ಬೀದರ – ಈ ಸಲ ರಾಜ್ಯಾದ್ಯಂತ ಭಾರತೀಯ ಜನತಾ ಪಕ್ಷ ಧೂಳಿಪಟವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭವಿಷ್ಯ ನುಡಿದಿದ್ದಾರೆ
ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಕೆಪಿಸಿಸಿ ರಾಜ್ಯ ಕಾರ್ಯದ್ಯಾಕ್ಷ ಈಶ್ವರ ಖಂಡ್ರೆ ನಡುವೆ ಹಗ್ಗಜಗ್ಗಾಟ ಪ್ರಾರಂಭವಾಗಿದ್ದು ಈ ಹಿನ್ನೆಲೆಯಲ್ಲಿ ಅವರು ಕೇಂದ್ರ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯಾದ್ಯಂತ ಬಿಜೆಪಿ ಪಕ್ಷ ಧೂಳಿಪಟವಾಗಲಿದೆ. ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್ ಗೆ ಬರಲಿದ್ದಾರೆ ಇದು ಗೊತ್ತಾಗಿ ಹತಾಶರಾದ ಬಿಜೆಪಿ ನಾಯಕರು ನನ್ನನ್ನು ಸೋಲಿಸಲು ಆಣೆ ಪ್ರಮಾಣ ಮಾಡಿಸುತ್ತಾ ಇದ್ದಾರೆ ಎಂದರು.
ಕೇಂದ್ರ ಸಚಿವ ಭಗವಂತ ಖೂಬಾ ಗೆ ಭಯ ಹುಟ್ಟಿದೆ ಆದ್ದರಿಂದಲೇ ಬಿಜೆಪಿ ಕಾರ್ಯಕರ್ತರಿಗೆ, ಅವರ ಮುಖಂಡರಿಗೆ ದೇವಸ್ಥಾನದಲ್ಲಿ ಕರೆದುಕೊಂಡು ಹೋಗಿ ಆಣೆ ಪ್ರಮಾಣ ಮಾಡಿಸುತ್ತಾರೆ.
ಜನರಿಗೆ ಸುಳ್ಳು ಹೇಳಿ ಭಾವನಾತ್ಮಕ ಮಾತು ಆಡಿ ಜನರನ್ನು ಮರಳು ಮಾಡುವುದು. ಆಣೆ ಪ್ರಮಾಣ ಮಾಡಿ ಅನುಕಂಪ ತೋರಿಸಿ ಅಧಿಕಾರ ಪಡೆಯಲು ಸಾಧ್ಯವಿಲ್ಲ. ಜನ ನಿರ್ಧಾರ ಮಾಡಿದರೆ ಕಾಂಗ್ರೆಸ್ ಪಕ್ಷ ಈ ಸಲ ಅಧಿಕಾರಕ್ಕೆ ಬರುತ್ತದೆ ಎಂದು ಬೀದರ್ ನಲ್ಲಿ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