spot_img
spot_img

ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ನಿಂದ ಆಹಾರ ಕಿಟ್ ವಿತರಣೆ

Must Read

- Advertisement -

ಸಿಂದಗಿ: ಇಡೀ ರಾಜ್ಯದಲ್ಲಿ ಕೊರೋನಾ ರಣಕೇಕೆ ಬಾರಿಸುತ್ತಿದೆ ಇದರಿಂದ ಬಡಕೂಲಿಕಾರ್ಮಿಕರ ಕೈಗಳಿಗೆ ಕೆಲಸವಿಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಇದರಿಂದ ಸರಕಾರ ಕೂಡಾ ಪ್ಯಾಕೇಜ್ ನೀಡುವ ಮೂಲಕ ಸಹಾಯಹಸ್ತ ನೀಡುತ್ತಿದೆ ಆದಾಗ್ಯೂ ಸರಕಾರದಿಂದ ಸೌಲಭ್ಯದಿಂದ ವಂಚಿತರಾದ ಬಡ ಕೂಲಿ ಕಾರ್ಮಿಕರನ್ನು ಗುರುತಿಸಿ ದಿನ ಬಳಕೆ ವಸ್ತುಗಳನ್ನು ನೀಡುವುದರಿಂದ ಜನರ ಸೇವೆ ಮಾಡಿದಂತಾಗುತ್ತದೆ ಎಂದು ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಅದ್ಯಕ್ಷ ಸಿದ್ದಣ್ಣ ಎಸ್ ಬಿರಾದಾರ (ಅಡಕಿ) ಹೇಳಿದರು.

ಪಟ್ಟಣದ ಕೊರೋನಾ ರಣಕೇಕೆಗೆ ತತ್ತರಿಸಿದ ಜನರಿಗೆ ಪಟ್ಟಣದ ಸಿದ್ದೇಶ್ವರ ಸಹಕಾರಿ ಬ್ಯಾಂಕಿನವತಿಯಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ರೂ. 1 ಸಾವಿರ ಬೆಲೆಯ 1 ಸಾವಿರ ದಿನಸಿ ವಸ್ತುಗಳ ಕಿಟ್ ಗಳನ್ನು ವಿತರಿಸಿ ಮಾತನಾಡಿ, ವಿಜಯಪುರ ಜಿಲ್ಲಾ ಸಹಕಾರಿ ಸಂಘಗಳ ನಿಬಂಧಕ ಸಿ.ಎಸ್. ನಿಂಬಾಳ, ಇಂಡಿ ಸಹಾಯಕ ಉಪನಿಬಂಧಕ ಎಮ್.ಎನ್.ಮಣಿ, ಸಿಂದಗಿ ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿಗಳಾದ ಲೀಲಾವತಿಗೌಡ, ಎಮ್.ಎಸ್.ರಾಠೋಡ, ಅಧೀಕ್ಷಕ ಆರ್.ಎನ್.ಆಳೂರ ಇವರುಗಳ ಸಮ್ಮುಖದಲ್ಲಿ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ದಿನಸಿ ವಸ್ತುಗಳ ಕಿಟ್‌ಗಳ ವಾಹನಕ್ಕೆ ಚಾಲನೆ ನೀಡಿ, ನಂದಗೇರಿ, ಸುಂಗಠಾಣ, ಮುರಡಿ, ಖೈನೂರ ಗ್ರಾಮಗಳಲ್ಲಿ ದಿನಸಿ ವಸ್ತುಗಳ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ ಎಂದರು.

- Advertisement -

ಈ ಸಂದರ್ಭದಲ್ಲಿ, ಉಪಾದ್ಯಕ್ಷ ಡಿ.ಸಿ.ಬಿರಾದಾರ ವಕೀಲರು, ಹಾಗೂ ನಿರ್ದೆಶಕರು ಮತ್ತು ವ್ಯವಸ್ಥಾಪಕ ಎಸ್ ಸಿ ಜೆಳಜಿ, ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ವಿಶಿಷ್ಟ ಧಾರ್ಮಿಕ ಸ್ಥಳ ಕೇದಾರನಾಥ

ಕೇದಾರನಾಥ ದೇಗುಲವು ಪ್ರಪಂಚದ ಒಂದು ವಿಶಿಷ್ಟ ವಿಸ್ಮಯವಾಗಿದೆ.ಅಂತಹಾ ಸ್ಥಳದಲ್ಲಿ ಕೇದಾರನಾಥ ದೇವಾಲಯವನ್ನು ಯಾರು ನಿರ್ಮಿಸಿದರು ಎಂಬುದರ ಕುರಿತು ಬಹಳಷ್ಟು ಹೇಳಲಾಗುತ್ತದೆ. ಅದನ್ನು ಪಾಂಡವರಿಂದ ಹಿಡಿದು ಆದಿ...
- Advertisement -

More Articles Like This

- Advertisement -
close
error: Content is protected !!
Join WhatsApp Group