ಕವನ

ಕವನ

ಹುಟ್ಟುತ್ತವೆ ಕವನಗಳುಹುಟ್ಟುತ್ತವೆ ಕವನಗಳು ಜಲಧಾರೆಯಂತೆ ಭೋರ್ಗರೆದು ಒಮ್ಮಿoದೊಮ್ಮೆಲೆ ಮಂದಗತಿಯಲ್ಲಿ ತನ್ನ ಗತಿ ಬದಲಿಸಿ ಹೊರಳುತ್ತವೆ ತಮಗೆ ಬೇಕಾದಕಡೆಗೆ ಒಳಗಿನ ಕಿಚ್ಚನ್ನು ಹದವಾಗಿ ಬೇಯಿಸಿ ತಣ್ಣನೆಯ ಪ್ರತಿರೂಪದಲ್ಲಿ ಹೊರಹೊಮ್ಮುತ್ತವೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ನನ್ನೀ ಕವನಗಳುಪ್ರತಿಬಿಂಬದಂತೆ ಫಳಫಳಿಸುತ್ತವೆ ಎಲ್ಲೆಲ್ಲೂ ಹುಲುಸಾಗಿ ಧಾರಾಳತನದಿಂದ ಹುಟ್ಟುತ್ತವೆ ತಮ್ಮಷ್ಟಕ್ಕೆ ತಾವೇ ಯಾರ ಹಂಗಿಲ್ಲದೆ ಮುಜುಗರವಿಲ್ಲದೆ ಹರಿಯುತ್ತವೆ ನಿಧಾನವಾಗಿ ನದಿಯಂತೆ ತಮ್ಮದೇ ಗತಿಯಲ್ಲಿ ನನ್ನೀ ಕವನಗಳುಹುಟ್ಟುತ್ತವೆ ಕವನಗಳು ತಮಗೆ ಬೇಕೇನಿಸಿದಾಗ ಸರಾಗವಾಗಿ ಯಾವುದೇ ಅಡೆತಡೆಯಿಲ್ಲದೆ ತಂಟೆ -ತಕರಾರಿಲ್ಲದೆ ತಮ್ಮಿಂದ ತಾವೇ ಉಯ್ಯಾಲೆಯಲ್ಲಿ ತೂಗಿ ಲಾಲಿ ಹಾಡುತ್ತವೆ ಮುದ್ದು ಮಾಡುತ್ತವೆ ಎಲ್ಲರ ಮನ ಗೆಲ್ಲುತ್ತವೆಸುಧಾ ಪಾಟೀಲ ಬೆಳಗಾವಿ

ಕವನ

ಉಳಿದು ಬಿಟ್ಟವು ------------------------------- ಗೆಳತಿ ಉಳಿದು ಬಿಟ್ಟವು ನನ್ನ ಮಾತುಗಳು ನಿನ್ನ ಮೌನದ ತಿಜೋರಿಯಲ್ಲಿ .ಹಾಗೆ ಉಳಿದು ಬಿಟ್ಟವು ಊರ ಹೊರಗಿನ ಬಂಡೆಗಳ ಮೇಲಿನ ನಮ್ಮ ಹೆಸರುಗಳು.ಅನಾಥವಾದವು ಮರದ ಕೆತ್ತನೆ ಮೂಕವಾಯಿತು ಕಟ್ಟಿದ ಗುಬ್ಬಿ ಗೂಡು.ಕೊಚ್ಚಿ ಹೋಯಿತು ಮರುಳ ಮೇಲಿನ ಕಾವ್ಯ ಕಗ್ಗತ್ತಲಿನಲಿ ಕನಲಿದವು ಭಾವಗಳು.ಬಾಡಿದವು ಭರವಸೆಗಳು ಕಮರಿದವು ಕನಸುಗಳು ಸೋತ ಆಶಯಗಳು ಉಳಿದವು ಭಾವ ಕವನಗಳಲ್ಲಿ -------------------------------------- ಡಾ ಶಶಿಕಾಂತ ಪಟ್ಟಣ ಪುಣೆ

