ಸಿಂದಗಿ; ಸಿಂದಗಿ ಘಟಕದ ವಾಹನ ಸಂಖ್ಯೆ ಕೆ.ಎ ೨೮ ಎಫ್ ೨೫೮೮ ಪಣಜಿ-ಸಿಂದಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವಳು ಚಿನ್ನದ ಬೊರಮಾಳ ಕಳೆದುಕೊಂಡಿದ್ದಳು ಅದನ್ನು ಚಾಲಕ ಮತ್ತು ನಿರ್ವಾಹಕರು ಮರಳಿ ನೀಡಿ ಮಾನವಿಯತೆ ಮರೆದಿದ್ದಾರೆ.
ಮಂಗಳವಾರ ರಾತ್ರಿ ಸಿಂದಗಿ ಘಟಕದ ವಾಹನ ಸಂಖ್ಯೆ ಕೆ.ಎ ೨೮ ಎಫ್ ೨೫೮೮ ಪಣಜಿ-ಸಿಂದಗಿ ಬಸ್‌ನಲ್ಲಿ ವಿಜಯಪುರದವರೆಗೆ ಟಿಕೇಟ ಪಡೆದು ಪ್ರಯಾಣ ಮಾಡುತ್ತಿದ್ದ ಇಂಡಿ ತಾಲೂಕಿನ ಹಿರೇಮಣೂರ ಗ್ರಾಮದ ಅನೀತಾ ಬೂಯಾರ ಎಂಬುವವರು ನಿದ್ರೆಯಲ್ಲಿ ಅವರ ಕೊರಳಲ್ಲಿದ್ದ ಚಿನ್ನದ ಬೊರಮಾಳ ಸರ ಹರಿದು ಕೆಳಗೆ ಬಿದ್ದಿದ್ದು ವಾಹನ ಚಾಲಕ ಎ.ಎಂ..ಮನಗೂಳಿ ಬಿ.ಸಂ. ೧೯೨೯ ಹಾಗೂ ನಿರ್ವಾಹಕ ಎಸ್.ಎಂ.ಜಾಗೀರದಾರ ಬಿ.ಸಂ. ೨೭೭೬ ಅವರು ಚಿನ್ನದ ಸರ ಕಳೆದುಕೊಂಡ ಮಹಿಳೆ ಮರಳಿ ನೀಡುವ ಮೂಲಕ. ಪ್ರಾಮಾಣಿಕತೆ ಮರೆದಿದ್ದಾರೆ.