ಬೀದರ – ಜಿಲ್ಲೆಯಲ್ಲಿ ಪರಸ್ಪರ ಮುನಿಸಿಕೊಂಡಿರುವ ಬಿಜೆಪಿಯ ಭಗವಂತ ಖೂಬಾ ಮತ್ತು ಪ್ರಭು ಚವ್ಹಾಣ ಇಬ್ಬರನ್ನೂ ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ.
ನೀ ನೊಂದು ತೀರ… ನಾನೊಂದು ತೀರ…. ಹಾಡಿಗೆ ಧ್ವನಿ ಮುದ್ರಣವನ್ನು ಮಾಡಿ ಟ್ರೋಲ್ ಮಾಡಲಾಗಿದೆ. ಭಗವಂತ ಖೂಬಾ ಮತ್ತು ಪ್ರಭು ಚವ್ಹಾಣ ಒಂದೇ ವೇದಿಕೆ ಮೇಲೆ ಇರುವ ಹಳೆಯದಾದ ವಿಡಿಯೋ ಬಿಡುಗಡೆ ಮಾಡಲಾಗಿದ್ದು ಇದೀಗ ಅದೇ ಇಬ್ಬರ ನಾಯಕರ ಮಧ್ಯೆ ಅಸಮಾಧಾನವಿರುವುದು ಬಹಿರಂಗವಾಗಿದೆ.
2023 ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿಗಳನ್ನ ಸೋಲಿಸಲು ಭಗವಂತ ಖುಬಾ ಕೆಲಸ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು ಪ್ರಭು ಚೌಹಾಣ. ಈಗ ತಮ್ಮಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆ ಒಗ್ಗಟ್ಟು ಮೂಡಿಸಲು ಬಿಜೆಪಿ ಹರಸಾಹಸ ಮಾಡಲಾಗುತ್ತಿದೆ. ಆದರೆ ನಾಯಕರಲ್ಲೆ ಹೊಂದಾಣಿಕೆ ಕೊರತೆ ಇರುವಾಗ ಕಾರ್ಯಕರ್ತರ ನಡುವೆ ಹೊಂದಾಣಿಕೆ ಆಗುತ್ತಾ..? ಬಿಜೆಪಿ ನಾಯಕರ ಹೊಂದಾಣಿಕೆ ಕೊರತೆಯಿಂದ ಬೀದರ ಸಂಸದರ ಸ್ಥಾನ ಕೈ ತಪ್ಪುತ್ತಾ ? ಲೋಕ ಕದನದಲ್ಲಿ ಭಗವಂತ ಖೂಬಾಗೆ ಕಾಡುತ್ತಿದೆಯಾ ಸೋಲಿನ ಭೀತಿ ? ಎಂಬ ಅನೇಕ ಪ್ರಶ್ನೆಗಳು ಕಾರ್ಯಕರ್ತರಲ್ಲಿ ಹಾಗೂ ಜನಸಾಮಾನ್ಯರಲ್ಲಿ ಮನೆಮಾಡಿವೆ.
ವರದಿ: ನಂದಕುಮಾರ ಕರಂಜೆ, ಬೀದರ