spot_img
spot_img

ಭ್ರಷ್ಟಾಚಾರ, ಹಗರಣಗಳು ಮತ್ತು ಪರಿಹಾರಗಳು

Must Read

- Advertisement -

ಬಿಜೆಪಿ ಮತ್ತು ಜೆಡಿಎಸ್ ಆಡಳಿತದಲ್ಲಿನ ನಿಗಮ ಮಂಡಳಿ ಹಗರಣಗಳ ಬಗ್ಗೆ ಕೆಲ ಪತ್ರಿಕೆಗಳು ಹೇಳಿವೆ. ಇದು ಕಾಂಗ್ರೆಸ್ ಹಗರಣವನ್ನು ಗೌಣ ಮಾಡುವ ಉದ್ದೇಶವೆ ಅಥವಾ ಅವರೂ ಭ್ರಷ್ಟರು ಇವರೂ ಭ್ರಷ್ಟರು ಎಂದು ಭ್ರಷ್ಟರನ್ನು ಸಮರ್ಥಿಸಿ ಕೊಳ್ಳುವ ಉದ್ದೇಶವೆ ಹೇಗೆ ?

ಭ್ರಷ್ಟಾಚಾರ ಹಗರಣಗಳು ಸಾರ್ವಜನಿಕ ಜೀವನದಲ್ಲಿ ವ್ಯಾಧಿ ಎನಿಸಿವೆ. ಎಲ್ಲಾ ಹಂತದಲ್ಲಿ ಇಂದು ಭ್ರಷ್ಟತೆ ತುಂಬಿ ತುಳುಕಾಡುತ್ತಿದೆ. ತಳಮಟ್ಟದಿಂದ ಮೇಲ್ಮಟ್ಟದ ವರೆಗೆ
ಲಂಚಗುಳಿತನ ಭ್ರಷ್ಟತೆ ಒಂದು ಪೀಡೆಯಾಗಿ ಕಾಡುತ್ತಿದೆ. ಒಂದೇ ತಿಂಗಳಿನಲ್ಲಿ ಬಿಹಾರದ 15 ಸೇತುವೆಗಳು ಕುಸಿದವು. ದೇಶದ ಐದು ವಿಮಾನ ನಿಲ್ದಾಣದ ಮೇಲ್ಛಾವಣಿ ನೆಲಕ್ಕೆ ಅಪ್ಪಳಿಸಿದವು. ಹಿಂದಿನ ಬಿಜೆಪಿ ಸರಕಾರದಲ್ಲಿ 300 ಕೋಟಿಗೂ ಅಧಿಕ ಆಕ್ರಮ ಭ್ರಷ್ಟಾಚಾರ ನಡೆದಿದೆ ಎಂದು ಇಂದಿನ ಕಾಂಗ್ರೆಸ ಸರಕಾರ ಹೇಳಿದರೆ. 185 ಕೋಟಿ ಹಣವನ್ನು ಮಹರ್ಷಿ ವಾಲ್ಮೀಕಿ ನಿಗಮದಿಂದ ನಕಲಿ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂಬ ಆರೋಪವನ್ನು ಕಾಂಗ್ರೆಸ್ ಸರಕಾರ ಎದುರಿಸುತ್ತಿದೆ. ಈಗಾಗಲೇ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣದ ದುರ್ಬಳಕೆಗೆ ನಾಗೇಂದ್ರ ಎಂಬ ಮಂತ್ರಿ ತಲೆ ದಂಡವಾಗಿದೆ. ಈಗ ನಡೆದಿರುವ ಅಧಿವೇಶನದಲ್ಲಿ ಬಿಜೆಪಿಯ ಪಕ್ಷದ ಶಾಸಕರು ಬಾವಿಗಿಳಿದು ವಿಧಾನಸಭಾಧ್ಯಕ್ಷರ ಕಾರ್ಯ ನಿರ್ವಹಣೆಗೆ ಅಡ್ಡಿ ಉಂಟು ಮಾಡಿ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ

