ಕವನ
ಪೌಷ್ಟಿಕಾಂಶಗಳ ದೊರೆ
'ಅಕ್ಕಿ ಇದ್ದರೆ ಲಕ್ಕಿ'
ಹಣ ಇದ್ದರೆ ಸಂಪತ್ತಣ್ಣ,
ಆ ಕಾಲ ಮುಗಿದ ಕಥೆಯಣ್ಣ ,
ಅಕ್ಕಿ ತಿಂದವ ರೋಗಿ,
ರಾಗಿ ತಿಂದವ ನಿರೋಗಿ,
ಜೋಳ ತಿಂದವ ತೋಳ
ಇದು ಇಂದಿನ ಕಾಲವಣ್ಣ....ಹತ್ತಕ್ಕೆ ಬಾಲ್ಯ, ಇಪ್ಪತ್ತಕ್ಕೆ ಯೌವನ
ಮೂವತ್ತಕ್ಕೆ ಗೃಹಸ್ಥ, ಐವತ್ತಕ್ಕೆ ವಾನಪ್ರಸ್ಥ,
ಅರವತ್ತಕ್ಕೆ ಅರಳು, ಎಪ್ಪತ್ತಕ್ಕೆ ಮರುಳು,
ಎಂಭತ್ತರ ನಂತರ ಪರಲೋಕಕ್ಕೆ ತೆರಳು
ಸಿರಿಧಾನ್ಯಗಳ ಬೆಳೆಯುತ್ತಿದ್ದ, ಉಣ್ಣುತ್ತಿದ್ದ ಆ ದಿನಗಳ ಲೆಕ್ಕಾಚಾರ,
ನಲವತ್ತಕ್ಕೆ ಸಕ್ಕರೆ ಕಾಯಿಲೆ,
ಅಧಿಕ ರಕ್ತದೊತ್ತಡ, ಹೃದಯಾಘಾತ
ಎಲ್ಲಾ...
ಕವನ
ವೈಣಿಕನ ಕೈ ಸೇರಿದ ವೀಣೆ..
ವೈಣಿಕನ ಕೈ ಸೇರಿದ ವೀಣೆಯಿಂದ
ಹೊಮ್ಮುವುದು ಸುಮಧುರ ಸಂಗೀತವು
ಕಲೆಗಾರನ ಕುಂಚದಲಿ ಗೀಚಿದ ಗೆರೆಗಳು
ಆಗುವುದು ಸುಂದರ ಚಿತ್ರಗಳು
ದರ್ಜಿಯ ಕೈ ಸೇರಿದ ತುಂಡು ಬಟ್ಟೆಯು
ರೂಪುಗೊಳ್ಳುವುದು ಅಂದದ ಉಡುಪಾಗಿ
ಕಮ್ಮಾರನ ಬಡಿತದಿಂದ ಮಾತ್ರ ಕಬ್ಬಿಣವು
ರೂಪುಗೊಳ್ಳಲು ಸಾಧ್ಯ ಆಯುಧಗಳಾಗಿ
ಕುಂಬಾರನ ಕರಸ್ಪರ್ಶದಿಂದ ಮಣ್ಣಿನ ರೂಪವು-
ಬದಲಾಗಿ ಪಾತ್ರೆ, ಹಣತೆಗಳಾಗುವುದು
ಸೋನಗಾರನ ಕೈಚಳಕದಿಂದ ಮಣ್ಣಾಗಿದ್ದ-
ಚಿನ್ನವು ಚಂದದ ಆಭರಣಗಳಾಗುವುದು
ಕಡಲಿನಾಳವನು ಸೇರಿದ ಮಳೆಹನಿ ಮಾತ್ರವೇ
ಕಣ್ಮನ ಸೆಳೆಯುವ ಮುತ್ತಾಗುವುದು
ಸಪಾತ್ರವನು...
