ಕವನ
ಶಿರದ ಮೇಲೆ ಗಂಗೆಶಿರದ ಮೇಲೆ ಗಂಗೆ
ಶರೀರದೊಳಗೆ ಗೌರಿ
ಕೊರಳ ಸುತ್ತ ನಾಗೇಶ್ವರ
ಮಹಾ ಮಹಿಮೆ ಪರಮೇಶ್ವರಜಡೆಯೊಳಗೆ ಗಂಗೆ
ಗಂಗಾಧರ
ಅರ್ಧಾಂಗಿಯ ರೂಪ
ಅರ್ಧನಾರೀಶ್ವರಗಂಗಾ ಪ್ರಿಯ
ಅಭಿಷೇಕ ಪ್ರಿಯ
ಅನ್ನಪೂರ್ಣೇಶ್ವರಿಯ
ಪ್ರಾಣವಲ್ಲಭನಿನಗ್ಯಾರು ಸಾಟಿ
ಪರಮೇಶ್ವರ
ಮುಕ್ಕಣ್ಣ ನಿನಗೆ ಕೋಟಿ
ನಮಸ್ಕಾರಬೇಗ ಒಲಿಯುವ
ಸದಾಶಿವ
ಪ್ರಳಯಾಂತಕ
ಕಾಳ ಭೈರವಮೋಕ್ಷಕಾರಕ
ಕಾಶಿ ವಿಶ್ವೇಶ್ವರ
ಕೈ ಮುಗಿವೆ
ರಾಮೇಶ್ವರಶ್ರೀಮತಿ ಪಾರ್ವತಿ ದೇವಿ.ಎಂ ತುಪ್ಪದ ಬೆಳಗಾವಿ
ಕವನ
ಶೃಂಗೇರಿ ಶಾರದೆಶೃಂಗೇರಿ ಶಾರದೆ
ನಾ ಕೈ ಮುಗಿದೆ
ವಿದ್ಯೆ ವಿಶಾರದೆ
ಸಂಗೀತ ನಿನ್ನದೆಬಯಕೆ ಒಂದೇ
ನೀ ಹರಸಂದೆ
ನಿನ್ನ ಕೃಪೆ ಇರದೆ
ವಿದ್ಯೆ ಒಲಿಯುವದೆಸಾಹಿತ್ಯ ಸುಧೆ
ಸಂಗೀತ ಸುರಸುಧೆ
ವಿಜ್ಞಾನ ಜ್ಞಾನಸುಧೆ
ಗಣಿತ ಗುಣಾತೀತ ಸುಧೆನಿನ್ನ ಬಣ್ಣಿಸಲು
ಗುಣ ಗುಣಿಸಲು
ಧನಾತ್ಮಕ ಗುಣವಿರಲು
ಶೂನ್ಯವೆ ಇಲ್ಲ ನಿನ್ನೊಳುಬ್ರಹ್ಮಾಂಡ ವಿದ್ಯೆ
ನಿನ್ನೊಳು
ನಾವೆಲ್ಲ ವಿದ್ಯೆ
ಕಲಿಯಲುಕೋಟಿ ಕೋಟಿ
ಜನ್ಮಜನ್ಮಾಂತರಕ್ಕೂ
ಕಲಿಯಲು ಆಗ್ಬೇಕು
ಉತ್ಸುಕ ವಿದ್ಯೆ ಕಲಿಯಲುಅಗೋಚರ ನಿಗೂಢ
ವಿದ್ಯೆ ಬುದ್ಧಿ ಅವಘಢ
ಮಾಡದು ವಿದ್ವತ್ತು
ವಿದ್ವಾಂಸರ ಸಂಪತ್ತುದಡ್ಡ ನಿಗೆ ಸಣ್ಣ ವಿದ್ಯೆ
ಜಾಣನಿಗೆ ದೊಡ್ಡ ವಿದ್ಯೆ
ಕೋಟಿ ವಿದ್ಯೆಯಲ್ಲಿ
ಮೇಲು...
