ಕವನ

ಕವನ : ಮನದ ಮಲ್ಲಿಗೆ

ಮನದ ಮಲ್ಲಿಗೆ°°°°°°° °°°°°°°°° ನಾನು ಪಯಣಿಗ ಅವಳೂ ಪಯಣಿಗಳು ಒಂದೇ ಬಸ್ಸು, ಕೆಲವು ಗಂಟೆ ಆದರೂ .... ಜೋಡಿಯ ಮೋಹ ನಡುವೆ ಮಿಲನ ಪ್ರೀತಿಯ ನೇಹಕೆಲವು ಗಳಿಗೆ ಕೂಡಿ ಬೆರೆತು ಸಂಸಾರ ಮಾಡಿದೆವು ಎಂಬ ಭಾವ ಮಾತುಕತೆಯ ಸಲಿಗೆ ತಾನೆ ಬೆಳೆದು ಜೀವದಂತೆ ನಲಿದೆವುನಾನು ಯಾರೊ ಅವಳು ಯಾರೊ! ಜಗವ ಮರೆಯುವ ಜೀವ ಜೀವ ಬೆರೆಯಿತು ಕ್ಷಣ ಕ್ಷಣಕೆ ಮನಕೆ ಮನವು ಸೇರಿಕೊಂಡು ಅನ್ಯ ಜಗದ ಕಣ್ಣ ತೆರೆದಿತುಅವಳು ಬಂದಳೆಲ್ಲಿಂದ ನಾನು ಹೊರಟಿರುವುದೆಲ್ಲಿಗೆ ತುದಿಯಿಲ್ಲ, ಮೊದಲಿಲ್ಲ, ಪಯಣದ ನಡುವೆ ಒಗಟು ಬಿಡಿಸದ ಬೆಳಕ ಕಣ್ಣು ಕತ್ತಲುಇಳಿಯುವ ಹೊತ್ತು ಬಂದಿತು ಲವಲವಿಕೆ ನಕ್ಕಿತು ಹುಚ್ಚು ಲಹರಿ ಉಕ್ಕಿತು ಅವಳ...... ಮೊಗ ಮಾತ್ರ ಮನ...

ಕವನ : ಕರಾಳ ದಿನದ ನೆನಪು

ಕರಾಳ ದಿನದ ನೆನಪುಪುಲ್ವಾಮಾ ದಾಳಿ ಆತ್ಮಾಹುತಿ ಸ್ಫೋಟದ ಸುಳಿ ನಲುಗಿದೆ ಭಾರತಾಂಬೆಯ ಸದನ ಇದೇ ಕಣ್ಣೀರ ಕೋಡಿಯ ವ್ಯಾಖ್ಯಾನ.ಭಯೋತ್ಪಾದಕರ ಅಟ್ಟಹಾಸ ಭೀಕರ ಮಾರಣಾಂತಿಕ ಅಪಾರ ದೇಶದ ಚಿತ್ರಣ ಬದಲಿಸಿ ವೀರ ಮರಣ ಎಂದೆಂದಿಗೂ ಸ್ಮರಿಸಿ.ಪ್ರತೀಕಾರದ ಛಾಯೆ ದಿಗ್ಭ್ರಮೆ ಮೂಡಿಸಿ ಆಕ್ರಮಣದ ಪರಿಗೆ ಕಂಪಿಸಿದೆ ಮಣ್ಣ ಕಣ ಕಣ.ಅಟ್ಟಹಾಸದ ಮೆರವಣಿಗೆ ಆರದ ಗಾಯ ಇತಿಹಾಸ ಪುಟದಿ ಕರಾಳ ದಿನದ ನೆನಪು.ದುಃಖ ಉಮ್ಮಳಿಸಿದೆ ಬಿಸಿ ರಕ್ತ ಜಿನುಗುತಿದೆ ಆಗುಂತಕರ ದಾಳಿಗೆ ಮರುಗುತಿದೆ ಜನಮನ.ದೇಶ ಭಕ್ತಿ ಪುಟಿದಿದೆ ಹರಿದ ರಕ್ತದ ಕೋಡಿಗೆ ಮಡಿದ...

