಹೆಸರು ಗಳಿಸಿದ್ದಾರೆ. ಅಲ್ಲದೆ ಉತ್ತರ ಕರ್ನಾಟಕದ ಭಾಗ ನಿರ್ಲಕ್ಷ್ಯಕ್ಕೊಳಗಾದಾಗ ಹೋರಾಟಕ್ಕೆ ನಿಂತಿದ್ದಾರೆ.

ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರವನ್ನು ಕೆದಕಿ ತೆಗೆದು ಸುಧಾರಣೆ ಮಾಡಿದ್ದಾರೆ. ಆದರೆ ಗಡಾದ ಅವರ ನೆರಳಲ್ಲಿಯೇ ಅಪಾರ ಪ್ರಮಾಣದ ಭ್ರಷ್ಟಾಚಾರ, ಹಣದ ದುರುಪಯೋಗ ನಡೆದಿದ್ದು ಅವರಿಗೆ ತಿಳಿದಿದೆಯೋ ಇಲ್ಲವೋ, ಅಥವಾ ಗೊತ್ತಿದ್ದೂ ಗೊತ್ತಿಲ್ಲದಂತೆ ನಾಟಕವಾಡುತ್ತ ಭ್ರಷ್ಟರಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆಯೋ ಗೊತ್ತಿಲ್ಲ. ಅವರ ಆಪ್ತರು ಗಡಾದ ಅವರ ಹೆಸರಿನಲ್ಲಿ ಅಧಿಕಾರಿಗಳನ್ನು ಬೆದರಿಸುವ ಕೃತ್ಯಕ್ಕೆ ಮುಂದಾಗಿದ್ದಾರೆ.

ನಮ್ಮ ಜೇಬಿನಲ್ಲಿಯೇ ಸಂವಿಧಾನ ಇದೆ ಎಂದು ಅಹಂಕಾರದಿಂದ ಅರಚುವ ಇವರ ಆಪ್ತನೊಬ್ಬ ಪೊಲೀಸ್ ಅಧಿಕಾರಿಯ ಎದುರೇ ಭಾರತದ ಸಂವಿಧಾನದ ಮರ್ಯಾದೆ ತೆಗೆದಿದ್ದು ಅತ್ಯಂತ ಖಂಡನೀಯ. ಇದಕ್ಕೆ ಗಡಾದ ಅವರು ಯಾವ ರೀತಿಯ ಉತ್ತರ ಕೊಡುತ್ತಾರೆ ನೋಡಬೇಕು ಯಾಕೆಂದರೆ ನಾಳೆ ಇವರು ಶಾಸಕರಾದರೆ ಸಂವಿಧಾನದ ಅಡಿಯಲ್ಲೇ ಕೆಲಸ ಮಾಡುತ್ತಾರೋ ಅಥವಾ ಸಂವಿಧಾನವನ್ನು ಜೇಬಿನಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಾರೊ?  

- Advertisement -

ಇದಷ್ಟೇ ಅಲ್ಲ ಅನಿತಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಎಂಬ ಸಂಸ್ಥೆಯಲ್ಲಿ ಗಡಾದ ಅವರ ಪತ್ನಿ ಕೂಡ ಸದಸ್ಯರಾಗಿದ್ದು ಆ ಸಂಸ್ಥೆಯಲ್ಲಿ ಅನೇಕ ಕಾರ್ಯಕ್ರಮಗಳ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ಗುಳುಂ ಮಾಡಲಾಗಿದೆ. (ಇದಕ್ಕೆ ದಾಖಲೆಗಳಿವೆ) ಇದು ಈಗ ಶಾಸಕ ಸ್ಥಾನಕ್ಕೆ ಸ್ಪರ್ಧಿಯಾಗಿರುವ ಗಡಾದ ಅವರಿಗೆ ಗೊತ್ತಿಲ್ಲದೆ ಇರುವುದಿಲ್ಲ. ಅಂದಮೇಲೆ ಗಡಾದ ಅವರಿಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಯಾವ ನೈತಿಕತೆ ಇದೆಯೆಂಬುದು ಒಂದು ದೊಡ್ಡ ಪ್ರಶ್ನೆ.

ಗಡಾದ ಅವರು ಇನ್ನೂ ಶಾಸಕರಾಗಿಲ್ಲ ಈಗಲೇ ಅವರ ಆಪ್ತ ವಲಯದ ಮೆರವಣಿಗೆ ಈ ಸ್ತರದಲ್ಲಿ ಇದೆ. ಇನ್ನು ಅವರು ಶಾಸಕರಾದರೆ ಕ್ಷೇತ್ರದ ಜನರ ಗತಿಯೇನು? ಪ್ರಾಮಾಣಿಕ ಅಧಿಕಾರಿಗಳ ಗತಿಯೇನು ? ಈ ಪ್ರಶ್ನೆಗಳಿಗೆ ಉತ್ತರ ನೀಡಿಯೇ ಗಡಾದ ಅವರು ಜನರಿಂದ ಮತ ಕೇಳಬೇಕು. 

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಜಲ ಜೀವನ ಮಿಷನ್ ಅಡಿಯಲ್ಲಿ ಕಲ್ಯಾಣಿ ಪುನಶ್ಚೇತನ

ಮೂಡಲಗಿ: ಜಿಲ್ಲಾ ಪಂಚಾಯತ್ ಬೆಳಗಾವಿ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ, ತಾಲೂಕು ಪಂಚಾಯತ್ ಮೂಡಲಗಿ, ಗ್ರಾಮ ಪಂಚಾಯತ್ ಯಾದವಾಡ ಹಾಗೂ ಅನುಷ್ಠಾನ ಬೆಂಬಲ...
- Advertisement -

More Articles Like This

- Advertisement -
close
error: Content is protected !!
Join WhatsApp Group