ಕವನ

ಜಗದ ಬೆಳಕಿನ ಹಣತೆ ______________________ಸೋಲುವನು ಬಸವಣ್ಣ ಕಾವಿ ಮಠ ಆಶ್ರಮಗಳಲ್ಲಿ ಜಂಗಮರ ಜಂಗುಳಿಯಲಿ ಬಣಜಿಗರ ಬಣದಲ್ಲಿ ಗೌಡರ ಗದ್ದಲದಲ್ಲಿ ರಡ್ಡಿಗಳ ಅಬ್ಬರದಲ್ಲಿ ನೊಣಬರ ಮೇಳದಲ್ಲಿ ಸಾದರ ಸಂಭ್ರಮದಲ್ಲಿ ಗಾಣಿಗರ ಕೂಟದಲ್ಲಿ ಮೀಸಲಾತಿ ಕೂಗಿನಲಿ ಹುಡುಕುತ್ತಿದ್ದಾನೆ ಬಸವಣ್ಣ ತನ್ನನ್ನು ಕುರುಬ ಕುಂಬಾರ ಅಗಸ ಹಡಪದ ಮಾದಾರ ಮೇದಾರ ಶ್ರಮಿಕ ಶೋಷಿತ ದುಡಿವ ವರ್ಗಗಳಲ್ಲಿ ಗೆದ್ದರು ಲಿಂಗಾಯತರು ಸೋಲಿಸಿ ಬಸವನನ್ನು ಪಕ್ಷಗಳಿಗೆ ಜೈಕಾರ ಹಾಕಿ ಕುಡಿದು ಕುಣಿಯುತ ಮೆರವಣಿಗೆಯಲಿ ಬಸವಣ್ಣ ಜಗದ ಬೆಳಕಿನ ಹಣತೆ ಅದರ ಅಡಿಯಲ್ಲಿ ನಾವು ಸತ್ಯವರಿಯದ ಕತ್ತಲೆ ____________________ ಡಾ. ಶಶಿಕಾಂತ ಪಟ್ಟಣ ರಾಮದುರ್ಗ

ಕವನ

ಸ್ನೇಹ ಪ್ರೀತಿಯ ತೋಟ ______________________ ನೀನು ನುಡಿದ ನಿನ್ನ ಎಲ್ಲ ಶಬ್ದಗಳು ಭಾವವಾಗಿ ನನ್ನೆದೆಯ ಗೂಡಿನಲ್ಲಿ ಬೆಚ್ಚಗಿವೆನೀನು ನೋಡಿದ ನೋಟವು ತರು ಗುಲ್ಮ ಲತೆ ದಟ್ಟ ಹಸಿರು ಕಾನನ ವಿಂಧ್ಯ ಮೇರು ಗಿರಿ ಸ್ನೇಹ ಪ್ರೀತಿಯ ತೋಟ ಅರಳಿವೆ ಮಲ್ಲಿಗೆನೀನು ಉಸಿರಿದ ಪ್ರೇಮ ಪರಿಮಳ ಸ್ಫೂರ್ತಿ ಎರಕ ಚಿಗುರು ಚೇತನ ಸುಂದರ ಕವನ ಮರದ ಪೊದರಿನ ಹಕ್ಕಿ ಗಾಯನಡಾ*ಸ್ನೇಹ ಪ್ರೀತಿಯ ತೋಟ* ______________________ ನೀನು ನುಡಿದ ನಿನ್ನ ಎಲ್ಲ ಶಬ್ದಗಳು ಭಾವವಾಗಿ ನನ್ನೆದೆಯ ಗೂಡಿನಲ್ಲಿ ಬೆಚ್ಚಗಿವೆನೀನು ನೋಡಿದ ನೋಟವು ತರು ಗುಲ್ಮ ಲತೆ ದಟ್ಟ ಹಸಿರು ಕಾನನ ವಿಂಧ್ಯ ಮೇರು ಗಿರಿ ಸ್ನೇಹ ಪ್ರೀತಿಯ ತೋಟ ಅರಳಿವೆ ಮಲ್ಲಿಗೆನೀನು ಉಸಿರಿದ ಪ್ರೇಮ ಪರಿಮಳ ಸ್ಫೂರ್ತಿ ಎರಕ ಚಿಗುರು...

