ಕವನ
ಅಪ್ಪನ ಕಣ್ಣಲ್ಲಿ
ಯಾವತ್ತೂ
ನೀರಿಲ್ಲ
ಅಪ್ಪ ನೋವು
ನುಂಗಿ
ಇಂಗಿದ ಬಾವಿ !
ನಾವು
ಅಳುವಾಗಲೆಲ್ಲಾ
ಅಪ್ಪ ಸಂತೈಸುತ್ತಿದ್ದ
ಅಪ್ಪ ಅಳುವುದಿಲ್ಲ
ಸಂತೈಸಲು
ಅಪ್ಪನಿಗೆ ಅಪ್ಪನಿಲ್ಲ !
ಅಪ್ಪ ಒಬ್ಬನೇ
ನಕ್ಕಿಲ್ಲ
ನಗುವಾಗ ನಗಿಸುತ್ತಿದ್ದ
ನೋವು ಹಂಚಲಿಲ್ಲ
ಮರೆಯಲ್ಲೇ
ನುಂಗಿದ್ದ !
ಅಮ್ಮನ ಕಣ್ಣೀರಿಗೆ
ಅಪ್ಪ ಕರಗುವ
ಮೌನಿಯಾಗಿ....
ಗೋಡೆ ನೋಡುತ್ತಾ
ಸೋತು
ಒರಗುವ !.
ಅಪ್ಪನ ಮಾತಿಗೆ
ಮನೆ ತುಂಬಾ
ಮೌನ
ಅಪ್ಪನ ಮೌನಕ್ಕೆ
ಮನೆಯೇ
ಸ್ಮಶಾನ !.
ಅಪ್ಪನ ಸಾಧನೆಗೆ
ಅಮ್ಮನಿಗೂ
ಸನ್ಮಾನ
ಅಪ್ಪ ಸೋತಾಗ
ಅಮ್ಮನಿಗೂ..
ಅನುಮಾನ !
ಅಪ್ಪ ಗಂಧದ
ಕೊರಡು...
ಮನೆ ತುಂಬಾ
ಪರಿಮಳ
ತೇದು ತೇದು
ಸವೆದಿದ್ದು
ಯಾರಿಗೂ
ತಿಳಿಯಲಿಲ್ಲ!
ಅಪ್ಪನ ಏಟು
ನಮ್ಮ ತಪ್ಪಿಗೆ
ನೋವು ಮರೆಸಿದ್ದು
ಮದ್ದಲ್ಲ....
ಅಪ್ಪನ ಅಪ್ಪುಗೆ!
ಅಪ್ಪನ ಬಗ್ಗೆ
ಒಂದಿಷ್ಟು
ಸಣ್ಣವನ ಮಾತು
ಅಪ್ಪ
ಸಣ್ಣವನಲ್ಲ
ದೇವರಿಗೂ ಗೊತ್ತು!
ಅಪ್ಪಾ ....
ಲೋಕ ಮೆಚ್ಚದಿರಬಹುದು
ನಿನ್ನ.....
ನನಗಂತೂ
ನೀನು ಅಪರಂಜಿ
ಅಪ್ಪಟ
ಚಿನ್ನ !!.
ಪ್ರತಿಯೊಬ್ಬರಿಗೂ ಅವರ...
ಕವನ
ಅಮ್ಮ - ಅಪ್ಪ !
ತಾಯಿಯು ಮಗನನ್ನು
ತನ್ನ ಕಂಕುಳಲ್ಲಿ ಕೂಡ್ರಿಸಿ
ಕೊಳ್ಳುತ್ತಾಳೆ.
ಏಕೆ ಗೊತ್ತೇ ?
ಏಕೆಂದರೆ ,
ಯಾವುದು ತನಗೆ
ಕಾಣುವುದೋ
ಅದೇ ಅವನಿಗೂ
ಕಾಣಿಸಲಿ ಎಂಬ
ಉದ್ದೇಶದಿಂದ !
