ಸುದ್ದಿಗಳು

ಮೂಡಲಗಿ ಪಟ್ಟಣದಲ್ಲಿ ವಿವಿಧಡೆ ಶ್ರೀ ಭಗೀರಥರ ಜಯಂತಿ ಆಚರಣೆ

ಮೂಡಲಗಿ: ಪಟ್ಟಣದ ಭಗೀರಥ ಉಪ್ಪಾರ ಸಮಾಜ ಸೇವಾ ಸಂಘ ಮತ್ತು ತಾಲೂಕಾ ಉಪ್ಪಾರ ಸಮಾಜ ಸಂಘದ ಆಶ್ರಯದಲ್ಲಿ ಮೂಡಲಗಿ ಪಟ್ಟಣದ ಗಣೇಶ ನಗರದಲ್ಲಿನ ಶ್ರೀ ಭಗೀರಥ ವೃತ್ತದಲ್ಲಿ ಗುರುವಾರದಂದು ಶ್ರೀ ಭಗೀರಥ ಮಹರ್ಷಿ ಜಯಂತಿಯನ್ನು ಆಚರಿಸಲಾಯಿತು.ಭಗೀರಥ ಉಪ್ಪಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಬಸು ಹಂದಿಗುಂದ ಅವರು ಶ್ರೀ ಭಗೀರಥ ಮಹರ್ಷಿ ಅವರ ಭಾವಚಿತ್ರಕ್ಕೆ...

ಕ್ಷೇತ್ರವು ಎಲ್ಲ ರೀತಿಯಿಂದ ಅಭಿವೃದ್ಧಿಯಾಗಲು ಬಿಜೆಪಿಗೆ ಮತ ನೀಡಿ – ಬಾಲಚಂದ್ರ ಜಾರಕಿಹೊಳಿ

 ಮೂಡಲಗಿ: ಅರಭಾವಿ ಕ್ಷೇತ್ರವು ಎಲ್ಲ ರೀತಿಯಿಂದ ಅಭಿವೃದ್ಧಿ ಹೊಂದಲು ತಾವೆಲ್ಲ ಹಿರಿಯರು ಸೇರಿ ಎಲ್ಲರನ್ನು ಕರೆದುಕೊಂಡು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.ಇಲ್ಲಿನ ಶಿವಬೋಧರಂಗ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯಲ್ಲಿ ಕರೆಯಲಾದ ಮೂಡಲಗಿ, ಗುರ್ಲಾಪೂರ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಬಿಜೆಪಿ ಕಾರ್ಯಕರ್ತರು ಹಾಗೂ ಹಿರಿಯರ ಸಭೆಯಲ್ಲಿ ಅವರು ಮಾತನಾಡಿದರು.ಬಿಸಿಲು...

ಬೀದರ; ಧಾರಾಕಾರ ಸುರಿದ ಆಲಿಕಲ್ಲು ಮಳೆ

ಬೀದರ: ಜಿಲ್ಲೆಯ ಭಾಲ್ಕಿ ಪಟ್ಟಣ, ನಿಟ್ಟೂರು, ಹಲಬರ್ಗಾ ಸೇರಿದಂತೆ ಹಲವು  ತಾಲೂಕಿನಲ್ಲಿ ಧಾರಾಕಾರ ಆಲಿಕಲ್ಲು ಮಳೆ ಸುರಿದಿದ್ದು ಭಾರೀ ಅನಾಹುತ ಮಾಡಿದೆ.ಗ್ರಾಮದ ರಸ್ತೆಯಲ್ಲಿ‌ ನಿಲ್ಲಿಸಿದ್ದ ಕಾರಿನ ಗಾಜು ಪುಡಿ ಪುಡಿಯಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ.ಬೀದರ್ ನಲ್ಲಿ ಸತತ ಎರಡು ಗಂಟೆಗಳಿಂದ ಸುರಿದ  ಅಕಾಲಿಕ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ.ವರದಿ: ನಂದಕುಮಾರ ಕರಂಜೆ, ಬೀದರ

