spot_img
spot_img

ಅಪರಾಧಿಗಳೇ ಎಚ್ಚರ! ಮೂರನೇ ಕಣ್ಣು ಎಚ್ಚರಗೊಂಡಿದೆ ಬೀದರನಲ್ಲಿ!

Must Read

  • ಬೀದರ್ ಜಿಲ್ಲಾದ್ಯಂತ ಸಿಸಿ ಕ್ಯಾಮರಾ ಅಳವಡಿಕೆ
  • ಜಿಲ್ಲಾ ಪೊಲೀಸ ಇಲಾಖೆ ಅಳವಡಿಸಿದ ಹೈಟೆಕ್ ಸಿಸಿ ಟಿವಿ  ಕಂಟ್ರೋಲ್‌ ರೂಮ್ ಉದ್ಘಾಟಿಸಿದ ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಬಂಡೆಪ್ಪಾ ಖಾಶೆಂಪುರ
- Advertisement -

ಬೀದರ – ಕಳ್ಳರಿಗೆ ಶಾಕ್ ನೀಡಲು ಬೀದರ್ ಪೊಲೀಸರು ಇದೀಗ ರೆಡಿಯಾಗಿದ್ದಾರೆ. ಇದಕ್ಕಾಗಿ ಸ್ಪೆಷಲ್ ಸಿಸಿಟಿವಿ ಕಂಟ್ರೋಲ್ ರೂಮ್ ಓಪನ್ ಮಾಡಿ 24 ಗಂಟೆಗಳ ಕಾಲ ಪೊಲೀಸರು ಮಾನಿಟರ್ ಮಾಡುತ್ತಿದ್ದಾರೆ.

ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು ಬೀದರ್ ಪೊಲೀಸರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಿಸಿ ಟಿವಿ ಕಣ್ಗಾವಲು ಹಾಕಿದ್ದು ಸಿಸಿ ಟಿವಿ ಅಳವಡಿಸಿದ ಬಳಿಕ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳಿಗೆ ಬ್ರೇಕ್ ಬಿದಿದೆ ಎನ್ನಲಾಗಿದೆ.

ಈ ಕುರಿತು ಒಂದು ಸ್ಪೆಷಲ್ ವರದಿ:

ದರೋಡೆ, ಸರಗಳ್ಳತನ, ಮೊಬೈಲ್ ಕಳ್ಳತನ ಸೇರಿದಂತೆ ಕಳ್ಳರ ಹಾವಳಿಗೆ ಬ್ರೇಕ್ ಹಾಕಲು ಬೀದರ್ ಪೊಲೀಸರು ಅಳವಡಿಸಿದ ಮೂರನೇ ಕಣ್ಣು ಸಿದ್ದಗೊಂಡಿದ್ದು ಸ್ಪೆಷಲ್ ಸಿಸಿಟಿವಿ ಕಂಟ್ರೋಲ್ ರೂಮ್ ಮಾಡಿ 24 ಗಂಟೆ ಮಾನಿಟರ್ ಮಾಡುತ್ತಿರುವ ಪೊಲೀಸರು.ಕೋಟ್ಯಂತರ ರೂ.  ಹಣದಲ್ಲಿ ಜಿಲ್ಲೆಯಾದ್ಯಂತ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದ್ದು ಇದೀಗ ಅಪರಾಧ ಕೃತ್ಯಗಳಿಗೆ ಬಿತ್ತು ಬ್ರೇಕ್.

- Advertisement -

ಈ ಹಿಂದೆ ಜಿಲ್ಲೆಯಾದ್ಯಂತ ಬೆರಳೆಣಿಕೆಯಷ್ಟು ಸಿಸಿ ಕ್ಯಾಮರಾಗಳನ್ನು ಮಾತ್ರ ಅಳವಡಿಸಲಾಗಿತ್ತು. ಆದರೆ ಅವುಗಳು ಕೂಡಾ ಸರಿಯಾಗಿ ಕಾರ್ಯ ನಿರ್ವಹಿಸದೆ ದರೋಡೆಕೋರರಿಗೆ ವರದಾನವಾಗಿತ್ತು. ಇದನ್ನು ಗಮನಿಸಿದ ಬೀದರ್ ಪೊಲಿಸರು ಕೋಟ್ಯಂತರ ರೂ.ಗಳ ಅನುದಾನದಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ 500ಕ್ಕೂ ಅಧಿಕ ಸಿಸಿಟಿವಿಗಳನ್ನು ಅಳವಡಿಸಿದ್ದಾರೆ.