ಕವನ

ಸಜ್ಜಾಗಬೇಕುಮುಗಿದು ಹೋಯಿತು ಐವತ್ತು ದಿನಗಳ ಪ್ರಜಾಪ್ರಭುತ್ವದ ದೀರ್ಘ ಪ್ರಹಸನ ಎಲ್ಲರ ಭವಿಷ್ಯದ ಕನಸು ಲೆಕ್ಕಾಚಾರ ಎಕ್ಸಿಟ್ ಪೋಲ್ ಟಿವಿ ಕಿರುಚಾಟ ಎಲ್ಲವೂ ಹುಸಿಯಾಯಿತು ನಿನ್ನೆ ಚುನಾವಣೆ ಫಲಿತಾಂಶ ಯಾರಿಗೂ ಸಿಗಲಿಲ್ಲ ಬಹುಮತ ಮಾಧ್ಯಮಗಳ ಅಬ್ಬರ ಮೌನ ಯಾರಿಗೂ ಖುಷಿ ಇಲ್ಲ ದುಃಖವೂ ಇಲ್ಲ ಮಿತ್ರ ಪಕ್ಷಗಳಿಗೆ ಶರಣು ಅವರದ್ದೆ ಆಟ ವ್ಯವಹಾರ ಭಾರಿ ಆದಾಯ ಖಾತೆಗಳ ಬೇಡಿಕೆ ಆಡಳಿತ ಪಕ್ಷ ಮಗ್ಗರಿಸಿದೆ ವಿರೋಧ ಪಕ್ಷಗಳ ಸ್ಥಾನ ಹೆಚ್ಚಳ ಈಗ ಯಾರಿಗೂ ಇಲ್ಲ ಇ ವಿ ಎಂ ಮೇಲೆ ಅನುಮಾನ ಚುನಾವಣೆ ಗೆದ್ದು...

ಕವನ

ವಿಶ್ವ ಪರಿಸರ ದಿನಾಚರಣೆ ನೀರು ಅಲ್ಪತೆ ಭೂಮಿ ಹಿಂಗದೆ ಹಳ್ಳಿಗಳ ಹಳ್ಳಕ್ಕೆ ರಕ್ಕಸರಂತೆ ಆಕ್ರಮಿಸಿತು ಜಗಕ್ಕೆಲ್ಲ ಈ ಸಿಮೆಂಟ್....!!ಹಳ್ಳಿಗಳ ಹಳ್ಳದ ಮರಳುಗಳ್ಳರು ಪಾತಾಳಕ್ಕಿಟ್ಟು ದೋಚಿದರು ವರ್ತಿಯೇ ಇಲ್ಲದ ಭೂ ಮಾತೆ ಬಂಜೆಯಾದಳು...!!ಕಾಡು ಇದ್ದರೂ ಕಾಡುಗಳ್ಳರು ದೋಚಿದರು ವಿರಳ ಹಸಿರತೆ ಮರುಭೂಮಿಯಾದರೆ ಕಾಡುಪ್ರಾಣಿಗಳು ಹೊಕ್ಕವು ನಗರ ಪಟ್ಟಣಗಳಿಗೆ...!!ಬಿಸಿಯ ತಾಪಕ್ಕೆ ವಿಶ್ವವೇ ಹೊತ್ತಿ ಉರಿದು ತಾಪಮಾನ ಏರಿಕೆಯಿಂದ ಜಗದ ಜನರ ಮನಸುಗಳ ಬಿಸಿಯು ನೆತ್ತಿಗೇರಿದ ವಿಕೃತಿಯ ತಾಪಮಾನಕ್ಕೆ ಬುದ್ಧಿ ಭ್ರಮಿಸಿತು....!!ಪ್ರಕೃತಿ ಪಂಚಭೂತಗಳ ಕಾಲಗಳ ಲಯವಿಲ್ಲದ ಕಾಲ ಪ್ರಕೃತಿಯು ದಿಕ್ಕೆಟ್ಟು...