ಕವನ
ಕನ್ನಡ ರಾಜ್ಯೋತ್ಸವ ದಿನ
ನಮ್ಮ ಭಾಷೆ ಕನ್ನಡ ನಮ್ಮ ನಾಡು ಕನ್ನಡ
ಪ್ರಾಚೀನ ಭಾಷೆ ಶಾಸ್ತ್ರೀಯ ಭಾಷೆ ಕನ್ನಡ
ಹಲ್ಮಿಡಿ ಶಾಸನ ಹೇಳಿದೆ ಪ್ರಾಚೀನ ಕನ್ನಡಕುರಿತೋದದೆ ಕಾವ್ಯ ರಚಿಸಿದರ ನಾಡಿದು
ಪಂಪ ರನ್ನ ಜನ್ನ ಪೊನ್ನ ಕವಿಗಳ ನಾಡಿದು
ಕುವೆಂಪು ಬಿಎಂಶ್ರೀ ಮಾಸ್ತಿ ಬೇಂದ್ರೆ ಇದು
ಸಕಲ ಕವಿ ಪುಂಗವರು ಬೆಳೆಸಿದ ನಾಡಿದುಕಿತ್ತೂರು ಚೆನ್ನಮ್ಮ ಬೆಳವಡಿಯ ಮಲ್ಲಮ್ಮ
ಶೂರ ಸಂಗೊಳ್ಳಿ ರಾಯಣ್ಣ ಅನೇಕರಮ್ಮ
ಕನ್ನಡ ನೆಲಜಲ...
ಕವನ
ಕಾವ್ಯ ನಮನ
"ನನ್ನೆಲ್ಲ ಪ್ರೀತಿಯ ಕನ್ನಡದ ಹೃದಯಗಳಿಗೆ ನಲುಮೆಯ ಒಲುಮೆಯ ಸಂಭ್ರಮದ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಕಾಮನೆಗಳು" ಉಸಿರು ಕೊಟ್ಟ, ಹೆಸರು ಕೊಟ್ಟ ಕರುನಾಡಿಗೆ, ಜೀವಕೊಂದು ಧನ್ಯತೆ, ಬದುಕಿಗೊಂದು ಮಾನ್ಯತೆ ಕೊಟ್ಟ ಕನ್ನಡನುಡಿಗೆ ಅಂತರಾಳದ ಅನಂತ ಪ್ರಣಾಮಗಳೊಂದಿಗೆ ತುಂಬಿದೆದೆಯ ನುಡಿ ನಮನ. ಧನ್ಯತೆಯ ಕಾವ್ಯ ನಮನ. ಇದು ಈ ಮಣ್ಣಿನಲ್ಲಿ ಜನಿಸಿದ ಪ್ರತಿ ಕನ್ನಡಿಗನ ಹೃದಯದ ಕವಿತೆ....
ಕವನ
ನಮ್ಮ ಕರುನಾಡು
ರಸ ಋಷಿಗಳಿರುವ ಬೀಡು
ಕವಿ ಪುಂಗವರ ಈ ನಾಡು
ದೈವ ಲೀಲೆಗಳ ನೆಲೆಬೀಡು
ನಮ್ಮ ಹೆಮ್ಮೆಯ ಕರುನಾಡು
ಜಗದಲಿ ಭಾರತ ದೇಶ ಚಂದ
ಭಾರತದಲಿ ಕರುನಾಡು ಅಂದ
ಕರುನಾಡಲಿ ಕರಿಮಣ್ಣು ಚಂದ
ಕರಿಮಣ್ಣಲಿ ಶ್ರೀಗಂಧ ಅಂದ
ಸಹನಾ ಮೂರ್ತಿಗಳ ತವರೂರು
ಶೌರ್ಯ ಪರಾಕ್ರಮದಿ ನಿಸ್ಸೀಮರು
ಶಾಂತಿ ತಾಳ್ಮೆಯಲಿ ಪ್ರಖ್ಯಾತರು
ಎದುರಾಳಿಗಳ ಸದೆ ಬಡೆಯುವರು
ಜಾತಿ ಭೇದವ ಮರೆತು ಹಾಡುವರು
ಮತ ಪಂಥ ತೊರೆದು ನರ್ತಿಸುವರು
ಕಣ್ ಕಣ್ ಬಿಟ್ಟು ನೋಡುವರಣ್ಣ
ರಾಜ್ಯೋತ್ಸವದ ಸವಿ ಸೊಬಗಣ್ಣ
ತಂಟೆ...