 

ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಓಲ್ಡ್ ಸಿಟಿ, ಗುಂಪಾ ಸೇರಿದಂತೆ ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ 200ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

- Advertisement -

ಮೊದಲು ಬೀದರನಲ್ಲಿ ಸರಿಯಾಗಿ ಸಿಸಿ ಕ್ಯಾಮರಾಗಳು ಅಳವಡಿಸಿರಲಿಲ್ಲ ಹೀಗಾಗೀ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಈಗ ಪೊಲೀಸರು ಜಿಲ್ಲೆಯಾದ್ಯಂತ 500ಕ್ಕೂ ಅಧಿಕ ಕ್ಯಾಮರಾಗಳನ್ನು ಅಳವಡಿಸಿದ್ದರಿಂದ ಕಳ್ಳತನ ಸಂಖ್ಯೆ ಕಡಿಮೆಯಾಗಿವೆ ಎಂದು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಸ್ಥಳೀಯರು.

ಬೀದರ್ ನಗರದಲ್ಲಿ ಕೆಕೆಆರ್ಡಿಬಿಯಿಂದ 90, ನಗರಸಭೆಯಿಂದ 60, ಗಾಂಧಿಗಂಜ್ ಹಾಗೂ ನ್ಯೂಟೌನ್ ಪೊಲೀಸರು ತಲಾ 50 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ.

ಇನ್ನು ಬಸಕಲ್ಯಾಣದಲ್ಲಿ 110, ಔರಾದ್, ಹುಮ್ನಾಬಾದ್, ಭಾಲ್ಕಿ, ಚಿಟಗುಪ್ಪ ಸೇರಿದಂತ್ತೆ 300ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೀಗಾಗೀ ಜಿಲ್ಲೆಯಲ್ಲಿ ಮೊದಲ ಬಾರಿಗೆ 500ಕ್ಕೂ ಅಧಿಕ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಖದೀಮರಿಗೆ ಬೀದರ್ ಪೊಲೀಸರು ಶಾಕ್ ನೀಡಿದ್ದಾರೆ.

ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು ಬೀದರ್ ಪೊಲೀಸರು ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದು ಸಂತೋಷದ ಸಂಗತಿಯಾಗಿದೆ ಎಂದು ಸಾರ್ವಜನಿಕರು ಖುಷಿ ವ್ಯಕ್ತಪಡಿಸಿದ್ದಾರೆ. 

ಇದ್ರಿಂದ ಬಹುತೇಕ ಅಪರಾಧ ಕೃತ್ಯಗಳಿಗೆ ಬ್ರೇಕ್ ಬಿದಿದ್ದು ಇನ್ನು ಮುಂದೆ ಜನ ಸಾಮಾನ್ಯರು ಯಾವುದೇ ಭಯವಿಲ್ಲದೆ ಓಡಾಡಬಹುದಾಗಿದೆ. ಮುಂದೆಯೂ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕುವ ಮೂಲಕ ಬೀದರ್ ಪೊಲೀಸರು ರಾಜ್ಯದಲ್ಲೆ ಮಾದರಿಯಾಗಿದಂತ್ತು ಸತ್ಯ ಹಲವು ತಿಂಗಳ ಹಿಂದೆ ಸರಗಳ್ಳತನ, ಬೈಕ್, ಮೊಬೈಲ್ ಕಳ್ಳತನ, ಕೊಲೆಗಳು ಸೇರಿದಂತೆ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ಸಂಖ್ಯೆ ಹೆಚ್ಚಾಗಿತ್ತು.

ಸಿಸಿಟಿವಿ ಕ್ಯಾಮರಾಗಳು ಇಲ್ಲದೆ ಖದೀಮರು ಅಪರಾಧ ಕೃತ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಿ ಜನರಲ್ಲಿ ಭಯ ಮೂಡಿಸುತ್ತಿದ್ರು. ಆದ್ರೆ ಇದರಿಂದ ಅಲರ್ಟ್ ಆದ ಬೀದರ್ ಪೊಲೀಸರು ಈಗ 500ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಿದ್ದಾರೆ. ಜೊತೆಗೆ ಟ್ರಾಫಿಕ್ ಸಮಸ್ಯೆಗೂ ಕಂಟ್ರೋಲ್ ರೂಂನಿಂದ ಸೂಚನೆ ನೀಡಿ ಸಮಸ್ಯೆಗೆ ಮುಕ್ತಿ ನೀಡುತ್ತಿದ್ದಾರೆ ಎಂದು ಹೇಳಿದ್ರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು ಹೇಳಿದರ.


ವರದಿ: ನಂದಕುಮಾರ ಕರಂಜೆ, ಬೀದರ 

- Advertisement -
- Advertisement -

Latest News

Shahid Kapoor Birthday: ಈ ಬಾಲಿವುಡ್ ಹೀರೊ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಶಾಹಿದ್ ಕಪೂರ್ ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ಇಂದು (ಫೆಬ್ರವರಿ 25) ಅವರ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಎರಡು ದಶಕಗಳಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group