ಕವನ
ಕಪ್ ನಮ್ಮದೆನಿನ್ನೆ ಮೊನ್ನೆ ಮುಗಿದ
ಐ ಪಿ ಎಲ್ ಕ್ರಿಕೆಟ್ ಮ್ಯಾಚ್
ಕಪ್ ನಮ್ಮದೆ
ಕೂಗಾಡಿ ಕಿರುಚಾಡಿ
ಮೈದಾನದುದ್ದಕ್ಕೂ ಉರುಳಾಡಿ
ಮೋಸದ ಭಾಜಿಯ ಆಟ
ಹೂಡಿಕೆದಾರ ಕೈ ಗೊಂಬೆಗಳು
ನಮ್ಮ ಕ್ರಿಕೆಟ್ ಪಟುಗಳು
ಆರಂಭದಲ್ಲಿ ಇವರ ಹರಾಜು
ದುಡ್ಡಿಗಾಗಿ ಆಟ ಜೂಜಾಟ
ಕ್ರಿಕೆಟ್ ಎಂದರೆ ದೇಶ ಪ್ರೇಮ
ಇದು ಕೌರವ ಪಾಂಡವರ ಪಗಡೆ
ಕುತಂತ್ರ ಕುಟಿಲ ನೀತಿ
ಲಕ್ಷ ಕೋಟಿ ವಹಿವಾಟು
ಹರಿದು ಬರುವ ಜಾಹಿರಾತು
ಉದ್ಯಮಿ ಕಳ್ಳರು ಲೂಟಿಕೋರರು
ಜನರಿಗೆ ಉದ್ದೀಪನ ಮದ್ದು
ಜನ ಮರುಳೋ ಜಾತ್ರೆ...
ಕವನ
ಕಾಡು ಬೆಳೆಸಿ ನಾಡು ಉಳಿಸಿ...
( ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು)
ಹಸಿರೇ ಉಸಿರು ಉಸಿರೇ ಹೆಸರು
ಮಳೆಯಿoದ ಬೆಳೆ, ಬೆಳೆಯಿoದ ಪೈರು
ಪ್ರಕೃತಿಯ ಮಡಿಲಲಿ ನಿತ್ಯ ಹಸಿರ ತೇರು
ಬಾನೆತ್ತರೆಕ್ಕೆ ಬೆಳೆಸಿ ಅಮೃತದ ಕಲ್ಪತರುಸುಂದರ ಪ್ರಕೃತಿಯು ಮನಸನು ಸೆಳೆಯುವುದು
ಭಗವಂತ ನೀಡಿದ ನಿಸರ್ಗ ಧಾಮವಿದು
ಎಷ್ಟು ಇಂಪು ಮುಂಜಾನೆ ಕೋಗಿಲೆ ಕೂಗುವುದು
ಮಯೂರಿಯ ನೃತ್ಯ ನೋಡಲು ಎರಡು ಕಣ್ಣು...
ಕವನ
ಬಾ ಮಗು ಮರಳಿ ಶಾಲೆಗೆ
ಬಾ ಮಗು ಶಾಲೆಗೆ
ಮರಳಿ ಬಾ ಜ್ಞಾನ ದೇಗುಲಕೆ
ಭರವಸೆಯ ಹೊತ್ತು
ಮಾಡಿಕೋ ತಿಳಿವ ಬಯಕೆ ಸ್ವತ್ತು.ಅರಿವಿನ ಅರಮನೆಗೆ
ಅಕ್ಷರದ ಸಿರಿಯ ಮುಡಿಗೆ
ಹೊಸತನದ ಹುಡುಕಾಟಕೆ
ಭವಿಷ್ಯದ ಉಜ್ವಲಕೆ.ಭಾಷಾಭಿಮಾನ ಪಸರಿಸಲು
ಜ್ಞಾನ ದೀವಿಗೆ ಹೊತ್ತಿಸಲು
ಪರಿಸರವ ಉಳಿಸೋ ತವಕದಿ
ಕೂಡಿ ಕಳೆವ ಲೆಕ್ಕಾಚಾರದಿ.ನಗುವಿನ ಕಲರವವು
ಅನ್ವೇಷಣೆಯ ಆಲಿಂಗನವು
ಸೃಷ್ಟಿ ದೃಷ್ಟಿಯ ಕೌತುಕ
ಸಾಮ್ಯತೆ ಭಿನ್ನತೆ ರೋಚಕ .ಮನೆ ಮನವ ಬೆಳಗು
ಸಮಾಜದ ಮೆರಗು
ಓದಿ ಬರೆದು ಜಾಣನಾಗಲು
ಮೌಢ್ಯತೆಯಿಂದ ದೂರವಾಗಲು.ಬೇಕೇ ಬೇಕು...