ಕವನ

ಅವ್ವ ನೆನಪಾದವಳುಚೆಂದಮಾಮನ ತೋರಿಸಿ ಕೆನೆ ಹಾಲು ರುಚಿ ಬುತ್ತಿ ಮೊಸರ ಉಣಿಸಿದವಳು ಮುಗಿಲ ಮನೆಯ ಚಿಕ್ಕೆಗಳ ಕರೆಯುತ ಕಣ್ಣಲಿ ಸವಿ ಮಿನುಗ ಕುಣಿಸಿದವಳು...ಬದುಕ ರೆಕ್ಕೆಗೆ ಬಣ್ಣ ಬಳಿಯುತ ಮಿನುಗು ಕಣ್ಣಲಿ ಕನಸ ಬಿತ್ತಿದವಳು ಮಾಗುತ ಸಿಹಿ ಹಣ್ಣಾಗಿ ಹೆಣ್ಣ ಬಾಳಲಿ ಬೆಳಕ ಬಿತ್ತುತ ಕತ್ತಲ ಮಣಿಸಿದವಳುಬಾಳಗಾಣದ ನೊಗವಾಗಿ ನಗುತ ನಡೆದು ಬದುಕ ಬಾಣಲಿಯಲಿ ಬೆಂದು ನಗವಾದವಳು ನೋವ ತೆಕ್ಕೆಯಲಿ ನಲಿಯುತ ಅರಳುತ ಜಗದ ಜಂಜಡಕೆ ಹೂವ ಗುಣಿಸಿದವಳುಬದುಕ...

ಕವನ

ಸೋಲದಿರಲಿ ______________________ ಬಯಲಾಗಲಿದೆ ಇನ್ನು ಕೆಲವೆ ಕ್ಷಣಗಳಲ್ಲಿ ಸತ್ಯವೊ ಸುಳ್ಳೋ ಪಟ್ಟ ಕಟ್ಟುವರು ಪ್ರಜಾಪ್ರಭುತ್ವಕೊ ಅಥವಾ ಸರ್ವಾಧಿಕಾರಿಗೊ ಹೊರ ಬೀಳಲಿದೆ ಭರವಸೆಯೊ ಭ್ರಮೆಯೊ ಇತ್ಯರ್ಥಕ್ಕೆ ಸಮಯ ಸಮತೆಯೊ ಸಂಘರ್ಷವೊ ಗೆಲ್ಲುವುದು ಪ್ರೀತಿಯೋ ದ್ವೇಷವೊ ನ್ಯಾಯವೊ ಅನ್ಯಾಯವೊ ಗಟ್ಟಿಗೊಳ್ಳುವುದೆ ನಂಬಿಕೆ ಇಲ್ಲಾ ಮುಂದುವರೆಯುವುದೆ ಮೋಸ ಎಲ್ಲೆಡೆ ಮೊಳಗುವುದು ಶಾಂತಿಯೋ ಗಲಭೆಯೊ ಮುಗಿಯಿತು ನಲವತ್ತೈದು ದಿನಗಳ ಜಾತ್ರೆ ಹಬ್ಬ ಚಿಗುರುವುವೆ ಕನಸೋ ಇಲ್ಲಾ ಕಮರುವವೊ ಆಸ್ಪತ್ರೆಯಲ್ಲಿನ ದಲಿತ ಬಡ ಅಲ್ಪ ಸಂಖ್ಯಾತ ಬಾಣ0ತಿಯರ ಭೀತಿ ಹೆರಿಗೆಯಾಗದ ಭ್ರೂಣಗಳ ಚಿಂತೆ ಹೊರಗೆ ರಕ್ಕಸರ ಕೂಟ ಬದಲಿಸುವರು ಸಂವಿಧಾನ ದಶಕದ ಕರಾಳ ಕ್ಷಣಗಳು ಕೊನೆಯಾಗಲಿ ಸೋಲದಿರಲಿ ಬುದ್ಧ ಬಸವ...