ಕವನ
ಯೋಗದಿಂದ ದೂರ ರೋಗದಿನವೂ ಯೋಗ ಮಾಡಬೇಕು
ರೋಗದಿಂದ ದೂರ ಇರಬೇಕು
ಯೋಗ ಧ್ಯಾನದಿಂದ ಮನಸ್ಸು ಹಿಡಿತದಲ್ಲಿರುತ್ತದೆ
ಏಕಾಗ್ರತೆ ಹೆಚ್ಚಿಸುತ್ತದೆ ಶಾಂತಿ ನೆಮ್ಮದಿ ದೊರಕಿಸುತ್ತದೆ.ಯೋಗ ಮಾಡಿದರೆ ಮನಸ್ಸು ಪ್ರಫುಲ್ಲವಾಗಿರುತ್ತದೆ
ಲವಲವಿಕೆ ಇಂದಿರಲು ಸಹಾಯಮಾಡುತ್ತದೆ
ಹೊಸ ಚೈತನ್ಯ ಉಲ್ಲಾಸದ ಚಿಲುಮೆ ದೊರಕಿಸುತ್ತದೆ
ಸಹನೆ, ತಾಳ್ಮೆ, ಸೌಂದರ್ಯ ಹೆಚ್ಚಿಸುತ್ತದೆ.ಆತ್ಮಬಲ ವೃದ್ಧಿಸುವ ಶಕ್ತಿಯು ಈ ಯೋಗವು
ಯೋಗದ ಮಹತ್ವ ಅರಿತುಕೊಂಡು ನಡೆಯೋಣ
ನಿತ್ಯ ಯೋಗಸ್ತರಾಗಿ ಧ್ಯಾನಸ್ತರಾಗೋಣ
ಸುಂದರ ಜೀವನವನ್ನು ಅನುಭವಿಸೋಣ.ಅನಾರೋಗ್ಯಕ್ಕೆ ವಿದಾಯ ಹೇಳಿರಿ
ಆರೋಗ್ಯವೇ...
ಕವನ
ಗೌರವದ ಪಟ್ಟಅವರು ನನ್ನ
ಕಥೆ ಕವನಗಳ
ಸಹಿಸದಿದ್ದರೆ
ಅದು ದಡ್ಡ
ಸಮಾಜದ ಆಸಹನೆಯ
ಮುಖ್ಯ ಲಕ್ಷಣ
ನಾನು ಸಮುದಾಯವನ್ನು
ವಿವಸ್ತ್ರಗೊಳಿಸುವದಿಲ್ಲ
ಕಾರಣ ಅದು
ಈಗಾಗಲೆ ಬೆತ್ತಲಾಗಿದೆ
ಅದಕ್ಕೆ ಮಾನ ಮುಚ್ಚಲು
ಬಟ್ಟೆ ಹೊಲಿಯುತ್ತಿಲ್ಲ
ಅದು ನನ್ನ ಕಸಬೂ ಅಲ್ಲ
ಅದು ದರ್ಜಿಯ ಕೆಲಸ
ಇಲ್ಲ ವಸ್ತ್ರ ವಿನ್ಯಾಸದವನ
ಚಿಂತೆ ಆಲೋಚನೆ
ಬೆತ್ತಲು ಜಗದಲ್ಲಿ
ನಾನು ಬಟ್ಟೆ ಹಾಕಿರುವೆ
ಅವರು ನನಗೆ
ಹುಚ್ಚ ಎನ್ನುವರು
ಅದು ನನಗೆ ಗೌರವದ ಪಟ್ಟಡಾ. ಶಶಿಕಾಂತ ಪಟ್ಟಣ ರಾಮದುರ್ಗ(ಸಾದತ್ ಹಸನ್ ಮಂಟೋ ಅವರ ಗುನುಗುವ
ಮಾತು)
ಕವನ
ಏಕೆ ಮೌನವಾದರು?ಏಕೆ ಮೌನವಾದರು ?
ನಮ್ಮ ಕದನದ ಯೋಧರು
ಅವರೋ ಭ್ರಷ್ಟರು
ಅಧಿಕಾರ ಕಳೆದುಕೊಂಡರು
ಪ್ರಾಮಾಣಿಕ ಅಭಯ ಹಸ್ತಕೆ
ಮಣ್ಣು ಶಗಣಿ ಮೆತ್ತಿತು
ಅವರೋ ಸಾವಿರಾರು
ಕೋಟಿ ಲೂಟಿ ಹೊಡೆದರು
ಇವರು ನೂರು ಕೋಟಿ ಹಣ
ವರ್ಗಾಯಿಸಿದರು
ಪಾಪ ಅಧಿಕಾರಿ ಆತ್ಮ ಹತ್ಯೆ
ಪ್ರಗತಿಪರ ಸಾಹಿತಿಗಳು
ತುಟಿ ಪಿಟಕ್ ಅನ್ನಲಿಲ್ಲ
ಅವರು 40% ಕಮಿಷನ್
ನಿಗದಿ ಮಾಡಿದರು
ಪಾಪ ಇವರು ಅದಕ್ಕೆ
ಜಿ ಎಸ್ ಟಿ ಹಾಕಿ
ಮುಂದುವರೆಸಿ ಬಿಟ್ಟರು
ನಮ್ಮ ಅಕಾಡೆಮಿ ಸದಸ್ಯರು
ಜಾಣ ಮೌನಕ್ಕೆ ಜಾರಿದರು
ಅಂದು ಬೀದಿಗಿಳಿದು
ಭಾಷಣ ಮಾಡಿದವರು
ಇಂದು...
