ಬೆಳಗಾವಿ: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶ್ ಕುಮಾರ್ ಹೊಸಮನಿ ಅವರು ಬೆಳಗಾವಿ ನಗರದ ಕೆಂದ್ರ ಗ್ರಂಥಾಲಯ ಮತ್ತು ವಿವಿಧ ಶಾಖಾ ಗ್ರಂಥಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲಿಯ ಕಾರ್ಯ ನಿರ್ವಹಣೆ, ಮೂಲಭೂತ ಸೌಕರ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಜೊತೆಗೆ ಓದುಗರೊಂದಿಗೆ, ವಿಶೇಷವಾಗಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಬಗ್ಗೆ ಕೆಲವೊಂದು ಸಲಹೆ ನೀಡಿ, ಯಶಸ್ಸು ಸಿಗಲೆಂದು ಹಾರೈಸಿದರು.
ನಗರದ ಮಹಾಂತೇಶ ನಗರ, ರಾಮತೀರ್ಥ ನಗರ,ಕನಬರಗಿ,ಶಹಾಪುರ ಡಿಜಿಟಲ್ ಲೈಬ್ರರಿ, ಹಿಂದವಾಡಿ, ಟಿಳಕವಾಡಿ ಮತ್ತು ವಡಗಾವಿ ಶಾಖಾ ಗ್ರಂಥಾಲಯಗಳಿಗೆ ಭೇಟಿ ನೀಡಿದರು ಮತ್ತು ಡಿಜಿಟಲ್ ಸಾರ್ವಜನಿಕ ಗ್ರಂಥಾಲಯದ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಗ್ರಂಥಾಲಯಗಳ ಅಚ್ಚುಕಟ್ಟು ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ತಿಳಿಸಿದರು.ಉತ್ತಮ ಸೇವೆ ನೀಡಿ ಇಲಾಖೆಗೆ ಹೆಸರು ತನ್ನಿ ಎಂದು ಕರೆನೀಡಿದರು. ನಿರ್ದೇಶಕರ ಜೊತೆಗೆ ಉಪನಿರ್ದೇಶಕರು, ಸಿಬ್ಬಂದಿ ಹಾಜರಿದ್ದರು. ಸಾರ್ವಜನಿಕರು,ಹಿರಿಯ ನಾಗರಿಕ ಓದುಗರು ಖುಷಿ ವ್ಯಕ್ತಪಡಿಸಿ,ಅವರಿಗೆ ಮತ್ತು ಇಲಾಖೆಗೆ, ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.