ಬಸವಣ್ಣನ ಕವನಗಳು

ಬಸವಣ್ಣನೆಂದರೆಬಸವಣ್ಣನೆಂದರೆ ಸಾಕು . ನಾವು ಭಾವುಕರಾಗುತ್ತೇವೆ . ಅವನ ಪುತ್ಥಳಿಗೆ ಮಾಲೆ ಹಾಕಿ ದಿನವಿಡೀ ಕುಣಿಯುತ್ತೇವೆ. ಶರಣರ ಸೂತಕದಲ್ಲಿ ವಚನ ಹೊತ್ತು ಮೆರೆಯುತ್ತೇವೆ. ಅವರ ಅಂಕಿತ ತಿದ್ದಿ ನಾವು ದೊಡ್ಡವರಾಗುತ್ತೇವೆ. ಗುರು ವಿರಕ್ತರ ಪಲ್ಲಕ್ಕಿ ಹೊತ್ತು ಕಾದಾಡುತ್ತೆವೆ . ಬಸವನ ಕಂಚಿನ ಮೂರ್ತಿಗೆ ಕೋಟಿ ಕೋಟಿ ಸುರಿಯುತ್ತೇವೆ. ಜಾತ್ರೆ ಹಬ್ಬ ಮೇಳ ಉತ್ಸವದಲ್ಲಿ . ಚಂದಾ ವಸೂಲಿ ಹಪ್ತಾ ಎತ್ತುತ್ತೇವೆ. ಅಕ್ಕ ಮಾತೆ ಸ್ವಾಮಿ ಶರಣರ ಅಣತಿಯಂತೆ ದುಡ್ಡು ಮಾಡುತ್ತೇವೆ. ಮಠದೊಳಿಗಿನ ಬೆಕ್ಕು ಒಮ್ಮೊಮ್ಮೆ ಇಲಿಯ ಕಂಡು ನೆಗೆಯುತ್ತವೆ ಸುದ್ದಿಯಾಗುತ್ತವೆ. ವರ್ಷವಿಡಿ...

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು.ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ ಹೊತ್ತಿಕೊಂಡ ಬೆಂಕಿ. ಆದರೂ ನಾನು ಸೋಲಲಿಲ್ಲ; ಬಾಳಿನ ಹೊಗೆಯಿಂದ ಕರಗಿ ಹೋಗದೇ, ಹೆಮ್ಮೆಯಿಂದ ಉರಿಯುತ್ತಲೇ ಇದ್ದೆ.ನಾನು ಪರಿತಾಪದ ನೆರಳು, ನನ್ನ ಜೀವನವೇ ನೋವಿನ ದೀಪಮಾಲಿಕೆ. ನಾನೊಬ್ಬ ಪ್ರಯೋಗದ ಹೆಣ್ಣು, ಅಪಮಾನಗಳ ಪಥವನ್ನೇ ನಿರಂತರವಾಗಿ ಹಾದುಹೋಗಿದ ಕವಚಧಾರಿ. ನನ್ನ...

ಕವನ : ಜಾತಿ ಸಂತಿ

ಜಾತಿ ಸಂತಿ !  ಜಾತಿ ಹೆಂಗೈತಿ ಅಂದ್ರ ನನ್ನ ಹೆಸರಿನಾಗ ಐತಿ ವಾಸಿಸೋ ಮನೆಯಲ್ಲಿ ಐತಿ ನಾ ಕುಡಿಯೋ ನೀರಾಗೈತಿ ನಾ ತೊಡೋ ಬಟ್ಟೆಗೈತಿ ಮತ್ತ ಅದ ರಾಡಿ ಕಟ್ಟಬೇಕು ಯಾವಾಗ ವಸುದೇವ ಕುಟುಂಬದ ಜೋಡಿ ! ಮತ್ತ ನೀ ಕೇಳು‌ ಜಾತಿ‌ ಹೆಂಗೈತಿ ‌, ಹೆಂಗೈತಿ ಅಂದ್ರ ನಾ ಹುಟ್ಟೋ ಗರ್ಭದಾಗೈತಿ ನನ್ನೊಳಗ ಹರಿಯ ರಕ್ತದಗೈತಿ ನಮ್ಮ ಮನೆಮಂದಿಯೊಳಗೈತಿ ಯಾವುದೈತಿ ಅಂದ್ರ...

