ಸುದ್ದಿಗಳು

ಕೊನೆಗೂ ಉದ್ಘಾಟನೆಗೆ ಸಜ್ಜಾದ ಮೂಡಲಗಿ ಸಬ್ ರಿಜಿಸ್ಟ್ರಾರ್ ಕಚೇರಿ

ಕಂದಾಯ ಸಚಿವರಿಂದ ದಿ.೨೦ ರಂದು ಉದ್ಘಾಟನೆ ಮೂಡಲಗಿ: ತಾಲೂಕಿನ ಜನರ ಬಹು ದಿನಗಳ ನಿರೀಕ್ಷೆಯ ನೂತನ ಉಪ ನೋಂದಣಾಧಿಕಾರಿಗಳ ( ಸಬ್ ರಿಜಿಸ್ಟ್ರಾರ್) ಕಚೇರಿಯು ದಿ. ೨೦ ರಂದು ಸಾಯಂಕಾಲ ೫ ಗಂಟೆಗೆ ಇಲ್ಲಿನ ತಹಶೀಲ್ದಾರ ಕಚೇರಿ ಆವರಣದ ಕಟ್ಟಡದಲ್ಲಿ ಉದ್ಘಾಟನೆಯಾಗಲಿದೆ.ಉದ್ಘಾಟನೆಯನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ...

ಡಿ.21 ರಂದು ಉಪ್ಪಾರ ಸಮಾಜದಿಂದ ಸತ್ಯಾಗ್ರಹ

 ಮೂಡಲಗಿ: ರಾಜ್ಯದಲ್ಲಿ ಉಪ್ಪಾರ ಸಮಾಜಕ್ಕೆ ಪರಿಶಿಷ್ಟ ಜಾತಿ (ಎಸ್‍ಸಿ) ಪರಿಶಿಷ್ಟ ಪಂಗಡದ (ಎಸ್.ಟಿ) ಮೀಸಲಾತಿ ನೀಡುವಂತೆ ಆಗ್ರಹಿಸಿ ಮಂಗಳವಾರ ಡಿ.21 ರಂದು ಮುಂಜಾನೆ 10 ಗಂಟೆಗೆ ಬೆಳಗಾವಿಯ ಸುವರ್ಣ ಸೌಧ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಉಪ್ಪಾರ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ...

ಪಂಚಮಸಾಲಿ ಮೀಸಲಾತಿಗಾಗಿ ‘ನಮ್ಮ ರೊಟ್ಟಿ, ನಮ್ಮ ಹಾಸಿಗೆ’ ಹೋರಾಟ

ಮೂಡಲಗಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಡಿ.22ರಂದು 25 ಲಕ್ಷ ಜನರನ್ನು ಸೇರಿಸಿ ಬೆಳಗಾವಿಯ ಸುವರ್ಣ ವಿಧಾನ ಸೌಧದ ಮುಂದೆ ಪ್ರತಿಭಟನೆ ಮಾಡುವ ಹಿನ್ನೆಲೆ ನಮ್ಮ ರೊಟ್ಟಿ ನಮ್ಮ ಹಾಸಿಗೆ ಎಂಬ ಉದ್ದೇಶದಿಂದ ರೊಟ್ಟಿ ಸಂಗ್ರಹ ಮಾಡಲಾಗುತ್ತಿದೆ ಎಂದು ಪಂಚಮಸಾಲಿ ರಾಜ್ಯ ಸೈನಿಕ ಘಟಕದ...

