Uncategorized

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಕೈಮುಗಿದು ಗುಡಿಸುತ್ತ ಸುತ್ತಿಬರುವುದು ಸುಲಭ ಕರಕಷ್ಟ ಮನಹಿಡಿದು ನಿಲ್ಲಿಸುವುದು ಪೂಜಿಸುವುದು ಸುಲಭ ಧ್ಯಾನಿಸುವುದತಿಕಷ್ಟ ವರಯೋಗಿಗಿದು ಸರಳ‌ - ಎಮ್ಮೆತಮ್ಮಶಬ್ಧಾರ್ಥ ಕರಕಷ್ಟ = ಬಹಳ ಕಷ್ಟ. ವರಯೋಗಿ = ಶ್ರೇಷ್ಠ ಯೋಗಿತಾತ್ಪರ್ಯ ಚಿತ್ತವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು| ಎತ್ತು ಗಾಣವನು ಹೊತ್ತು ತಾ ನಿತ್ಯದಿ | ಸುತ್ತಿಬಂದಂತೆ ಸರ್ವಜ್ಞ |ಎಂದು ಕವಿ ಸರ್ವಜ್ಞ ಹೇಳಿದ್ದಾನೆ. ನಾವು ಮನಸ್ಸನ್ನು ಎಲ್ಲಿಯೋ ಇಟ್ಟು ದೇವರನ್ನು ನೆನೆಯದೆ ಸುಮ್ಮನೆ ದೇವರಗುಡಿ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಬರುವಪಾಯವನರಿತು ತನ್ನಿಂದ್ರಿಯಂಗಳನು ಚಿಪ್ಪೊಳಗೆ ಸೆಳೆಕೊಳ್ಳುವಾಮೆಯಂತೆ ಹೊರಜಗಕೆ ಹರಿದೋಡುವಿಂದ್ರಿಂಗಳ ನೀನು ತಿರುಗಿಸೊಳಲೋಕಕ್ಕೆ - ಎಮ್ಮೆತಮ್ಮಶಬ್ಧಾರ್ಥ ಚಿಪ್ಪು = ಆಮೆಯ ಹೊರಕವಚತಾತ್ಪರ್ಯಭಗವದ್ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಹೀಗೆ ಹೇಳುತ್ತಾನೆ. ಯದಾ ಸಂಹರತೇ ಛಾಯಂ ಕೂರ್ಮೋ ಅಂಗನೀವ ಸರ್ವಶಃ ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ ತಸ್ಯ ಪ್ರಜ್ಞಾ ಪ್ರತಿಷ್ಠಿತಃ ಯೋಗಿಯು, ಆಮೆಯು ತನ್ನ ಅಂಗಗಳನ್ನು ತನ್ನ ಚಿಪ್ಪಿನೊಳಗೆ ಎಳೆದುಕೊಳ್ಳುವಂತೆ, ಇಂದ್ರಿಯ ವಸ್ತುಗಳಿಂದ ಎಲ್ಲಾ ಇಂದ್ರಿಯಗಳನ್ನು ಹಿಂತೆಗೆದುಕೊಂಡಾಗ, ಅವನ ಬುದ್ಧಿವಂತಿಕೆಯು ದೃಢವಾಗಿ ಸ್ಥಿರವಾಗಿರುತ್ತದೆ. ಹೇಗೆ ಆಮೆ ಮುಂದೆ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಕೊಟ್ಟು