ಕವನ : ನಿನ್ನೊಲವ ಕಾಯ್ದು

ಹಾಗೆ....ಸುಮ್ಮನೆ ಒಂದು ಕವಿತೆ. ನಿನ್ನೊಲವ ಕಾಯ್ದು •••••••••••••••••••••••••• ನಾವಂದುಕೊಂಡ ಆ...ರಾತ್ರಿ ಬರಲೇ ಇಲ್ಲ., ಮನದ ಮೂಲೆಯ ಮುತ್ತುಗಳು ನಲುಗಿದವು. ಒಣಗಿದ ಎಲೆಗಳಂತೆ ನರಳುತ ಉರುಳಾಡುತಿವೆ ಸಪ್ಪಳವಿದ್ದೂ ಗಪ್ಪನೆ ಮಲಗುತಿವೆ ಕಂಗಳು. ತಿಂಗಳ ಏಕಾಂತದಲಿ ಚಂದ್ರನು ಕಾಡಿದ ತಂಗಾಳಿ ಸ್ಪರ್ಶದಿ ಹರುಷ ಕಸಿದು ಮರೆಯಲಿ ನಗತೊಡಗಿದ. ಕಲೆಯಿಲ್ಲ,ಗಾಯವಿಲ್ಲ, ನೀಡಲೇಗೆ...ದೂರು...? ಹಂಬಲಿಸಿದ ವಿರಹವು, ಅಲೆಗಳ ಜೊತೆ ಕೈ ಜೋಡಿಸಿ, ದುಃಖದಲ್ಲೂ ಸುಖಿಸುತಿದೆ. ತನಗೆ....ತಾನೆ.... ನಗುತಿದೆ ಹುಚ್ಚೋ....ಪೆಚ್ಚೋ..? ನಾವಂದುಕೊಂಡ ಆ....ರಾತ್ರಿ ಬರಲಿಲ್ಲ ಹೃದಯದ ಬಾಗಿಲು ತೆರೆಯಲಿಲ್ಲ., ಎದೆಗಿರಿಯುವ ನೆನಪುಗಳಿಗೆ ಆಕಳಿಕೆ ಬರಲಿಲ್ಲ., ಸಂತೆಯ ಗದ್ದಲದಲಿ ಉಸಿರು ಆರ್ಭಟಿಸಿದರೂ, ಯಾರಿಗೂ ಕೇಳುತ್ತಿಲ್ಲ., ಕಣ್ಣೊಳಗಿನ ನೀರಿಗೆ ದಣಿವಾಗಿದೆ. ಆ ರಾತ್ರಿ ಬರಲೇ ಇಲ್ಲ., °°°°°°°°°°°°°°°°°°° ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಕವನ : ಗರತಿಯ ಹಾಡು

