spot_img
spot_img

ನವರಾತ್ರಿ ಮತ್ತು ಆಯುರ್ವೇದ; ನವರಾತ್ರಿಗೆ ನವ ಔಷಧಿಗಳು

Must Read

- Advertisement -

ನವರಾತ್ರಿಗೆ ನವ ಔಷಧಿಗಳು

ನವರಾತ್ರಿ ಹಬ್ಬದ ಮುಖ್ಯ ಉದ್ದೇಶ ದುರ್ಗಾ ಮಾತೆಯ ಒಂಬತ್ತು ಅವತಾರಗಳನ್ನು ವಿಧ ವಿಧವಾಗಿ ಪೂಜಿಸಿ ಭಜಿಸುವ ಆಧ್ಯಾತ್ಮಿಕ ಪವಿತ್ರ ದಿನಗಳು. ದೇವಿಯ ಪುರಾಣ ಓದಿ, ಕೇಳಿ ಪುನೀತರಾಗುವ, ವಿವಿಧ ಭಕ್ಷ್ಯಗಳನ್ನು ದೇವಿಗೆ ಅರ್ಪಿಸುವ ಸಂಭ್ರಮದ ಹಬ್ಬ.

ಉಪವಾಸದ ಮೂಲಕ ಆಧ್ಯಾತ್ಮದ ಅನುಭೂತಿ ಅನುಭವಿಸುವ, ಧ್ಯಾನಕ್ಕೆ ಬಹು ಪೂರಕವಾದ ಒಂಭತ್ತು ದಿನಗಳಿವು.

ಧ್ಯಾನದ ಮೂಲಕ ಕುಂಡಲಿನಿ ಶಕ್ತಿಯ ಜಾಗೃತಿಗೆ ಪವಿತ್ರ ಶ್ರೇಷ್ಠ ದಿನಗಳಿವು. ಅರಿಷಡ್ವರ್ಗಗಳನ್ನು ಗೆದ್ದು ಸಾತ್ವಿಕವಾಗುವ ಸಂಕೇತವೂ ಆಗಿದೆ ಎಂಬುದು ಆಧ್ಯಾತ್ಮ ಸಾಧಕರ ಅನುಭವ.

- Advertisement -

ಹಾಗೇಯೇ ನವರಾತ್ರಿಗೂ ಮತ್ತು ಆಯುರ್ವೇದ ಪದ್ಧತಿಗೂ ಅವಿನಾಭಾವ ನಂಟಿದೆ.

ಮಾರ್ಕಂಡೇಯ ಪುರಾಣ, ಆಯುರ್ವೇದ ಆಚಾರ್ಯರ ಅಭ್ರಿಪ್ರಾಯದಂತೆ “ನವಾರಾತ್ರಿ” ಆಚರಣೆ “ನವ ಔಷಧಿಗಳ” ಸೇವನಾ ಸೂಚಕವಾಗಿದೆ.

ಮಾರ್ಕಂಡೇಯ ಔಷಧ ಪದ್ಧತಿಯಲ್ಲಿ ಒಂಬತ್ತು ಔಷಧಿಗಳನ್ನು ಉಲ್ಲೇಖಿಸಲಾಗಿದೆ, ಈ ಔಷಧಿಗಳು ವ್ಯಕ್ತಿಯ ಎಲ್ಲಾ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಗಹನವಾಗಿ ನಂಬಲಾಗಿದೆ.

- Advertisement -

ನವರಾತ್ರಿಯ ಪವಿತ್ರ ದಿನಗಳು ಅಕ್ಟೋಬರ್ 7 ರಿಂದ ಆರಂಭವಾಗಿವೆ. ನವರಾತ್ರಿಯಲ್ಲಿ, ದೇವಿಯ ಒಂಬತ್ತು ರೂಪಗಳನ್ನು ಪೂಜಿಸುವ ಪದ್ಧತಿ ಪರಂಪರಾಗತವಾಗಿದೆ. ತಾಯಿ ದುರ್ಗೆಯ ಈ ಒಂಬತ್ತು ರೂಪಗಳನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಈ ರೂಪಗಳನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ಸಿದ್ಧಿಗಳನ್ನು ಪಡೆಯಬಹುದು, ಎಲ್ಲಾ ರೀತಿಯ ದುಃಖಗಳು ಮತ್ತು ತೊಂದರೆಗಳಿಂದ ಸ್ವಾತಂತ್ರ್ಯವನ್ನು ಪಡೆದು, ಜೀವನವನ್ನು ಉನ್ನತವಾಗಿ ಆನಂದಿಸಬಹುದು ಎಂದು ನಂಬಲಾಗಿದೆ.