ನೋಡುವನೊಮ್ಮೆ ಕಳೆದುನೋಡುವನೊಮ್ಮೆ ಈ ರೀತಿ ಮಾನವರ ಪರಿಕಿಸುವನು ಕೊಟ್ಟಾಗ ಗಳಗದಿರು ಕಳೆದಾಗ ಗೊಣಗದಿರು ಮೆಚ್ಚುವನು ಪರಮೇಷ್ಠಿ ಎಮ್ಮೆತಮ್ಮಶಬ್ಧಾರ್ಥ ಪರಿಕಿಸು = ಪರೀಕ್ಷಿಸು. ಗಳಹು = ಸುಮ್ಮನೆ‌ ಮಾತಾಡು ಗೊಣಗು‌ = ವಟಗುಡು, ಅಸಮಾಧಾನದ ಮಾತಾಡುತಾತ್ಪರ್ಯ ದೇವರು ಒಮ್ಮೆ ಸುಖ ಕೊಟ್ಟು ನೋಡುವನು. ಮತ್ತೊಮ್ಮೆ ಕಷ್ಟ ಕೊಟ್ಟು ನೋಡುವನು. ಹೀಗೆ ಮಾನವನ ಗುಣವನ್ನು ಪರೀಕ್ಷೆಮಾಡುತ್ತಾನೆ.ಸುಖ ಕೊಟ್ಟಾಗ ನನ್ನ ದುಡಿತದಿಂದ ಸುಖ ದೊರೆಯಿತೆಂದು‌ ಗರ್ವದಿಂದ ದೇವರನ್ನು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಹಲವುಕಡೆ ಕುಣಿತೆಗೆಯೆ ನೀರು ದೊರಕುವುದೇನು? ಒಂದೆಕಡೆ ಬಾವಿಯನು ತೆಗೆಯಬೇಕು ಕಂಡದೈವಕ್ಕೆಲ್ಲ ಕೈಮುಗಿಯೆ ಫಲವಿಲ್ಲ ಮನವೇಕದೈವದಿಡು - ಎಮ್ಮೆತಮ್ಮಶಬ್ಧಾರ್ಥ ದೈವ = ದೇವರುತಾತ್ಪರ್ಯ ಈ ಕಗ್ಗ ಏಕ ದೇವೋಪಾಸನೆಯ ಬಗ್ಗೆ ಚರ್ಚಿಸುತ್ತದೆ. ಬಾವಿ ತೆಗೆಯಬೇಕಾದರೆ ಒಂದು ನಿರ್ಧಿಷ್ಟವಾದ ಉತ್ತಮ ಭೂಮಿಯನ್ನು ಆಯ್ಕೆಮಾಡಿ ತೋಡಬೇಕಾಗುತ್ತದೆ. ಅದುಬಿಟ್ಟು ಎಲ್ಲಿಬೇಕಾದರಲ್ಲಿ ಹಲವಾರು ಕಡೆಗೆ ತಗ್ಗು ತೆಗೆದರೆ ನೀರು ದೊರಕುವುದಿಲ್ಲ. ಸತತವಾಗಿ ಒಂದೇಕಡೆ ತಗ್ಗು ತೆಗೆಯುತ್ತ ಹೋದರೆ ನೀರು ದೊರಕುತ್ತದೆ.‌ಹಾಗೆ ಒಬ್ಬ ದೇವರಲ್ಲಿ ಶ್ರದ್ಧೆನಂಬಿಗೆಯಿಂದ ಭಜಿಸಿದರೆ ಕೇಳಿದ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಎಲ್ಲಿಂದ ನೀ ಬಂದಿ ? ಎತ್ತಕಡೆ ನೀ ಹೊರಟಿ ? ನೀನಾರು ? ನಿನಗಿಲ್ಲಿ‌ ಕೆಲಸವೇನು‌? ಈ ಪ್ರಶ್ನೆಗಳಿಗೆ ನೀನುತ್ತರವನರಸಿದರೆ ದೊರೆತಂತೆ ಪರಮಾರ್ಥ - ಎಮ್ಮೆತಮ್ಮಶಬ್ಧಾರ್ಥ ಪರಮಾರ್ಥ = ಮೋಕ್ಷತಾತ್ಪರ್ಯ ಶಂಕರಾಚಾರ್ಯರು ತಮ್ಮ‌ ಭಜಗೋವಿಂದಂ ಭಜನೆಯಲ್ಲಿ ಕಸ್ತ್ವಂ ಕೋಹಂ ಕುತ ಆಯಾತ ಎಂದು‌ ಪ್ರಶ್ನಿಸುತ್ತಾರೆ.