ಜನಪದ ಶೈಲಿಯ ಗರತಿಯ ಹಾಡುಮುಂಜಾನೆ ಏಳುತ್ತ ಮನೆ ದೇವ್ರ ನೆನೆಯುತ್ತ ಅಂಗಳದಿ ರಂಗೋಲಿ ಬಿಡಿಸ್ಯಾಳ ಅಂಗಳದಿ ರಂಗೋಲಿ ಬಿಡಿಸ್ಯಾಳ ಮಾದೇವಿ ಮನದಾಗ ಮಾದೇವನ ನೆನೆದಾಳ||ಪತಿಯ ಪ್ರಾಣ ಪದಕ ವಂಶದ ಕುಲತಿಲಕ ಮಕ್ಕಳಿಗೆ ಮಾಣಿಕ್ಯ ಮಾದೇವಿ ಮಕ್ಕಳಿಗೆ ಮಾಣಿಕ್ಯ ಆಗ್ಯಾಳ ಮಾದೇವಿ ಹಿರಿಯರಿಗೆ ತಲೆಬಾಗಿ ನಡೆದಾಳ||ನೆರೆಹೊರೆಗೆ ಬೇಕಾಗಿ ಬಡವರಿಗೆ ನೆರವಾಗಿ ಮನೆಯೆಂಬ ಮಂದಿರಕ್ಕೆ ಬೆಳಕಾಗಿ ಮನೆಯೆಂಬ ಮಂದಿರಕ್ಕೆ ಬೆಳಕಾಗಿ ಮಾದೇವಿ ಗುರುವಿಗೆ ಶರಣಾಗಿ ನಡೆದಾಳ||ಮನೆ ಕೆಲಸಕ್ಕೂ ಸೈ ಇವಳು ಹೊರ ದುಡಿಮೆ ಬಲ್ಲವಳು ಕಾಯಕವೇ ಕೈಲಾಸ ಅಂತಾಳ ಕಾಯಕವೇ ಕೈಲಾಸ ಅಂತಾಳ ಮಾದೇವಿ ಕುಲಕೆ...

ಕವನ : ಬೇಕೆನಗೆ ಸಾಂಗತ್ಯ

ಬೇಕೆನಗೆ ಸಾಂಗತ್ಯನೀ ಬಂದ ಗಳಿಗೆ ಸಂಭ್ರಮದ ಹೋಳಿಗೆನೋವೆಲ್ಲಾ ಮರೆಸಿ ಕರುಳ ಸಂಬಂಧ ಆದರಿಸಿ.ನನ್ನದ್ದೆಲ್ಲವ ತೊರೆದು ನಿನ್ನಲ್ಲಿ ನಾ ಬೆರೆತು ಸ್ವರ್ಗ ಧರೆಗಿಳಿದಂತೆ ನಿನ್ನಾರೈಕೆಯ ಹೆಗಲ ಹೊತ್ತು.ಬೆಳೆಸಿದೆ ಬಾಂಧವ್ಯ ಬೇಕು ಬೇಡಿಕೆಗಳ ಪೂರೈಸಿ ಉರುಳುತಿದೆ ದಿನಮಾನ ನಾನೇನಾ ಎಂಬ ಅನುಮಾನ.ದಡ ಸೇರಿಸುವ ಹೊಣೆ ಮುಡಿಗೇರಿದ ಬವಣೆ ಹಗಲು ಇರುಳಿನ ಪರಿವೆಯಿಲ್ಲ ಮುಗುಳು ನಗೆಯ ಮುನಿಸೆಲ್ಲ.ಬೆಳೆದು ನೀನಾದೆ ಹೆಮ್ಮರ ಮೈದಳೆದ ಹೊಸ ಆಶಯದಿ ಬರಿದು ಕಾನನ ನಾನು ಮುಕ್ಕಿ ತಿನ್ನುತಿಹ ಒಂಟಿತನ.ಕೇಳುವವರಿಲ್ಲದ ಬೆಂಗಾಡು ಮೊದಲಿತ್ತಿದು ನಂದನ ಕೈಚೆಲ್ಲಿದೆ ನಿರ್ಲಕ್ಷಿಸಿ ನೇವರಿಸುವರಿಲ್ಲದ ಕೊರಗು.ಬೇರೇನೂ...