ಮಾತೆ ದುರ್ಗೆಯ ಒಂಭತ್ತು ರೂಪಗಳಿಗೆ ಹೋಲುವ ಒಂಬತ್ತು ಆಯುರ್ವೇದ ಔಷಧಗಳಿವೆ, ಇವುಗಳನ್ನು ಮಾರ್ಕಂಡೇಯ ಔಷಧ ಪದ್ಧತಿಯಲ್ಲಿ ಉಲ್ಲೇಖಿಸಲಾಗಿದೆ.

ವೈದಿಕ ಸಾಹಿತ್ಯದ ಪ್ರಕಾರ , ನವದುರ್ಗೆಯರ ಒಂಬತ್ತು ಔಷಧೀಯ ರೂಪಗಳನ್ನು ಮೊದಲು ಮಾರ್ಕಂಡೇಯ ಔಷಧ ಪದ್ಧತಿಯೆಂದು ತಿಳಿಸಿಲಾಗಿದೆ ಮತ್ತು ಈ ವೈದ್ಯಕೀಯ ವ್ಯವಸ್ಥೆಯ ರಹಸ್ಯವನ್ನು ಬ್ರಹ್ಮನು “ದುರ್ಗಾ ಕವಚ” ಎಂದು ಕರೆಯುತ್ತಾರೆ.

ದುರ್ಗಾ ಕವಚ”  ನಮ್ಮನ್ನು ರಕ್ಷಿಸುವಂತೆ , ಈ ಒಂಭತ್ತು ಔಷಧಿಗಳು ವ್ಯಕ್ತಿಯ ಎಲ್ಲಾ ರೋಗಗಳನ್ನು ಸೋಲಿಸಿ, ದೇಹವನ್ನು ರಕ್ಷಿಸುತ್ತವೆ ಎಂಬುದು ಪ್ರತೀತಿ.

ಆ ಒಂಬತ್ತು ಪವಾಡದ ಸದೃಶ ಔಷಧಿಗಳು.

1. ಶೈಲಪುತ್ರಿ = ಹರೀತಕಿ [ಅಳಲೆ ಕಾಯಿ]
Terminalis chebula.

ಹರಿತಕಿಯನ್ನು  ತಾಯಿ ಶೈಲಪುತ್ರಿಯ ರೂಪವೆಂದು ಪರಿಗಣಿಸಲಾಗಿದೆ. ಹರಿತಕಿ 7 ವಿಧಗಳಿವೆ ಮತ್ತು ಅವೆಲ್ಲವೂ ವಿಭಿನ್ನ ಉಪಯೋಗಗಳನ್ನು ಹೊಂದಿವೆ.  ಪಥಾಯ, ಹರಿತಿಕ, ಅಮೃತ, ಹೇಮಾವತಿ, ಕಾಯಸ್ಥ, ಚೇತಕಿ ಮತ್ತು ಶ್ರೇಯಸಿ ಹರಿತಕಿಯಾಗಿದೆ.

ಆಯುರ್ವೇದದಲ್ಲಿ ಹರಿಣಕಿಯನ್ನು “ತಾಯಿ” ಎಂದು ವರ್ಣಿಸಲಾಗಿದೆ.

2. ಬ್ರಹ್ಮಚಾರಿಣಿ= ಬ್ರಾಹ್ಮಿ (ಒಂದೆಲಗ) Bacopa monnieri

ಬ್ರಾಹ್ಮಿಯನ್ನು ತಾಯಿ ಬ್ರಹ್ಮಚಾರಿಣಿ ರೂಪವೆಂದು ಹೇಳಲಾಗುತ್ತದೆ. ಬ್ರಾಹ್ಮಿ ಸೇವನೆಯಿಂದ ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲಾಗುತ್ತದೆ. ನೆನಪಿನ ಶಕ್ತಿ ಬಲಗೊಳ್ಳುತ್ತದೆ, ರಕ್ತದ ತೊಂದರೆಗಳನ್ನು  ದೂರವಾಗಿಸಿವುದು, ಆಯಸ್ಸು ವೃದ್ಧಿ ಮತ್ತು ಧ್ವನಿಯನ್ನು ಇಂಪಾಗಿಸುವುದು. ಆದ್ದರಿಂದ ಬ್ರಾಹ್ಮಿಯನ್ನು ಸರಸ್ವತಿ ಎಂದೂ ಕರೆಯುತ್ತಾರೆ.

3. ಚಂದ್ರಘಂಟ= ಚಂದ್ರಸೂರ (ಅಳವಿ ಬೀಜ) Lepidium Sativum

ಚಂದುಸೂರವನ್ನು ತಾಯಿ ಚಂದ್ರಘಂಟ ರೂಪವೆಂದು ಪರಿಗಣಿಸಲಾಗಿದೆ. ಇದರ ಎಲೆಗಳು ಕೊತ್ತಂಬರಿ ಸೊಪ್ಪಿನಂತೆ ಕಾಣುತ್ತವೆ. ಹೃದಯ ರೋಗಗಳು ಮತ್ತು ರಕ್ತದೊತ್ತಡ ಸಮಸ್ಯೆಯಲ್ಲಿ ಇದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಸ್ಥೂಲಕಾಯವನ್ನೂ ನಿಯಂತ್ರಿಸುತ್ತದೆ.