ಭಗೀರಥ ಜಯಂತಿ

ಗೋಕಾಕ: ನಗರದ ಉಪ್ಪಾರ ಓಣಿಯಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿಯನ್ನು ಪೂಜೆ ನೇರವೇರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾಯಪ್ಪ ತಹಶೀಲದಾರ, ನಿಂಗಪ್ಪ ಭಾಗೋಜಿ, ಶಂಕರ ಧರೆನ್ನವರ, ಜಗದೀಶ ಶಿಂಗಳಾಪೂರ, ಕುಶಾಲ ಗುಡೆನ್ನವರ, ಮಾಳಪ್ಪ ಗೌಡರ, ಗಣಪತಿ ರಂಕನಕೊಪ್ಪ, ಲಕ್ಕಪ್ಪ ನಂದಿ, ಗಣೇಶ ಹುಳ್ಳಿ, ಲಕ್ಷ್ಮಣ ಘಮಾಣಿ, ನಾಗರಾಜ ಗೋಸಬಾಳ, ಲಕ್ಷ್ಮಣ ಧರೆನ್ನವರ ಸೇರಿದಂತೆ...

29 ರಿಂದ ಶ್ರೀ ಶಿವಬೋಧ ಸ್ವಾಮಿಗಳ ಜಾತ್ರಾ ಉತ್ಸವ

ಮೂಡಲಗಿ - ಭಾವೈಕತೆಗೆ ಹೆಸರಾಗಿರುವ ಇಲ್ಲಿಯ ಆರಾಧ್ಯ ದೈವ ಶ್ರೀ ಶಿವಬೋಧಸ್ವಾಮಿಗಳ ಪುಣ್ಯ ತಿಥಿ, ಜಾತ್ರಾ ಮಹೋತ್ಸವವು ಏ. 29 ರಿಂದ ಮೇ.3 ರವರೆಗೆ ನಡೆಯಲಿದೆ ಎಂದು ಪೀಠಾಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀ ಶ್ರೀಧರಬೋಧ ಸ್ವಾಮೀಜಿಗಳು ತಿಳಿಸಿದ್ದಾರೆ.ಏ.29 ರಂದು ರಾತ್ರಿ 9 ಗಂಟೆಯಿಂದ ಭಕ್ತರಿಂದ ದೀಡ ನಮಸ್ಕಾರ (ಉರುಳು) ಸೇವೆ ಸಲ್ಲಿಸುವರು.ಏ.30 ರಂದು ಮಧ್ಯಾಹ್ನ...

ಅರಭಾವಿಯ ಸಮಗ್ರ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ – ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಮೇ-10 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದು, ಜನಸೇವೆಗೆ ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಅರಭಾವಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿದರು.ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ಬುಧವಾರ ಸಂಜೆ ಜರುಗಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು,...

ನನ್ನ ಮತ ಮಾರಾಟಕ್ಕಿಲ್ಲ… ನಿಮ್ಮದು…

"ನನ್ನ ಮತ ಮಾರಾಟಕ್ಕಿಲ್ಲ" ಒಂದೇ ಮಾತು. ಸೋಲುವ ಮಾತೇ ಇಲ್ಲ. ಈ ಒಂದು ಮಾತು ಸರ್ವರಿಗೂ ಅರ್ಥವಾಗಿದೆ ಎಂದುಕೊಳ್ಳುತ್ತೇನೆ.ಹೌದು. ನಿಜವಾದ ಮೌಲ್ಯವುಳ್ಳ ಜನಪ್ರತಿನಿಧಿಯಾಗಿದ್ದರೆ, ಚುನಾವಣೆಯಲ್ಲಿ ಪ್ರಚಾರ ಬೇಕಿಲ್ಲ. ಜನರು ತಾವೇ ಅರ್ಥಮಾಡಿಕೊಂಡು ಮತ ಚಲಾಯಿಸುತ್ತಾರೆ. ಒಳ್ಳೆಯ ಕೆಲಸ ಮಹತ್ಕಾರ್ಯಗಳನ್ನು ಮಾಡಿ ತೋರಿಸಿದವರು ದೇವಾಲಯಕ್ಕೆ ಹೋಗುವ ಪ್ರಮೆಯವೇ ಇಲ್ಲ.ಏನಾದರೂ ತಿಂದು ತೇಗಿದ್ದರೆ, ಅನಾಚಾರಗಳನ್ನು ಎಸಗಿದ್ದರೆ ಪ್ರಾಯಶ್ಚಿತ್ತಕ್ಕಾಗಿ...