ಅಂದರೆ ನೀನು ಯಾರು‌ ?ನಾನು‌ ಯಾರು ? ಎಲ್ಲಿಂದ ಬಂದಿ ? ಇದನ್ನು ಅರಿತುಕೊಂಡರೆ ಮಾತ್ರ ಜ್ಞಾನ ಲಭಿಸಿತ್ತದೆ. ಇದನ್ನೆ ಕನಕದಾಸರು‌...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಬಹಳಷ್ಟು ಬಟ್ಟೆಯಿರೆ ಬಟ್ಟೆಯಂಗಡಿಯಲ್ಲಿ ಇಷ್ಟವಾದುದನಾಯ್ದಕೊಳ್ಳುವಂತೆ ನೂರಾರು ಮತಗಳಿವೆ ಲೋಕದೊಳಗಾರಿಸಿಕೊ ನಿನಗಿಷ್ಟವಾದ ಮತ‌ - ಎಮ್ಮೆತಮ್ಮಶಬ್ಧಾರ್ಥ ಮತ - ತತ್ತ್ವತಾತ್ಪರ್ಯ ಬಟ್ಟೆಯ ಅಂಗಡಿಯಲ್ಲಿ ಸಾವಿರಾರು‌ ಬಣ್ಣಬಣ್ಣದ ಮತ್ತು ಹಲವಾರು ವಿನ್ಯಾಸದ ಬಟ್ಟೆಗಳಿರುತ್ತವೆ. ಅವು‌ ಹತ್ತಿ, ರೇಶ್ಮೆ, ಪಾಲಿಸ್ಟರ್, ಪಾಲಿಥಿನ್, ಉಣ್ಣೆ ಮುಂತಾದ ಎಳೆಗಳಿಂದ ತಯಾರಾದ ಬಟ್ಟೆಗಳಿರುತ್ತವೆ. ಬೆಲೆಗೆ ತಕ್ಕಂಥ‌ ಗುಣಮಟ್ಟದ ಬಟ್ಟೆಗಳು ದೊರೆಯುತ್ತವೆ. ನಾವು ನಮಗೆ ಇಷ್ಟವಾಗುವ ಮತ್ತು ನಮಗೆ ಹೊಂದುವ ಬಟ್ಟೆಗಳನ್ನು ಆಯ್ದುಕೊಳ್ಳುವ ಸ್ವಾತಂತ್ರವಿದೆ. ಬಟ್ಟೆ ಕೊಳ್ಳುವ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಎಲ್ಲರೂ ಪಲ್ಲಕ್ಕಿಯೇರಬಯಸಿದರಾಗ ಹೆಗಲಮೇಲದಹೊತ್ತು ನಡೆವರಾರು ? ಪಡೆದವಗೆ ಪಲ್ಕಕ್ಕಿ ಬಡವನಿಗೆ ಸೇರಕ್ಕಿ ಅವರವರ ದುಡಿಮೆಫಲ - ಎಮ್ಮೆತಮ್ಮಶಬ್ಧಾರ್ಥ ಪಲ್ಲಕ್ಕಿ = ಪಾಲಿಕೆ, ಮೇನೆ. ಪಲ್ಲ(ಅಕ್ಕಿ) = ಧ್ಯಾನ್ಯದ ಒಂದು ಅಳತೆ, ಒಂದು ಚೀಲ‌‌ . ಸೇರು‌(ಅಕ್ಕಿ) = ಧ್ಯಾನ್ಯ‌ ಅಳೆವ ಡಬ್ಬಿತಾತ್ಪರ್ಯ ಎಲ್ಲರು ರಾಜಮಹಾರಾಜರಾದರೆ ಅಥವಾ ಜಗದ್ಗುರುಗಳಾದರೆ ಅವರನ್ನು ಪಲ್ಲಕ್ಕಿಯಲ್ಲಿ ಕೂಡಿಸಿಕೊಂಡು ಹೊತ್ತು ಸಾಗುವರು ಯಾರು ಇರುವುದಿಲ್ಲ. ಅವರ ದುಡಿಮೆ‌ ಫಲದಿಂದ...