ಸಂಸ್ಕೃತದಲ್ಲಿ “ಚಾರ್ಮಹಂತ್ರಿ”  ಎಂದು ಕರೆಯುವರು.

4. ಕೂಷ್ಮಾಂಡದೇವಿ == ಕೂಷ್ಮಾಂಡ (ಬೂದು ಕುಂಬಳಕಾಯಿ) Benincasa hispida

ಕೂಷ್ಮಾಂಡವನ್ನು ತಾಯಿ ಕೂಷ್ಮಾಂಡದೇವಿಯೊಂದಿಗೆ ಹೋಲಿಸಲಾಗಿದೆ. ಬೂದು ಕುಂಬಳಕಾಯಿ ಸೇವನೆಯಿಂದ ದೇಹವು ಬಲಗೊಳ್ಳುತ್ತದೆ. ಪುರುಷರಿಗೆ ವೀರ್ಯ ವರ್ಧಕವಾಗಿದೆ. ಇದು ಕರುಳನ್ನು ಸ್ವಚ್ಛಗೊಳಿಸುತ್ತದೆ. ರಕ್ತದ ತೊಂದರೆ ಸುಧಾರಣೆಗೆ ಸಹಾಯಕ,  ಮಾನಸಿಕ ಸಮಸ್ಯೆಗಳಿಗೆ ಅಮೃತ ಸಮಾನವಾಗಿದೆ ಮತ್ತು ದೈಹಿಕ ದೋಷಗಳನ್ನು ತೆಗೆದುಹಾಕುತ್ತದೆ. ಇದು ಹೃದಯ ರೋಗಿಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

5. ಸ್ಕಂದ ಮಾತೆ= ಅಲಸಿ (ಅಗಸೆ ಬೀಜ) Linum usitatissimum

ಅಗಸೆ ಬೀಜ ತಾಯಿ ಸ್ಕಂದ ಮಾತೆಯೊಂದಿಗೆ ಸಂಬಂಧ ಹೊಂದಿವೆ. ಇದನ್ನು ಸೇವಿಸುವುದರಿಂದ ದೇಹದಲ್ಲಿರುವ ವಾತ, ಪಿತ್ತ ಮತ್ತು ಕಫಕ್ಕೆ ಸಂಬಂಧಿಸಿದ ರೋಗಗಳು ದೂರವಾಗುತ್ತವೆ.

ಇದನ್ನು ಕೊಲೆಸ್ಟ್ರಾಲ್, ಬೊಜ್ಜು, ಸಂಧಿವಾತ, ಅಧಿಕ ರಕ್ತದೊತ್ತಡ, ಗಾಯಗಳು, ಬಾವು ಇತ್ಯಾದಿಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ಸಂಸ್ಕೃತದಲ್ಲಿ ಉಮಾ, ರುದ್ರಪತ್ನಿ, ಕ್ಷುಮಾ, ಸುವರ್ಚಲ ಎನ್ನುವರು.

6. ಕಾತ್ಯಾಯನಿ ದೇವಿ= ಮಾಚಿಕಾ. (ಪುಂಡಿ) hibiscus cannabinus

ಆರನೆಯ ಪವಾಡ ಸದೃಶ ಔಷಧವೆಂದರೆ ಮಾಚಿಕಾ.  ಇದನ್ನು ಆಯುರ್ವೇದದಲ್ಲಿ ಅಂಬಾ, ಅಂಬಾಲಿಕಾ, ಅಂಬಿಕಾ ಮತ್ತು ಮಾಚಿಕಾ ಎಂದೂ ಕರೆಯುತ್ತಾರೆ. ಇದನ್ನು ಮಾತಾ ಕಾತ್ಯಾಯನಿಯೊಂದಿಗೆ ಹೋಲಿಸಲಾಗಿದೆ. ಇದು ಕಫ, ಪಿತ್ತರಸ ಮತ್ತು ಗಂಟಲಿನ ರೋಗಗಳ ನಾಶಕವಾಗಿದೆ.