ಕವನ
ವಿಧಾನಸೌಧ ಮಳಿಗೆಯುಅವರು ಕಳ್ಳರೆಂದು ಅರಿತು
ನಾವು ನಿಮಗೆ
ಮತವ ಕೊಟ್ಟೆವು
ನೀವು ಕೊಳ್ಳೆ
ಲೂಟಿ ಹೊಡಿದಿರಿ
ಭೂಮಿ ಬಿರುಕು ಬಿಟ್ಟಿತುಅವರು ಸುಳ್ಳರು
ಎಂದು ತಿಳಿದು
ನಿಮ್ಮ ಆಯ್ಕೆಯಾಯಿತು
ಅಲ್ಲ ನೀವು ಸತ್ಯವಂತರು
ಅಲ್ಲ ಅವರು ನೀತಿವಂತರು
ವಿಧಾನಸೌಧ ಮಳಿಗೆಯುತೆರಿಗೆ ತುಡುಗು ಮಾಡಿ
ನೀವು ಭವ್ಯ ಬಂಗಲೆ
ಕಟ್ಟಿ ಕೊಂಡಿರಿ
ಹೆಸರಿಗೊಂದು ಚುನಾವಣೆ
ಪ್ರಜಾಪ್ರಭುತ್ವ ಘೋಷಣೆ
ನೀವು ಅವರು ಹಂಚಿಕೊಂಡಿರಿಡಾ ಶಶಿಕಾಂತ ಪಟ್ಟಣ ರಾಮದುರ್ಗ
ಕವನ
ಬೇಕಿಲ್ಲ ಸಮತೆ ಕ್ರಾಂತಿಎಂದೂ ಸೋಲದ
ಆರ್ಯ ಪುರುಷ
ವೀರ ಶೂರ ಕ್ಷತ್ರಿಯ
ಶ್ರೀ ರಾಮಚಂದ್ರ ಮೊನ್ನೆ
ಆಯೋಧ್ಯೆಯಲ್ಲಿಯೇ
ಸೋತು ಬಿಟ್ಟ
ಅವನೊಬ್ಬ ಮಹಾಪುರುಷ
ಮನುಷ್ಯ ನಿರ್ಮಿತ
ಜಾತಿ ಮತ ಧರ್ಮಗಳ
ಸೀಮೆ ದಾಟಿದ ಯೋಧ
ಶ್ರೀರಾಮನ ಶಾಪವೊ
ಕೋಪವೊ ಗೊತ್ತಿಲ್ಲ
ಇವರೂ ಸೋತು ಬಿಟ್ಟರು
ಈಗ ಪುರಿಯಲ್ಲಿ
ಜಗನ್ನಾಥನ ಸರದಿ
ಪಾಪ ಅವನಿಗೂ
ಭಯ ಭೀತಿ
ಅವರು ಇಲ್ಲಿ ಗೆದ್ದಿದ್ದಾರೆ
ಬುದ್ಧ ಬಸವ ಬಾಪು
ಅಂಬೇಡ್ಕರ ಎಂದೋ
ಸೋತು ಬಿಟ್ಟರು
ಸರ್ವರಿಗೂ ಸಮಪಾಲು
ಸರ್ವರಿಗೂ ಸಮಬಾಳು
ಇದು ಭಾಷಣ ಲೇಖನ
ಗೋಡೆಯ ಮಾತು
ಬದಲಾಗುವದಿಲ್ಲ ಭಾರತ
ಬೇಕಿಲ್ಲ ಸಮತೆ ಕ್ರಾಂತಿಡಾ. ಶಶಿಕಾಂತ...
ಕವನ
ಅಪ್ಪನ ನೆನಪು
(ಹೆತ್ತ ಒಡಲು ಹೊತ್ತ ಹೆಗಲು ಎರಡು ಇಲ್ಲವಾದ ಘಳಿಗೆ)ಕರುಳ ಬಳ್ಳಿಯ ಕುಡಿಯು
ಹೊಸ ಬೆಳಕು ಕಾಣುತಿದೆ
ಹೃದಯ ಸುಮಗಳ ಸೊಂಪ
ಸುರಿಸಬನ್ನಿ....