ವಿರೋಧ ಪಕ್ಷಗಳ ಆರೋಪಕ್ಕೆ ಉತ್ತರವಾಗಿ ಮುಖ್ಯಮಂತ್ರಿ  ಸಿದ್ಧರಾಮಯ್ಯನವರು ಮತ್ತು ಉಪ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ ಇವರು ಬಿಜೆಪಿ ಸರಕಾರದ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಇವರ ಆಡಳಿತ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತಿರುಗೇಟು ನೀಡುತ್ತಿರುವುದು ನ್ಯಾಯ ಸಮ್ಮತವೇ ? ಹಲವು ನಿಗಮ ಮಂಡಳಿಗಳಲ್ಲಿ ಇಂತಹ ಹಗರಣಗಳು ಕಳೆದ 20 ವರ್ಷಗಳಿಂದ ನಡೆಯುತ್ತಾ ಬಂದಿರುವುದು ಒಂದು ಹೊಂದಾಣಿಕೆಯ ರಾಜಕಾರಣ.

- Advertisement -

ನಿನ್ನೆಯ ದಿನ ಸದನದಲ್ಲಿ ಸಿದ್ಧರಾಮಯ್ಯನವರು ಅಶ್ವತ್ಥನಾರಾಯಣ ಬಗ್ಗೆ ನಿನ್ನ ಅನೇಕ ಹಗರಣ ಪ್ರಕರಣಗಳಿವೆ ಅವುಗಳನ್ನು ಬಯಲಿಗೆ ಎಳೆಯಲೇ ಎಂದಿದ್ದು ಕೂಡ ಆ ಸ್ಥಾನಕ್ಕೆ ಒಪ್ಪುವ ಮಾತಲ್ಲ. ಏಕೆ ಮೌನ ಬಿಜೆಪಿ ಆಡಳಿತದ 40 % ಕಮಿಷನ್ ವರ್ಗಾವಣೆ ದಂಧೆ ಕೃಷಿ ಮಾರುಕಟ್ಟೆ ದೇವರಾಜ್ ಅರಸ ನಿಗಮ ಮಂಡಳಿಯಲ್ಲಿ ಭ್ರಷ್ಟಾಚಾರ ಪಿ ಎಸ ಐ ನೇಮಕದಲ್ಲಿನ ಹಗರಣ ಏಕೆ ಮುಕ್ತ ತನಿಖೆ ನಡೆಯುತ್ತಿಲ್ಲ. ಅವರ ಹಗರಣಗಳನ್ನು ಇವರು ಇವರ ಹಗರಣಗಳನ್ನು ಅವರು ಮುಚ್ಚಿ ಹಾಕಿ ಪ್ರಕರಣಕ್ಕೆ ತೆರೆ ಎಳೆಯುವ ಒಂದು ಸುಂದರ ನಾಟಕವಷ್ಟೇ , ಗಣಿ ಹಗರಣ 50000 ಕೋಟಿ ರೂಪಾಯಿಯಷ್ಟು ದೊಡ್ಡ ಹಗರಣಕ್ಕೆ ಎಲ್ಲಿಯ ಶಿಕ್ಷೆ. ಅಂತಹ ಗಣಿ ಭ್ರಷ್ಟರು ಇಂದು ಶಾಸನ ಸಭೆಯಲ್ಲಿ ಮಾಲೀಕರು. ಏಕೆ ಕನ್ನಡ ಸಾಹಿತ್ಯ ಮತ್ತಿತರ ಅಕಾಡೆಮಿಗಳ ಪ್ರಗತಿಪರ ಸಾಹಿತಿಗಳು ಮೌನ ?

ಭ್ರಷ್ಟಾಚಾರ ಯಾರೇ ಮಾಡಲಿ ಅದು ಅಪರಾಧವಾಗಿದೆ. ಇನ್ನು ಒಂದು ದೊಡ್ಡ ನೋವೆಂದರೆ ಶಾಸನ ಸಭೆಯಲ್ಲಿ ಅತ್ಯಂತ ಕಡಿಮೆ ಗೈರು ಹಾಜರಿ. ನಾಡಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಶಾಸಕರು ತಮ್ಮ ದಿನ ಭತ್ಯೆ ತುಟ್ಟಿ ಭತ್ಯೆ ಸವಲತ್ತಿಗಾಗಿ ಬೆಳಿಗ್ಗೆ ಹಾಜರಿ ಹಾಕಿ ಬೆಂಗಳೂರಿನಲ್ಲಿ ಜನರ ಹೆಸರಿನಲ್ಲಿ ಮೋಜು ಮಸ್ತಿ ಮಾಡುತ್ತಾರೆ .