7. ಕಾಳರಾತ್ರಿ ದೇವಿ= ನಾಗದೌನ್. Artemisia absinthium

ನಾಗದೌನ್ ಔಷಧಿಯನ್ನು ತಾಯಿ ಕಾಳರಾತ್ರಿಯಂತೆಯೇ ಪರಿಗಣಿಸಲಾಗುತ್ತದೆ. ತಾಯಿ ಕಾಳರಾತ್ರಿಯು ಎಲ್ಲಾ ತೊಂದರೆಗಳನ್ನು ದೂರ ಮಾಡಿದಂತೆ, ನಾಗದೌನ್ ಎಲ್ಲಾ ರೀತಿಯ ದೈಹಿಕ, ಮಾನಸಿಕ ಮತ್ತು ಮೆದುಳಿನ ರೋಗಗಳ ವಿರುದ್ಧ ಹೋರಾಡುವುದು. ಇದು ಎಲ್ಲಾ ರೀತಿಯ ವಿಷ ನಿವಾರಕ ಸಾಮರ್ಥ್ಯವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ.

ಮೂತ್ರ ಸಂಬಂಧಿ ಕಾಯಿಲೆಗಳು, ಅತೀ ರಜೋಸ್ರಾವ ಮತ್ತು ಗುದಗತ ರೋಗಗಳಲ್ಲಿ ಅತ್ಯುತ್ತಮ ಔಷಧವಾಗಿದೆ.

8. ಮಹಾಗೌರಿ- ತುಳಸಿ Ocimum sanctum

ಆಯುರ್ವೇದದಲ್ಲಿ ತುಳಸಿಯನ್ನು ಮಹಾಗೌರಿ ಎಂದು ಕರೆಯಲಾಗುತ್ತದೆ. ತುಳಸಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಕಫಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ವಾಸಿಮಾಡುವುದು. ಇದು ರಕ್ತವನ್ನು ಶುದ್ಧಗೊಳಿಸುತ್ತದೆ ಮತ್ತು ಶ್ವಾಸಕೋಶ, ಹೃದಯ ಮತ್ತು ಗಂಟಲಿಗೆ ಸಂಬಂಧಿಸಿದ ರೋಗಗಳನ್ನು ಗುಣಪಡಿಸಲು ಉಪಯುಕ್ತವಾಗಿದೆ.

ಬಿಳಿ ತುಳಸಿ, ಕಪ್ಪು ತುಳಸಿ, ಮಾರುತ, ದವನ, ಕುದೇರಕ, ಅರ್ಜಕ ಮತ್ತು ಷಟ್ಪತ್ರಗಳೆಂಬ ಏಳು ಬಗೆಯ ತುಳಸಿ ಇವೆ.

9. ಸಿದ್ದಿದಾತ್ರಿ= ಶತಾವರಿ (ಆಷಾಢಿ ಬೇರು, ಹಲವು ಮಕ್ಕಳ ತಾಯಿ ಬೇರು) Asparagus racemosus

ಶತಾವರಿಯನ್ನು ದೇವಿಯ ಒಂಬತ್ತನೆಯ ರೂಪ ಸಿದ್ದಿದಾತ್ರಿ ಎಂದು‌ ಪರಿಗಣಿಸಲಾಗಿದೆ. ಬಾಣಂತಿಯರ ಎದೆಹಾಲು ಹೆಚ್ಚಿಸುತ್ತದೆ.  ಗಂಡು ಮತ್ತು ಹೆಣ್ಣು ಬಂಜೆತನಕ್ಕೆ ಚಿಕಿತ್ಸೆ ನೀಡಲು ಉಪಯುಕ್ತವಾಗಿದೆ.

ಪುರುಷರಲ್ಲಿ ಮಾನಸಿಕ ಶಕ್ತಿ ವೃದ್ದಿಸಲು ಮತ್ತು ವೀರ್ಯ ವೃದ್ದಿಗೆ ಇದು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ವಾತ ಮತ್ತು ಪಿತ್ತ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸಲು ಸಹ ಇದು ಸಹಾಯಕವಾಗಿದೆ. ಇದರ ನಿಯಮಿತ ಸೇವನೆಯಿಂದ ರಕ್ತದ ಅಸ್ವಸ್ಥತೆಗಳು ದೂರವಾಗುತ್ತವೆ.

ಇದು ಶಕ್ತಿ, ಬುದ್ಧಿವಂತಿಕೆ ಮತ್ತು ವಿವೇಚನೆಗೆ ಉಪಯುಕ್ತವಾಗಿದೆ.

ನವರಾತ್ರಿ ಎಂದರೆ ದೈಹಿಕ, ಮಾನಸಿಕ ಆರೋಗ್ಯ ಅಭಿವೃದ್ದಿಕರ  ಮತ್ತು ಆಧ್ಯಾತ್ಮಿಕ ಉನ್ನತಿಯ ದಿನಗಳಾಗಿವೆ.


ಡಾ. ಪ್ರಕಾಶ ಬಾರ್ಕಿ
ಕಾಗಿನೆಲೆ.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group