ಬೀದರ – ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯು ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಗಡಿ ಜಿಲ್ಲೆ ಬೀದರ ನಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಲು ತಿಳಿಸಿದ್ದು ಸಾರ್ವಜನಿಕರು ಸ್ವಯಂ ಸುರಕ್ಷಿತ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಮನವಿ ಮಾಡಿಕೊಂಡಿದ್ದಾರೆ
ಮನೆಯ ಸುತ್ತಮುತ್ತಲೂ ಸ್ವಚ್ಛ ಮಾಡಬೇಕು ಮತ್ತು ಮನೆಯಲ್ಲಿ ಶೇಖರಣೆ ಮಾಡಿದ ನೀರಿನ ಸಾಮಗ್ರಿಗಳನ್ನು ವಾರಕ್ಕೊಂದು ಸಲ ಸ್ವಚ್ಛ ಗೊಳಿಸಬೇಕು. ಶೇಖರಣೆಯಾದ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕೆಂದು ಅವರು ಸೂಚಿಸಿದರು.
ಬೀದರ್ ಜಿಲ್ಲೆಯಲ್ಲಿ ಆರು ಡೆಂಗ್ಯೂ ಎಕ್ಟಿವ್ ಕೇಸ್ ಪತ್ತೆ :
ಡೆಂಗ್ಯೂ ಬೀದರ್ ಜಿಲ್ಲೆಗೂ ಎಂಟ್ರಿ ಕೊಟ್ಟಿದ್ದು ತನ್ನ ಹಾವಳಿ ತೋರಿಸಿದೆ. ಜಿಲ್ಲೆಯಲ್ಲಿ ಈಗಾಗಲೇ ಆರು ಡೆಂಗ್ಯೂ ಎಕ್ಟಿವ್ ಕೇಸ್ ಪತ್ತೆಯಾಗಿವೆ ಜಿಲ್ಲೆಯ ಔರಾದ ತಾಲೂಕಿನಲ್ಲಿ ಎರಡು, ಭಾಲ್ಕಿ ತಾಲೂಕಿನಲ್ಲಿ ಎರಡು, ಬಸವಕಲ್ಯಾಣ ತಾಲೂಕಿನಲ್ಲಿ
ಎರಡು ಕೇಸ್ ಪತ್ತೆಯಾಗಿವೆ.
ಕಳೆದ ಜನವರಿ ಯಿಂದ ಇಲ್ಲಿಯವರೆಗೆ 63 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಡಿ ಎಚ್ ಓ ಡಾ.ನೀರಗುಡೆ ಜ್ಞಾನೇಶ್ವರ ಮಾಹಿತಿ ನೀಡಿದರು.
ವರದಿ : ನಂದಕುಮಾರ ಕರಂಜೆ, ಬೀದರ