spot_img
spot_img

ವಚನ ಸಾಹಿತ್ಯ ಅರಿತು ಆಚರಿಸುವದೆ ಲಿಂಗಾಯತ ಸಮುದಾಯದ ಅಭಿವೃದ್ಧಿ : ಪ್ರೊ ಬಸವಣ್ಣ ಅಡಿಕೆ

Must Read

spot_img
- Advertisement -

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ವಿಶೇಷ ಪ್ರವಚನ ನಡೆಯಿತು.

ಪತ್ರಿಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವ, ಹಳಕಟ್ಟಿಯವರ ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವದ ವರ್ಷಾಚರಣೆ 50ನೇಯ ವಚನೋತ್ಸವ ಕಾರ್ಯಕ್ರ ಮದಲ್ಲಿ ಶರಣ ಪ್ರೊ. ಬಸವಣ್ಣ ಅಡಿಕೆಯವರು ಅಖಿಲ ಭಾರತ ಶರಣ ಸಾಹಿತ್ಯ  ಪರಿಷತ್ತಿನ ಲಿಂ.ಡಾ.ಶಿವಬಸವ ಬಸವ ಮಹಾಸ್ವಾಮಿಗಳ ದತ್ತಿ ಉಪನ್ಯಾಸ ಲಿಂಗಾಯತ ಧರ್ಮ ಹಾಗೂ ಸಮಾಜ ಅಭಿವೃದ್ಧಿ ವಿಷಯ ಕುರಿತು ಮಾತನಾಡಿದರು.

ಲಿಂಗಾಯತ ಧರ್ಮದ ಅಭಿವೃದ್ಧಿ, ಧರ್ಮ ಗ್ರಂಥವಾದ ವಚನ ಸಾಹಿತ್ಯದಿಂದ ಅನುಷ್ಠಾನಗೊಂಡಾಗಲೇ ಸಾಧ್ಯ ಎಂದರು.

- Advertisement -

ಜಾತ್ಯತೀತ ಲಿಂಗಾಯತ ಧರ್ಮದ ಜೀವಾಳವಾದ ಇಷ್ಟಲಿಂಗ ಪೂಜೆಯಿಂದ ಮಾನವನ ವ್ಯಕ್ತಿತ್ವ ವಿಕಾಸ ಹಾಗೂ ಸಮಾಜದ ವಿಕಾಸ ಸಾಧ್ಯ ಎಂದರು.

ಬಹು ದೇವೋಪಾಸನೆ ಮೂಢನಂಬಿಕೆ ವಿರುದ್ಧ ಸಮರ ಸಾರಿದವರು ಬಸವಾದಿ ಶಿವಶರಣರು. ಕ್ರೈಸ್ತ ದ ಧರ್ಮದ ಬೈಬಲ್, ಇಸ್ಲಾಂ ಧರ್ಮದ ಕುರಾನ್, ಸಿಖ್ ಧರ್ಮದ ಗ್ರಂಥ ಸಾಹೇಬ್, ಬೌದ್ಧ ಧರ್ಮದ ತ್ರಿಪೀಟಕೆಗಳು, ಜೈನ ಧರ್ಮಗ್ರಂಥತತ್ವಾರ್ಥ ಸ್ತೋತ್ರಗಳು ಇದ್ದಂತೆ ಲಿಂಗಾಯತ ಧರ್ಮಕ್ಕೆ ವಚನಗಳು ಧರ್ಮ ಗ್ರಂಥ  ಇವುಗಳನ್ನು ಅರಿತು ಆಚರಿಸುವದೆ ಲಿಂಗಾಯತ ಸಮುದಾಯದ ಅಭಿವೃದ್ಧಿ ಎಂದರು. 

ಕಾಡಪ್ಪ ರಾಮಗುಂಡಿ ಶರಣರಿಂದ ಮಹಾತ್ಮರ ಚರಿತಾಮೃತ ಪ್ರವಚನ ಜರಗಿತು, ಶತಾಯುಷಿ ನಿವೃತ್ತ ಬಿಡಿಸಿಸಿ ಬ್ಯಾಂಕಿನ ಗುಮಾಸ್ತ ಕಾಯಕಯೋಗಿ ಶರಣ ವೀರಪ್ಪ ಬಿಜಗುಪ್ಪಿ ಇವರನ್ನು ಸನ್ಮಾನಿಸಲಾಯಿತು.      

- Advertisement -

ದೇಶನೂರ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಯ್ಯ ಚಿಕ್ಕ ಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.     ಕಲಾವತಿ ಕಡಕೋಳ ಸ್ವಾಗತಿಸಿದರು ಪುಂಡಲೀಕ ಕಡಕೋಳ ಪ್ರಸ್ತಾವಿಕ ನುಡಿದರು ಬಸವರಾಜ್ ಮಾಟೋಳ್ಳಿ ವಂದಿಸಿದರು ರಾಜೇಶ್ವರಿ ದ್ಯಾಮನಗೌಡರ ನಿರೂಪಿಸಿದರು ಪತ್ರಿ ಬಸವನಗರ ಅಭಿವೃದ್ಧಿ ಸಂಘದ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಉಪಸ್ಥಿತಿ ಇದ್ದರು. ಅಜಗಣ್ಣ ಮುಕ್ತಾಯಕ್ಕ ಬಳಗ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕ  ಶರಣ ಸಾಹಿತ್ಯ ಪರಿಷತ್ತಿನ ಹಾಗೂ ಕದಳಿ ಮಹಿಳಾ ವೇದಿಕೆ   ಪತ್ರಿಬಸವ ನಗರದ ಹಾಗೂ ಪಟ್ಟಣದ ನೂರಾರು ಶರಣ ಶರಣೀಯರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group