ಅನೇಕ ಹಗರಣಗಳು ಭೂ ಹಗರಣ ಅರ್ಕಾವತಿ ಹಗರಣ , ಸಹಕಾರ ಹಣಕಾಸು ಸಂಸ್ಥೆ ಜನರಿಗೆ ಮೋಸ ಮಾಡಿದ ಹಣ ವಂಚನೆ ಮಾಡಿದ ಪ್ರಕರಣಗಳು ರಾಜ್ಯದಲ್ಲಿನ ನೀಟ್ ಪರೀಕ್ಷೆಯ ಕಿಂಗ್ ಪಿನ್ ಸಿಕ್ಕಿದ್ದಾರೆ. ಸುದ್ಧಿ ಮಾಧ್ಯಮಗಳು ಸುದ್ಧಿ ಮಾಡುತ್ತವೆ ಆದರೆ ಸರಕಾರ ಯಾವುದೇ ನಿರ್ಣಯ ತೆಗೆದುಕೊಳ್ಳದೆ ತನಿಖಾ ತಂಡಕ್ಕೆ ವಹಿಸಿ ಕೈ ತೊಳೆದುಕೊಳ್ಳುತ್ತದೆ. ಭ್ರಷ್ಟ ಮುಕ್ತ ಸರಕಾರ ಒಂದು ಹಗಲು ಕನಸೇ ?

- Advertisement -

ಬಿಜೆಪಿ ಮತ್ತು ಜೆಡಿಎಸ್ ಗಳು ಭ್ರಷ್ಟರೆ.. ಆದರೆ ಅದು ಕಾಂಗ್ರೆಸ್ಸಿನ ಭ್ರಷ್ಟತನಕ್ಕೆ ಹೇಗೆ ಸಮರ್ಥನೆಯಾದೀತು? ಅದು ಭ್ರಷ್ಟ ಕಾಂಗ್ರೆಸ್ಸಿನ ಭಂಡ ಸಮರ್ಥನೆಯಷ್ಟೇ ಆಗುತ್ತೆ.
ತಪ್ಪು ಯಾರೆ ಮಾಡಿರಲಿ ತನಿಖೆಯಾಗಿ ಶಿಕ್ಷೆ ಆಗಬೇಕು. ಇಲ್ಲಿಯವರೆಗೆ ಭ್ರಷ್ಟತನ ಹಗರಣಗಳಿಗೆ ಯಾವುದೇ ಶಿಕ್ಷೆಆಗಿಲ್ಲ.ಎಲ್ಲಾ ರಾಜಕೀಯ ಪಕ್ಷಗಳು ಭ್ರಷ್ಟರೆ.
ಆರೋಪಕ್ಕೆ ಆರೋಪ ಹಗರಣಗಳ ವಿಷಯ ಬಂದಾಗ ಹಿಂದಿನ ಸರಕಾರದ ಆರೋಪಗಳನ್ನು ಹಗರಣಗಳನ್ನು ಉಲ್ಲೇಖಿಸುವುದು ಹಾಸ್ಯಾಸ್ಪದ. ಅದು ಖಂಡಿತ ಪರಿಹಾರವಲ್ಲ .ಇಂತಹ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಅಂತಹ ಶಾಸಕರನ್ನು ಮಂತ್ರಿಗಳನ್ನು ವಜಾ ಗೊಳಿಸಿ ಉನ್ನತ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು
ಈ ರಾಜಕಾರಣಿಗಳ ಝೇಂಡಾ ಬೇರೆ ಅಜೆಂಡಾ ಒಂದೆ ಮತದಾರರು ಎಚ್ಚೆತ್ತುಕೊಳ್ಳಬೇಕು

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group