ಜೊತೆ ಬಾಳ ಸಿಹಿ ಕಹಿಯ
ಸಮರಸವ ತಿಳಿ ಹೇಳಿ
ಹಸೆ ಮಣೆಯ ಹಸುಳರನು
ಹರಸಬನ್ನಿ .....
ಎಂದೆನ್ನ ಹಾರೈಸಿ ಮರೆಯಾದ
ಕವಿ ಹೃದಯಿ...ನನ್ನಪ್ಪಬಚ್ಚಿಡದೆ ಬಿಚ್ಚಿಟ್ಟ
ಬಯಲಂಥ ಬದುಕು
ನಿನದಪ್ಪ..
ಸಾವಿರ ಸಿರಿ ಸೂರೆಗೊಂಡರೂ
ಸಿಗಲಾರದ ಪ್ರೀತಿಯ
ಸಿರಿಯಲ್ಲಿ ಸೆರೆ ಹಾಕಿದ
ಸಿರಿವಂತ.....ನನ್ನಪ್ಪಮನಗಳ ನಡುವಿನ
ಗೋಡೆಯ ಕೆಡವಿ
ಹೃದಯಗಳ ನಡುವೆ
ಸೇತುವೆ ಕಟ್ಟಿದ
ಅಭಿಯಂತ....
ಸಾವಿರ ಕೊರತೆಗಳ
ನಡುವೆಯೂ ಬತ್ತದ ಪ್ರೀತಿಯ
ಒರತೆ...
ಕವನ
ಅಪ್ಪ ಅಂದ್ರೆ ಆಕಾಶಸಂಸಾರವೆಂಬ ಸಾಗರದಿ
ಬದುಕಿನ ಬವಣೆಯ ಹೊತ್ತು
ತನ್ನವರ ಸಂತಸಕ್ಕಾಗಿ ಹಗಲಿರುಳು ಶ್ರಮಿಸುವ ಭಾವಜೀವಿ ಅಪ್ಪಮಕ್ಕಳ ಪಾಲಿನ ಶಿಸ್ತಿನ ಸಿಪಾಯಿ
ಬದುಕಿನ ಬಂಡಿಯ ನಡೆಸುವ
ಸವಾರ
ಅಮ್ಮನ ಪಾಲಿನ ಸಹಕಾರದ
ಸಹಮಿತ್ರ
ಸಾಲ ಸೋಲಕೂ ಹೆದರದ ಜೀವ
ಮನೆಗಾಗಿ ತನ್ನ ಸುಖವ ಮರೆಯುವ ಮುಗ್ಧಜೀವಿ ಅಪ್ಪನನಗಿಂತ ನನ್ನ ಮಕ್ಕಳು ನೂರು ಹೆಜ್ಜೆ ಮುಂದಿಡಲಿ
ನನ್ನ ಸುಖಕ್ಕಿಂತ ಮಕ್ಕಳ ಸುಖ ಮುಖ್ಯ ಎಂಬ ಭಾವದಲಿ
ಸಂಸಾರದ ಎಲೆಮರೆಯ ಕಾಯಿಯಾಗಿ
ಜೀವ...
ಕವನ
ಕದಿಯಬಲ್ಲರೆ ಭಾವವನ್ನು?ಅವರಿವರ ಸಾಲುಗಳ
ಕದ್ದು ಕವನ ರಚಿಸ ಬಹುದಲ್ಲದೆ
ಕದಿಯಬಲ್ಲರೆ ಭಾವವನ್ನು?ಕೃತಿ ಕಳ್ಳತನ ಮಾಡಿ
ವಾಗ್ಮಿ ಎನಿಸಿಕೊಳ್ಳಬಹುದು
ಜ್ಞಾನ ಕಸಿಯಬಹುದೆ ?ಕೆರೆ ಹಳ್ಳ ನದಿ ಒತ್ತಿ
ನೀರು ಕದಿಯಬಹುದಲ್ಲದೆ
ಕಡಲ ಕದಿಯಬಹುದೆ?ಹಿತ್ತಾಳೆ ತಿಕ್ಕಿದರೆ
ಹೊಳೆಯುವುದಲ್ಲದೆ
ಅಡವಿಟ್ಟ ಚಿನ್ನಕೆ ಪೈಪೋಟಿಯೇ?ನವಿಲು ಕುಣಿತ ಕಂಡು
ಕೆ0ಬೂತ ಕುಣಿದೊಡೆ
ರೆಕ್ಕೆ ಕತ್ತರಿಸುವುದು ನೋಡ
ಬಸವ ಪ್ರಿಯ ಶಶಿಕಾಂತ
_______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