ಮತ್ತು
ತಂದೆ ಮಗನನ್ನು ತನ್ನ
ಹೆಗಲಮೇಲೆ
ಕೂರಿಸಿಕೊಳ್ಳುವನು
ಏಕೆ ಗೊತ್ತೇ ?
ಏಕೆಂದರೆ ,
ಯಾವುದು ತನಗೆ
ಕಾಣಿಸುವುದಿಲ್ಲವೋ
ಅದು
ತನ್ನ ಮಗನಿಗೆ
ಕಾಣಿಸಲಿ ಎಂಬ
ಉದ್ದೇಶದಿಂದ !!ನೀಲಕಂಠ ದಾತಾರ.
ಕವನ
ನಮ್ಮುಸಿರನುಳಿಸಿ
ಆಲದ ಮರನೆಟ್ಟ ಕಾಲವೆ ಗತಿಸ್ಯಾವ
ಮೇಲಾದ ನೆರಳ ನೀಡ್ಯಾದ //ಕೇಳಿರಿ
ಸಾಲಿಯ ಮಕ್ಕಳ ಹಾಡೊಂದ//ಪ//
ಉಸಿರಿನ ದ್ಯಾವರು ಹಸಿರಾಗ ಬೆರೆತಾನ
ಕೆಸರು ಕೈಗಿಂದು ನೀಡ್ಯಾನ // ಕೇಳಿರಿ
ಮೊಸರನ್ನ ತಿನ್ನೋ ಭಾಗ್ಯವ//1//
ಮಳೆರಾಯ ಬಂದಾನ ಹೊಳೆಯಾಗಿ ಹರಿದಾನ
ಕಳೆದಾನ ಬಿಸಿಲ ಬೇಗೆಯ// ಕೇಳಿರಿ
ಕೊಳೆಯ ಮಾಡ್ಬೇಡಿ ಹೊಳೆಯನ್ನ//2//
ಕಾಡು ಬೆಳೆಸ್ಯಾರಲ್ಲ ನಾಡಿನ ಹಿರಿಯಾರು
ಮೋಡ ಮಣ್ಣನು ಕಟ್ಟಾಕ// ಕೇಳಿರಿ
ಬಾಡ್ಯಾವ ಕಾಡ ಹಸಿರುಸಿರ//3//ಶ್ರೀಮತಿ ಬಸಮ್ಮ ಏಗನಗೌಡ್ರ
(ವಿಶ್ವ ಪರಿಸರ ದಿನಾಚರಣೆ ಶುಭಾಶಯಗಳೊಂದಿಗೆ)
ಕವನ
ಕದ್ದು ತಂದೆ ಪ್ರೀತಿ
ಓ ನನ್ನ ಒಲವೇ.
ನೋಡಿದೆ ನಾ ನಿನ್ನ ಮೊದಲ ದಿನವೇ.
ಒಪ್ಪಿಕೊಂಡವು ನನ್ನ ನಯನಗಳೆರಡು.
ನೀನೆ ನನ್ನ ಪತಿ ನೀನೆ ನನ್ನ ನಲ್ಲ ಎಂದು.
ಹೃದಯದಲ್ಲಿ ತುಂಬಿತು ಅದಮ್ಯ ಪ್ರೀತಿ.
ಬದುಕಲ್ಲಿ ಬಂದಿತು ಸತಿ ಸಾವಿತ್ರಿಯ ನೀತಿ.
ಉತ್ಸಾಹದಿಂದ ಮಾಡಿದೆ ನಿನ್ನ ಜೋಕೆ.
ಬದುಕಲ್ಲಿ ಹಾರಿಸಿದೆ
ಸುಂದರ ಸಂಸಾರದ ಪತಾಕೆ.
ಮನಸ್ಸಲ್ಲಿ ಬಾರದು ಚಂಚಲತೆಯ ಭಾವ.