ಕವನ : ಓ ಬಾಪು

ಓ ಬಾಪುಜಗದ ಬೆಳಕೇ ಸದ್ದಿಲ್ಲದಂತೆ ಸರಿದು ಸರಹದ್ದಿಗೂ ಮೀರಿ ದಿನಕರ ಮಬ್ಬಿಗೆ ಸರಿಸಿ ಕೊನೆಯ ಉಸಿರೆಳೆದಿದೆ.ಮಹಾತ್ಮನೆಂಬ ವ್ಯಕ್ತಿತ್ವ ಸತ್ಯ ಪಥದ ಸಾಕಾರ ಮೂರ್ತಿ ವ್ಯತಿರಿಕ್ತದಿ ನಂದಿದೆ ಪರಿತ್ಯಾಗಿಯಾಗಿ ನಡೆದು ಕರುಣೆ ಹೇಳ ಹೆಸರಿಲ್ಲದಂತಾಗಿದೆ.ಭಾರತದ ದಿವ್ಯ ಜ್ಯೋತಿ ಸ್ವಾತಂತ್ರ್ಯದ ಹರಿಕಾರ ಚಳವಳಿಯ ನೇತಾರ ನಿನಗೆ ಹತ್ಯೆಯ ಬಳುವಳಿ ಏಕಿಂತಹ ಘೋರ.ವಿಶ್ವ ಶಾಂತಿಗೆ ರಕ್ತದೋಕುಳಿ ಹರಿಸಿ ಬೆರಗು ಮೂಡಿಸಿದಾತನಿಗೆ ಚಿರನಿದ್ರೆಯ ಬಾಗಿನವೇ ಕಳವಳಕಾರಿ ಸುದ್ದಿಯ ನೇಮ.ಓ ಬಾಪು ನಿನಗಾರು ಸರಿಸಾಟಿ ಉಪವಾಸದ ನಡಿಗೆ ಸರಳ ಸುವಿಚಾರದ ವ್ಯಕ್ತಿಗೆ ದುರುಳತನದಿ ಹರಿತವೇ.ಮತ್ತೊಮ್ಮೆ ಬಂದು ಬಿಡು ಮತ್ತಿನ ಜನಕೆ ಪಾಠ ಕಲಿಸಿ ಮುತ್ತಿನ...

ಕವನ : ಶುಭೋದಯ

ಶುಭೋದಯಚಂದನವನದ ಶುಭೋದಯದಲಿ ಮೂಡಿಬಂದಿರಿ ನೀವು ಅಗಾಧ ವ್ಯಕ್ತಿತ್ವದ ಮೇರುಪರ್ವತದ ನಿಲುವಿನಲಿ ವಚನದಾರ್ಶನಿಕರಾಗಿ ಎಲ್ಲರ ಮನ ಮುಟ್ಟಿದಿರಿ ಇಂದುತಿಳಿಹೇಳಿದಿರಿ ಔಷಧಿ ಆರೋಗ್ಯ ಕೃಷಿಯ ಕುರಿತು ಮನನಮಾಡಿಸಿದಿರಿ ವಚನಸಾರದ ಒಳಾರ್ಥಗಳ ಹೆಮ್ಮೆಯಿಂದ ಹಂಚಿಕೊಂಡಿರಿ ಅಕ್ಕನ ಅರಿವಿನ ಉಪನ್ಯಾಸಗಳ ಅದಕ್ಕಾಗಿ ದುಡಿವವರ ಹೆಸರುಗಳಕವಿಯಾಗಿ ಕುವೆಂಪು ಅವರ ನೆನಪಿಸುತ್ತಾ ನಿಸರ್ಗಪ್ರೇಮಿಯಾಗಿ ಪ್ರಾಣಿ -ಪಕ್ಷಿ ಸಂಕುಲವನ್ನು ಪ್ರೀತಿಸುವುದ ಅರುಹಿದಿರಿಭಾವುಕರಾದಿರಿ ಅವ್ವನ ಮಾತೃ ಹೃದಯವನ್ನು ತಂದೆಯ ಕಳಕಳಿಯ ನೆನೆದು ಅಭಿಮಾನದಿಂದ ಹೇಳಿದಿರಿ ಧರ್ಮಪತ್ನಿಯ ಸಹಕಾರ ಮನೋಭಾವವಮೂಡಿಬಂದಿರಿ ಶುಭೋದಯದಲಿ ಇಂದು ನಮ್ಮೆಲ್ಲರ ಹೆಮ್ಮೆಯ ಮಾರ್ಗದರ್ಶಕರಾಗಿ ಬುದ್ಧ -ಬಸವ - ಅಂಬೇಡ್ಕರರ ಶರಣತತ್ವದ ನಿಜವಾದ ಹರಿಕಾರರಾಗಿಸುಧಾ ಪಾಟೀಲ ಬೆಳಗಾವಿ
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group