ಕವನ
ನಿಮ್ಮೂರ ಹಾದಿ ಬದಿಯಾಗ
ಬಾಳೆ ತಲಿಬಾಗ್ಯಾವೆ ನೆಲ್ಲು ತಲಿತೂಗ್ಯಾವೆ
ತೆಂಗು ಕೈಮಾಡಿ ಕರೆದಾವೆ
ತೆಂಗು ಕೈಮಾಡಿ ಕರೆದಾವೆ - ಏ ಗೆಳತಿ
ನಿಮ್ಮೂರ ಹಾದಿ ಬದಿಯಾಗನಿಂಬೆ ಹಣ್ಣಾಗ್ಯಾವೆ ತೊಂಡೆ ಕೆಂಪಾಗ್ಯಾವೆ
ದಾಳಿಂಬೆ ಹಣ್ಣು ಬಿರಿದಾವೆ
ದಾಳಿಂಬೆ ಹಣ್ಣು ಬಿರಿದಾವೆ - ಏ ಗೆಳತಿ
ನಿಮ್ಮೂರ ಹಾದಿ ಬದಿಯಾಗನವಿಲು ಕುಣಿದಾಡ್ಯಾವೆ ಗಿಣಿಯು ನಲಿದಾಡ್ಯಾವೆ
ಕೋಗಿಲೆ ಹಾಡು ಹಾಡ್ಯಾವೆ
ಕೋಗಿಲೆ ಹಾಡು ಹಾಡ್ಯಾವೆ - ಏ ಗೆಳತಿ
ನಿಮ್ಮೂರ ಹಾದಿ ಬದಿಯಾಗಚಿಗರೆಗಳು...
ಕವನ
ಸಮರದ ಮಾತು
ಅದೆಷ್ಟು ಇವೆ ನಿನ್ನ ಮಾತಿನ
ಸಮರದ ಬಾಣಗಳು
ಎದೆಯ ಗುಂಡಿಗೆಯನು
ಸೀಳಿ ನಿಂತಿವೆವೀರ ಪರಾಕ್ರಮದ
ಕೂಸೂ ನಾನಲ್ಲ
ನಿನ್ನ ಜೊತೆ ಹೋರಾಡಿ
ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ
ಕಿತ್ತು ಕೊಂಡ
ವೀರ ಯೋಧ
ಮಾತಿನ ಸಮರಾಭ್ಯಾಸ
ನಾನು ಕಲಿತೇ ಇಲ್ಲಕಲಿಸುವಳು
ಮಾತೃ ತನಯದ ತಾಯಿ
ನಾನು
ನಿನ್ನ ಅಂತರಂಗದ
ಒಳಗಿನ ಹೋರಾಟಕೆ
ನಾನಿಂದು ಬಲಿಪಶು ಆದೆಬಾಣಗಳು ನಾಟಿವೆ
ಸಮರ ದೋಣಿಯಲಿ
ಹೊತ್ತು ನಡೆಯಬೇಕಾಗಿದೆ
ಇರುಳಾದರೇನು ?
ಹಗಲಾದರೇನು ?ಕಿತ್ತು ಹೋರಾಡುವೆ
ಬೀಸಿ ಬರುವ ಮಾತಿನ
ಬಾಣಗಳ
ನಿನ್ನದೇ ಮಾತಿನ
ಸಮರದ ರಣಾಂಗಣದಲ್ಲಿ
ವೀರ ಮರಣ...