ನೀವಾಗಿರುವಿರಿ ನನ್ನ ಬಾಳಿನ ಸುದೈವ.
ಯಾರೇನೇ ಅಂದರು ತಲೆಕೆಡಿಸಿಕೊಳ್ಳದ ಜೀವ.
ಗೊತ್ತಿದೆ...
ಕವನ
ಮಧುರ ಸೋದರ ಬಂಧವು
ರಕ್ತದಿಂದಲೆ ಬಂಧವಾದರೆ
ಸ್ನೇಹಕೆಲ್ಲಿದೆ ಅರ್ಥವು
ಸಿಕ್ತವಾಗಲು ಸೋದರತೆಯೇ
ಮುಖ್ಯವಾದರೆ ತೀರ್ಥವು
ಭಕ್ತಿಯಿಂದಲಿ ಕಾಯ್ದುಕೊಂಡರೆ
ಸೋದರತೆಯಾ ನಿತ್ಯವು
ಮುಕ್ತವಾಗಿಸಿ ತ್ವೇಷವನ್ನೇ
ಉಕ್ತ ಬಂಧುರ ಸತ್ಯವು
ಹುಟ್ಟಿನಿಂದಲೆ ಮೆಟ್ಟಿ ನಿಲ್ಲುವ
ಎರೆದು ಪ್ರೀತಿಯ ಬಂಧವ
ಗಟ್ಟಿಯಾಗಿಸಿ ನೆಟ್ಟ ಮನದೊಳ್
ಅಣ್ಣ ತಮ್ಮರ ಬಂಧುರ
ತ್ಯಾಗವಿದ್ದರೆ ಸೋದರತೆಗೇ
ಅರ್ಥ ಬಪ್ಪುದು ತಪ್ಪದೆ
ಭೋಗವಿದ್ದರೆ ಅರ್ಥಹೀನವು
ಅಳಸಿ ಹೂರಣ ತೀಡದೆ
ಜನ್ಮ ಜನ್ಮದ ಪುಣ್ಯವಾಗಿದೆ
ಅಣ್ಣ ತಮ್ಮರ ಜೀವನ
ಹಮ್ಮಿನಿಂದಲೆ ಮೆಚ್ಚಿ ನೆಚ್ಚಿದೆ
ಅಕ್ಕ ತಂಗಿಯ ಭಾವನ
ಸೋದರೆಲ್ಲರು ಕೂಡಿ ಬಾಳಲು
ನವ್ಯವಾಗಿಪ ತಾಣವು
ತೀಡಿ ತಿದ್ದಿದ ನತ್ತಿನಂದದಿ
ಮಧುರ...
ಕವನ
ಅವಳ ಬದುಕು
ಕೂಡಿಟ್ಟ ಆಸೆಗಳ ಕನಸು ಕಾಣುತ
ಮೂರು ಗಂಟಿಗೆ ಶರಣಾದಳವಳು
ಸಪ್ತಪದಿ ತುಳಿದಳು
ಕೈ ಹಿಡಿದ ಗಂಡ ಕೈಬಿಡನು ಎಂದು
ಮದುವೆ ಆದ ಮೂರೇ
ದಿನದಲ್ಲಿ ತಿಳಿಯಿತು
ಕೈ ಹಿಡಿದ ಗಂಡ ಗುಂಡಿಗೆ ದಾಸನಾಗಿದ್ದ ಅಮಲೇರಿದ ಗಂಡ
ಹೆಂಡತಿಗೆ ಮೂಲೆ ಗುಂಪಾಗಿಸಿದ..ಜಗಳ, ಕೋಪ, ಮನಸ್ಥಾಪ,
ಹೆಚ್ಚಾಯಿತು ದಿನ ದಿನವೂ
ತವರಿನಿಂದ ತಂದ ತುಂಡು ಬಂಗಾರ ಮಾರಿ ತವರಿನ ದಾರಿ ಹಿಡಿದಳು
ಅವಳ ಬದುಕು
ನೂರು ಕಾಲ ಚೆನ್ನಾಗಿ ಇರದೆ
ಬದಲಿಗೆ ಬಹುಬೇಗ
ಅಳಿದು...