ಕ್ರೀಡೆ ಮನುಷ್ಯನ ಜೀವನ ಹಾಗೂ ದೈಹಿಕ,ಮಾನಸಿಕ ಸಂಪೂರ್ಣ ಬೆಳವಣಿಗೆಗೆ ಅತ್ಯವಶ್ಯಕ – ಯಶವಂತಕುಮಾರ್

ಸಿಂದೋಗಿಃ ಕ್ರೀಡೆ ಮನುಷ್ಯನ ಜೀವನ ಹಾಗೂ ದೈಹಿಕ,ಮಾನಸಿಕ ಸಂಪೂರ್ಣ ಬೆಳವಣಿಗೆಗೆ ಅತ್ಯವಶ್ಯಕ ದೀರ್ಘಕಾಲದ ಆರೋಗ್ಯ ಭಾಗ್ಯಕ್ಕೆ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಪ್ರಧಾನವಾಗಿದೆ. ದೇಹವು ಶಕ್ತಿಯುತವಾಗಿರಲು, ಮೆದುಳಿನ ಬೆಳವಣಿಗೆಗೆ ಕ್ರೀಡೆ ಪ್ರಯೋಜನಕಾರಿ.ಇಂದು ನಮ್ಮ ದೇಶ ವಿವಿಧ ಕ್ರೀಡೆಗಳಲ್ಲಿ ತನ್ನದೇ ಆದ ಸಾಧನೆ ಮಾಡುತ್ತಿದೆ. ಕ್ರಿಕೆಟ್ ಪುಟ್ಬಾಲ್ ಅಂಧರ ಕ್ರಿಕೆಟ್ ಹೀಗೆ ಹಲವು ಕ್ರೀಡೆಗಳಲ್ಲಿ ಸಾಧನೆ...

ಬೀದರ್ ಉತ್ಸವಕ್ಕೆ ರಸಿಕರಿಗೆ ಆಹ್ವಾನ ನೀಡಿದ ಖ್ಯಾತ ಗಾಯಕರು

ಬೀದರ: ೨೦೨೩ ರ ಜನವರಿ ೭,೮ ಮತ್ತು ೯ ರಂದು ನಡೆಯಲಿರುವ ಬೀದರ ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿರುವ ಅದ್ದೂರಿ ಸಾಂಸ್ಕೃತಿಕ ಉತ್ಸವಕ್ಕೆ ಕಲಾ ರಸಿಕರನ್ನು ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್,ಅನುರಾಧ ಭಟ್ ಸೇರಿದಂತೆ ಹಲವು ಖ್ಯಾತ ಗಾಯಕರು ಆಹ್ವಾನಿಸಿದರು.೮ ವರ್ಷದ ಬಳಿಕ ನಡೆಯಲಿರುವ ಅದ್ದೂರಿ ಬೀದರ್ ಉತ್ಸವದಲ್ಲಿ ಆಶಿಶ್ ಕೌರ್, ಕುಮಾರ್ ಸಾನು, ಮಂಗಲಿ ಸೇರಿದಂತೆ ಬಾಲಿವುಡ್‌...

ಸಾಲದ ಸುಳಿಯಲ್ಲಿ ವಿದ್ಯುತ್ ಕಂಪನಿಗಳು, ಸ್ಥಳೀಯ ಸಂಸ್ಥೆಗಳ ಬಾಕಿ ಹಣ 6705 ಕೋಟಿ ರೂಗಳು!

ಬಾಕಿ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳದ ಅಧಿಕಾರಿಗಳು ಬಡವರ ಮನೆಗಳ ಸಂಪರ್ಕ ಕಡಿತಗೊಳಿಸದಿರಲು ಗಡಾದ ಆಗ್ರಹಮೂಡಲಗಿ - ರಾಜ್ಯದಲ್ಲಿರುವ ಗ್ರಾಮ ಪಂಚಾಯತಿಗಳು/ನಗರ ಸಭೆ/ಪುರಸಭೆ/ಪಟ್ಟಣ ಪಂಚಾಯತಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉಪಯೋಗಿಸುತ್ತಿರುವ ಬೀದಿ ದೀಪಗಳು/ಕುಡಿಯುವ ನೀರಿನ ಯೋಜನೆಗಳಿಗೆ ಬಳಕೆ ಮಾಡಲಾದ ವಿದ್ಯುತ್ ಗೆ ಸಂಬಂಧಿಸಿದಂತೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆಯಿಂದ...

ಅಪರಾಧಿಗಳೇ ಎಚ್ಚರ! ಮೂರನೇ ಕಣ್ಣು ಎಚ್ಚರಗೊಂಡಿದೆ ಬೀದರನಲ್ಲಿ!