ಕವನ
ಮಳೆರಾಯ
ಇಳೆಯನರಸಿ ಬಾರೋ
ಧರೆಯ ಧಗೆಯ ತಣಿಸಿ
ವರ್ಷಧಾರೆ ಎರೆದು
ತಂಪನೆರೆದು ಸಂತೈಸಿ.ಚಿಗುರಿ ಬೆಳೆದು
ನಗೆಯ ತುಂಬಿ
ಬವಣೆ ನೀಗಿ
ಚೈತನ್ಯ ತುಂಬಿ.ಬಂಜೆ ಭೂಮಿ ಕಳೆದು
ಮಂದಹಾಸ ಬೀರಿ
ಸಂಕುಲವ ಪೊರೆದು
ವ್ಯಾಕುಲತೆ ಮೀರಿ.ಹಸಿರ ರಾಶಿ ಹೊತ್ತು
ಹಸಿವ ತೀರಿಸಿ
ಬಲವ ಪೂರೈಸಿ
ಛಲದ ಬದುಕಿಗೆ ನಾಂದಿ ಹಾಡಿ.ಭರವಸೆ ಕೊಟ್ಟು
ನವ ಚೇತನ ಉತ್ಸವದಿ
ಮುಗಿಲ ಮಲ್ಲಿಗೆ ಕಂಪು ಹರಸಿ
ಹನಿಯ ಚೆಲ್ಲಿದೆ.ಮೊಳಕೆ ತರಿಸಿ
ಜಲವ ಹರಿಸಿ
ಒಲವ ರಂಗು ತಂದಿದೆ
ಬಾಳ ಬೆಳಕಿಗೆ ಮುನ್ನುಡಿಯಾಗುತ.ರೇಷ್ಮಾ ಕಂದಕೂರ
ಕವನ
ಬುದ್ಧನೇಕೆ ನಕ್ಕ
----------------------------
ಬುದ್ಧನೇಕೆ ನಕ್ಕ
ಪಾಪ ಅವನಿಗೂ
ಹೆಂಡಿರು ಮಕ್ಕಳು
ಬಿಟ್ಟು ಹೊರಟ
ಕಾಡಿಗೆ
ಅನುಭವ ಅರಿವಿನ
ಹುಡುಕಾಟಸತ್ಯ ಸಮತೆ ಶಾಂತಿ
ಪ್ರೀತಿ ಅವನ ಮಂತ್ರ
ಬೋಧಿ ವೃಕ್ಷದ ಕೆಳಗೆ
ಜ್ಞಾನ ದೀವಿಗೆ ಜ್ಯೋತಿ
ಅಹಿಂಸಾ ಮೂರ್ತಿ
ವಿಶ್ವಕ್ಕೆ ಪಸರಿಸಿದನು
ಮಾನವ ಪ್ರೀತಿಪೋಖ್ರಾನ್ ನಲ್ಲಿ
ಅಣು ಬಾಂಬ್ ಪರೀಕ್ಷೆ
ಕಂದಹಾರದಲ್ಲಿ ಉಗ್ರರ
ಅಟ್ಟಹಾಸ ದಾಳಿ
ತುಂಡಾಗಿ ಬಿದ್ದ ಬುದ್ಧ
ಸಮರಸದ ತೋಟದಲ್ಲಿ
ರಕ್ತ ಕೋಡಿ ಹರಿಯಿತುಭಾಷಣ ಲೇಖನಕೆ
ವಸ್ತುವಾದ ಸಿದ್ಧಾರ್ಥ
ಬುದ್ಧ ಶರಣಂ ಗಚ್ಛಾಮಿ
ಕೆಡವಿದರು ಸನಾತನಿಗಳು
ವಿಹಾರ ಬುದ್ಧ ಮೂರ್ತಿ
ಭಾರತ ಬಿಟ್ಟ ಮಂದಹಾಸ
ಬುದ್ಧನೇಕೆ ನಕ್ಕ ನನ್ನ...
ಕವನ
(ಇದು ಚೀನಾ ಭಾರತ ಯುದ್ಧದ ಸಮಯದಲ್ಲಿ ಬರೆದ ಕವನ. ೧೯೬೪ ರಲ್ಲಿ ಬೆಂಗಳೂರಿನಿಂದ ಪ್ರಕಟಗೊಂಡ "ಸಮರ ಕವನ ಸಂಕಲನ"ದಲ್ಲಿ ಈ ಕವನ ಪ್ರಕಟವಾಗಿತ್ತು. ಈಗಿನ ಸಂದರ್ಭಕ್ಕೂ ಇದು ಅಷ್ಟೇ ಪ್ರಸ್ತುತ)ಆಹ್ವಾನ
*******
ಆಹ್ವಾನಿಸು ರಣಚಂಡಿಯ ಓ ಭಾರತಪುತ್ರ
ಸಮ್ಮಾನಿಸು ಬಿಸಿರಕ್ತದಿ ಝಳಪಿಸಿ ನೀ ಶಸ್ತ್ರ
ಆ ಉತ್ತರದೆತ್ತರದಲಿ ಬಂದೊತ್ತಿರೆ ಸೈನ್ಯ
ಅದಕುತ್ತರ ನೀಡಲು ನಿನಗೇತಕೆ ಕಾರುಣ್ಯ?