ಕವನ
"ಪುನೀತ" ನಿಗೊಂದು ನಮನ
ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ
ಈ ಜಗದಲಿ ಕಾಣೋ
ಪುನೀತ ನಿನ್ನ ಕಳಕೊಂಡ ಮ್ಯಾಲ
ಮತ್ತೆ ಸಿಗುವಿಯೇನೋ ತಮ್ಮಾ
ಮರಳಿ ಬರುವಿಯೇನೋ/ಪ/
46 ವರ್ಷದಿಂದ ನಟನೆಯ ಮಾಡಿ
ಜಗದಾಗ ಬೆಳೆದೆಲ್ಲೋ
ಹುಟ್ಟಿಬಂದು ನೀ ಮನುಜ ಕುಲಕ
ಎಷ್ಟು ಖುಷಿಯ ಕೊಟ್ಟೆಯಲ್ಲೋ
ಜನಸೇವೆಗೆ ಶ್ರಮಿಸಿದ ಪುನೀತನ ಬದುಕು ಅಪೂರ್ಣ ಆಯಿತಲ್ಲೋ
ತಾನು ಕಟ್ಟಿಕೊಂಡ ಆಸೆ ಕನಸೆಲ್ಲಾ
ನುಚ್ಚುನೂರಾಯ್ತಲ್ಲೋ
ಅನಾಥಾಶ್ರಮ ವೃದ್ಧಾಶ್ರಮಕ್ಕೆ ಕಡಿವಾಣ ಬಿತ್ತಲ್ಲೋ, ಶಕ್ತಿಧಾಮಕೆ ನೆಲೆಯಿಲ್ಲದಾಯಿತಲ್ಲೋ//೧/ಬಡಜೀವಗಳ ಸೇವೆಗಾಗಿ ನಿಂತೆ ನೀ
ಬಾಳ...
ಕವನ
ಪುನೀತ ಅಜರಾಮರನೀತ
ನಂಬಲಾಗುತ್ತಿಲ್ಲ ನಿನ್ನ ಸಾವು ಓ!ಸುಚರಿತ.
ಮಾಡುತ್ತಿರುವರು ನಿನ್ನ ಗುಣಗಾನ ಅನವರತ.
ಅಭಿಮಾನಿಗಳೆಲ್ಲ ಸ್ಮರಿಸುತ್ತಿದ್ದಾರೆ ನಿನ್ನ ಸದ್ಗುಣ ಸತ್ಕಾರ್ಯಗಳನ್ನು
ಅವಿರತ.
ನಿನ್ನ ಕಲೆ, ನಿನ್ನ ಅಭಿನಯ ಎಂದೆಂದೂ ಪ್ರಚಲಿತ.
ಆಗಿದ್ದರೆ ದೊಡ್ಡವರಿಂದ ಚಿಕ್ಕ ಪುಟಾಣಿಗಳೆಲ್ಲ ದುಃಖಭರಿತ.
ನೀನಿಲ್ಲದ ದಿನಗಳನ್ನು ಕಲ್ಪಿಸಿಕೊಳ್ಳಲಾಗುವದಿಲ್ಲವೆಂಬುದು
ಅಷ್ಟೇ ಖಚಿತ.
ನೀನಾಗಿರುವೆ ಸಕಲ ಕಲೆಗಳಿಗೂ
ವಿದ್ಯಾವಂತ.
ಬದುಕುವ ಕಲೆ ಗೊತ್ತಿರುವ ಬುದ್ದಿವಂತ.
ಎಷ್ಟೋ ಸಮಾಜಮುಖಿ ಕೆಲಸ ಮಾಡಿದರೂ ಪ್ರಚಾರ ಪುರಸ್ಕಾರ
ಬಯಸದ ಧೀಮಂತ.
ನೀನು ಮಾಡಿದ ಉತ್ತಮ ಕಾರ್ಯಗಳನ್ನು ಮಾಡುವವರ...