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

 ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು ,ಹುಳಿ, ಸಿಹಿ, ಕಹಿ, ಖಾರ, ಒಗರು ಇದ್ದರೆ ಊಟ ಬಹಳ‌ ರುಚಿಯಾಗಿ ಇರುತ್ತದೆ. ಜೊತೆಗೆ ಹಾಲು, ಮೊಸರು, ತುಪ್ಪ ಇದ್ದರೆ ಇನ್ನೂ ರುಚಿಯಾಗಿರುತ್ತದೆ.ನೈವೇದ್ಯಂ ಷಡ್ರಸೋಪೇತೇ| ನಾನಾಭಕ್ಷಂ ಸಮನ್ವಿತಂ|| ದಧೀಕ್ಷೀರಘೃತೋಪೇತಂ| ನೈವೇದ್ಯಂ ಪ್ರತಿಗೃಹ್ಯತಾಂ|| ಎಂಬ‌‌‌...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಕಳ್ಳನರಮನೆಗೊಬ್ಬ ಬಲುಗಳ್ಳ ಬಂದವನು ಸಂಗಯ್ಯ ಕೈಯ್ಯಬಿಡು ನೊಂದಿತೆಂದು ಬೈಯ್ದ ಬಸವೇಶ್ವರನು ಮಡದಿ ನೀಲಾಂಬಿಕೆಯ ಸಂಗ್ರಹವೆ ಚೋರತನ - ಎಮ್ಮೆತಮ್ಮಶಬ್ಧಾರ್ಥ ಬಲುಗಳ್ಳ = ನಿಸ್ಸೀಮ ಕಳ್ಳ. ಮಡದಿ‌ = ಹೆಂಡತಿ. ಚೋರತನ‌ = ಕಳ್ಳತನತಾತ್ಪರ್ಯ ಒಮ್ಮೆ ಬಿಜ್ಜಳನ‌ ಮಹಾಮಂತ್ರಿ ಬಸವಣ್ಣನ ಅರಮನೆಗೆ ಒಬ್ಬ ನಿಸ್ಸೀಮ ಕಳ್ಳನೊಬ್ಬ ರಾತ್ರಿ ನುಗ್ಗಿದನು. ಬಸವಣ್ಣ ನೀಲಾಂಬಿಕೆಯರ ಮಲಗುವ ಕೋಣೆಗೆ ಹೋದನು. ಗಾಢವಾದ ನಿದ್ದೆಯಲ್ಲಿದ್ದ ನೀಲಾಂಬಿಕೆಯ ಕೊರಳಲ್ಲಿಯ ಚಿನ್ನದ ಒಡವೆ ಕಿತ್ತುಕೊಳ್ಳಲು ಕೈಹಾಕಿ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಇದ್ದಷ್ಟುದಿನ ನೀನು ಹಾಯಾಗಿಯಿದ್ದುಬಿಡು ಜಾಗಬಿಡು ಮತ್ತಿಲ್ಲಿ ಬರುವವರಿಗೆ ಕರೆಬಂದ ತಕ್ಷಣವೆ ಹೊರಟುಬಿಡು ಗೊಣಗದೆಯೆ ಛತ್ರವಿದು ಭೂಲೋಕ - ಎಮ್ಮೆತಮ್ಮಶಬ್ಧಾರ್ಥ ಗೊಣಗು = ತನ್ನಲ್ಲೆ ಮಾತಾಡಿಕೊಳ್ಳು. ಛತ್ರ = ಊಟ ವಸತಿ ಒದಗಿಸುವ ಸ್ಥಳತಾತ್ಪರ್ಯ ಈ ಜಗತ್ತು ಒಂದು ಅನ್ನ‌ ನೀರು‌ ವಸತಿ‌ ಒದಗಿಸುವ ಒಂದು ಭೋಜನ‌ಶಾಲೆ. ನಾವೆಲ್ಲ ಅದರಲ್ಲಿ ತಂಗಿರುವ ಪ್ರಯಾಣಿಕರು. ಎರಡುಮೂರು‌ ದಿವಸ ಛತ್ರದಲ್ಲಿ ಬಂದು‌ ಸೇರಿ‌ ವಿಶ್ರಾಂತಿ ಪಡೆದುಕೊಂಡು ಹಾಯಾಗಿ ಇರಬೇಕು.ಮತ್ತೆ ಆ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group