ಸವದತ್ತಿ: ಎಸ್ ವಿ ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಸಮೀರ್ ಪ್ರಕಾಶನ ಕನಕಗಿರಿ ಸಹಯೋಗದಲ್ಲಿ ಸೆಪ್ಟೆಂಬರ್ 13 ರಂದು ಧಾರವಾಡದ ಕವಿ ರಾಮಚಂದ್ರ ಎಸ್ ಕುಲಕರ್ಣಿ ಅವರ ಕವನ ಸಂಕಲನ ‘ಬೂದಿ ಹರಡಿದ ಬೀದಿಯಿಂದ’ ಬಿಡುಗಡೆ ಹಾಗೂ ಕವಿಗೋಷ್ಠಿ ಸಮಾರಂಭ ಬೆಳ್ಳುಬ್ಬಿ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಮಾರುತಿ ದೊಂಬರ ವಹಿಸಿಕೊಳ್ಳಲಿದ್ದಾರೆ. ಕನಕಗಿರಿಯ ಗಝಲ್ ಕವಿ ಅಲ್ಲಾಗಿರಿರಾಜ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪುಸ್ತಕ ಪರಿಚಯವನ್ನು ಕವಿ, ವಿಮರ್ಶಕ ನಾಗೇಶ್ ಜೆ. ನಾಯಕ ನಡೆಸಿಕೊಡಲಿದ್ದು ಮುಖ್ಯ ಅತಿಥಿಯಾಗಿ ಕವಿಗಳಾದ ಆನಂದ ಭೋವಿ ಹಾಗೂ ಕೃತಿಕಾರ ರಾಮಚಂದ್ರ ಕುಲಕರ್ಣಿ ಉಪಸ್ಥಿತರಿರುತ್ತಾರೆ.
ನಂತರ ನಡೆಯುವ ಕವಿಗೋಷ್ಠಿಯಲ್ಲಿ ವಿಠಲ ದಳವಾಯಿ, ಎಂ.ಡಿ.ಬಾವಾಖಾನ್, ಬಿ.ವಿ.ಪತ್ತಾರ, ಜಗದೀಶ್ ಸಂಗನ್ನವರ, ಆನಂದ ಪಟೀಲ, ಶೇಖರ ಹಾದಿಮನಿ, ಎನ್. ಆರ್. ಠಕ್ಕಾಯಿ, ಮಂಜುನಾಥ ಕೊಪ್ಪದ, ಸಂಗಮೇಶ್ ಕುಲಕರ್ಣಿ, ಸಿದ್ದು ವಗ್ಗನ್ನವರ, ಬಿ.ಎಂ.ಬಾವಾಖಾನ್, ಚನ್ನಬಸಯ್ಯ ಪೂಜೇರ, ಎಫ್.ಎಲ್.ಮದಹಳ್ಳಿ, ಸಂತೋಷ ಪಿಳಿಬಂಟರ್ ಕವಿತೆ ವಾಚನ ಮಾಡಲಿದ್ದಾರೆ ಎಂದು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ. ರಾಮರಡ್ಡಿ ತಿಳಿಸಿದ್ದಾರೆ.