ಕವನ
ಬೆಳಕಿನ ಹಬ್ಬ ದೀಪಾವಳಿ
ಭಾವನೆಗಳ ಬತ್ತಿಯ ಹೊಸೆದು
ಪ್ರೀತಿ ಪ್ರೇಮದ ತೈಲವ ಸುರಿದು
ಅಜ್ಞಾನದ ಕತ್ತಲೆಯ ಕಳೆದು
ಸುಜ್ಞಾನದ ಹಾದಿಯ ಜಾಡು ಹಿಡಿದು
ಏಕತೆಯ ದೀಪದ ಬೆಳಕನು
ಈ ಜಗಕೆ ಬೆಳಗುತ ಸಾರೋಣ...!!ಜಾತಿ ಮತ ಭೇದಭಾವದ
ಕಲ್ಮಶವ ಹಣತೆಯಲ್ಲಿ ಹಾಕಿ
ಸಮ ಪಾಲು ಸಮ ಬಾಳು ಎಂಬ
ಸಮಾನತೆಯ ದೀಪವ ಬೆಳಗೋಣ
ಸಂಭ್ರಮದ ಹಬ್ಬ ದೀಪಾವಳಿಗೆ...!!ಮೇಲು-ಕೀಳು ಬಡವ ಬಲ್ಲಿದ
ಭಾವ ಕಳಚಿ ಹಣತೆಯಲ್ಲಿ ಹಾಕಿ
ಒಂದೆ ಕುಲದ ದೀಪವ ಬೆಳಗೋಣ
ಸಡಗರದ ಹಬ್ಬ...
ಕವನ
ಕವನ: ಕ್ಷಮಿಸಿ ಬಿಡು ಗಾಂಧಿ ತಾತ ನಿನ್ನ ಹುಟ್ಟು ಹಬ್ಬಕ್ಕೆ ಶುಭಾಶಯ ನಾ ಕೋರಲಾರೆ…!
ಈ ಕವನ ವಾಟ್ಸಪ್ ನಲ್ಲಿ ಬಂದಿದ್ದು ತುಂಬಾ ಜೋರಾಗಿ ಹರಿದಾಡುತ್ತಿದೆ. ಗಾಂಧೀಜಿಗೆ ವಾಸ್ತವ ಪ್ರಶ್ನೆಗಳನ್ನು ಕೇಳಿರುವ ಈ ಕವನ ನಮ್ಮ ಪತ್ರಿಕೆಯಲ್ಲೂ ಪ್ರಕಟಿಸಬೇಕೆನ್ನಿಸಿತು.
ಕ್ಷಮಿಸಿ ಬಿಡು ಗಾಂಧಿ ತಾತ ನಿನ್ನ ಹುಟ್ಟು ಹಬ್ಬಕ್ಕೆ ಶುಭಾಶಯ ನಾ ಕೋರಲಾರೆ...!
ಹೇಗೆ ತಿಳಿಸಲಿ ನಾ..?
ಪ್ರತಿ ದಿನ ಎನ್ನ ದೇಶ ಕಾಯೋ ಯೋಧರು ಕಾಶ್ಮೀರದಲ್ಲಿ ಪಾಪಿಗಳ ಗುಂಡಿಗೆ ಬಲಿಯಾಗುತಿರೆ..!
ಆ ಸಾವು ನೋವಿಗೆ...
ಕವನ
ಗಾಂಧಿ ಮತ್ತು ನಾನು
೧೯೭೭ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಕ್ರಮಣ ಪ್ರಕಾಶನದಿಂದ ನಮ್ಮ ಗುರುಗಳಾದ ಚಂಪಾ ಅವರು ಸಂಪಾದಿಸಿದ" ಗಾಂಧೀ, ಗಾಂಧೀ -" ಕವನ ಸಂಕಲನದಲ್ಲಿ ಪ್ರಕಟಗೊಂಡ ನನ್ನ ಮೊದಲ ಕವನ" ಶರಣು ಶರಣಾರ್ಥಿ ". ಈಗ ನಾನು ಅದನ್ನು " ಗಾಂಧೀ ಮತ್ತು ನಾನು" ಹೆಸರಿನಿಂದ ಫೇಸ್ಬುಕ್ ಗೆ ಬಿಡುತ್ತಲಿದ್ದೇನೆ. ಅಲ್ಲದೆ ಅಂದು ಧಾರವಾಡದ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