ಕವನ
ಲ್ಯಾಂಡ್ ಲೈನ್ ಆಂಟಿ !
ಲ್ಯಾಂಡ್ ಲೈನ್ ಆಂಟಿಯ ಒಡನಾಟದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದ ನಾನು
ಒಮ್ಮೆ ಮೊಬೈಲ್ ಚೆಲುವೆಯ
ಮೋಹಪಾಶಕ್ಕೆ ಒಳಗಾಗಿ ಉನ್ಮಾದದಿಂದ ಆಕಾಶದಲ್ಲಿ
ತೇಲಾಡುತ್ತಿದ್ದಾಗ
ಆಕೆಯ ಗೆಳತಿಯರಾದ ವ್ಯಾಟ್ಸಪ್,
ಸ್ಟೇಟಸ್, ಮತ್ತು ಫೇಸ್ಬುಕ್
ಮಾಯಾಂಗನೆಯರ
ಬಿಸಿ ಅಪ್ಪುಗೆಯಲ್ಲಿ ಸಿಕ್ಕು ಹಾಕಿಕೊಂಡು ಖುಷಿಯಿಂದ
ಮೋಜು ಮಸ್ತಿ
ಮಾಡಿದ್ದೇನೋ ನಿಜ !
ಆದರೆ ಏಕೋ ಏನೋ ಒಮ್ಮೆಲೇ
ನನ್ನ ಇರುವನ್ನೇ
ಕಳೆದುಕೊಂಡಂತೆನಿಸಿ
ಅವರ ಮಾಯಾಜಾಲದಿಂದ
ಹೊರಬರಬೇಕೆಂದು ಚಡಪಡಿಸಿದೆ.
ದಿಕ್ಕು ಕಾಣದಂತಾಗಿ, ಕೊನೆಗೆ
ಹೇಗೋ ತಪ್ಪಿಸಿಕೊಂಡ ನಾನು
ಲ್ಯಾಂಡ್ ಲೈನ್ ಆಂಟಿಯೇ
ಭೇಶ್ ಎಂದುಕೊಂಡು...
ಕವನ
ಚೇತರಿಕೆ ಚಿಗುರು
ಗರಿಗೆದರಿ ಕುಣಿಯುವ ಬಾಲಕುಸುಮ
ಕರೋನಾ ಛಾಯೆಗೆ ಅದರಿದ ಮನ
ಮುದ್ದು ಕಂದನ ಮುದುರಿದ ಜ್ಞಾನ
ಶೋಕ ಸಾಗರದಿ ಜನ ತಲ್ಲಣ //
ಕೇಳಲಿಲ್ಲ ಅನುಭವ ಪಾಠ
ಬಿಡಲಿಲ್ಲ ಫೋನಿನಾಟ
ಸವಿಯಲಿಲ್ಲ ಬಿಸಿಯೂಟ
ಕರೋನಾ ರುದ್ರನರ್ತನ ಕೂಟ//
ಕಲಿಕೆಯ ಹಂಬಲದಿ ಕಾಣೆಯಾದ ಜ್ಞಾನ
ಹಲವು ಮಾರ್ಗದಿ ಬಳಸಿದ ವಿಜ್ಞಾನ
ತಲುಪಿಯೂ ತಲುಪದ ತಂತ್ರಜ್ಞಾನ
ಚೇತರಿಕೆ ಚಿಮ್ಮಲಿ ಬಾಳಿಗೆ ಸುಜ್ಞಾನ //
ಉದಯದಿ ಬಾಡಿದ ಜ್ಞಾನ ಸುಮ
ನೀರೆರೆದು ಪೋಷಿಸುವ ಕಾರ್ಯಕ್ರಮ
ಸರಕಾರಿ ಯೋಜನೆಯ ನಿಯಮ
ಕಲಿಕಾ...
