spot_img
spot_img

Bidar: ಮೈತ್ರಿ ವಿಷಯದಲ್ಲಿ ಯಾವುದೇ ಅಸಮಾಧಾನ ಇಲ್ಲ: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಸ್ಪಷ್ಟನೆ

Must Read

spot_img
- Advertisement -

ಬೀದರ: ಲೋಕಸಭಾ ಚುನಾವಣೆ ವಿಷಯದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷ ಹೊಂದಾಣಿಕೆ (ಮೈತ್ರಿ) ಮಾಡಿಕೊಳ್ಳುತ್ತಿರುವುದಕ್ಕೆ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಯಾವುದೇ ಅಸಮಾಧಾನವೂ ಇಲ್ಲ. ನಾವೆಲ್ಲರೂ ಒಂದಾಗಿದ್ದೇವೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸ್ಪಷ್ಟನೆ ನೀಡಿದ್ದಾರೆ.

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್  ಮೈತ್ರಿ ವಿಷಯದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಈ ಹಿಂದೆ ನಡೆದ ಎರಡು ಸಭೆಗಳಲ್ಲಿ ಮೈತ್ರಿಗೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ ಎಂದರು.

ರಾಜಕೀಯದಲ್ಲಿ ಸಂದರ್ಭಾನುಸಾರ ಪಕ್ಷಗಳು ನಿರ್ಧಾರ ತೆಗೆದುಕೊಳ್ಳುತ್ತವೆ. ಅದರಂತೆ ನಮ್ಮ ಪಕ್ಷ ಕೂಡ ಎನ್ ಡಿಎ ಜೊತೆಗಿನ ಮೈತ್ರಿಯ ನಿರ್ಧಾರವನ್ನು ತೆಗೆದುಕೊಂಡಿದೆ. ಅದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದೇವೆ. ದೇವೇಗೌಡರು ಮತ್ತು ಕುಮಾರಸ್ವಾಮಿಯವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಪಕ್ಷದಲ್ಲಿ ಒಬ್ಬಿಬ್ಬರು ಅಸಮಾಧಾನ ಹೊಂದಿರುತ್ತಾರೆ, ಅದನ್ನು ಕುಮಾರಸ್ವಾಮಿ  ಸರಿಪಡಿಸುತ್ತಾರೆ ಎಂದರು.

- Advertisement -

ಕರ್ನಾಟಕದ ಒಳಿತಿಗಾಗಿ ನಾವು ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ರಾಜ್ಯದ ಪರವಾಗಿ ನಮ್ಮ ಪಕ್ಷ ಧ್ವನಿ ಎತ್ತುವ ಕೆಲಸ ಮಾಡಿಕೊಂಡು ಬಂದಿದೆ. ಅದರೊಟ್ಟಿಗೆ ನಮ್ಮ ಪಕ್ಷವನ್ನು ಉಳಿಸಿ ಬೆಳಸುವ ಕೆಲಸವನ್ನು ನಾವು ಮಾಡಬೇಕಾಗಿದೆ. ಪಕ್ಷದ ರಾಜ್ಯ ಉಪಾಧ್ಯಕ್ಷರು ರಾಜೀನಾಮೆ ನೀಡಿರುವುದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಪಕ್ಷದಲ್ಲಿ ಬಹಳಷ್ಟು ಜನ ಉಪಾಧ್ಯಕ್ಷರಿದ್ದಾರೆ ಎಂದು ಕಾಂಶೆಂಪೂರ್ ಹೇಳಿದರು.

ಪೆನ್ ಡ್ರೈವ್ ಠುಸ್ ಬಾಂಬ್ ಅಲ್ಲ, ಸಮಯ ಬಂದಾಗ ತೋರಿಸ್ತಾರೆ.

ಕುಮಾರಸ್ವಾಮಿರವರು ತೋರಿಸಿರುವ ಪೆನ್ ಡ್ರೈವ್ ಠುಸ್ ಬಾಂಬ್ ಅಲ್ಲ. ಸಮಯ ಬಂದಾಗ ತೋರಿಸ್ತಾರೆ. ರಾಜಕೀಯದಲ್ಲಿ ಕುಮಾರಸ್ವಾಮಿರವರು ಯಾವತ್ತೂ ಠುಸ್ ಬಿಟ್ಟಿಲ್ಲ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಪಕ್ಕದ ವರಿಷ್ಠರು ಅದನ್ನು ಸರಿಪಡಿಸುತ್ತಾರೆ ಎಂದರು.

ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ:

- Advertisement -

ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ. ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಪಕ್ಷ ಸಂಘಟನೆಯ ಕೆಲಸ ಮಾಡುತ್ತೇನೆ. ಬೀದರ್ ಲೋಕಸಭಾ ಟಿಕೆಟ್ ವಿಷಯದಲ್ಲಿ ದೇವೇಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಯಾರು ಅಸಮಾಧಾನಿತರಿಲ್ಲ, ಯಾವುದೇ ಸಭೆ ನಡೆಸುವುದಿಲ್ಲ. ಅಸಮಾಧಾನಿತರ ಯಾವುದೇ ಸಭೆಗೆ ನಾನು ಹೋಗುವುದಿಲ್ಲ. ಮೈತ್ರಿ ವಿಷಯದಲ್ಲಿ ದೇವೇಗೌಡರು, ಕುಮಾರಸ್ವಾಮಿರವರ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group