ಬಸವಪ್ರಿಯ ವಚನಗಳು

ಇಂತಪ್ಪ ನೆಲದಲ್ಲಿ ಬದುಕಿ ಸಾಯುವಕಳ್ಳರಿಗೆ ಸುಳ್ಳರಿಗೆ ಮಣೆ ಹಾಕುವರಯ್ಯ ಸತ್ಯ ಸಮತೆ ಶಾಂತಿಯ ಜಪಿಸುವವರ ಮೂಲೆ ಗುಂಪು ಮಾಡುವರಯ್ಯ ಶ್ರಮಿಕ ಕಾರ್ಮಿಕರನ್ನು ಶೋಷಿಸುವರಯ್ಯ ದುಡಿಯದ ಮೈಗಳ್ಳರು ರಾಜ್ಯವಾಳುವರಯ್ಯ ಜಲ ನೆಲ ಗಣಿ ಲೂಟಿ ಮಾಡುವವರ ಹಾಡಿ ಹೊಗಳುವರಯ್ಯ ಪತ್ರಿಕೆ ಟಿವಿ ಮಾಧ್ಯಮಗಳು ಬಿಕರಿಯಾದವಯ್ಯಾ ಬಣ್ಣ ಬಣ್ಣದ ವೇಷವ ಹಾಕುವವರು ಮಂತ್ರಿಗಳಾಗುವರಯ್ಯ ನ್ಯಾಯ ಕೇಳುವವರ ಗುಂಡಿಕ್ಕಿ ಕೊಲ್ಲುವರಯ್ಯ ಇಂತಪ್ಪ ನೆಲದಲ್ಲಿ ಬದುಕಿ ಸಾಯುವ ಸಾಲಿನಲ್ಲಿ ನಾನೂ ಒಬ್ಬ ಬಸವಪ್ರಿಯ ಶಶಿಕಾಂತ ---------------------------------------------------------------- ಲಿಂಗಾಯತರಿಗೂ ಬಸವಣ್ಣನೇ ದೇವರು --------------------------------------------------- ಲಿಂಗಾಯತರಿಗೂ...

ಕವನ

ಮಾತೆ -ಜನ್ಮದಾತೆಭೂಲೋಕದ ಸುಂದರ ದೇವತೆ ಜಗವ ಪೊರೆವ ಜೀವದಾತೆ ಮುಕ್ಕೋಟಿ ದೇವರುಗಳ ಮಾತೆ ಸಕಲಜೀವ ಜೀವಗಳ ಮಾತೆ -ಜನ್ಮದಾತೆತನ್ನ ಪಾಲಿನ ಅನ್ನವ ಪತಿಸುತರ ಪಾಲಿಗೊಪ್ಪಿಸಿ ಜಗದಳುವು ತನಗಿರಲಿ ಎಂಬ ಭಾವದಿ ಜೀವ ಸವೆಸುತ ಮನೆ ಮನ ಬೆಳಗುವ ಮಾತೆ-ಜನ್ಮದಾತೆಸೂರ್ಯೋದಯಕೆ ಮನೆ ಬೆಳಗಿ ಕಾಯಕದಲಿ ಕೈಲಾಸ ಕಂಡು ಇರುಳಿನ ನಿದ್ದೆಯವರೆಗೆ ಜೀವ ಸವೆಸುವ ಮಾತೆ-ಜನ್ಮದಾತೆಕಷ್ಟ ಸುಖದಲಿ ಸಮಭಾಗಿಣಿ ಮಕ್ಕಳ ಪಾಲಿನ ಕಾಮಧೇನು ಮನೆಯೆಂಬ ಮಂತ್ರಾಲಯದ ಭಾಗ್ಯದೇವತೆ ಜಗವ ಪೊರೆವ ಗೃಹಲಕ್ಷ್ಮಿ ಮಾತೆ-ಜನ್ಮದಾತೆಶಿವಕುಮಾರ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group