- Advertisement -
ಮಂಗಳೂರು – ದೀರ್ಘ ಕಾಲದಿಂದ ವೈದ್ಯಕೀಯ ಶಿಕ್ಷಕರೂ ಆಗಿರುವ ಮಂಗಳೂರಿನ ಶಸ್ತ್ರ ಚಿಕಿತ್ಸಕ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಹಾಗೂ ಬಲ್ಮಠ ಕಾಲೇಜಿನ ಶಿಕ್ಷಕಿ ಶ್ರೀಮತಿ ಜ್ಯೋತಿ ಕೇಶವ ಭಟ್ ಇವರಿಗೆ ಕದ್ರಿಹಿಲ್ಸ್ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕ ಪುರಸ್ಕಾರವು ಕದ್ರಿ ಅಶೋಕ ಭವನ ದಲ್ಲಿ ಇತ್ತೀಚೆಗೆ ಜರಗಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಪ್ರಕಾಶನ್ ವಲಯ ಮುಖ್ಯಸ್ಥೆ ಲ. ಆಶಾ ಸುಶಾಂತ್, ಕಾರ್ಯದರ್ಶಿ ಲ ದೇವೇಂದ್ರ ಶೆಟ್ಟಿ ಕೋಶಾಧಿಕಾರಿ ಲ ರತ್ನಾಕರ್ ,ಲ.ಕೇಶವ ಭಟ್ ಲ. ಎನ್ ಟಿ ರಾಜ, ಲ.ಗೀತಾ ರಾವ್ , ಲ.ಸುಜೀತ್ ಕುಮಾರ್ ಸಹಿತ ಇತರ ಪದಾಧಿಕಾರಿಗಳೂ ಸದಸ್ಯರೂ ಉಪಸ್ಥಿತರಿದ್ದರು.