ಗಂಗೆಯನ್ನು ಭೂಮಿಗೆ ಇಳಿಸಿದ ಭಗೀರಥ ಮಹರ್ಷಿ-ಸಂಸದ ಈರಣ್ಣ ಕಡಾಡಿ

ಮೂಡಲಗಿ: ಭಗೀರಥ ಮಹರ್ಷಿಯವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲದೆ ಕರ್ಮ, ತತ್ವದ ಮೂಲಕ ಇಡೀ ಮನುಕುಲದ ಸಕಲ ಜೀವರಾಶಿಗಳಿಗೂ ಅನುಕೂಲ ಮಾಡಿಕೊಟ್ಟ ಮಹಾಪುರುಷರಾಗಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಭಗೀರಥ ಮಹರ್ಷಿ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ...

‘ಓಟು ಮಾರಾಟಕ್ಕಿದೆ’ ಕಿರುಚಿತ್ರದ ಪೋಸ್ಟರ್ ಬಿಡುಗಡೆ

ಬೆಂಗಳೂರ: ಕಿನ್ನಾಳ ಟಾಕೀಸ್ ಲಾಂಛನದಡಿ ನಿರ್ಮಾಣ ಆಗಿರುವ ‘ಓಟು ಮಾರಾಟಕ್ಕಿದೆ’ ಕಿರುಚಿತ್ರದ ಮೊದಲ ಪೋಸ್ಟರ್ ಅನ್ನು ಕನ್ನಡದ ರ‍್ಯಾಪ್‌ಸ್ಟಾರ್ ಚಂದನ್‌ಶೆಟ್ಟಿ ಅವರು ಬಿಡುಗಡೆ ಮಾಡಿ, ತಂಡಕ್ಕೆ ಶುಭ ಹಾರೈಸಿದರು.ಎಲೆಕ್ಷನ್ ಬಂದಿರುವ ಈ ಸಂದರ್ಭದಲ್ಲಿ ಟೈಟಲ್ನಿಂದಲೆ ಈ ಕಿರುಚಿತ್ರ ಸದ್ದು ಮಾಡುತ್ತಿದ್ದು. ವಿಶೇಷ ಎಂದರೆ ಪ್ರಜ್ವಲ್ ಕಿನ್ನಾಳ ಎನ್ನುವ ೮ ವರ್ಷದ ಬಾಲಕ ನಾಯಕನಾಗಿ ನಟಿಸಿ, ರಚಿಸಿ, ನಿರ್ದೇಶಿಸಿದ್ದಾನೆ.ಹಾಗೂ ಮಕ್ಕಳೇ ಮುಖ್ಯ ಪಾತ್ರಗಳಲ್ಲಿ...

ಏ.29 ರಂದು ಸುನಂದ ರಂಗನಾಥಸ್ವಾಮಿರವರ ಕೃತಿಗಳ ಲೋಕಾರ್ಪಣೆ

ಶ್ರೀಮತಿ ಸುನಂದ ರಂಗನಾಥಸ್ವಾಮಿರವರು ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿರುವ ‘ಶ್ರೀ ಮಹಾಭಾರತ ವೈಶಿಷ್ಟ್ಯ ಮತ್ತು ಶ್ರೀ ಕಾಳಹಸ್ತೀಶ್ವರ ಶತಕ ‘ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಇದೇ ಏಪ್ರಿಲ್ 29 ಶನಿವಾರ ಬೆಳಗ್ಗೆ 10.00 ಗಂಟೆಗೆ  ನಗರದ  ಎನ್.ಅರ್ ಕಾಲೋನಿಯ ಶ್ರೀರಾಮ ದೇವರ ದೇವಸ್ಥಾನದಲ್ಲಿ ಅಯೋಜಿಸಲಾಗಿದೆ.ಮಹರ್ಷಿ ವೇದವ್ಯಾಸ ವಿರಚಿತ ಶ್ರೀಮನ್ಮಮಹಾಭಾರತ ವೈಶಿಷ್ಟ್ಯ (ಆದಿಪರ್ವ- ಸ್ವರ್ಗಾರೋಹಣಪರ್ವ) ಮೂಲ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group