ಕವನ
ತಾಯಿಯ ಬಗ್ಗೆ ಕವನಗಳು ಮತ್ತು ನುಡಿಮುತ್ತುಗಳು in Kannada
"ಅಮ್ಮ"
ತಾಯಿಯ ಗರ್ಭದಿಂದ
ಮಗಳಾಗಿ ಬಂದು
ಅತ್ತೆಯ ರೂಪದಲ್ಲಿ
ತಾಯಿಯನ್ನು ನೋಡಿ
ತನ್ನ ಮಕ್ಕಳಿಗೆ ತಾನು
ತಾಯಿ ಮಡಿಲ ನೀಡಿ
ತನ್ನ ಕುಟುಂಬಕ್ಕಾಗಿ
ಜೀವ ಮುಡಿಪು ಮಾಡಿ
ಬದುಕಿನ ಪಯಣದಿ
ಎಲ್ಲರ ಜೊತೆಗೂಡಿ
ಕಷ್ಟ ಕಾರ್ಪಣ್ಯಗಳ
ಮುರಿದು ಮುಟ್ಟಿಗೆ ಮಾಡಿ
ಪರಿವಾರದೊಳಿತಿಗೆ ತನ್ನ
ಸುಖ ತ್ಯಾಗ ಮಾಡಿ
ಬದುಕಿನ ಬಂಡಿ ಎಳೆವ
ಪತಿಯ ಒಡನಾಡಿ
ಅಮ್ಮ ಎಂಬ ಹೆಸರಲ್ಲಿ
ಉಸಿರು ಮೀಸಲು ಮಾಡಿ
ತಾಯಿ ತಾನೆಂದು ಬರೀ
ಮಕ್ಕಳ ಭವಿಷ್ಯ ನೋಡಿ
ತನ್ನ ಮುಪ್ಪಿನಲಿ ತನಗೆ
ಒಮ್ಮೊಮ್ಮೆ ಯಾರಿಲ್ಲದ್ದನ್ನೂ
ನುಂಗಿ ಅರಗಿಸಿಕೊಂಡು
ಮಕ್ಕಳನ್ನು ಹರಸುವ
ಓ ತ್ಯಾಗಮಯಿ
ಮಾತೆ ತಾಯಿ ನೀನು
ಪ್ರತ್ಯಕ್ಷ...
ಕವನ
ವಿಶ್ವಗುರು ಬಸವಣ್ಣ
ಸಮಾನತೆಯ ತತ್ವವ ಸಾರಿ
ಜಗದ ತುಂಬೆಲ್ಲಾ ಬೆಳಕು ಬೀರಿ
ಕಾಯಕದಲ್ಲೇ ದೇವರ ಕಾಣಿರೋ ಎಂದು ಸಾರಿ ಸಾರಿ ಹೇಳಿದ
ನುಡಿದಂತೆ ನಡೆದ ಕ್ರಾಂತಿಯೋಗಿ
ಮತ್ತೊಮ್ಮೆ ಕ್ರಾಂತಿ ಗೈಯಲು
ಭುವಿಯ ಬೆಳಕಾಗಿ ಬರುವಿರಾ ಅಣ್ಣಾ ಬಸವಣ್ಣ ?
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂದು ಅಂತರಂಗ ಬಹಿರಂಗ ಶುದ್ಧಿಗಳ ನಿಜ ಸ್ವರೂಪ ಅರುಹಿದ ನಾಡಿನಲ್ಲಿ ಧರ್ಮದ ಅಫೀಮು ತಲೆಗೇರಿಸಿಕೊಂಡವರ ಮನವ ತಿಳಿಗೊಳಿಸಲು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