ಗುಡುಗಲಿ ಗುಂಡಿನ ಅಬ್ಬರ ನಡುಗಲಿ ಎದೆಗೂಡು
ತುಡುಕಿದ...
ಕವನ
ಸತ್ಯವನ್ನು ಹೇಳುತ್ತೇವೆ
ಕವನಗಳು
ಬುಲೆಟ್ ತಡೆದು
ನಿಲ್ಲಿಸಲಾರವು
ಕಾದಂಬರಿ
ಬಾಂಬ್ ಗಳನ್ನು
ನಿಷ್ಕ್ರಿಯ ಮಾಡುವದಿಲ್ಲ
ಕಥೆಗಳು ದೊಣ್ಣೆಯನ್ನು
ಮುರಿಯಲಾರವು
ಲಘು ಸಾಹಿತ್ಯ
ಖಡ್ಗ ಕಠಾರಿ
ಕೊಲೆ ಹಿಂಸೆ
ನಿಯಂತ್ರಣ ಮಾಡಲಾರವು.
ಪೂಜೆ ಪ್ರಾರ್ಥನೆ
ಯುದ್ಧವನ್ನು ನಿಲ್ಲಿಸಲಾರವು
ನಾವು ಸತ್ಯವನ್ನು ಹೇಳುತ್ತೇವೆ.
ಸಾಯುವ ಮುನ್ನ
ಸುಳ್ಳು ಹೇಳುವವರ
ಮೋಸ ಮಾಡಿದವರ
ಧರ್ಮದ ಹೆಸರಿನಲ್ಲಿ
ಸುಲಿಗೆ ಮಾಡುವವರ
ಯುದ್ಧ ರಕ್ತ ಬೀಜಾಸುರರ
ಹೆಸರು ಹೇಳುತ್ತೇವೆ.
ಹುಟ್ಟಿ ಬರಲಿ
ಚೇಗುವಾರ ಭಗತ್
ಬುದ್ಧ ಮತ್ತೆ ನಗಲಿ
ಬಸವ ಭಾರತ ಗೆಲ್ಲಲಿ
ಇಂಕ್ವಿಲಾಬ್ ಜಿಂದಾಬಾದ್
----------------------------------
ಡಾ.ಶಶಿಕಾಂತ ಪಟ್ಟಣ ರಾಮದುರ್ಗ
ಕವನ
ಕವನ : ಅಮ್ಮಾ ನೀ ಮಾನವೀಯತೆಗೆ ಮಾದರಿ
ಅಮ್ಮಾ ನೀ ಮಾನವೀಯತೆಗೆ ಮಾದರಿಅಮ್ಮಾ , ನೀ ಸುಖ ದುಃಖಗಳ ಗಣಿ,
ಬಾಲ್ಯದಲ್ಲೇ ತಾಯಿಯಿಲ್ಲದ ತಬ್ಬಲಿಯಾಗಿ
ತುಂಬಿದ ಅವಿಭಕ್ತ ಕುಟುಂಬವ ಸೇರಿ
ಎಲ್ಲರ ಸಂತೈಸುವುದರಲ್ಲೇ ಅರ್ಧ ಬದುಕು ಕಳೆದ,
ಗೃಹಿಣಿಯಾಗಿ ಅರ್ಧ ದಶಕ ಕಳೆದರೂ ಮಕ್ಕಳಾಗಲಿಲ್ಲ ಎಂಬ
ಜನರ ಚುಚ್ಚುಮಾತ ಹೇಗೆ ಸಹಿಸಿದೆಯಮ್ಮ ?ಅರ್ಧ ದಶಕದ ನಂತರ ನಾ ಜನಿಸಿದಾಗ
ಗಂಡಾದರೇನು ಕಾಲು ಸರಿಯಿಲ್ಲ
ಎಂಬ ಚುಚ್ಚು ಮಾತುಗಳ ಹೇಗೆ ಸಹಿಸಿದೆಯಮ್ಮ ?
ಮಗುವಾದ ಸಂತಸ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