ಬೀದರ್ ಜಿಲ್ಲಾದ್ಯಂತ ಸಿಸಿ ಕ್ಯಾಮರಾ ಅಳವಡಿಕೆ ಜಿಲ್ಲಾ ಪೊಲೀಸ ಇಲಾಖೆ ಅಳವಡಿಸಿದ ಹೈಟೆಕ್ ಸಿಸಿ ಟಿವಿ  ಕಂಟ್ರೋಲ್‌ ರೂಮ್ ಉದ್ಘಾಟಿಸಿದ ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಬಂಡೆಪ್ಪಾ ಖಾಶೆಂಪುರಬೀದರ - ಕಳ್ಳರಿಗೆ ಶಾಕ್ ನೀಡಲು ಬೀದರ್ ಪೊಲೀಸರು ಇದೀಗ ರೆಡಿಯಾಗಿದ್ದಾರೆ. ಇದಕ್ಕಾಗಿ ಸ್ಪೆಷಲ್ ಸಿಸಿಟಿವಿ ಕಂಟ್ರೋಲ್ ರೂಮ್ ಓಪನ್ ಮಾಡಿ 24 ಗಂಟೆಗಳ...

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ 21 ಉತ್ಪನ್ನಗಳು

ಮೂಡಲಗಿ: ಕೇಂದ್ರೀಯ ಪ್ರಾಯೋಜಿತ ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‍ಪ್ರೈಸಸ್ (ಪಿ.ಎಂ.ಎಫ್.ಎಂ.ಇ) ಯೋಜನೆಯಡಿ ಕರ್ನಾಟಕದ 30 ಜಿಲ್ಲೆಗಳಿಗೆ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ 21 ವಿಶಿಷ್ಟ ಉತ್ಪನ್ನಗಳನ್ನು ಅನುಮೋದಿಸಲಾಗಿದೆ ಎಂದು ಆಹಾರ ಸಂಸ್ಕರಣಾ ಕೈಗಾರಿಕೆಗಳ ಇಲಾಖೆ ಸಚಿವ ಪಶುಪತಿ ಕುಮಾರ ಪರಸ ಅವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಅವರು...

ನಮ್ಮ ನೆಲವನ್ನು ಒಂದಿಂಚೂ ಬಿಟ್ಟುಕೊಡುವುದಿಲ್ಲ. ಎಂದೆಂದಿಗೂ ಬೆಳಗಾವಿ ನಮ್ಮದೇ: ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಟಗೇರಿಯಲ್ಲಿ ಜರುಗಿದ ಗೋಕಾಕ ತಾಲೂಕಾ 6 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮೆರವಣಿಗೆ ಜಾಥಾಕ್ಕೆ ಚಾಲನೆ ನೀಡಿದ ಗೋಕಾಕ ಶಾಸಕ ರಮೇಶ ಜಾರಕಿಹೊಳಿಗೋಕಾಕ ಡಾ.ಬೆಟಗೇರಿ ಕೃಷ್ಣಶರ್ಮ ವೇದಿಕೆ, ಬೆಟಗೇರಿ): ಬೆಳಗಾವಿ ಎಂದೆಂದಿಗೂ ನಮ್ಮದೇ. ಗಡಿ ವಿವಾದ ಮುಗಿದ ಅಧ್ಯಾಯ. ಗಡಿ ವಿಷಯದಲ್ಲಿ ಪ್ರತಿ ಚುನಾವಣೆ...

ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆ ; ಸರಿಪಡಿಸಲು ಡಿ ಡಿ ಪಿ ಐ ಮುಖಾಂತರ ಮನವಿ

ಬೆಳಗಾವಿ - ಇಂದು ಶನಿವಾರ ಮಧ್ಯಾಹ್ನ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ನಾಲವತವಾಡ ರವರ ಮೂಲಕ ಶಿಕ್ಷಣ ಸಚಿವರಾದ ನಾಗೇಶ ರವರಿಗೆ ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿರುವ ಶಿಕ್ಷಕರ ಅವೈಜ್ಞಾನಿಕ ಹೆಚ್ಚುವರಿ ಹಾಗೂ ಮರುಹೊಂದಾಣಿಕೆ ಪ್ರಕ್ರಿಯೆಯಲ್ಲಿನ ಮಾರಕ ಅಂಶಗಳನ್ನು ಸರಿಪಡಿಸಲು ಆಗ್ರಹಿಸಿ ಬೆಳಗಾವಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.ಶಿಕ್ಷಕರ ಸಮುದಾಯ ಕ್ಕೆ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group