spot_img
spot_img

ಆರ್.ಸಿ.ಯು ಏಕವಲಯ ಅಂತರ ಕಾಲೇಜು ಪುರುಷರ ಖೋ-ಖೋ ಟೂರ್ನಿ ಉದ್ಘಾಟನೆ

Must Read

- Advertisement -

ಮೂಡಲಗಿ: ಇಂದಿನ ಆಧುನಿಕ ತಾಯಂದಿರು ತಮ್ಮ ಮಕ್ಕಳನ್ನು ಪಠ್ಯೇತರ ಚಟವಟಿಕೆಗಳಿಗೆ  ಬಿಡುತ್ತಿಲ್ಲ ಎಂದು ಮೂಡಲಗಿ ತಹಶೀಲ್ದಾರ ಮಹಾದೇವ ಸನಮುರಿ ಖೇದ ವ್ಯಕ್ತಪಡಿಸಿದರು

ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಅಂತರ ಕಾಲೇಜು ಪುರುಷರ ಖೋ ಖೋ  ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆಯ ಉದ್ಘಾಟನಾ ಸಮಾರಂಭವನ್ನು  ಉದ್ಘಾಟಿಸಿ ಮಾತನಾಡಿದ ಅವರು,  ಮಕ್ಕಳಿಗೆ ಪಂಚ ಮಹಾಭೂತಗಳ ಸ್ಪರ್ಶ ಆಗುವದರಿಂದ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಸಾಧ್ಯ ಕಾರಣ ಪಾಲಕರ ಮಕ್ಕಳನ್ನು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳಲು ಪ್ರೇರೇಪಿಸಬೇಕೆಂದು  ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿ ರಾಷ್ರ್ಟೀಯ ಪುರಸ್ಕಾರ ವಿಜೇತ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ವೈಯಕ್ತಿಕ ಬದುಕಿನ ಬೆಳವಣಿಗೆಗೆ ಅವಕಾಶಗಳು ಸಿಗುವದು ಶಾಲಾ ಶಿಕ್ಷಣದಲ್ಲಿ  ಮಾತ್ರ, ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿ ಸಣ್ಣ ಸಣ್ಣ ಪ್ರಯತ್ನಗಳನ್ನು ಮಾಡುವ ಮೂಲಕ ಬದುಕಿನ ದೊಡ್ಡ ದೊಡ್ಡ ಯಶಸ್ವಿಗೆ ಬುನಾದಿ ಹಾಕಿಕೊಳ್ಳ ಬೇಕು, ನಾನು ಕೂಡ ಆ ದಾರಿಯಲ್ಲಿ ಸಾಗಿ ಬಂದು ನಿಮ್ಮ ಮುಂದೆ ನಿಂತಿದ್ದೇನೆ ಎಂದು ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು, ಆಟದಲ್ಲಿ ಸೋಲು ಗೆಲುವು ಎರಡು ಶ್ರೇಷ್ಢವಾದದ್ದೇ ಎಂದು  ವ್ಯಾಖ್ಯಾನಿಸಿದ ಅವರು ಸೋಲಿನ ಆಚೆಯೂ ಒಂದು ಬದುಕಿರುತ್ತದೆ ಎಂದರು.

- Advertisement -

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಡಲಗಿ ಶಿಕ್ಷಣ ಸಂಸ್ಥೆಯ ಚೇರಮನ್ ವಿಜಯಕುಮಾರ ಸೋನವಾಲ್ಕರ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಷ್ಟ್ರೀಯ ಪುರಸ್ಕಾರ ಪಡೆದ  ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹಾಗೂ ನೂತನ ಮೂಡಲಗಿ ತಹಶೀಲ್ದಾರ ಮಹಾದೇವ ಸನಮುರಿ ಅವರನು ಸತ್ಕರಿಸಿ ಗೌರವಿಸಿದರು. 

ಸಮಾರಂಭದ ವೇದಿಕೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಖೋ ಖೋ ತಂಡದ ಆಯ್ಕೆ ಸಮಿತಿಯ ಸದಸ್ಯರಾದ ಎಚ್.ಎನ್.ಲೋಕೇಶ, ಎನ್.ಕೆ.ಕುರಿ, ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ರವೀಂದ್ರ ಸೋನವಾಲಕರ, ವೆಂಕಟೇಶ ಸೋನವಾಲಕರ, ಅನೀಲ ಸತರಡ್ಡಿ, ಪ್ರಾಚಾರ್ಯರಾದ ಪ್ರೊ.ಸಂಗಮೇಶ ಗುಜಗೊಂಡ, ಡಾ. ಎಂ.ಕೆ.ಕಂಕಣವಾಡಿ, ಪ್ರೊ. ಎಸ್.ಬಿ.ಖೋತ, ಪ್ರೊ.ವಿ.ಎಸ್.ಕುಂಬಾರ. ಡಾ.ಎಸ್.ಎಲ್.ಚಿತ್ರಗಾರ, ಪ್ರೊ.ಜಿ.ವ್ಹಿ.ನಾಗರಾಜ, ಪ್ರೊ. ಎಸ್.ಸಿ.ಮಂಟೂರ, ಪ್ರೊ. ಎ. ಎಸ್. ಮೀಸಿನಾಯಿಕ, ಭೀಮಶಿ ಬಡಗನ್ನವರ, ಮನ್ನಾಪೂರ ಮುಂತಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group